ಸತ್ತ ವ್ಯಕ್ತಿಗೆ ಎರಡನೇ ಡೋಸ್ ಕೋವಿಡ್ ಲಸಿಕೆ, ಮಗನ ಮೊಬಲೈ ಗೆ ಎಸ್ಎಂಎಸ್

Wednesday, October 27th, 2021
Covid-vaccine

ವಿಟ್ಲ : ಸತ್ತ ವ್ಯಕ್ತಿಗೆ ಕೋವಿಡ್ ಲಸಿಕೆಯ ಎರಡನೇ ಡೋಸ್ ನೀಡಲಾಗಿದೆ ಎಂಬ ಎಸ್ಎಂಎಸ್ ಮಗನ ಮೊಬೈಲ್ಗೆ ಬಂದ ಘಟನೆ ನಡೆದಿದೆ. ಆರು ತಿಂಗಳ ಹಿಂದೆಯೇ  ಮಾಣಿ ಸಮೀಪದ ಮಿತ್ತೂರು ಅಕ್ಕರೆ ನಿವಾಸಿ ಹಸೈನಾರ್ ಎಂಬುವರು 2001ರ ಏ.27 ರಂದು ಮೃತಪಟ್ಟಿದ್ದರು. ಆದರೆ, ಅ.14ರಂದು ಅವರಿಗೆ ಎರಡನೇ ಡೋಸ್ ನೀಡಲಾಗಿದೆ ಎಂಬ ಎಸ್ಎಂಎಸ್ ಮಗನ ಮೊಬೈಲ್ಗೆ ಬಂದಿದೆ. ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾರ್ಚ್ 24ರಂದು ಮೃತ ಹಸೈನಾರ್ ಅವರಿಗೆ ಪ್ರಥಮ ಡೋಸ್ ನೀಡಲಾಗಿತ್ತು. ಎರಡನೇ ಡೋಸ್ ಪಡೆಯುವ ಮೊದಲೇ […]

ಚಾರ್ಮಾಡಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿದ ಸಚಿವ ಡಾ.ಕೆ.ಸುಧಾಕರ್

Wednesday, June 30th, 2021
Dr Sudhakar

ಬೆಳ್ತಂಗಡಿ : ಕೊರೋನ ಸೋಂಕು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಾ ಹೊರಟಿದೆ. ವೈರಾಣು ಪ್ರಯೋಗಾಲಯ ಸ್ಥಾಪಿಸಿದ್ದಲ್ಲಿ ವೈರಾಣುಗಳ ಸ್ವರೂಪ, ಸ್ವಭಾವದಲ್ಲಿನ ಬದಲಾವಣೆಗಳ ಬಗ್ಗೆ ಕೂಲಂಕಷವಾಗಿ ಸಂಶೋಧನೆ ನಡೆಸಲು ಸಾಧ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಚಾರ್ಮಾಡಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. 1.37 ಕೋಟಿ ರೂ. ವೆಚ್ಚದಲ್ಲಿ ಚಾರ್ಮಾಡಿಯ ಆರೋಗ್ಯ ಕೇಂದ್ರದ ನೂತನ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಗ್ರಾಮೀಣ […]

ಕಂದಾಯ ಸಚಿವರಿಂದ ಬೆಂಗಳೂರು ದಕ್ಷಿಣಕ್ಕೆ 1000 ಪಲ್ಸ್ ಆಕ್ಸಿಮೀಟರ್ ವಿತರಣೆ

Tuesday, May 25th, 2021
pulse-oximeters

ಬೆಂಗಳೂರು : ಕಂದಾಯ ಸಚಿವ ಆರ್ ಅಶೋಕ ಅವರು ಬಿಬಿಎಂಪಿ ವ್ಯಾಪ್ತಿಯ ಬೆಂಗಳೂರು ದಕ್ಷಿಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 1000 ಪಲ್ಸ್ ಆಕ್ಸಿಮೀಟರ್ ವಿತರಣೆ ಮಾಡಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಸಚಿವ ಅಶೋಕ,”ಅಮೆರಿಕಾದ ವಾಷಿಂಗ್ಟನ್ ಡಿಸಿಯಲ್ಲಿನ ಒ ಎಸ್ ಎ ಪ್ರತಿಷ್ಠಾನವು ದಾನವಾಗಿ ನೀಡಿರುವ 1000 ಪಲ್ಸ್ ಆಕ್ಸಿಮೀಟರ್ ಗಳನ್ನ ಬೆಂಗಳೂರಿನ ಭಾರತೀಯ ಕೈಗಾರಿಕೆಗಳ ಒಕ್ಕೂಟದ ಮೂಲಕ ಕಂದಾಯ ಇಲಾಖೆಯು ಪಡೆದುಕೊಂಡಿರುತ್ತದೆ. ಈ ಕುರಿತಂತೆ ಬೆಂಗಳೂರು ದಕ್ಷಿಣದ ಆರು ವಿಧಾನಸಭಾ ಕ್ಷೇತ್ರಗಳಲ್ಲಿರುವ ಪ್ರಾಥಮಿಕ ಆರೋಗ್ಯ […]

