ಪಿಲಿಕುಳ ಡಾ.ಶಿವರಾಮ ಕಾರಂತ ಜೈವಿಕ ಉದ್ಯಾನವನದಲ್ಲಿ 9 ವರ್ಷ ಪ್ರಾಯದ ಹುಲಿ ಸಾವು

Tuesday, January 4th, 2022
Tiger oliver

ಮಂಗಳೂರು: ಆರೋಗ್ಯವಂತ ಹಾಗೂ ಸದೃಢವಾಗಿದ್ದ 9 ವರ್ಷ ಪ್ರಾಯದ ಹುಲಿಯೊಂದು ಮಂಗಳವಾರ ಮುಂಜಾನೆ ಪಿಲಿಕುಳದ ಡಾ.ಶಿವರಾಮ ಕಾರಂತ ಜೈವಿಕ ಉದ್ಯಾನವನದಲ್ಲಿ ಮೃತಪಟ್ಟಿದೆ. ಮುಂಜಾನೆವರೆಗೂ ಚುರುಕಾಗಿಯೇ ಇದ್ದು ಒಮ್ಮಿಂದೊಮ್ಮೆಲೇ ಕುಸಿದು ಬಿದ್ದಿದೆ. ಜೀವ ಉಳಿಸಲು ಮೃಗಾಲಯದ ವೈದ್ಯಾಧಿಕಾರಿಗಳು ಮಾಡಿದ ಪ್ರಯತ್ನ ಫಲಪ್ರದವಾಗಲಿಲ್ಲ.   ಈ ಹುಲಿಯ ಹೆಸರು ಒಲಿವರ್‌. ಇದು ವಿಕ್ರಂ ಹಾಗೂ ಶಾಂಭವಿ ಹುಲಿ ಜೋಡಿಗೆ ಜನಿಸಿದ್ದ ಎರಡು ಮರಿಗಳಲ್ಲೊಂದು. ಇದರ ಪ್ರಾಯ 9 ವರ್ಷ ಆಗಿತ್ತು. ಮೃತಪಟ್ಟ ಹುಲಿಯ ಅಂಗಾಂಗಗಳ ಮಾದರಿಯನ್ನು ಬೆಂಗಳೂರಿನ ಪ್ರಾಣಿ ಆರೋಗ್ಯ […]

ಪಿಲಿಕುಳದ ಸುಧಾರಣೆಗೆ ಅಗತ್ಯ ಕ್ರಮ: ಅರವಿಂದ ಲಿಂಬಾವಳಿ

Friday, July 9th, 2021
Aravinda Limbavali Pilikula

ಮಂಗಳೂರು : ಪಿಲಿಕುಳ ನಿಸರ್ಗ ಧಾಮದ ಸುಧಾರಣೆಗೆ ಕೇಂದ್ರ ಸಚಿವರು ಹಾಗೂ ರಾಜ್ಯದ ಅಧಿಕಾರಿಗಳೊಂದಿಗೆ ಚರ್ಚಿಸಿ ಎಲ್ಲಾ ರೀತಿಯ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವುದಾಗಿ ಅರಣ್ಯ ಮತ್ತು ಕನ್ನಡ ಹಾಗೂ ಸಂಸ್ಕøತಿ ಇಲಾಖೆಯ ಸಚಿವರಾದ ಅರವಿಂದ ಲಿಂಬಾವಳಿ ಅವರು ತಿಳಿಸಿದರು. ಅವರು ಜು.9ರ ಶುಕ್ರವಾರ ನಗರಕ್ಕೆ ಅನತಿ ದೂರದಲ್ಲಿರುವ ಪಿಲಿಕುಳ ನಿಸರ್ಗ ಧಾಮಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪಿಲಿಕುಳದ ಮೃಗಾಯಲವನ್ನು ವೀಕ್ಷಿಸಿದ ನಂತರ ವರದಿಗಾರರೊಂದಿಗೆ ಮಾತನಾಡಿದರು. ಪಿಲಿಕುಳದಲ್ಲಿರುವ ಪ್ರಾಣಿಗಳ ರಕ್ಷಣೆ ಹಾಗೂ ಪೋಷಣೆ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳ ತಂಡದೊಂದಿಗೆ […]

ಪಿಲಿಕುಳದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

Monday, March 8th, 2021
Pilikula-Womens-Day

ಮಂಗಳೂರು : ಪ್ರತಿದಿನವೂ ಮಹಿಳೆಯರ ದಿನ, ಮಹಿಳೆಯರು ತಮ್ಮ ಮಹತ್ವವನ್ನು ಅರಿತುಕೊಂಡು ಮಾನಸಿಕವಾಗಿ ಸಬಲರಾಗಬೇಕು, ಮಹಿಳೆಯರು ಮತ್ತು ಪುರುಷರು ಜೊತೆ ಜೊತೆಯಲ್ಲಿ ನಡೆದು ಸಮಾಜದಲ್ಲಿ ಅಭಿವೃದ್ಧಿಯನ್ನು ತರಬೇಕು ಎಂದು ಮಾನಸಿಕ ಆರೋಗ್ಯ ತಜ್ಞೆ ಡಾ. ರಮೀಲಾ ಶೇಖರ್ ಹೇಳಿದರು. ಅವರು ಇಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಬೆಂಗಳೂರು, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ, ಮಂಗಳೂರು, ಧರ್ಮಜ್ಯೋತಿ ಸಮಾಜ ಸೇವಾ ಕೇಂದ್ರ ಮತ್ತು ಸೌಹಾರ್ದ ಮಹಿಳಾ ಒಕ್ಕೂಟ, ವಾಮಂಜೂರು ಇವರ ಸಹಕಾರದೊಂದಿಗೆ ಪಿಲಿಕುಳ ಪ್ರಾದೇಶಿಕ […]

ನ. 6ರಿಂದ 8ರವರೆಗೆ ಪಿಲಿಕುಳದಲ್ಲಿ ಅಂತರ್ ರಾಷ್ಟ್ರೀಯ ಮೊದಲ ಫುಲ್ ಡೋಮ್ ಚಿತ್ರೋತ್ಸವ ಮತ್ತು ತಾರಾಲಯ ಸಮ್ಮೇಳನ

Monday, November 4th, 2019
Sindu

ಮಂಗಳೂರು : ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಸೊಸೈಟಿ ಮತ್ತು ಪಿಲಿಕುಳ ವಿಜ್ಞಾನ ತಂತ್ರಜ್ಞಾನ ಪ್ರೋತ್ಸಾಹ ಕ ಸೊಸೈಟಿ ಆಶ್ರಯದಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಅಂತರ್ ರಾಷ್ಟ್ರೀಯ ಮೊದಲ ಫುಲ್ ಡೋಮ್ ಚಿತ್ರೋತ್ಸವ ಮತ್ತು ತಾರಾಲಯ ಸಮ್ಮೇಳನ ಪಿಲಿಕುಳ ದಲ್ಲಿ ನ. 6ರಿಂದ 8ರವರೆಗೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ. ಪ್ರತಿದಿನ ಸುಮಾರು 30 ನಿಮಿಷಗಳ ಒಟ್ಟು9 ಪ್ರದರ್ಶನ ಬೆಳಗ್ಗೆ 9ರಿಂದ ಸಂಜೆ 5ಗಂಟೆಯವರೆಗೆ ನಡೆಯಲಿದೆ. ಜಗತ್ತಿನ ವಿವಿಧ ದೇಶಗಳ 3ಡಿ, 2ಡಿ ಚಲನಚಿತ್ರ ಪ್ರದರ್ಶನ […]

