ಖಾಸಗಿ ಶಾಲೆ ಪರ ಲಾಬಿಗಳಿಂದ ಪಂಜಿಮೊಗರು ಶಾಲೆ ಮುಚ್ಚಿಸುವ ಪ್ರಯತ್ನ : ಪೋಷಕರ ಪ್ರತಿಭಟನೆ

Tuesday, December 21st, 2021
panjimogaru

ಮಂಗಳೂರು  : ಪಂಜಿಮೊಗರು ಸರಕಾರಿ ಶಾಲೆಯಲ್ಲಿ ಶಿಕ್ಷಣ ಪೂರಕ ವಾತಾವರಣ ಇಲ್ಲವಾಗಿದ್ದು, ಇಲ್ಲಿನ ಮುಖ್ಯೋಪಾದ್ಯಾಯಿನಿ ಹಾಗೂ ಶಿಕ್ಷಕರ ಗುಂಪೊಂದು ಪೋಷಕರ, ಎಸ್.ಡಿ.ಎಂ.ಸಿ ಸದಸ್ಯರ ಯಾವುದೇ ಮಾತಿಗೆ ಬೆಲೆ ಕೊಡದೆ ಸರ್ವಾಧಿಕಾರಿ ವರ್ತನೆ ತೋರುತ್ತಿದ್ದಾರೆ, ಮಕ್ಕಳಿಗೆ ತಾರತಮ್ಯ, ದೈಹಿಕ ಹಲ್ಲೆ, ದೂರು ನೀಡಿದ ವಿದ್ಯಾರ್ಥಿಗಳಿಗೆ ಮಾನಸಿಕ ಹಿಂಸೆ, ಗುಣಮಟ್ಟದ ಶಿಕ್ಷಣದ ಕೊರತೆ ಹಲವಾರು ದೋಷಗಳಿದ್ದು ಈ ಬಗ್ಗೆ ಶಿಕ್ಷಣ ಇಲಾಖೆಗೆ ಹಲವಾರು ಮನವಿ ನೀಡಿದರೂ ಯಾವೂದೇ ಕ್ರಮ ಕೈಗೊಳ್ಳದ ಕಾರಣ ಇಂದು ಕೊಟ್ಟಾರ ಡಿಡಿಪಿಐ ಕಛೇರಿ ಮುಂಭಾಗ ಮಕ್ಕಳೊಂದಿಗೆ […]

ಕಂದಾವರ ಪಂಚಾಯತ್‌ ಅಧ್ಯಕ್ಷರ ಮೇಲೆ ಹಲ್ಲೆ ಮಾಡಿದ ಪಿಡಿಒ, ಗ್ರಾಮಸ್ಥರಿಂದ ಪ್ರತಿಭಟನೆಗೆ ಕರೆ

Tuesday, November 30th, 2021
Umesha Kandavara

ಮಂಗಳೂರು :   ಕಂದಾವರ ಪಂಚಾಯತ್‌ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಂಚಾಯತ್ ಅಧ್ಯಕ್ಷರ ಮೇಲೆ ಹಲ್ಲೆ ಮಾಡಿರುವ ಘಟನೆಯನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಿದ್ದಾರೆ. ಕಂದಾವರ ಪಂಚಾಯತ್‌ ಅಧ್ಯಕ್ಷ ಉಮೇಶ್ ಮೂಲ್ಯ ಹಲ್ಲೆಗೊಳಗಾದವರು. ಈ ನೆಲೆಯಲ್ಲಿ ಪಂಚಾಯತ್ ಸದಸ್ಯರು ಪಂಚಾಯತ್ ಕಚೇರಿಯ ಮುಂಭಾಗ ಪಿಡಿಒ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬುಧವಾರ ಬೆಳಿಗ್ಗೆ ಗ್ರಾಮಸ್ಥರು ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ.

ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಆಡಳಿತ ಮಂಡಳಿಯಿಂದ ಪೋರ್ಜರಿ, ಭಕ್ತಾದಿಗಳಿಂದ ಪ್ರತಿಭಟನೆ

Sunday, November 14th, 2021
Veeranarayana Temple

ಮಂಗಳೂರು : ಶ್ರೀ ವೀರನಾರಾಯಣ ದೇವಸ್ಥಾನ, ಪದವು ಗ್ರಾಮ, ಕುಲಶೇಖರದಲ್ಲಿ ಪ್ರಸ್ತುತ ಆಡಳಿತ ನಡೆಸುವ ಸಮಿತಿಯು ಪೋರ್ಜರಿ ದಾಖಲೆಗಳ ಮೂಲಕ ದೇವಳದ, ಸಮಸ್ತ ಆಸ್ತಿಯನ್ನು ಕಬಳಿಸಿರುವ ಮತ್ತು ಸಾರ್ವಜನಿಕ ದೇವಸ್ಥಾನವನ್ನು ಒಂದು ಸಮುದಾಯದ ಆಸ್ತಿ ಎಂದು ತಪ್ಪು ಸಂದೇಶವನ್ನು ನೀಡಿ ಭಕ್ತರನ್ನು ದಾರಿ ತಪ್ಪಿಸುತ್ತಿರುವ ಬಗ್ಗೆ ಪರಿಸರದ ಭಕ್ತಾಧಿಗಳು ಮತ್ತು ಸುಮಾರು 32 ಸಮಿತಿಗಳು ಸೇರಿ ದೇವಸ್ಥಾನದ ಸಮೀಪ ನವೆಂಬರ್ 14ರ ಭಾನುವಾರ ಪ್ರತಿಭಟನೆ ನಡೆಸಿತು. ಶ್ರೀ ವೀರನಾರಾಯಣ ಸದ್ಭಕ್ತ ಸಮಿತಿ ಕುಲಶೇಖರ ಹಮ್ಮಿಕೊಂಡ ಪ್ರತಿಭಟನಾ ಸಭೆಯನ್ನು […]

ಏಕಮುಖ ರಸ್ತೆಯ ವಿರುದ್ದ ಜೆ.ಡಿ.ಎಸ್ ಪ್ರತಿಭಟನೆ

Wednesday, October 27th, 2021
jds Protest

ಮಂಗಳೂರು : ನಗರದ ಎ.ಬಿ.ಶೆಟ್ಟಿ ವೃತ್ತದಿಂದ ಓಲ್ಟ್ ಕೇಂಟ್ ರಸ್ತೆಗೆ ಏಕಮುಖ ವಾಹನ ಸಂಚಾರಕ್ಕೆ ವಿರೋಧವಾಗಿ ಮಂಗಳೂರು ದಕ್ಷಿಣ ವಿಧಾನ ಸಭಾಕ್ಷೇತ್ರದ ಜೆ.ಡಿ.ಎಸ್ ವತಿಯಿಂದ ಪ್ರತಿಭಟನೆ ಪ್ರದರ್ಶನ ನಡೆಸಿತು. ಪ್ರತಿಭಟನೆಯನ್ನ ಉದ್ದೇಶಿಸಿ ಮಾತನಾಡಿದ ಪಕ್ಷದ ನಾಯಕರಾದ ಸುಶೀಲ್ ನೊರೊನ್ಹಾ ಈ ಒಂದು ದೀಡಿರ್ ರಸ್ತೆ ಮಾರ್ಪಡಿನಿಂದ ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗಿದ್ದು ಈ ನಿರ್ಧಾರವನ್ನು ಕೂಡಲೇ ಕೈ ಬಿಡಬೇಕೆಂದು ಸಂಬಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಿದರು. ಅಲ್ಲದೆ ಸ್ಮಾರ್ಟಸಿಟಿ ಯೋಜನೆಗೆ ಕೇಂದ್ರ ಹಾಗು ರಾಜ್ಯ ಸರಕಾರದಿಂದ ಸುಮಾರು ಐನೂರು ಕೋಟಿ ಹಣ […]

