ನವೆಂಬರ್ 21ರಂದು ಪತ್ರಕರ್ತರ ದ.ಕ ಜಿಲ್ಲಾ ಸಮ್ಮೇಳನ : ಲಾಂಛನ ಬಿಡುಗಡೆ

Saturday, November 11th, 2023
Sammelana

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ವತಿ ಯಿಂದ ನವೆಂಬರ್ 21ರಂದು ಮಂಗಳೂರಿನ ಕುದ್ಮುಲ್ ರಂಗ ರಾವ್ ಪುರಭವನದಲ್ಲಿ ನಡೆಯಲಿರುವ 4 ನೆ ಜಿಲ್ಲಾ ಸಮ್ಮೇಳನದ ಲಾಂಛನ ವನ್ನು ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಮತ್ತು ರಾಜ್ಯ ಸಭಾಸ ದಸ್ಯರಾದ ಶ್ರೀ. ಡಿ.ವೀರೇಂದ್ರ ಹೆಗ್ಗಡೆ ಬಿಡುಗಡೆ ಗೊಳಿಸಿ ಶುಭ ಹಾರೈಸಿದರು. ದ.ಕ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀ ನಿವಾಸ ನಾಯಕ್ ಇಂದಾಜೆ,ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ […]

ಪತ್ರಕರ್ತರ ರಾಜ್ಯ ಸಮ್ಮೇಳನದ ಪ್ರಚಾರ ವಾಹನಕ್ಕೆ ಚಾಲನೆ ನೀಡಿದ ಡಾ.ಸೆಲ್ವಮಣಿ ಆರ್

Monday, March 2nd, 2020
press-club

ಮಂಗಳೂರು : ಪತ್ರಕರ್ತರ ರಾಜ್ಯ ಸಮ್ಮೇಳನದ ಪ್ರಚಾರ ವಾಹನಕ್ಕೆ ದ.ಕ. ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಸೆಲ್ವಮಣಿ ಆರ್. ಸೋಮವಾರ ಪ್ರೆಸ್ ಕ್ಲಬ್ ಮುಂಭಾಗದಲ್ಲಿ ಚಾಲನೆ ನೀಡಿದರು. ಈ ಪ್ರಚಾರ ವಾಹನ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಿಗೆ 5 ದಿನಗಳ ಕಾಲ ತೆರಳಿ ಪ್ರಚಾರ ನಡೆಸಲಿದೆ. ಈ ಪ್ರಚಾರ ವಾಹನಕ್ಕೆ ಚಾಲನೆ ನೀಡಿದ ಡಾ.ಸೆಲ್ವಮಣಿ ಆರ್‌. ಮಾತನಾಡಿ, ಮಾರ್ಚ್ 7 ಹಾಗೂ 8 ರಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ […]

ಹುಣಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವನಾಥ್​ ಸೋಲಿಗೆ ಸಿಪಿ ಯೋಗೀಶ್ವರ್​ ಕಾರಣ : ಜಿಟಿ ದೇವೇಗೌಡ

Wednesday, December 11th, 2019
GT-Deve-Gowda

ಮೈಸೂರು : ಹುಣಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ಸೋಲಿಗೆ ಸಿಪಿ ಯೋಗೀಶ್ವರ್ ಕಾರಣ. ಸಮುದಾಯದ ನಾಯಕರನ್ನು ಟೀಕಿಸಿದ ಕಾರಣ ಒಕ್ಕಲಿಗರು ವಿಶ್ವನಾಥ್ ವಿರುದ್ಧ ತಿರುಗಿ ಬಿದ್ದರು ಎಂದು ಜೆಡಿಎಸ್ ನಾಯಕ ಜಿಟಿ ದೇವೇಗೌಡ ತಿಳಿಸಿದ್ದಾರೆ. ನನ್ನ ಸೋಲಿಗೆ ಜಿಟಿ ದೇವೇಗೌಡ, ಕುಮಾರಸ್ವಾಮಿ, ದೇವೇಗೌಡ ಎಂದು ವಿಶ್ವನಾಥ್ ಆರೋಪಿಸುತ್ತಾರೆ. ಆದರೆ, ಇದು ಸುಳ್ಳು. ಅವರ ಸುಳ್ಳಿಗೆ ಅವರ ಪಕ್ಷದ ನಾಯಕರು ಹಾಗೂ ವಿಶ್ವನಾಥ್ ಹುಂಬತನ ಕಾರಣ ಎಂದು ಹರಿಹಾಯ್ದರು. ವಿಶ್ವನಾಥ್ 5 ಕೋಟಿ ಆಮಿಷ ತೋರಿ ಒಕ್ಕಲಿಗರನ್ನು ಓಲೈಸಬಹುದು […]

