ಪಿಲಿಕುಳ ನಿಸರ್ಗಧಾಮದಲ್ಲಿ ಬೀದಿ ನಾಯಿಗಳ ದಾಳಿಗೆ 15 ಕಾಡುಕುರಿಗಳು ಬಲಿ

Friday, June 26th, 2020
kadave

ಮಂಗಳೂರು: ಪಿಲಿಕುಳ ನಿಸರ್ಗಧಾಮದಲ್ಲಿರುವ ಕಾಡುಕುರಿಗಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ 15 ಕಾಡುಕುರಿಗಳು ಸಾವನ್ನಪ್ಪಿದ ಘಟನೆ ಗುರುವಾರ ರಾತ್ರಿ ನಡೆದಿದೆ. ಮಳೆಗೆ  ನಿಸರ್ಗಧಾಮದ ತಡೆಗೋಡೆಗೆ ಮರ ಬಿದ್ದಿದ್ದು ಅದನ್ನು ಉಪಯೋಗಿಸಿ ಡಂಪಿಂಗ್ ಯಾರ್ಡ್ ನಿಂದ ಜಿಗಿದು ಬೀದಿ ನಾಯಿಗಳು ನಿಸರ್ಗಧಾಮದ ಒಳಗೆ ಬಂದಿದ್ದು, ಕಾಡುಕುರಿಗಳ ಮೇಲೆ ದಾಳಿ ಮಾಡಿದೆ. ಕಾಡುಕುರಿಗಳ ಕುತ್ತಿಗೆ ಭಾಗಕ್ಕೆ ತೀವ್ರ ಗಾಯವಾದ ಕಾರಣ 15 ಕಾಡುಕುರಿಗಳು ಸಾವನ್ನಪ್ಪಿದೆ. ಎರಡು ಕಾಡುಕುರಿಗಳಿಗೆ ಗಾಯವಾಗಿದೆ ಎಂದು ವರದಿಯಾಗಿದೆ. ಇಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ. ತಡೆಗೋಡೆ […]

ಜೂನ್ 10 ರಿಂದ ಸಾರ್ವಜನಿಕ ವೀಕ್ಷಣೆಗೆ ತೆರೆಯಲಿರುವ ಪಿಲಿಕುಳ ನಿಸರ್ಗಧಾಮ

Monday, June 8th, 2020
Pilikula

ಮಂಗಳೂರು  :  ಲಾಕ್ ಡೌನ್ ಕಾರಣದಿಂದ ಕಳೆದ ಮೂರು ತಿಂಗಳಿಂದ ಮುಚ್ಚಲಾಗಿದ್ದ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಎಲ್ಲಾ ಆಕರ್ಷಣೆಗಳನ್ನು ಜೂನ್ 10, 2020 ರಿಂದ ತೆರೆಯಲಾಗುವುದು ಎಂದು ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಎಚ್ ಜೆ ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ. ಸರ್ಕಾರದ ಆದೇಶ ಅನುಸರಿಸಿ ಕೋವಿಡ್ 2019 ರ ನಿಯಂತ್ರಣ ಮಾರ್ಗಸೂಚಿಯ ಎಲ್ಲಾ ಸೂಚನೆಗಳನ್ನು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕಾಲಕಾಲಕ್ಕೆ ನೀಡುವ ಮಾರ್ಗಸೂಚಿ/ ಎಸ್‌ಒಪಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತುಗೊಳಪಟ್ಟುಜೂನ್ , 10, 2020 ಬುಧವಾರದಿಂದ ಪೂರ್ವಾಹ್ನ 9.30 ರಿಂದ ಸಂಜೆ 05.00 […]

ಕೊರೋನ ಮುಂಜಾಗ್ರತಾ ಕ್ರಮವಾಗಿ ಪಿಲಿಕುಳ ನಿಸರ್ಗಧಾಮ ಒಂದು ವಾರ ಪ್ರವೇಶ ನಿರ್ಬಂಧ

Sunday, March 15th, 2020
pilikula

ಮಂಗಳೂರು : ಕೊರೋನ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮತ್ತು ಜಿಲ್ಲಾಡಳಿತದ ಸೂಚನೆಯ ಮೇರೆಗೆ ಮಾ.14ರಿಂದ ಅನ್ವಯಗೊಂಡಂತೆ 1 ವಾರಗಳ ಕಾಲ ಪಿಲಿಕುಳ ನಿಸರ್ಗಧಾಮ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಇಲ್ಲಿ ಜೈವಿಕ ಉದ್ಯಾನವನ, ವಿಜ್ಞಾನ ಕೇಂದ್ರ, ಸರೋವರ ಉದ್ಯಾನ, ಬೋಟಿಂಗ್, ವಾಟರ್ ಅಮ್ಯೂಸ್‌ಮೆಂಟ್, ಗಾಲ್ಫ್ ಎಂದೆಲ್ಲಾ ದಿನಂಪ್ರತಿ ಸಾವಿರಾರು ಮಂದಿ ಆಗಮಿಸುತ್ತಿದ್ದಾರೆ. ಅಲ್ಲದೆ, 1300ಕ್ಕೂ ಅಧಿಕ ಪ್ರಭೇದಗಳ ಪ್ರಾಣಿ, ಪಕ್ಷಿ, ಸಸ್ತನಿಗಳಿವೆ. ಇದನ್ನು ವೀಕ್ಷಿಸಲು ಸಾವಿರಾರು ಮಂದಿ ಪಾಲ್ಗೊಳ್ಳುತ್ತಿದ್ದು, ಕೊರೋನ ಭೀತಿಯಿಂದ ದೂರವಾಗಿಸುವ ಸಲುವಾಗಿ ಒಂದು […]