ಬಾಂಗ್ಲಾದೇಶದಲ್ಲಿ ಇಸ್ಕಾನ್‌ ದೇವಾಲಯದ ಮೇಲೆ ದಾಳಿ, ಮಂಗಳೂರಿನಲ್ಲಿ ಇಸ್ಕಾನ್‌ ಭಕ್ತರ ಪ್ರತಿಭಟನೆ

Tuesday, October 26th, 2021
iskcon

ಮಂಗಳೂರು : ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ದಾಳಿ ಖಂಡಿಸಿ, ನಗರದ ಆರ್ಯಸಮಾಜ ರಸ್ತೆಯ ಇಸ್ಕಾನ್‌ ಮಂದಿರ ವತಿಯಿಂದ ಮಂಗಳವಾರ ಕೃಷ್ಣನ ಕೀರ್ತನೆಗಳನ್ನು ಹಾಡಿ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭ ಮಾತನಾಡಿದ  ಮಂದಿರದ ಅಧ್ಯಕ್ಷ ಕಾರುಣ್ಯ ಸಾಗರದಾಸ್‌, ಬಾಂಗ್ಲಾದೇಶದಲ್ಲಿರುವ ಧಾರ್ಮಿಕ ಅಲ್ಪಸಂಖ್ಯಾತರಾಗಿರುವ ಹಿಂದುಗಳ ಮೇಲಿನ ದಾಳಿ ಅಮಾನುಷವಾದದ್ದು. ಅಲ್ಲಿನ ಹಿಂದುಗಳಿಗೆ ಬೆಂಬಲ ನೀಡಬೇಕು ಎನ್ನುವ ಉದ್ದೇಶದಿಂದ ವಿಶ್ವಾದ್ಯಂತ ಇಸ್ಕಾನ್‌ ದೇವಾಲಯಗಳಲ್ಲಿ ಈ ಪ್ರತಿಭಟನೆ ಆಯೋಜಿಸಲಾಗುತ್ತಿದೆ. ಜಾತಿ ಬೇಧ ಇಲ್ಲದೆ, ಎಲ್ಲರನ್ನು ಒಟ್ಟು ಸೇರಿಸಿ ಮುಂದುವರಿಯುವುದು ಇಸ್ಕಾನ್‌ನ ಆಶಯ. ಆದರೆ […]

ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯ ಹಾಗೂ ಹಿಂದೂ ಮನೆಗಳ ಧ್ವಂಸ, ವಿಶ್ವ ಹಿಂದು ಪರಿಷತ್ ಪ್ರತಿಭಟನೆ

Wednesday, October 20th, 2021
VHP protest

ಮಂಗಳೂರು : ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಿಖ್ಖರ ಮೇಲಿನ ದೌರ್ಜನ್ಯ, ಹಿಂದೂ ದೇವಾಲಯ ಹಾಗೂ ಹಿಂದೂ ಮನೆಗಳ ಧ್ವಂಸವನ್ನು ಖಂಡಿಸಿ ವಿಶ್ವಹಿಂದು ಪರಿಷತ್ ವತಿಯಿಂದ  ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿ ತಾಲೂಕು ಕೇಂದ್ರಗಳಲ್ಲಿಯೂ ಬುಧವಾರ ಪ್ರತಿಭಟನೆ ನಡೆಯಿತು. ಮಲ್ಲಿಕಟ್ಟೆ ದ್ವಾರದ ಬಳಿ ಸೇರಿದ ನೂರಾರು ಕಾರ್ಯಕರ್ತರು ಬಾಂಗ್ಲಾ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಬಾಂಗ್ಲಾ ಸರಕಾರದ ನಡೆಯನ್ನು ಖಂಡಿಸಿದರು. ಅಲ್ಲದೆ ಕೆಲಹೊತ್ತು ರಸ್ತೆ ತಡೆಯ ಮೂಲಕ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವಿಹಿಂಪ ವಿಭಾಗ ಕಾರ್ಯದರ್ಶಿ […]