ಪಿಲಿಕುಳ ವಿಜ್ಞಾನ ಕೇಂದ್ರದಲ್ಲಿ ಖಗ್ರಾಸ ಚಂದ್ರಗ್ರಹಣ ವೀಕ್ಷಣೆ

Saturday, July 28th, 2018
pilukula-zoom

ಮಂಗಳೂರು: ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಹವ್ಯಾಸಿ ಖಗೋಳಶಾಸ್ತ್ರಜ್ಞರ ಸಂಘ ಮಂಗಳೂರು ಜಂಟಿಯಾಗಿ ಆಯೋಜಿಸಿದ ಖಗ್ರಾಸ ಚಂದ್ರಗ್ರಹಣದ ವೀಕ್ಷಣೆಯ ಕಾರ್ಯಕ್ರಮದಲ್ಲಿ ಶತಮಾನದ ಸುಧೀರ್ಘ ಚಂದ್ರಗ್ರಹಣವನ್ನು ಸಾರ್ವಜನಿಕರು ಕುತೂಹಲದಿಂದ ಕಣ್ತುಂಬಿಕೊಂಡರು. ಶುಕ್ರವಾರ ರಾತ್ರಿ 11.54ಕ್ಕೆ ಗ್ರಹಣ ಸ್ಪರ್ಶವಾಗಿ 1 ಗಂಟೆಗೆ ಖಗ್ರಾಸ ಗ್ರಹಣವಾಗಿ ಮುಂಜಾನೆ 2.43ಕ್ಕೆ ಮೋಕ್ಷವಾಯಿತು. ಗ್ರಹಣದ ವೀಕ್ಷಣೆಯೊಂದಿಗೆ ಹತ್ತಿರದಲ್ಲಿ ಕಂಗೊಳಿಸುತ್ತಿದ್ದ ಮಂಗಳನ ದರ್ಶನವೂ ವೀಕ್ಷಕರಿಗೆ ಲಭಿಸಿತು. ದೂರದರ್ಶಕ ಮತ್ತು ದುರ್ಬೀನುಗಳ ಮೂಲಕ ಈ ಅಪೂರ್ವ ವಿದ್ಯಮಾನಗಳ ವಿಕ್ಷಣೆಯ ಸಂಧರ್ಭದಲ್ಲಿ ಮೋಡಗಳ ದೆಸೆಯಿಂದ ಆಗಾಗ ಅಡಚಣೆಯುಂಟಾದರೂ […]

ಪಿಲಿಕುಳ ನಿಸರ್ಗ ಧಾಮದಲ್ಲಿ ‘ಬಿಸು ಪರ್ಬ’ ಆಚರಣೆ

Saturday, April 14th, 2018
Pilikula

ಮಂಗಳೂರು: ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗ ಧಾಮದ ಗುತ್ತು ಮನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ‘ಬಿಸು ಪರ್ಬ’ ಆಚರಿಸಲಾಯಿತು. ದಕ್ಷಿಣ ಕನ್ನಡ ಉಡುಪಿ, ಕಾಸರಗೋಡು ಜಿಲ್ಲೆಯಲ್ಲಿ ತುಳುವರು ಹೊಸ ವರ್ಷದ ಮೊದಲ ದಿನವನ್ನಾಗಿ ‘ಬಿಸು ಪರ್ಬ’ ಆಚರಿಸುತ್ತಾರೆ. ದೇಶದ ವಿವಿಧ ರಾಜ್ಯಗಳಲ್ಲಿ ಈ ಕೃಷಿ ಪ್ರೇರಿತ ಹೊಸ ವರ್ಷಾಚರಣೆಯನ್ನು ವಿವಿಧ ರೀತಿಗಳಲ್ಲಿ ಆಚರಿಸಲಾಗುತ್ತದೆ. ತುಳುನಾಡಿನ ಬಿಸು ಪರ್ಬ ಆಚರಣೆಯಲ್ಲಿ ಇಲ್ಲಿ ಬೆಳೆಯಲಾಗುವ ಎಲ್ಲಾ ರೀತಿಯ ತರಕಾರಿ, ಫಲ ವಸ್ತುಗಳನ್ನು ಇಟ್ಟು ಪೂಜೆ ಮಾಡಿಕೊಂಡು ಮಧ್ಯಾಹ್ನ […]