ಪಿಲಿಕುಳ ನಿಸರ್ಗಧಾಮದ ಪ್ರಾಣಿ ಪಾಲಕ ಆತ್ಮಹತ್ಯೆ

Monday, September 9th, 2019
zookeeper

ಮಂಗಳೂರು : ಪಿಲಿಕುಳ ನಿಸರ್ಗಧಾಮದ ಪ್ರಾಣಿ ಸಂಗ್ರಹಾಲಯದ ಪಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಶೋಕ (28) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಅಶೋಕ ಸುಮಾರು 6 ವರ್ಷಗಳಿಂದ ಪಿಲಿಕುಳ ಪ್ರಾಣಿ ಸಂಗ್ರಹಾಲಯದಲ್ಲಿ ಪಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಪಿಲಿಕುಳದ ತನ್ನ ಕ್ವಾರ್ಟರ್ಸ್‌ನ ರೂಮ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಗೆ ಕಾರಣ ತಿಳಿದುಬಂದಿಲ್ಲ.ಕಾವೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.    

ಅಳಿವಿನ ಅಂಚಿನಲ್ಲಿರುವ ಸಿಹಿನೀರಿನ ಮೀನು ಮರಿಗಳ ಮೂಲ ಆವಾಸಕ್ಕೆ ಬಿಡುಗಡೆ

Saturday, June 30th, 2018
pilikula

ಮಂಗಳೂರು   : ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ಸಂತಾನೋತ್ಪತ್ತಿ ಮಾಡಿ ಬೆಳೆಸಿದ ಪಶ್ಚಿಮ ಘಟ್ಟದ ಅಳಿವಿನ ಅಂಚಿನಲ್ಲಿರುವ ಸಿಹಿನೀರಿನ ಮತ್ಸ್ಯಪ್ರಬೇಧಗಳ ಮರಿಗಳನ್ನು ಅವುಗಳ ಮೂಲ ಆವಾಸಕ್ಕೆ ಬಿಡುವ ಕಾರ್ಯಕ್ರವಮವು ಕರ್ನಾಟಕ ಅರಣ್ಯ ಇಲಾಖೆ, ಮೀನುಗಾರಿಕಾ ಇಲಾಖೆ ಮತ್ತು ದ.ಕ. ಜಿಲ್ಲಾ ಪಂಚಾಯತ್‍ನ ಸಹಯೋಗದೊಂದಿಗೆ ಜೂನ್ 28 ರಂದು ನಾರಾವಿಯಲ್ಲಿರುವ ಅರಣ್ಯ ವಿಶ್ರಾಂತಿ ಗೃಹದಲ್ಲಿ ನಡೆಯಿತು. ಅಥಿತಿಗಳನ್ನು ಸ್ವಾಗತಿಸಿ ಮಾತನಾಡಿದ ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿದೇಶಕ ವಿ. ಪ್ರಸನ್ನ, ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಲೇಕ್‍ಗಾರ್ಡನ್‍ನಲ್ಲಿ […]

ಕಡಲನಗರಿಯಲ್ಲಿ ಪ್ರವಾಸಿಗರ ಕಲರವ

Wednesday, April 4th, 2018
beach

ಮಂಗಳೂರು: ಬೇಸಗೆ ರಜೆ ಸಮೀಪಿಸುತ್ತಿದ್ದಂತೆ ಕರಾವಳಿಯಲ್ಲಿ ಅದರಲ್ಲೂ ಮಂಗಳೂರು ನಗರ ಹಾಗೂ ಸುತ್ತಮುತ್ತ ಇರುವ ಬೀಚ್‌, ಧಾರ್ಮಿಕ ಕ್ಷೇತ್ರಗಳತ್ತ ಪ್ರವಾಸಿಗರು ಆಕರ್ಷಿತರಾಗುತ್ತಿದ್ದಾರೆ. ಈಗಾಗಲೇ ಕೆಲವು ಕಡೆಗಳಲ್ಲಿ ಶಾಲೆಗಳಿಗೆ ಬೇಸಗೆ ರಜೆ ದೊರೆತಿದ್ದು, ಒಂದು ವಾರದಿಂದ ಜಿಲ್ಲೆಗೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಳವಾಗಿದೆ. ಮಂಗಳೂರು ಅಂದರೆ, ಒಂದೆಡೆ ಬೇಸಗೆಯ ಧಗೆ; ಇನ್ನೊಂದೆಡೆ ಸುಂದರ ಕಡಲ ಕಿನಾರೆ ಜತೆಗೆ ಆಕರ್ಷಕ ಪ್ರವಾಸಿ ತಾಣಗಳು. ಹೀಗಾಗಿ, ಇಲ್ಲಿನ ಸುಡು ಬಿಸಿಲಿನ ಬೇಗೆಯನ್ನೂ ಲಕ್ಕಿಸದೆ ಆಗಮಿಸುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. […]