ಮೂರು ತಿಂಗಳ ಅವಧಿಯ ವಿದ್ಯುತ್ ಬಿಲ್ಲು, ನೀರಿನ ಬಿಲ್ಲು ಮನ್ನಾ ಮಾಡಬೇಕು ಎಂದು ದೊಂದಿ ಹಿಡಿದು ಪ್ರತಿಭಟನೆ

Wednesday, June 23rd, 2021
Electric Bill

ಮಂಗಳೂರು : ಕೊರೋನಾ ಕಾಲದ ಈ ಎರಡನೇ ಅಲೆಯಲ್ಲಿ ಸರಕಾರ ಘೋಷಿಸಿದ ಲಾಕ್ಡೌನ್ ನ ಈ ಸಂಕಷ್ಟದ ಕಾಲದಲ್ಲಿ ಜನರಿಗೆ ಉದ್ಯೋಗ ಇಲ್ಲದೆ ಅನ್ನ ,ನೀರಿಗೂ ಕೂಡಾ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ. ಸರಕಾರದ ಈ ಲಾಕ್ ಡೌನ್ ಅವಧಿಯಲ್ಲಿ ಜನ ಸಾಮಾನ್ಯರಿಗೆ ಅನ್ನ ಕೊಡಲಿಲ್ಲ, ಅಕ್ಕಿ ಕೊಡಲಿಲ್ಲ, ಬೇಳೆ ಕೊಡಲಿಲ್ಲ, ನಮ್ಮ ಮಕ್ಕಳ ಶಾಲಾ ಫೀಸು ಕೊಡಲಿಲ್ಲ, ಬ್ಯಾಂಕಿಗೆ ಕಟ್ಟಬೇಕಾದ ಸಾಲದ ಕಂತನ್ನು ಬಿಡದೆ ವಸೂಲಿ ಮಾಡಿದಿರಿ, ಈಗ ಕನಿಷ್ಟ ಈ ಮೂರು ತಿಂಗಳ ಅವಧಿಯ ವಿದ್ಯುತ್ […]

ಮೆಸ್ಕಾಂ ಗುತ್ತಿಗೆ ಮೀಟರ್ ರೀಡರ್ ಗಳನ್ನು ಕೆಲಸದಿಂದ ವಜಾ : ಬಿಜೈ ಮೆಸ್ಕಾಂ ಕಚೇರಿಯ ಎದುರು ಪ್ರತಿಭಟನೆ

Wednesday, October 14th, 2020
mescom readers

ಮಂಗಳೂರು : ಮೆಸ್ಕಾಂ ಗುತ್ತಿಗೆ ಮೀಟರ್ ರೀಡರ್ ಗಳನ್ನು ಕೆಲಸದಿಂದ ಕೈ ಬಿಟ್ಟಿರುವುದನ್ನು ವಿರೋಧಿಸಿ ಮೀಟರ್ ರೀಡರ್‌ಗಳ ಕಾರ್ಮಿಕ ಸಂಘಟನೆ ಹಾಗೂ ಇಂಟಕ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ನಗರದ ಬಿಜೈ ಮೆಸ್ಕಾಂ ಕಚೇರಿಯ ಎದುರು ಪ್ರತಿಭಟನಾ ಪ್ರದರ್ಶನ ನಡೆಯಿತು. ಮೆಸ್ಕಾಂ ಮೀಟರ್ ರೀಡರ್‌ಗಳಾಗಿ ಕಳೆದ 17 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರನ್ನು ಬಂಟ್ವಾಳ ಮತ್ತು ಪುತ್ತೂರಿನ ಎರಡು ನೂತನ ಗುತ್ತಿಗೆದಾರ ಸಂಸ್ಥೆಗಳು ಕೆಲಸದಿಂದ ವಜಾಗೊಳಿಸಲು ಮುಂದಾಗಿರುವುದರ ವಿರುದ್ಧ ಮೆಸ್ಕಾಂ ಮೀಟರ್ ರೀಡರ್ ಗಳು ಮೆಸ್ಕಾಂ ವ್ಯವಸ್ಥಾಪಕ […]