ಆತ್ಮಸ್ಥೈರ್ಯದಿಂದಲೇ ಕೊರೋನಾ ಹಿಮ್ಮೆಟ್ಟಿಸಿದ ಶಿವಳ್ಳಿಮಠ ಕುಟುಂಬ

Monday, May 24th, 2021
Shivalli Mata Family

ಹುಬ್ಬಳ್ಳಿ : ಎಲ್ಲಾ ಜೀವಿಗಳಿಗಿಂತ ಮಾನವ ಬುದ್ಧಿಜೀವಿ. ಹೊಸ ಹೊಸ ಅನ್ವೇಷಣೆಗಳನ್ನು ಮಾಡುತ್ತಾ, ಹೊಸವಿಚಾರಗಳನ್ನು ಕಲಿಯುತ್ತಾ, ತನ್ನ ಜೀವನಶೈಲಿಯನ್ನು ಉತ್ತಮಗೊಳಿಸಲು ಸಹಕಾರಿಯಾಗುವ ವಸ್ತುಗಳನ್ನು ತಾನೇ ತಯಾರಿಸುತ್ತಾ, ಅತ್ಯಂತ ವೇಗವಾಗಿ ಸಾಗುತ್ತಿದ್ದ ಮನುಷ್ಯನ ಜೀವನಕ್ಕೆ ಒಮ್ಮೆಲೇ ಬ್ರೇಕ್ ಹಾಕಿದ್ದು ಚೀನಾ ಮೂಲದ ಕರೋನಾ ವೈರಸ್. ಕೋವಿಡ್ -19 ಎಂಬ ವೈಜ್ಞಾನಿಕ ಹೆಸರಿನಿಂದ ಕರೆಯಲ್ಪಡುವ ಈ ವೈರಸ್ ಮಾನವ ಜೀವನಶೈಲಿಯನ್ನು ಬದಲಾಯಿಸಿತು, ರೋಗದಿಂದ ಪಾರಾಗಿ ಬದುಕುಳಿಯಲು ಮಾನವಕುಲ ಹರಸಾಹಸಪಡುವ ಸ್ಥಿತಿಗೆ ಬಂದು ನಿಲ್ಲುವಂತೆ ಮಾಡಿತು, ಶ್ವಾಸಕೋಶದ ಮೂಲಕ ಮಾನವ ದೇಹ […]

ವ್ಯಾಕ್ಸಿನ್ ಕಳ್ಳ ದಂಧೆ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಮತ್ತು ಸಿಬ್ಬಂದಿ ಪೊಲೀಸ್ ಬಲೆಗೆ

Friday, May 21st, 2021
Pushpika

ಬೆಂಗಳೂರು:   ಮಂಜುನಾಥನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆಯಾಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ವೈದ್ಯೆ ಡಾ.ಪುಷ್ಪಿತಾ(25) ಮತ್ತು ಸಿಬ್ಬಂದಿ ಪ್ರೇಮಾ (34) ಅವರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ. ಡಾ. ಪುಷ್ಪಿತಾ ಳು. ಆಸ್ಪತ್ರೆಗೆ ಬರುತ್ತಿದ್ದ ಲಸಿಕೆಗಳನ್ನು ಪ್ರೇಮಾ ಅನ್ನಪೂರ್ಣೇಶ್ವರಿ ನಗರದಲ್ಲಿರುವ ತನ್ನ ಮನೆಯಲ್ಲಿ ದಾಸ್ತಾನು ಮಾಡಿಸುತ್ತಿದ್ದಳು. ಬಳಿಕ ಮನೆಯಲ್ಲಿಯೇ ಅಕ್ರಮವಾಗಿ ಲಸಿಕೆ ನೀಡುವ ದಂಧೆ ಆರಂಭಿಸಿದ್ದಳು ಎನ್ನಲಾಗಿದೆ. ಏ.23 ರಿಂದಲೂ ತಲಾ 500 ರೂ. ಪಡೆದು ಇವರು ಲಸಿಕೆಯನ್ನು ವಿತರಿಸುತ್ತಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ. ಖಚಿತ […]

ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್ ನೀಡಿದ ಕ್ರೆಡಾಯ್‌ ಮಂಗಳೂರು

Friday, May 14th, 2021
credai

ಮಂಗಳೂರು  : ಕ್ರೆಡಾಯ್ ಮಂಗಳೂರು ಘಟಕವು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಜನತೆಗೆ ಸೇವೆ ಸಲ್ಲಿಸುವ ಉದ್ದೇಶದಿಂದ ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್ ಅನ್ನು ನೀಡಿದೆ. ಶಾಸಕ ಡಾ.ವೈ.ಭರತ್ ಶೆಟ್ಟಿ, ಮೇಯರ್ ಪ್ರೇಮಾನಂದ ಶೆಟ್ಟಿ, ಉಪಮೇಯರ್ ಸುಮಂಗಲಾ ರಾವ್, ಆಯುಕ್ತ ಅಕ್ಷಯ್ ಶ್ರೀಧರ್ ಅವರ ಉಪಸ್ಥಿತಿಯಲ್ಲಿ ಕ್ರೆಡಾಯ್ ಅಧ್ಯಕ್ಷ ಪುಪ್ಪರಾಜ್ ಜೈನ್ ಅವರು ಆಂಬುಲೆನ್ಸ್ ವಾಹನವನ್ನು ಹಸ್ತಾಂತರಿಸಿದರು. ಕೋವಿಡ್ 19ರ ಸಂಕಷ್ಟದ ಅವಧಿಯಲ್ಲಿ ಸಾರ್ವಜನಿಕರಿಗೆ ಈ ಆಂಬುಲೆನ್ಸ್ ಉಚಿತವಾಗಿ ಸೇವೆ ನೀಡಲಿದೆ. ಈ ವಾಹನದ […]

‘ಹೊಸ ವರ್ಷದಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ, ಯಾವುದೇ ಪರೀಕ್ಷೆಗೂ ಶುಲ್ಕವಿಲ್ಲ’

Thursday, November 12th, 2020
sudhakar

ಮೈಸೂರು: ಹೊಸ ವರ್ಷದ ಮೊದಲ ದಿನದಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು ಹಾಗೂ ಯಾವುದೇ ಪರೀಕ್ಷೆಗೂ ಶುಲ್ಕವಿಲ್ಲ ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾಲಯದ ಡೀನ್ ಕಚೇರಿಯಲ್ಲಿ ಮಾತನಾಡಿದ ಸಚಿವರು, ‘ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯವರೆಗೆ ಎಲ್ಲ ಕಡೆ ಪರೀಕ್ಷೆಗಳನ್ನು ಒಂದು ರೂ. ಶುಲ್ಕ ಪಡೆಯದೇ ಉಚಿತವಾಗಿ ಮಾಡಲಾಗುತ್ತದೆ. ಈ ವ್ಯವಸ್ಥೆಯನ್ನು ಜನವರಿ 1ರಂದು ಘೋಷಿಸಲಾಗುವುದು’ ಎಂದು ಮಹತ್ವದ ವಿಚಾರವನ್ನು […]

ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಲಪಡಿಸುವಂತೆ ಒತ್ತಾಯಿಸಿ ಡಿವೈಎಫ್ಐ ಸಮಿತಿಯ ಪ್ರತಿಭಟನೆ

Wednesday, December 14th, 2016
DYFI

ಮಂಗಳೂರು: ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಿ, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ ಆಸ್ಪತ್ರೆಗಳನ್ನು ಬಲಪಡಿಸುವಂತೆ ಒತ್ತಾಯಿಸಿ ಉಳ್ಳಾಲ ವಲಯ ಡಿವೈಎಫ್ಐ ಸಮಿತಿ ತೊಕ್ಕೊಟ್ಟು ಹೊಸ ಬಸ್ ನಿಲ್ದಾಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿತು. ಈ ಸಂದರ್ಭದಲ್ಲಿ ಮಾತನಾಡಿದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೇವಲ ಐದು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ಸಮುದಾಯ ಆಸ್ಪತ್ರೆ ಎಲ್ಲಿದೆ ಎಂದು ಗೊತ್ತಿಲ್ಲ. ಈ ಕ್ಷೇತ್ರದಲ್ಲಿ ಖಾಸಗಿ […]