ಮಂಗಳೂರಿನ ಪುರಭವನದಲ್ಲಿ ಗಾಂಧಿ ಜಯಂತಿ ಆಚರಣೆ

Wednesday, October 2nd, 2019
Purabhavana

ಮಂಗಳೂರು : ಮಂಗಳೂರಿನ ಪುರಭವನದ ಗಾಂಧಿಪಾರ್ಕ್ನಲ್ಲಿ ದ.ಕ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭಾಗವಹಿಸಿದ್ದರು. ಮಹಾತ್ಮ ಗಾಂಧೀಜಿಯವರು ಬಿಟ್ಟು ಹೋದ ಆದರ್ಶಗಳ ಜೊತೆಗೆ ಹೆಜ್ಜೆ ಇಡೋಣ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಮಂಗಳೂರಿನ ಪುರಭವನದ ಗಾಂಧಿಪಾರ್ಕ್ನಲ್ಲಿ ದ.ಕ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಾಣೆ ಮಾಡಿ ಮಾತನಾಡಿದರು. ಕಾರ್ಯಕ್ರಮಕ್ಕೆ ಮುನ್ನ ಬಲ್ಮಠದಿಂದ ಗಾಂಧಿ ಪಾರ್ಕ್ ವರೆಗೆ ಭಾರತ ಸೇವಾದಳದ […]

ಪುರಭವನಕ್ಕೆ `ಕುದ್ಮುಲ್ ರಂಗರಾವ್ ಪುರಭವನ’ ಎಂದು ಮರು ನಾಮಕರಣ

Thursday, August 30th, 2018
Kudmal-Ranga rao

ಮಂಗಳೂರು :  ಮನಪಾ ವತಿಯಿಂದ  472.41 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಪುರಭವನಕ್ಕೆ ಕುದ್ಮುಲ್ ರಂಗರಾವ್ ಪುರಭವನ ಎಂದು ಮರು ನಾಮಕರಣ ವನ್ನು ವಸತಿ ಮತ್ತು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ನೆರವೇದಿಸಿದರು. ಕುದ್ಮುಲ್ ರಂಗರಾವ್ ದಲಿತ ವರ್ಗದ ವಿಶೇಷ ಕಾಳಜಿಯೊಂದಿಗೆ ಸಾಮಾಜಿಕ ಬದಲಾವಣೆಗೆ ಕಾರಣಕರ್ತರಾದವರು. ಅವರ ಹೆಸರನ್ನು ಪುರಭವನಕ್ಕೆ ನಾಮಕರಣ ಮಾಡುವ ಮೂಲಕ ಉತ್ತಮ ಕಾರ್ಯವನ್ನು ಮನಪಾ ಮಾಡಿದೆ ಎಂದು ಅವರು ಹೇಳಿದರು. ಅತೀ ಶೀಘ್ರದಲ್ಲೇ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಗದ ರಹಿತ, ಅಟೊಮೈಸೇಶನ್ ಹಾಗೂ […]

ಡಾ. ಕೆ.ಎಸ್.ನಿಸಾರ್ ಅಹಮದ್ ಅವರಿಗೆ ಕಾರಂತ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

