ಸಂಶೋಧನೆ ಸಮಾಜದ ತಿಳುವಳಿಕೆ ಹೆಚ್ಚಿಸುತ್ತದೆ: ಸಿಬಂತಿ ಪದ್ಮನಾಭ ಕೆವಿ

Tuesday, September 14th, 2021
Padmanabha KV

ಮಂಗಳೂರು: ಸಂಶೋಧನೆ ಉದ್ಯೋಗದಲ್ಲಿ ನಮ್ಮ ಬೆನ್ನೆಲುಬಾಗುವ ಜೊತೆಗೆ ನಮ್ಮ ಸಮಾಜದ ತಿಳುವಳಿಕೆಯನ್ನು ಹೆಚ್ಚಿಸುವ, ಸಾಧನೆಯ ಸಂತೋಷ ನೀಡುವ ಪ್ರಕ್ರಿಯೆ, ಎಂದು ತುಮಕೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಸಿಬಂತಿ ಪದ್ಮನಾಭ ಕೆವಿ ಅಭಿಪ್ರಾಯಪಟ್ಟರು. ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಪತ್ರಿಕೋದ್ಯಮ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ ವಿಭಾಗಗಳು, ಎನ್ಎಸ್ಎಸ್ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ಸಾಮಾಜಿಕ ವಿಜ್ಞಾನದಲ್ಲಿ ಸಂಶೋಧನೆ: ಸಮಸ್ಯೆಗಳು ಮತ್ತು ಕಾಳಜಿಗಳು’ ಎಂಬ ವೆಬಿನಾರ್ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ಸಂಶೋಧನೆಯೆಂದರೆ ವೈಜ್ಞಾನಿಕ ಮಾನದಂಡಗಳಿಗೆ ಅನುಗುಣವಾಗಿ, […]

ಆಳ್ವಾಸ್‍ನಲ್ಲಿ ಛಾಯಾಚಿತ್ರ ಪತ್ರಿಕೋದ್ಯಮ ಕಾರ್ಯಾಗಾರ

Tuesday, March 21st, 2017
Alvas Journalism

ಮೂಡುಬಿದಿರೆ: ಆಳ್ವಾಸ್ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಹಾಗೂ ಫೋಟೋಗ್ರಫಿ ಫೋರಂನ ಜಂಟಿ ಆಶ್ರಯದಲ್ಲಿ ಛಾಯಾಚಿತ್ರ ಪತ್ರಿಕೋದ್ಯಮ ಕುರಿತು ಒಂದು ದಿನದ ಕಾರ್ಯಾಗಾರ ಏರ್ಪಡಿಸಲಾಯಿತು. ಮಿಜಾರಿನ ಶೋಭಾವನದಲ್ಲಿ ನಡೆದ ಕಾರ್ಯಾಗಾರದಲ್ಲಿ ಪತ್ರಿಕಾ ಛಾಯಾಗ್ರಾಹಕ ರವಿ ಪೊಸವಣಿಕೆ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಛಾಯಾಚಿತ್ರ ಪತ್ರಿಕೋದ್ಯಮದಲ್ಲಿ ಯಶಸ್ವಿಯಾಗಬೇಕಾದರೆ ವಿಭಿನ್ನ ದೃಷ್ಟಿಕೋನ ಹಾಗೂ ಸೃಜನಶೀಲತೆ ಅತ್ಯಗತ್ಯ. ದುಬಾರಿ ಕ್ಯಾಮರಾ ಖರೀದಿ ಮಾಡುವುದಕ್ಕಿಂತ ಹೆಚ್ಚಾಗಿ ಕ್ಯಾಮರಾ ಹಿಂದಿರುವ ಕಣ್ಣು ಹಾಗೂ ಬುದ್ದಿವಂತಿಕೆ ಮಹತ್ವದ ಪಾತ್ರವಹಿಸುತ್ತದೆ. ಸರಿಯಾದ ಸಮಯದಲ್ಲಿ ಸರಿಯಾದ ಘಟನೆಯನ್ನು ಕ್ಯಾಮರಾ ಕಣ್ಣಿನಲ್ಲಿ ಸೆರೆಹಿಡಿಯುವುದು […]