ಶರಣ್ ಪಂಪ್‌ವೆಲ್‌ ಗೆ ಮುಸ್ಲಿಮರ ಸಂಸ್ಥೆಯ ಹಣವಾಗುತ್ತದೆ, ಆದರೆ ಮುಸ್ಲಿಂ ಯುವಕರು ಬೇಡವಾಗಿದೆ : ಬಿರುವೆರ್ ಕುಡ್ಲ

Tuesday, November 16th, 2021
Birver Kudla

ಮಂಗಳೂರು : ಬಲ್ಲಾಳ್ ಭಾಗ್ ಘಟನೆಯ ಬಗ್ಗೆ ಪೂರ್ಣ ಮಾಹಿತಿಯಿಲ್ಲದೆ  ಬಜರಂಗ ದಳದ ಮುಖಂಡ ಶರಣ್ ಪಂಪ್‌ವೆಲ್‌ ಬಿರುವೆರ್ ಕುಡ್ಲ ಸಂಘಟನೆಯ ವಿರುದ್ಧ ಆರೋಪ ಮಾಡಿರುವುದು ಸರಿಯಲ್ಲ ಎಂದು  ಸಂಘಟನೆಯ ಮುಖ್ಯಸ್ಥ ಲಕ್ಷ್ಮೀಶ್ ಹೇಳಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು  ಬಿರುವೆರ್ ಕುಡ್ಲ ಸಮಾಜ ಸೇವೆಗಾಗಿ ಹುಟ್ಟಿಕೊಂಡ ಸಂಸ್ಥೆಯಾಗಿದೆ. ಏಳು ವರ್ಷಗಳಿಂದ ಸಂಸ್ಥೆಯು ಬಡವರಿಗೆ ಜಾತಿ ಭೇದ ನೋಡದೆ ಮೂರೂವರೆ ಕೋಟಿ ರೂ.ಗಳ ಸಹಾಯ ಮಾಡಿದೆ ಎಂದರು. ಶರಣ್ ಪಂಪ್‌ವೆಲ್ ಬಿರುವೆರ್ ಕುಡ್ಲದ ಬಗ್ಗೆ ಮಾನಹಾನಿಯಾಗುವ ರೀತಿಯಲ್ಲಿ ಮಾತನಾಡಿದ್ದಾರೆ. ಹಾಗಾಗಿ […]

ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಅನ್ಯಕೋಮಿನ ಜೋಡಿ, ಬಜರಂಗ ದಳ ಕಾರ್ಯಕರ್ತರಿಂದ ಪೊಲೀಸರಿಗೆ ದೂರು

Sunday, October 3rd, 2021
ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಅನ್ಯಕೋಮಿನ ಜೋಡಿ, ಬಜರಂಗ ದಳ ಕಾರ್ಯಕರ್ತರಿಂದ ಪೊಲೀಸರಿಗೆ ದೂರು

ಮಂಗಳೂರು : ಅನ್ಯಕೋಮಿನ ಯುವಕ-ಯುವತಿಯರ ಜೋಡಿ ಚಿಲಿಂಬಿ ಗುಡ್ಡೆಯಲ್ಲಿ ಸುತ್ತಾಡುತ್ತಿರುವ ಬಗ್ಗೆ ಬಜರಂಗ ದಳ ಕಾರ್ಯಕರ್ತರು ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿತ್ತು. ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ  ಯುವಕ-ಯುವತಿಯರ ತಂಡವೊಂದು ಸುತ್ತಾಡಲು ಚಿಲಿಂಬಿ ಗುಡ್ಡೆಗೆ ಬಂದಿದ್ದರು. ಇದನ್ನು ಗಮನಿಸಿದ ಬಜರಂಗದಳದ ಕಾರ್ಯಕರ್ತರು, ಪೊಲೀಸರಿಗೆ ಈ ಕುರಿತಂತೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು, ವಿಚಾರಣೆ ನಡೆಸಿದ್ದರು