ತುಳುನಾಡೊಚ್ಚಯದ ಅಧ್ಯಕ್ಷರಾದ ಫ್ರಾಂಕ್ ಪೆರ್ನಾಂಡಿಸ್‌ರಿಗೆ ತು.ರ.ವೇ ಅಭಿನಂದನೆ

Monday, November 6th, 2017
tulunadochhaya

ಮಂಗಳೂರು: ಡಿಸೆಂಬರ್ 23, 24 ರಂದು ಪಿಲಿಕುಳ ನಿಸರ್ಗ ಧಾಮದಲ್ಲಿ ನಡೆಯುವ ತುಳು ನಾಡೋಚ್ಚಯ 2017 ರ ಅಧ್ಯಕ್ಷರಾದ ಡೇವಿಡ್ ಫ್ರಾಂಕ್ ಪೆರ್ನಾಂಡಿಸ್‌ರವರನ್ನು ಅಭಿನಂದಿಸಿ ಮಾತನಾಡಿದ ತುಳುನಾಡ ರಕ್ಷಣಾ ವೇದಿಕೆಯ ವತಿಯಿಂದ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪುರವರು ತುಳುನಾಡಿನ ಮತೀಯ ಸಾಮರಸ್ಯ, ಐಕ್ಯತೆ ಹಾಗೂ ಅಭಿವೃದ್ಧಿಯ ಪ್ರತೀಕವಾದ ತುಳುನಾಡೋಚ್ಚಯ ಕಾರ್ಯಕ್ರಮದ ಒಟ್ಟು ಅಧ್ಯಕ್ಷತೆಯನ್ನು ತುಳುನಾಡಿಗಾಗಿ ದುಡಿಯುತ್ತಿರುವ ಡೇವಿಡ್ ಫ್ರಾಂಕ್ ಫೆರ್ನಾಂಡಿಸ್‌ರವರಿಗೆ ಅಧ್ಯಕ್ಷ ಸ್ಥಾನ ಒಳಿದು ಬಂದಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ. ಅವರ ಅಧ್ಯಕ್ಷತೆಯಲ್ಲಿ ತುಳುನಾಡೋಚ್ಚಯ ಸಂಪೂರ್ಣ ಯಶಸ್ವಿಯಾಗುವ ಭರವಸೆ ನಮಗೆಲ್ಲರಿಗೆ […]

ಪಿಲಿಕುಳ ನಿಸರ್ಗಧಾಮದಲ್ಲಿ ನೂತನ ಜಲಕ್ರೀಡೆ ವಾಟರ್ ಝೋರ್ಬ್ ಬಾಲ್ ಗೆ ಚಾಲನೆ

Saturday, December 22nd, 2012
Pilikula Nisargadhama

ಮಂಗಳೂರು :ಪಿಲಿಕುಳ ನಿಸರ್ಗಧಾಮದ ನಿರ್ದೇಶಕ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಶುಕ್ರವಾರ ಪಿಲಿಕುಳ ನಿಸರ್ಗಧಾಮದಲ್ಲಿ ನೂತನ ಜಲಕ್ರೀಡೆ ವಾಟರ್ ಝೋರ್ಬ್ ಬಾಲ್ ಗೆ ಪ್ರಾಯೋಗಿಕವಾಗಿ ಚಾಲನೆ ನೀಡಿದರು. ವಾಟರ್ ಝೋರ್ಬ್ ಬಾಲ್ ಪಿಲಿಕುಳ ನಿಸರ್ಗಧಾಮ ಮತ್ತು ಫನ್ 360 ಸಂಸ್ಥೆಯ ಜಂಟಿ ಯೋಜನೆಯಾಗಿದ್ದು, ಇದು ಈಗಾಗಲೇ ಪಾಶ್ಚಾತ್ಯ ಹಾಗು ಮುಂದುವರಿದ ರಾಷ್ಟ್ರಗಳಲ್ಲಿ ಜನಪ್ರಿಯತೆ ಪಡೆದ ಕ್ರೀಡೆಯಾಗಿದೆ. ಇದು ಹೆಚ್ಚು ಮೋಜು ಮತ್ತು ಸಂತೋಷವನ್ನು ನೀಡುವ ಕ್ರೀಡೆಯಾಗಿದ್ದು ದಕ್ಷಿಣ ಕನ್ನಡ ಜನರ ಅದರಲ್ಲೂ ಪ್ರಮುಖವಾಗಿ ಮಕ್ಕಳ ಆನಂದ ನಿರೀಕ್ಷಿಸಲಾಗಿದೆ. […]