ಮಳೆಯಿಂದ ಹಾನಿ, ಶೀಘ್ರ ಪರಿಹಾರಕ್ಕೆ ಸೂಚನೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Tuesday, November 23rd, 2021
Bengaluru-Flood

ಬೆಂಗಳೂರು :  ಬೆಂಗಳೂರಿನ ಯಲಹಂಕ ಪ್ರದೇಶದಲ್ಲಿ ನೀರು ನುಗ್ಗಿರುವ  ಮನೆಗಳಿಗೆ 10 ಸಾವಿರ ರೂ.ಗಳು, ಸಂಪೂರ್ಣ ಹಾನಿಯಾಗಿರುವ ಮನೆಗಳಿಗೆ 5 ಲಕ್ಷ ರೂ.ಗಳು ಹಾಗೂ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿರುವ ಮನೆಗಳಿಗೆ  1  ಲಕ್ಷ ರೂ.ಗಳ  ತುರ್ತು ಪರಿಹಾರವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ಇಂದು ಬೆಳಿಗ್ಗೆ ಜಲಾವೃತವಾಗಿರುವ ಯಲಹಂಕದ  ಕೇಂದ್ರೀಯ  ವಿಹಾರ್ ಅಪಾರ್ಟ್ಮೆಂಟ್ ಸಮುಚ್ಚಯಕ್ಕೆ ಭೇಟಿ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಈ ಪೈಕಿ ನೀರು ನುಗ್ಗಿರುವ ಮನೆಗಳಿಗೆ 10.ಸಾವಿರ ರೂ.ಗಳನ್ನು ಇಂದೇ […]

ಪ್ರವಾಹ: ಬಾಕಿ ಪರಿಹಾರ ಬಿಡುಗಡೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ

Sunday, July 25th, 2021
Yediyurappa

ಬೆಳಗಾವಿ : ರಾಜ್ಯದಲ್ಲಿ ಕೋವಿಡ್ ಸಂಕಷ್ಟದ ಮಧ್ಯೆಯೂ ಪ್ರವಾಹ ಸ್ಥಿತಿ ಉದ್ಭವಿಸಿದೆ.‌ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತಗಳು ಸಂವೇದನಾಶೀಲತೆಯಿಂದ ಕೆಲಸ ಮಾಡಬೇಕು. ಹಣಕಾಸು ಸೇರಿದಂತೆ ಯಾವುದೇ ತೊಂದರೆ ಇದ್ದರೂ ತಕ್ಷಣವೇ ಸಂಬಂಧಿಸಿದವರ ಗಮನಕ್ಕೆ ತಂದು ಸರಿಪಡಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೂಚನೆ ನೀಡಿದರು. ನಗರದ ಪ್ರವಾಸಿಮಂದಿರದಲ್ಲಿ ಭಾನುವಾರ (ಜು.25) ನಡೆದ ಅತಿವೃಷ್ಟಿ/ಪ್ರವಾಹ ಕುರಿತ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಳೆದ ವಾರದಿಂದ ದಾಖಲೆ ಪ್ರಮಾಣದ ಮಳೆಯಾಗಿದೆ. ರಾಜ್ಯದ […]

ಪ್ರೀತಿಯಲ್ಲಿ ವಿಶ್ವಾಸದಲ್ಲಿ ಮನಸ್ತಾವೇ? ಹೀಗೆ ಮಾಡಿ

Thursday, February 11th, 2021
yellow

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಪ್ರೀತಿ-ವಿಶ್ವಾಸ ಇವುಗಳು ಒಂದೇ ರೀತಿಯಾಗಿ ನಡೆದು ಬರುವಂತಹ ದಾರಿಯಾಗಿದೆ. ವ್ಯಕ್ತಿಯ ಮೇಲೆ ನೀವು ಇಡುವ ನಂಬಿಕೆ ಮತ್ತು ವಿಶ್ವಾಸದ ಆಧಾರದ ಮೇಲೆ ಪ್ರೀತಿ ಮೂಡಬಹುದು. ನಿಮ್ಮ ಪ್ರೀತಿಯ ವ್ಯಕ್ತಿಗಳು ನಿಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ, ಕಷ್ಟ-ನಷ್ಟ, ಸುಖದುಃಖಗಳಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಅನಿರೀಕ್ಷಿತವಾಗಿ ನಡೆಯುವ ಕೆಲವು ಪ್ರಮಾದಗಳು ಬಹುದೊಡ್ಡ ಕಂದಕ ಅಥವಾ ಮನಸ್ತಾಪ ಸೃಷ್ಟಿಸುತ್ತದೆ. ನಂಬಿಕೆ ಇಟ್ಟಂತಹವರು ಇದ್ದಕ್ಕಿದ್ದಂತೆ ದೂರವಾದರೆ ಆಗುವ ಆಘಾತ ದೊಡ್ಡದು. ಅವರ ಬಳಿ ಮಾತನಾಡಬೇಕು, […]