ಶಾಸಕ ವಿ. ಸುನಿಲ್‌ ಕುಮಾರ್‌ ಅವರು ವಿಧಾನಸಭೆ ಮುಖ್ಯ ಸಚೇತಕರಾಗಿ ನೇಮಕ

Friday, October 11th, 2019
sunil-kumar

ಬೆಂಗಳೂರು : ಉಡುಪಿ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ವಿ. ಸುನಿಲ್‌ ಕುಮಾರ್‌ ಅವರು ವಿಧಾನ ಸಭೆಯ ಮುಖ್ಯ ಸಚೇತಕರಾಗಿ ನೇಮಕಗೊಂಡಿದ್ದಾರೆ. ಮೂರನೇ ಬಾರಿಗೆ ಶಾಸಕರಾಗಿರುವ ಅವರು ಈ ಹಿಂದೆ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿದ್ದರು. 2002ರಲ್ಲಿ ಬಜರಂಗ ದಳ ರಾಜ್ಯ ಸಂಚಾಲಕರಾಗಿ, ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು.  

ಬಂಟ್ವಾಳ : ಬಸ್ ಗಳ ಮೇಲೆ ಕಲ್ಲು ತೂರಾಟ ಹಲವರಿಗೆ ಗಾಯ

Tuesday, June 25th, 2019
bus stoned

ಬಂಟ್ವಾಳ : ಪೆರ್ಲ ಸಮೀಪ ಅಕ್ರಮ ಗೋ ಸಾಗಾಟಗಾರರ ಮೇಲೆ ಹಲ್ಲೆ ನಡೆಸಿ ಹಣ ಹಾಗೂ ಪಿಕಪ್ ವಾಹನ ದರೋಡೆ ಮಾಡಿದ್ದಾರೆ ಎಂದು  ಕೇಸು ದಾಖಲಾದ ಬೆನ್ನಲ್ಲೇ  ಬಂಟ್ವಾಳ  ತಾಲೂಕಿನ ಹಲವೆಡೆ ಖಾಸಗಿ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಎಂಬಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಇದರಿಂದ ಸುಮಾರು ಮೂರು ಬಸ್ ಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಕಿಡಿಗೇಡಿಗಳು ಸೂರಿಕುಮೇರು, ಕುದ್ರೆಬೆಟ್ಟು, ಪಾಣೆಮಂಗಳೂರಿನಲ್ಲಿ ಖಾಸಗಿ ಬಸ್ ಗಳಿಗೆ ಕಲ್ಲೆಸೆದು ಹಾನಿ ಮಾಡಿದ ಪ್ರತ್ಯೇಕ ಘಟನೆಗಳು ವರದಿಯಾಗಿವೆ. ಬೈಕ್ ನಲ್ಲಿ ಬಂದ ಕಿಡಿಗೇಡಿಗಳು ವಿಟ್ಲ […]

ಬಜರಂಗ ದಳ ಕಾರ್ಯಕರ್ತರಿಗೆ 4 ಲಕ್ಷ ರೂ. ನಗದು ನೀಡಿದ ಸಚಿವ ಜಮೀರ್ ಅಹ್ಮದ್

Thursday, October 11th, 2018
zameer

ಮಂಗಳೂರು: ಕೊಡಗು ನೆರೆ ಪರಿಹಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ನಾಲ್ವರು ಬಜರಂಗದಳ ಕಾರ್ಯಕರ್ತರಿಗೆ ಸಚಿವ ಜಮೀರ್ ಅಹ್ಮದ್ ತಮ್ಮ ಸ್ವಂತ 4 ಲಕ್ಷ ರೂ. ನಗದು ನೀಡಿ ಅಭಿನಂದಿಸಿದ್ದಾರೆ. ಕಾನೂನು ಮಾಪನ ಶಾಸ್ತ್ರ ಇಲಾಖೆ ದ.ಕ. ಇದರ ವತಿಯಿಂದ ಕಾನೂನು ಮಾಪನ ಶಾಸ್ತ್ರ ಇಲಾಖೆಗಳ ಕಚೇರಿಗಳ ಸಂಕೀರ್ಣ ಮಾಪನ ಭವನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಚಿವ ಜಮೀರ್ ಅಹ್ಮದ್ ಈ ನಗದು ಕೊಡುಗೆಯನ್ನು ನೀಡಿದರು. ಈ ಸಂದರ್ಭ ಸಚಿವ ಜಮೀರ್ ಅಹ್ಮದ್ ಮಾತನಾಡಿ, ಇತ್ತೀಚೆಗೆ ಕೊಡಗಿನಲ್ಲಿ ನಡೆದ ಪ್ರಕೃತಿ […]

