ಪಡೀಲ್ ಅಂಡರ್ ಪಾಸ್‌ ನ ಗೋಡೆಗೆ ಬೈಕ್ ಢಿಕ್ಕಿ ಹೊಡೆದು ಓರ್ವ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

Thursday, September 14th, 2023
Bike-Accident

ಮಂಗಳೂರು : ನಗರದ ಪಡೀಲ್ ಅಂಡರ್ ಪಾಸ್‌ ನಲ್ಲಿ ಗುರುವಾರ ನಡೆದ ರಸ್ತೆ ಅಫಘಾತದಲ್ಲಿ ಯುವಕನೊಬ್ಬ ಮೃತಪಟ್ಟು ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಮೃತಪಟ್ಟ ಯುವಕನನ್ನು ಬಜಾಲ್ ಸಮೀಪದ ಪಲ್ಲಕೆರೆಯ ನಿವಾಸಿ ಭುವನ್ ರಾಜ್ (18) ಎಂದು ಗುರುತಿಸಲಾಗಿದೆ. ಗಾಡ್ವಿನ್ (19) ಮತ್ತು ಆಶಿತ್ 17) ಎಂಬವರು ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್‌ನಲ್ಲಿ ಮೂರು ಮಂದಿ ಸವಾರಿ ಮಾಡಿದ್ದು, ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಿಸಿದ ಪರಿಣಾಮ ಅಂಡರ್‌ಪಾಸ್‌ನ ಗೋಡೆಗೆ ಬೈಕ್ ಢಿಕ್ಕಿ ಹೊಡೆಯಿತು ಎನ್ನಲಾಗಿದೆ.

ಬಜಾಲ್ : ಬಾವಿಗೆ ಬಿದ್ದ ಸ್ಕೂಟರ್ ಸವಾರರು, ಓರ್ವ ಮೃತ್ಯು

Monday, January 4th, 2021
Ajith

ಮಂಗಳೂರು : ಬಜಾಲ್ ಸಮೀಪದ  ಪಕ್ಕಲಡ್ಕ ಎಂಬಲ್ಲಿ ಬಾವಿಯ ತಡೆಗೋಡೆಗೆ ಸ್ಕೂಟರ್ ಡಿಕ್ಕಿ ಹೊಡೆದು ಸವಾರರು ಬಿದ್ದು ಓರ್ವ ಮೃತಪಟ್ಟ ಘಟನೆ ಸೋಮವಾರ ರಾತ್ರಿ ನಡೆದಿದೆ. ಇಬ್ಬರು ಸವಾರರ ಪೈಕಿ ಓರ್ವನ ಮೃತದೇಹ ಪತ್ತೆಯಾಗಿದ್ದು ಆತನನ್ನು  ಎಮ್ಮೆಕೆರೆ ನಿವಾಸಿ ಅಜಿತ್ (22) ಎಂದು ಗುರುತಿಸಲಾಗಿದೆ. ಅಜಿತ್ ಸೋಮವಾರ ಬಜಾಲ್ನ ಉಲ್ಲಾಸ್ ನಗರದ ತನ್ನ ಸಂಬಂಧಿಕರ ಮನೆಗೆ ಬರುವಾಗ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ರಾತ್ರಿ ವೇಳೆಗೆ ಸ್ಕೂಟರ್ ಸವಾರ ನಿಯಂತ್ರಣ ಕಳೆದುಕೊಂಡು  ರಸ್ತೆ ಪಕ್ಕದಲ್ಲೇ ಇದ್ದ ಬಾವಿ ಆವರಣಕ್ಕೆ ಡಿಕ್ಕಿ ಹೊಡೆದು ಸ್ಕೂಟರ್‌ನಲ್ಲಿದ್ದ ಇಬ್ಬರು ಬಿದ್ದಿದದ್ದಾರೆ ಎನ್ನಲಾಗಿದೆ. […]

ಸರಗಳ್ಳರ ಬಂಧನ: 3.50 ಲಕ್ಷ ರೂ. ಚಿನ್ನಾಭರಣ, ಆ್ಯಕ್ಟಿವಾ ವಶಕ್ಕೆ

Tuesday, December 11th, 2018
police

ಮಂಗಳೂರು: ಮಹಿಳೆಯರ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ನಗರ ರೌಡಿನಿಗ್ರಹ ದಳದ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಜೆಪ್ಪು ಬಪ್ಪಾಲದ ಹರೀಶ್ ಎಸ್. ನಾಥ್(45), ಬಜಾಲ್ನ ರಾಜೇಶ್(45) ಬಂಧಿತ ಆರೋಪಿಗಳು. ಬಂಧಿತರಿಂದ 3,64,000 ರೂ. ಮೌಲ್ಯದ 126.960 ಗ್ರಾಂ ಚಿನ್ನಾಭರಣ ಸಹಿತ ಒಂದು ಆ್ಯಕ್ಟಿವಾ ಸ್ಕೂಟರ್ ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಆ್ಯಕ್ಟಿವಾ ಸ್ಕೂಟರ್ನಲ್ಲಿ‌ ಬಂದು ನಡೆದುಕೊಂಡು ಹೋಗುತ್ತಿರುವ ಮಹಿಳೆಯರ ಕತ್ತಿನಲ್ಲಿದ್ದ ಚಿನ್ನದ ಸರಗಳನ್ನು ಸುಲಿಗೆ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. […]

ಸಿಪಿಐ(ಎಂ) ಹಿರಿಯ ಸದಸ್ಯ ಶೀನ ಬಂಗೇರ ನಿಧನ

Thursday, November 2nd, 2017
sheena bangera

ಮಂಗಳೂರು: ಬಜಾಲ್ ಪ್ರದೇಶದ ಸಿಪಿಐ(ಎಂ) ಪಕ್ಷದ ಹಿರಿಯ ಸದಸ್ಯರಾದ ಶೀನ ಬಂಗೇರ (65 ವರ್ಷ) ಅವರು ಅನಾರೋಗ್ಯದಿಂದಾಗಿ ಬಜಾಲ್‌ನಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದ್ದು, ಸಿಪಿಐ(ಎಂ) ಮಂಗಳೂರು ದಕ್ಷಿಣ ಸಮಿತಿಯು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದೆ. ಎಳೆಯ ಪ್ರಾಯದಲ್ಲೇ ಕಮ್ಯೂನಿಸ್ಟ್ ಚಳುವಳಿಗೆ ಆಕರ್ಷಿತರಾಗಿ, ಅಂದು ಬಜಾಲ್ ಪ್ರದೇಶದಲ್ಲಿ ಸಕ್ರೀಯವಾಗಿದ್ದ ರೈತ ಕಾರ್ಮಿಕರ ಹೋರಾಟದಲ್ಲಿ ಭಾಗವಹಿಸಿದ್ದ ಶೀನ ಬಂಗೇರರವರು, ಎಡಪಂಥೀಯ ವಿಚಾರಧಾರೆಯ ಶಿಸ್ತಿನ ಸಿಪಾಯಿಯಾಗಿದ್ದರು. ತುರ್ತುಪರಿಸ್ಥಿತಿಯ ಕಾಲಾವಧಿಯಲ್ಲಿ ಕಮ್ಯೂನಿಸ್ಟ್ ಪಕ್ಷದ ಮೇಲೆ ನಿಷೇಧವಿದ್ದಾಗಲೂ ಬಜಾಲ್‌ನಲ್ಲಿ ದುಡಿಯುವ ವರ್ಗದ ಚಳುವಳಿಗೆ ಅಪಾರ […]