ಸರ್ಕಾರದ ಪರಿಹಾರ ಹಣ ಕೊಡಿಸುತ್ತೇನೆಂದು, ಮಹಿಳೆಯ ಬೆಂಡೋಲೆ ಎಗರಿಸಿದ ಖದೀಮ

Monday, November 9th, 2020
jayanti

ಬಂಟ್ವಾಳ : ಕೊರೊನಾ ಸಂಕಷ್ಟದ ಸಮಯದಲ್ಲಿ ಜನರಿಗೆ  ಪರಿಹಾರ ರೂಪದಲ್ಲಿ ನೀಡುವ ಸರ್ಕಾರ ಹಣ  ಪಡೆಯಬೇಕೆಂದರೆ ಮೊದಲು ನಾವು ಹಣ ಕಟ್ಟಬೇಕು ಎಂದು ಹೇಳಿ ಮಹಿಳೆಯಿಂದ ಒಡವೆಗಳನ್ನು ತೆಗೆದುಕೊಂಡು ಹೋಗಿರುವ ಘಟನೆ ಬಂಟ್ವಾಳದ ಮಿನಿ ವಿಧಾನಸೌಧದ ಬಳಿ ನಡೆದಿದೆ. ವ್ಯಕ್ತಿಯೊಬ್ಬ ಮಹಿಳೆಯೊಂದಿಗೆ ಪರಿಚಿತನಂತೆ ನಟಿಸಿ, ಕೊರೊನಾ ಹಿನ್ನೆಲೆ ನಿಮಗೆ ಒಂದೂವರೆ ಲಕ್ಷ ರೂಪಾಯಿ ಹಣ ಬಂದಿದೆ. ಅದನ್ನು ಪಡೆಯಲು 10 ಸಾವಿರ ರೂಪಾಯಿ ಕಟ್ಟಬೇಕು. ಆಧಾರ್ ಕಾರ್ಡ್ ತೆಗೆದುಕೊಂಡು ಮಿನಿ ವಿಧಾನಸೌಧಕ್ಕೆ ಬನ್ನಿ, ಅರ್ಜಿ ನೀಡಬೇಕು ಎಂದು ಕರೆದು […]

ಗುರುಪುರದಲ್ಲಿ ಗುಡ್ಡ ಕುಸಿದು ಮೃತಪಟ್ಟ ಮಕ್ಕಳ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ

Sunday, July 5th, 2020
gurupura death

ಮಂಗಳೂರು : ಗುರುಪುರದ ಬಂಗ್ಲೆಗುಡ್ಡೆಯಲ್ಲಿ ಗುಡ್ಡ ಕುಸಿದು ಮಕ್ಕಳಿಬ್ಬರು ಮೃತಪಟ್ಟ ಘಟನೆಗೆ ಸಂಬಂಧಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೃತ ಮಕ್ಕಳ ಕುಟುಂಬಕ್ಕೆ ಪರಿಹಾರ ಧನ ಘೋಷಿಸಿದ್ದಾರೆ. ತಲಾ 5 ಲಕ್ಷ ರೂಪಾಯಿ ಪರಿಹಾರ ಧನ ಘೋಷಣೆ ಮಾಡಿದ್ದು, ಪರಿಹಾರ ಧನ ನೀಡುವಂತೆ ದ.ಕ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ. ಗುಡ್ಡ ಪ್ರದೇಶದಲ್ಲಿದ್ದ 19 ಮನೆಗಳ ಸ್ಥಳಾಂತರಕ್ಕೆ ಸೂಚನೆ ನೀಡಲಾಗಿದೆ. ಬೇರೆ ಗ್ರಾಮದಲ್ಲಿ ಮನೆಗಳನ್ನು ನಿರ್ಮಿಸಿ ಕೊಡಲು ಜಿಲ್ಲಾಡಳಿತಕ್ಕೆ ಮುಖ್ಯಮಂತ್ರಿ ಸೂಚಿಸಿದ್ದಾರೆ.