ನಿರ್ಮಾಣಗೊಂಡು ಎರಡು ವರ್ಷವಾದರೂ ಉಪಯೋಗ ಶೂನ್ಯ ಆಸ್ಪತ್ರೆ

Tuesday, October 18th, 2016
Mulleria

ಮುಳ್ಳೇರಿಯಾ: ನಿರ್ಮಾಣ ಕಾಮಗಾರಿ ಪೂರ್ತಿಗೊಂಡು ವರ್ಷಗಳೆರಡು ಕಳೆದರೂ ಮುಳ್ಳೇರಿಯಾ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಉದ್ಘಾಟನೆಗೊಳ್ಳದೆ ಉಪಯೋಗ ಶೂನ್ಯವಾಗಿದ್ದು, ಲಕ್ಷಾಂತರ ರೂ.ವ್ಯಯಿಸಿ ನಿರ್ಮಿಸಲಾದ ಕಟ್ಟಡ ವ್ಯರ್ಥವಾಗುತ್ತಿದೆ. ಎಂಡೋಸಲ್ಫಾನ್ ಸಂತ್ರಸ್ಥರು ಅಧಿಕವಿರುವ ಪ್ರದೇಶವೆಂದು ಪರಿಗಣಿಸಿ ನಿರ್ಮಿಸಲಾದ ಈ ಆಸ್ಪತ್ರೆ ನಿತ್ಯ ಚಿಕಿತ್ಸೆಗಳಿಗೆ ಆಗಮಿಸುವ ನೂರಾರು ರೋಗಿಗಳಿಗೆ ಯಾವುದೇ ಪ್ರಯೋಜನಕ್ಕೆ ಬಾರದೆ ಉಪಯೋಗಶೂನ್ಯವಾಗಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ.ಈ ನೂತನ ಕಟ್ಟಡ ನಿರ್ಮಾನಕ್ಕೆ ಎಂಡೋಸಲ್ಫಾನ್ ಪ್ಯಾಕೇಜ್ ಹಾಗೂ ನಬಾರ್ಡ್ ಅನುದಾನದಿಂದ ಒಟ್ಟು 64 ಲಕ್ಷ ರೂ.ಗಳನ್ನು ವ್ಯಯಿಸಿ 2013 ಮೇ ತಿಂಗಳಲ್ಲಿ ಕಾಮಗಾರಿ ಆರಂಭಿಸಿ […]

ಅಪ್ಪ-ಅಮ್ಮನ ಜೀವ ಉಳಿಸಿದ 8ರ ಹರೆಯದ ಹುಡುಗಿ

Wednesday, October 12th, 2016
bajpe

ಬಜಪೆ: ಇಲ್ಲಿನ ಹೋಲಿ ಫ್ಯಾಮಿಲಿ ಶಾಲೆಯ ಪಕ್ಕದ ಬೀಬಿಜಾನ್‌ ಯಾನೆ ಮೆಹರುನ್ನಿಸ್‌ ಅವರ ಮನೆಯ ಬಾವಿಗೆ ಹಾಕಿದ ಪಂಪು ಕೆಟ್ಟು ಹೋಗಿದೆ ಎಂದು ಅದನ್ನು ಸರಿಪಡಿಸಲು ಹೋದ ಮನೆಯ ಕೆಲಸದ ಚಿತ್ರದುರ್ಗದ ಪ್ಯಾರಿ ಜಾನ್‌ (23) ಜಾರಿ ಬಾವಿಗೆ ಬಿದ್ದ ಕಾರಣ ಅವರನ್ನು ರಕ್ಷಿಸಲು ಬಾವಿಗೆ ಹಾರಿದ ಆಕೆಯ ಪತಿ ಹುಸೇನ್‌(25)ನ್ನು ಅವರ ಮಗಳು 8ರ ಹರೆಯದ ಸೀಮಾಳ ಸಮಯಪ್ರಜ್ಞೆಯಿಂದಾಗಿ, ಸಾರ್ವಜನಿಕರು, ಬಜಪೆ ಪೊಲೀಸರು ಮತ್ತು ಕದ್ರಿ ಅಗ್ನಿಶಾಮಕ ದಳ ಸಿಬಂದಿ ಸಹಾಯದಿಂದಾಗಿ ಪ್ರಾಣಾಪಾಯದಿಂದ ಬದುಕುಳಿದ ಘಟನೆ […]