ಫೇಸ್‌ಬುಕ್ ಮೂಲಕ ಹಿಂದೂ ಯುವತಿಯರಿಗೆ ಎಚ್ಚರಿಕೆ ನೀಡಿದ `ವೀರ ಕೇಸರಿ’

Thursday, January 4th, 2018
Veera-kesari

ಮಂಗಳೂರು: ಪಿಲಿಕುಳ ನಿಸರ್ಗಧಾಮದಲ್ಲಿ ಮಂಗಳವಾರ ನಡೆದ ನೈತಿಕ ಪೊಲೀಸ್‌ಗಿರಿ ಪ್ರಕರಣದ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಇದರಲ್ಲಿ ಹಿಂದೂ ಯುವತಿಯರಿಗೆ ಎಚ್ಚರಿಕೆ ರವಾನಿಸಲಾಗಿದೆ. ವೀರ ಕೇಸರಿ ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಅನ್ಯಕೋವಿನ ವಿದ್ಯಾರ್ಥಿಗಳೊಂದಿಗೆ ಸುತ್ತಾಡುವ ಹಿಂದೂ ಯುವತಿಯರಿಗೆ ಕಪಾಳ ಮೋಕ್ಷ ಖಂಡಿತ ಎಂಬ ಎಚ್ಚರಿಕೆ ನೀಡಲಾಗಿದೆ. ಬುದ್ಧಿ ಮಾತು ಹೇಳಿದ್ದಾಯಿತು, ಮನವರಿಕೆ ಮಾಡಿದ್ದಾಯಿತು, ಎಚ್ಚರಿಕೆ ಕೊಟ್ಟಿದ್ದಾಯಿತು. ಇನ್ನೇನಿದ್ದರೂ ಕಪಾಳಕ್ಕೆ ಬಾರಿಸುವುದೊಂದೇ ದಾರಿ ಎಂದು ಎಚ್ಚರಿಕೆ ನೀಡಲಾಗಿದೆ. ಮೂಡಬಿದ್ರೆಯ ಆಸುಪಾಸಿನ ಎಲ್ಲಾ ಹುಡುಗರಿಗೆ ಕೊನೆಯ ಎಚ್ಚರಿಕೆ ಎಂದು […]

ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗಧಾಮ ದ ಲೇಕ್ ಗಾರ್ಡನ್‌ನಲ್ಲಿ ಮಿನಿ ಐಫೆಲ್ ಟವರ್‌

Thursday, July 28th, 2016
Pilikula-mini-tower

ಮಂಗಳೂರು: ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗಧಾಮಕ್ಕೆ ಮತ್ತಷ್ಟು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಯೋಜನೆಯಾಗಿ ನಿಸರ್ಗಧಾಮದ ಲೇಕ್ ಗಾರ್ಡನ್‌ನಲ್ಲಿ ನಿರ್ಮಿಸಲಾಗಿರುವ ಮಿನಿ ಐಫೆಲ್ ಟವರ್‌ನ ನಾಮಫಲಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅನಾವರಣಗೊಳಿಸಿದರು. ಪಿಲಿಕುಳ ನಿಸರ್ಗಧಾಮದ ಲೇಕ್ ಗಾರ್ಡನ್‌ಲ್ಲಿ ಪ್ರಪಂಚ ಹಾಗೂ ದೇಶದ ಸುಮಾರು 10 ಅದ್ಭುತಗಳ ಮಾದರಿಗಳನ್ನು ರಚಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಮಿನಿ ಐಫೆಲ್ ಟವರ್‌ನ್ನು ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಪ್ಯಾರಿಸ್‌ನಲ್ಲಿರುವ ಐಫೆಲ್ ಟವರ್‌ನ ಮಾದರಿಯನ್ನು ಹೋಲುವ […]