ಮಂಗಳೂರು ಗೋಲಿಬಾರ್ : ಪರಿಹಾರ ನೀಡಲು ಈಶ್ವರ ಖಂಡ್ರೆ ಒತ್ತಾಯ

Thursday, December 26th, 2019
ishwar

ಮಡಿಕೇರಿ : ಮಂಗಳೂರಿನಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಪೊಲೀಸ್ ಗೋಲಿಬಾರ್‌ಗೆ ಸಿಲುಕಿ ಸಾವನ್ನಪ್ಪಿರುವ ಇಬ್ಬರು ವ್ಯಕ್ತಿಗಳ ಕುಟುಂಬಕ್ಕೆ ಘೋಷಿಸಲಾಗಿದ್ದ 10 ಲಕ್ಷ ರೂ. ಪರಿಹಾರವನ್ನು ಹಿಂಪಡೆಯಲು ಮುಖ್ಯಮಂತ್ರಿಗಳು ಮುಂದಾಗುವ ಮೂಲಕ ಬಿಜೆಪಿ ಸಾವಿನಲ್ಲೂ ರಾಜಕಾರಣ ಮಾಡುತ್ತಿದೆ ಎನ್ನುವುದನ್ನು ಸಾಬೀತು ಪಡಿಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೃತರ ಕುಟುಂಬಗಳಿಗೆ ಪರಿಹಾರ ಘೋಷಣೆ ಮಾಡಿ ಇದೀಗ ಅದನ್ನು ಹಿಂಪಡೆಯುವ ಪ್ರಯತ್ನಕ್ಕೆ ಕೆಲವು ಮತೀಯ ಸಂಘಟನೆಗಳ ಮಾತು ಕೇಳಿ ಮುಖ್ಯಮಂತ್ರಿಗಳು ಮುಂದಾಗಿದ್ದಾರೆ. ಇದು […]

ಹಿಂಸಾತ್ಮಕ ಘಟನೆ ಕೈ ಮೀರಿದ್ದೇ ಇಬ್ಬರ ಮೃತ್ಯುವಿಗೆ ಕಾರಣ : ಸಿ.ಎಂ

Saturday, December 21st, 2019
Yediyurappa

ಮಂಗಳೂರು : ಗುರುವಾರ ನಡೆದ  ಹಿಂಸಾತ್ಮಕ ಘಟನೆಯ ವೇಳೆ ಗುಂಪೊಂದು ಕಾನೂನು ಕೈಗೆತ್ತಿಕೊಂಡು ನಗರದ ನೆಲ್ಲಿಕಾಯಿ ರಸ್ತೆ, ರಾವ್ ಅಂಡ್ ರಾವ್ ಸರ್ಕಲ್, ಬಂದರು ಉತ್ತರ ಠಾಣೆ,  ಅಝೀಝುದ್ದೀನ್ ರಸ್ತೆ, ಜೆಎಂ ರಸ್ತೆ, ಬಿಬಿ ಅಲಾಬಿ ರಸ್ತೆ ಮೊದಲಾದೆಡೆ ಸಾರ್ವಜನಿಕ ಆಸ್ತಿಯನ್ನು ಪುಡಿ ಗೈದಿದ್ದು ಅಲ್ಲದೆ ಕರ್ತವ್ಯ ನಿರತ ಪೋಲೀಸರ ಮೇಲೆ ಮಾರಕ ಅಸ್ತ್ರಗಳಿಂದ ಹಲ್ಲೆ, ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಮುಂದಾದ ಘಟನೆಗಳಿಂದ ಇಬ್ಬರು ಬಲಿಯಾಗಿದ್ದಾರೆ ಎಂದು  ಸಿ.ಎಂ ಬಿ.ಎಸ್ ಯುಡಿಯೂರಪ್ಪ ಸ್ಪಷ್ಟ ಪಡಿಸಿದ್ದಾರೆ. ಈ ಘಟನೆಯಲ್ಲಿ ಬಲಿಯಾಗಿರುವ  ಇಬ್ಬರ ಕುಟುಂಬಕ್ಕೆ ಕಾನೂನು […]