Wednesday, October 11th, 2017
nisar ahmed

ಮಂಗಳೂರು: ಪದ್ಮಶ್ರೀ ಪುರಸ್ಕೃತ, ನಾಡೋಜ ಡಾ. ಕೆ.ಎಸ್.ನಿಸಾರ್ ಅಹಮದ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಲ್ಕೂರ ಪ್ರತಿಷ್ಠಾನ ಮಂಗಳೂರು ವತಿಯಿಂದ ಕಾರಂತ ಹುಟ್ಟುಹಬ್ಬದ ಪ್ರಯುಕ್ತ ಕಾರಂತ ಪ್ರಶಸ್ತಿಯನ್ನು ನಗರದ ಪುರಭವನದಲ್ಲಿ ಸಂಜೆ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು. ಮಂಗಳೂರು ಕರ್ನಾಟಕ ಬ್ಯಾಂಕ್ ಅಧ್ಯಕ್ಷ ಪಿ.ಜಯರಾಮ್ ಭಟ್ ಕಾರಂತರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ವಹಿಸಿದ್ದರು. ಕಾರಂತರ […]

ಮಂಗಳೂರಿನ ಪುರಭವನಕ್ಕೆ ‘ಕುದ್ಮುಲ್ ರಂಗರಾವ್ ಸ್ಮಾರಕ’ ಹೆಸರಿಡಲು ಒಪ್ಪಿಗೆ ಸೂಚನೆ

Saturday, July 30th, 2016
MCC

ಮಂಗಳೂರು: ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯು ಮೇಯರ್ ಹರಿನಾಥ್ ಅಧ್ಯಕ್ಷತೆಯಲ್ಲಿ ಮಂಗಳಾ ಸಭಾಂಗಣದಲ್ಲಿ ನಡೆಯಿತು. ಮಂಗಳೂರಿನ ಹೃದಯ ಭಾಗದಲ್ಲಿರುವ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರ ತಾಣ ಪುರಭವನಕ್ಕೆ ದಲಿತೋದ್ಧಾರಕ ‘ಕುದ್ಮುಲ್ ರಂಗರಾವ್ ಸ್ಮಾರಕ’ ಎಂದು ಹೆಸರಿಡಲು ಸಭೆಯಲ್ಲಿ ನಿರ್ಣಯಿಸಲಾಯಿತು. ಮುಖ್ಯ ಸಚೇತಕ ಶಶಿಧರ ಹೆಗ್ಡೆ ಕಾರ್ಯಸೂಚಿ ಮಂಡಿಸಿದ್ದು, ಒಪ್ಪಿಗೆ ಸೂಚಿಸಲಾಯಿತು. ಪುರಭವನದ ಎದುರಿನ ಮೈದಾನ ರಸ್ತೆಯಲ್ಲಿ ಪಾದಾಚಾರಿ ಮೇಲ್ಸೇತುವೆ (ಸ್ಕೈವಾಕ್) ನಿರ್ಮಾಣಕ್ಕೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಮುಂದಾಗಿರುವ ಕುರಿತು ಸಭೆಯ ಕಾರ್ಯಸೂಚಿಯಲ್ಲಿ ವಿಷಯ […]

ಶಾಂತಿ ಪ್ರಕಾಶನದ ‘ಪುಸ್ತಕ ಮೇಳ’ ಉದ್ಘಾಟನೆ

Tuesday, November 5th, 2013
shanti-prakash

ಮಂಗಳೂರು : ಮಂಗಳೂರಿನ ಶಾಂತಿ ಪ್ರಕಾಶನದ ರಜತ ಮಹೋತ್ಸವದ ಅಂಗವಾಗಿ ‘ಪುಸ್ತಕ ಮೇಳ- ವಿಶನ್ ಎಕ್ಸ್ಪೋ’ ಸಮಾರಂಭ ಕಾರ್ಯಕ್ರಮವನ್ನು ಅರಣ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ  ಸೋಮವಾರ ನಗರದ ಪುರಭವನದಲ್ಲಿ ಉದ್ಘಾಟನೆ ಮಾಡಿದರು. ಸಚಿವ ರಮಾನಾಥ್ ರೈ ಮಾತಾನಾಡಿ , ಈ ಸಮಾಜದಲ್ಲಿ ಪ್ರತಿದಿನ ತಪ್ಪುಗಳು ಸಂಭವಿಸುತ್ತಲೇ ಇದೆ. ಹೀಗಿರುವಾಗ ಅದನ್ನು ಸರಿಪ ಡಿಸುವವರು ಯಾರು ಎಂಬ ಪ್ರಶ್ನೆಯೂ ಮುಖ್ಯವಾಗುತ್ತದೆ. ಹಾಗಾಗಿ ಸ್ವತಃ ಮನುಷ್ಯರೇ ಆ ಎಲ್ಲಾ ತಪ್ಪುಗಳನ್ನು ತಿದ್ದಿಕೊಂಡರೆ ಸುಂದರ ಸಮಾಜವನ್ನು ಸೃಷ್ಟಿಸಬಹುದು […]