ಪಿಲಿಕುಳದ ‘ರಾಜ’ ಹುಲಿ ಹೃದಯಾಘಾತದಿಂದ ಸಾವು

Saturday, May 23rd, 2015
Tiger Raja

ಮಂಗಳೂರು: ಪಿಲಿಕುಳದ ಡಾ. ಶಿವರಾಮ ಕಾರಂತ ಜೈವಿಕ ಉದ್ಯಾನವನದಲ್ಲಿನ 21 ವರ್ಷ ಪ್ರಾಯದ ಹಿರಿಯ ‘ರಾಜ’ ಎಂಬ ಹುಲಿ ಶುಕ್ರವಾರ ಮುಂಜಾನೆ 5 ಗಂಟೆಗೆ ಹೃದಯಾಘಾತದಿಂದ ಸಹಜವಾಗಿ ಮೃತಪಟ್ಟಿದೆ. 2003ರಲ್ಲಿ ಶಿವಮೊಗ್ಗದ ಪ್ರಾಣಿ ಸಂಗ್ರಹಾಲಯದಿಂದ ಕರೆತರಲಾಗಿರುವ ರಾಜ ಹುಲಿಗೆ ವಯಸ್ಸಾದ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಬಳಲಿದ್ದು, ನಾಲ್ಕು ತಿಂಗಳಿಂದ ಆಹಾರ ಸೇವನೆಯ ಪ್ರಮಾಣ ಮಾತ್ರವಲ್ಲದೆ ಚಲನವಲನವನ್ನು ತುಸು ಕಡಿಮೆ ಮಾಡಿದ್ದ. ಪಿಲಿಕುಳಕ್ಕೆ ಆಗಮಿಸಿದ್ದ ಸಂದರ್ಭ ಸುಮಾರು 280 ಕೆ.ಜಿ. ತೂಕವಿದ್ದ ರಾಜ ದಿನಕ್ಕೆ 10 ಕೆಜಿ […]

ಕಾಡಿನಿಂದ ನಾಡಿಗೆ ಬಂದು ದನ, ಕರುಗಳನ್ನು ತಿನ್ನುತ್ತಿದ್ದ ಚಿರತೆ ಅರಣ್ಯ ಇಲಾಖೆಯ ಬೋನಿಗೆ

Thursday, July 11th, 2013
leopard

ಬಂಟ್ವಾಳ: ಚೆನ್ನೈತ್ತೋಡಿ ಗ್ರಾಮದ ಅಂಗಡಿ ಪಲ್ಕೆ ಕುಲಾಲು ಎಂಬಲ್ಲಿ ಕಾಡಿನಿಂದ ನಾಡಿಗೆ ಬಂದು ದನ, ಕರುಗಳನ್ನು ತಿನ್ನುತ್ತಿದ್ದ ಚಿರತೆಯೊಂದು ಅರಣ್ಯ ಇಲಾಖೆಯ ಬೋನಿನಲ್ಲಿ ಸಿಕ್ಕಿ ಬಿದ್ದ ಘಟನೆ ಗುರುವಾರ ಮುಂಜಾನೆ ನಡೆದಿದೆ. ಮಾಧವ ಎಂಬವರ ಜಮೀನಿಗೆ ದಾಳಿ ಮಾಡುತ್ತಿದ್ದ ಈ ಚಿರತೆ ದನ, ಕರುಗಳನ್ನು ತಿಂದಿತ್ತು. ಇದರಿಂದ ಬೇಸತ್ತ ಮಾಧವ ಅವರು  ಅರಣ್ಯ ಇಲಾಖೆಯ ನೆರವಿನಲ್ಲಿ ಚಿರತೆಗೆ ಬೋನು ಇರಿಸಿದ್ದು, ನಿರೀಕ್ಷೆಯಂತೆ ನಾಯಿಯನ್ನು ತಿನ್ನಲು ಬಂದ ಚಿರತೆ ಬೋನಿನಲ್ಲಿ ಸಿಕ್ಕಿ ಬಿದ್ದಿದೆ. ಚಿರತೆ ಬೋನಿಗೆ ಸಿಕ್ಕಿಬಿದ್ದ ಸುದ್ದಿ ತಿಳಿದು […]