ರೈತ ವಿರೋಧಿ ಮಸೂದೆಯನ್ನು ಖಂಡಿಸಿ ಯುವ ಕಾಂಗ್ರೆಸ್ ವತಿಯಿಂದ ದೊಂದಿ ಬೆಳಕಿನ ಪ್ರತಿಭಟನೆ

Friday, September 25th, 2020
YouthCongress

ಮಂಗಳೂರು : ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ರೈತ ವಿರೋಧಿ ಮಸೂದೆಯನ್ನು ಖಂಡಿಸಿ ದಕ್ಷಿಣ ಕನ್ನಡ ಯುವ ಕಾಂಗ್ರೆಸ್ ವತಿಯಿಂದ ಮಂಗಳೂರಲ್ಲಿ ದೊಂದಿ ಬೆಳಕಿನ ಪ್ರತಿಭಟನೆ ಶುಕ್ರವಾರ ಸಂಜೆ  ನಡೆಯಿತು. ಪ್ರತಿಭಟನೆಗೆ ಅನುಮತಿವಿಲ್ಲದ ಕಾರಣ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದಾರೆ. ಇದೇ ವೇಳೆ ಪೊಲೀಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಅನುಮತಿ ಇಲ್ಲದೇ ಪ್ರತಿಭಟನೆ ನಡೆಸಿದ ಕಾರಣ ಕಾಂಗ್ರೆಸ್ ಮುಖಂಡರು ಹಾಗೂ ಪ್ರತಿಭಟನಾನಿರತ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ನಂತರ ಬಂಧಿತರನ್ನು ಪೊಲೀಸರು ಬಿಡುಗಡೆಗೊಳಿಸಿದ್ದಾರೆ.

ಕೇರಳ ಪೊಲೀಸರು ಮತ್ತು ಜಿಲ್ಲಾಡಳಿತದ ದೌರ್ಜನ್ಯ ಖಂಡಿಸಿ ಬಿಜೆಪಿಯಿಂದ ತಲಪಾಡಿಯಲ್ಲಿ ಪ್ರತಿಭಟನೆ

Tuesday, September 1st, 2020
Bjp protest

ಮಂಜೇಶ್ವರ : ಕೇರಳ ಮತ್ತು ಕರ್ನಾಟಕ ಅಂತರ್ ರಾಜ್ಯ ಸಂಚಾರಕ್ಕೆ ಮುಕ್ತ ಅವಕಾಶ ನೀಡಬೇಕೆಂದು ಆಗ್ರಹಿಸಿ ಮಂಜೇಶ್ವರ ಬಿಜೆಪಿ ಮಂಡಲ ಸಮಿತಿಯ ನೇತೃತ್ವದಲ್ಲಿ ತಲಪಾಡಿಯಲ್ಲಿ ಗಡಿಯಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಗೆ ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿಗಳು ಆದ ಶ್ರೀಕಾಂತ್ ಚಾಲನೆ ನೀಡಿದರು. ಮಂಜೇಶ್ವರ ಮಂಡಲ ಸಮಿತಿಯ ಅಧ್ಯಕ್ಷರಾದ ಮಣಿಕಂಠ ರೈ ಅಧ್ಯಕ್ಷತೆ ವಹಿಸಿದ್ದರು. ಕೊರೊನಾ ಪಾಸಿಟಿವ್ ಹೆಚ್ಚಿರುವ ಮಲಪ್ಪುರಂ, ಕಣ್ಣೂರು ಮತ್ತು ಅನ್ಯರಾಜ್ಯಗಳಿಂದ ವ್ಯಾಪಾರ ಸಂಭಂದಿತ ಸರಕು ವಾಹನಗಳಿಗೆ ಯಾವುದೇ ನಿರ್ಬಂಧ ಮಾಡದೆ ಕೇವಲ ದಕ್ಷಿಣಕನ್ನಡ ಜಿಲ್ಲೆಗೆ […]