‘ರಘರಾಮಾಭಿನಂದನಮ್’ ಯಕ್ಷಗಾನ ಸಂಮಾನ ಕಾರ್ಯಕ್ರಮ ಉದ್ಘಾಟನೆ

Saturday, July 6th, 2013
Ragghurambhinandanam

ಮಂಗಳೂರು : ರಘರಾಮಾಭಿನಂದನಮ್ ಸಂಮಾನ ಸಮಿತಿಯ ವತಿಯಿಂದ ಮಂಗಳೂರು ಪುರಭವನದಲ್ಲಿ ಜುಲೈ 5 ರಿಂದ 7ರವರೆಗೆ ನಡೆಯುವ ರಘರಾಮಾಭಿನಂದನಮ್ ಕಾರ್ಯಕ್ರಮವನ್ನು ಎಡನೀರು ಸಂಸ್ಥಾನದ ಶ್ರೀ ಶ್ರೀ ಕೇಶವಾನಂದಭಾರತೀ ತೀರ್ಥರು ಹಾಗೂ ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಪಾದರು ಉದ್ಘಾಟಿಸಿದರು. ಯಕ್ಷಗಾನರಂಗದಲ್ಲಿ ಮೂರು ದಶಕಗಳ ಸೇವೆಗೈದ ಪುತ್ತಿಗೆ ರಘುರಾಮಹೊಳ್ಳರ ಸಾಧನೆಯ ಅವಲೋಕನ ಈ ಮೂರು ದಿನಗಳಲ್ಲಿ ನಡೆಯಲಿದೆ. ಉದ್ಘಾಟನೆಯ ಬಳಿಕ ಮಾತನಾಡಿದ ಪೇಜಾವರ ಶ್ರೀಗಳು ಕಲಾಭಿರುಚಿಯಿಂದ ಮನುಷ್ಯ ಆಯುಶ್ಯ ವೃದ್ಧಿಸಲು ಸಾಧ್ಯ. ಹೊಳ್ಳರ ಮೂರು ದಶಕಗಳ ಪರಿಶ್ರಮದಲ್ಲಿ […]

ಪುರಭವನದಲ್ಲಿ ದರ್ಜಿಗಳ ಜಿಲ್ಲಾ ಮಟ್ಟದ ಬೃಹತ್‌ ಸಮಾವೇಶ ಹಾಗೂ ಪಿಂಚಣಿ ಕಾರ್ಡು ವಿತರಣೆ

Wednesday, September 21st, 2011
Tailors Convention

ಮಂಗಳೂರು: ಕರ್ನಾಟಕ ಸ್ಟೇಟ್‌ ಟೈಲರ್ಸ್‌ ಅಸೋಸಿಯೇಶನ್‌ ವತಿಯಿಂದ ನಗರದ ಪುರಭವನದಲ್ಲಿ ಮಂಗಳವಾರ ದರ್ಜಿಗಳ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಬೃಹತ್‌ ಸಮಾವೇಶ ಹಾಗೂ ಟೈಲರ್ಗಳ ಪಿಂಚಣಿ ಕಾರ್ಡು ವಿತರಣೆ ಕಾರ್ಯಕ್ರಮ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಜೆ. ಕೃಷ್ಣ ಪಾಲೆಮಾರ್‌ ಅವರು ಸಮಾವೇಶವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಹೊಸ ಪಿಂಚಣಿ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರಕಾರವು ಈಗ ನೀಡುತ್ತಿರುವ ಸಹಾಯಧನವನ್ನು ಮುಂದಿನ 10 ವರ್ಷಗಳಿಗೆ ವಿಸ್ತರಿಸಬೇಕು ಎನ್ನುವ ಸಂಘಟನೆ ಬೇಡಿಕೆಗೆ […]