ಅನಾರೋಗ್ಯದಿಂದ ಬಳಲುತ್ತಿದ್ದ ಕುಟುಂಬಕ್ಕೆ ರೂ.2,00,000 ಪರಿಹಾರ ನೀಡಿದ ಬಂಟ್ವಾಳ ಶಾಸಕ

Saturday, June 1st, 2019
Rajesh Naik

ಬಂಟ್ವಾಳ : ತಾಲೂಕಿನ ಕುಕ್ಕಿಪ್ಪಾಡಿ ಗ್ರಾಮದ ನೇಲ್ಯರುಮೇರು ನಿವಾಸಿಯಾದ ಶ್ರೀಮತಿ ತ್ರಿವೇಣಿ ಎಂಬವರು ಅನಾರೋಗ್ಯದಿಂದ ಬಳಲುತ್ತಿದ್ದು ಇವರ ಕುಟುಂಬಸ್ಥರಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ರೂ.2,00,000 ಪರಿಹಾರ ನಿಧಿಯ ಚೆಕ್‌ನ್ನು ಶಾಸಕರ ಕಚೇರಿಯಲ್ಲಿ ವಿತರಿಸಿದರು.

ನಂದಿನಿ ನದಿಗೆ ಕಿಂಡಿ ಅಣೆಕಟ್ಟು: ನೀರಿನ ಬವಣೆಗೆ ಪರಿಹಾರ ನಿರೀಕ್ಷೆ

Thursday, November 30th, 2017
Nandini-river

ಹಳೆಯಂಗಡಿ: ನಂದಿನಿ ನದಿಯ ಸಿಹಿ ನೀರು ನೇರವಾಗಿ ಸಮುದ್ರಕ್ಕೆ ಸೇರಿ ಉಪ್ಪಾಗುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೊಂದು ಡ್ಯಾಂ ಕಟ್ಟಿ ಈ ಭಾಗದ ಕುಡಿಯುವ ನೀರಿನ ಬವಣೆ ನಿವಾರಿಸುವ ಪ್ರಕ್ರಿಯೆಗೆ ಮಂಗಳೂರು ತಾ.ಪಂ.ನ ಪಡಸಾಲೆಯಿಂದ ಚಾಲನೆ ದೊರಕಿದ್ದು, ಬೃಹತ್‌ ಯೋಜನೆ ತ್ವರಿತವಾಗಿ ಅನುಷ್ಠಾನಗೊಂಡರೆ ನಾಲ್ಕರಿಂದ ಐದು ಗ್ರಾ.ಪಂ.ಗಳಿಗೆ ಅನುಕೂಲವಾಗಲಿದೆ. ನಂದಿನಿ ತಟದಲ್ಲಿರುವ ಚೇಳಾಯಿರು, ಪಾವಂಜೆಯ ನಿವಾಸಿಗಳೂ ಕುಡಿಯುವ ನೀರಿನ ಅಭಾವದಿಂದ ಬಳಲುತ್ತಿದ್ದಾರೆ. ಸಮಸ್ಯೆ ಪರಿಹರಿಸಲು ನಂದಿನಿ ನದಿಯ ಹತ್ತಿರದ ಗ್ರಾಮ ಪಂಚಾಯತ್‌ಗಳು ಈಗಲೇ ಇನ್ನಿಲ್ಲದೆ ಕಸರತ್ತು ನಡೆಸುತ್ತಿವೆ. ಸದ್ಯದ ಸ್ಥಿತಿ […]

ಹರೀಶ್‌ ಪೂಜಾರಿ ಹತ್ಯೆ ದುಷ್ಕರ್ಮಿಗಳ ಪತ್ತೆಗೆ ವಿಶೇಷ ತಂಡ

Saturday, November 14th, 2015
Rai Cheque

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಎಲ್ಲ ಅವಶ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ. ಬಂಟ್ವಾಳದಲ್ಲಿ ಹರೀಶ್‌ ಪೂಜಾರಿ ಅವರನ್ನು ಹತ್ಯೆ ಮಾಡಿರುವ ಹಾಗೂ ಶಮೀವುಲ್ಲ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ದುಷ್ಕರ್ಮಿಗಳ ಪತ್ತೆಗೆ ವಿಶೇಷ ಪೊಲೀಸ್‌ ತಂಡ ರಚಿಸಲಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ. ಬಿ.ಸಿ. ರೋಡಿನಲ್ಲಿ ಗುರುವಾರ ಸಂಭವಿಸಿರುವ ಅಹಿತಕಾರಿ ಘಟನೆಗಳು ಹಾಗೂ ಶುಕ್ರವಾರ ನಡೆದಿರುವ ಬಂದ್‌ ಹಿನ್ನೆಲೆಯಲ್ಲಿ ನಗರದ ಸರ್ಕಿಟ್‌ಹೌಸ್‌ನಲ್ಲಿ ಪತ್ರಿಕಾಗೋಷ್ಠಿ […]