ಕಾರಂತರ ಬಂಧನ ಪ್ರಕರಣ, ಮೂಡಬಿದಿರೆ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗ ದಳದ ಖಂಡನೆ

Saturday, October 14th, 2017
Jagadhish karanth

ಮೂಡಬಿದಿರೆ: ಹಿಂದೂ ಜಾಗರಣ ವೇದಿಕೆಯ ರಾಜ್ಯ ಸಂಚಾಲಕ ಜಗದೀಶ ಕಾರಂತರ ಬಂಧನ ಪ್ರಕರಣವನ್ನು ಮೂಡಬಿದಿರೆ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗ ದಳ ಖಂಡಿಸಿದೆ. ಸಂಘ ಪರಿವಾರದ ಕಾರ್ಯಕರ್ತರ ಮೇಲೆ ಸುಳ್ಳು ಕೇಸುಗಳನ್ನು ಹಾಕುವುದರ ಮೂಲಕ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಈ ಬಗ್ಗೆ ರಾಜ್ಯಪಾಲರು ರಾಜ್ಯ ಸರಕಾರಕ್ಕೆ ಸೂಕ್ತ ಎಚ್ಚರಿಕೆಯನ್ನು ನೀಡಬೇಕಾಗಿ ಕೋರುವ, ಬಜರಂಗದಳ ತಾಲೂಕು ಸಂಚಾಲಕ ಸೋಮನಾಥ ಕೋಟ್ಯಾನ್‌ ಸಹಿ ಮಾಡಿರುವ ಮನವಿಯನ್ನು ಮೂಡಬಿದಿರೆ ತಹಶೀಲ್ದಾರರಿಗೆ ಸಲ್ಲಿಸಲಾಯಿತು. ವಿ.ಹಿಂ.ಪ. ಕಾರ್ಯದರ್ಶಿ ಶಾಂತರಾಮ ಕುಡ್ವ, ಗುರುಪುರ ಹಿ.ಜಾ.ವೇದಿಕೆ […]

ವಿವಿಧ ಹಿಂದೂ ಸಂಘಟನೆಗಳಿಂದ ಮತಾಂತರದ ವಿರುದ್ಧ ಪ್ರತಿಭಟನೆ

Sunday, April 10th, 2011
ವಿವಿಧ ಹಿಂದೂ ಸಂಘಟನೆಗಳಿಂದ ಮತಾಂತರದ ವಿರುದ್ಧ ಪ್ರತಿಭಟನೆ

ಮಂಗಳೂರು: ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಹಾಗೂ ಇನ್ನಿತರ ಹಿಂದೂ ಸಂಘಟನೆಗಳು, ಮತಾಂತರದ ವಿರುದ್ಧ ಶನಿವಾರ ದ.ಕ ಜಿಲ್ಲಾಧಿಕಾರಿ ಕಚೇರಿಯ  ಮುಂಭಾಗದಲ್ಲಿ ಪ್ರತಿಭಟನೆ ನಡೆಸಿತು. ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮತಾಂತರದ ವಿರದ್ಧ ಕೂಡಲೇ ಕ್ರಮ ಜರಗಿಸುವಂತೆ ಮನವಿ ಸಲ್ಲಿಸಿತು. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ  ಬಡ ಹಿಂದೂ ಕುಟುಂಬಗಳ ಎಳೆಯ ಮಕ್ಕಳಿಗೆ ಉಚಿತ ಸೌಲಭ್ಯ ನೀಡುವ  ಆಮಿಷದ ಮೂಲಕ ಕ್ರೈಸ್ತ ಮಿಶನರಿಗಳು ಮತಾಂತರ ಕಾರ್ಯವನ್ನು ಮಾಡುತ್ತಿದೆ. ಕರಾವಳಿ ಜಿಲ್ಲೆಯಲ್ಲಿ 40ಕ್ಕೂ ಮಿಕ್ಕಿದ ಮತಾಂತರ ಕೇದ್ರಗಳು […]