ಉಳ್ಳಾಲ ಸಮೀಪ ನಾಡದೋಣಿ ಮೀನುಗಾರರ ಬಲೆಗೆ ಬಿದ್ದ 75 ಕೆ.ಜಿ. ತೂಕದ ಪಿಲಿ ತೊರಕೆ ಮೀನು

Thursday, September 28th, 2023
pili-thorake

ಮಂಗಳೂರು: ಉಳ್ಳಾಲ ಸಮೀಪದ ಸೋಮೇಶ್ವರ ಉಚ್ಚಿಲದ ನಾಡದೋಣಿ ಮೀನುಗಾರರಿಗೆ ದೈತ್ಯ ಗಾತ್ರದ ಪಿಲಿ ತೊರಕೆ ಮೀನು ಬಲೆಗೆ ಬಿದ್ದಿದೆ . ಉಚ್ಚಿಲ ಪೆರಿಬೈಲ್ ನಿವಾಸಿ ನಾಡದೋಣಿ ಮೀನುಗಾರರಾದ ಶೈಲೇಶ್ ಉಚ್ಚಿಲ, ಚಂದ್ರ ಉಚ್ಚಿಲ, ಅಝೀಝ್, ಕಲ್ಪೇಶ್ ಮತ್ತು ಶಂಭು ನ್ಯೂ ಉಚ್ಚಿಲ ಎಂಬವರು ನಿನ್ನೆ ಸಂಜೆ ಸಮುದ್ರ ತೀರದಲ್ಲಿ ಮೀನಿಗಾಗಿ ಬಲೆ ಹಾಕಿದ್ದು, ಸುಮಾರು 75 ಕೆ.ಜಿ. ತೂಕದ ಮೀನು ಅವರ ಬಲೆಗೆ ಬಿದ್ದಿದೆ. ಈ ವರ್ಷದ ತಮ್ಮ ಮೀನುಗಾರಿಕೆ ಅವಧಿಯಲ್ಲಿ ಸಿಕ್ಕ ಅತಿದೊಡ್ಡ ಮೀನು ಇದಾಗಿದೆ […]

ಮೀನುಗಾರಿಕೆಗೆ ತೆರಳಿದ್ದ ಪರ್ಸಿನ್ ಬೋಟ್‌ ಮುಳುಗಡೆ, ಆರು ಮಂದಿ ನಾಪತ್ತೆ

Tuesday, December 1st, 2020
fishing Boat

ಮಂಗಳೂರು : ಮೀನುಗಾರಿಕೆಗೆ ತೆರಳಿದ್ದ ಪರ್ಸಿನ್ ಬೃಹತ್ ಬೋಟ್‌ವೊಂದು ಕಡಲಲ್ಲಿ ಮುಳುಗಡೆಯಾಗಿದ್ದು, ಆರು ಮಂದಿ ನಾಪತ್ತೆಯಾದ ಘಟನೆ ಉಳ್ಳಾಲದ ಪಶ್ಚಿಮ ಭಾಗದಿಂದ ಕೆಲವೇ  ನಾಟಿಕಲ್‌ ಮೈಲಿ ದೂರದಲ್ಲಿ ನಡೆದಿದೆ. ಬೋಳಾರದ ಪ್ರಶಾಂತ ಎಂಬವರ ಮಾಲಕತ್ವದ “ಶ್ರೀರಕ್ಷಾ” ಹೆಸರಿನ ಬೋಟು ಸೋಮವಾರ ನಸುಕಿನಜಾವ ಮೀನುಗಾರಿಕೆಗೆ ತೆರಳಿತ್ತು.‌ ಬೋಟ್‌ನಲ್ಲಿ 25 ಮಂದಿ ಮೀನುಗಾರರು ತೆರಳಿದ್ದರು. ಕಡಲಲ್ಲಿ‌ ಭಾರೀ ಪ್ರಮಾಣದ ಮೀನು ಸಿಕ್ಕಿದ್ದು, ಸಂಜೆ 6:30ರ ಸುಮಾರಿಗೆ ಬಲೆಯನ್ನು ಮೇಲೆ‌‌ ಎಳೆಯುವಾಗ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ಬೋಟ್ ನಲ್ಲಿ ಉಳ್ಳಾಲ, ಮಂಗಳೂರು […]

ಕಾಪುವಿನಲ್ಲಿ ಮೀನುಗಾರರ ಬಲೆಗೆ ಬಿದ್ದ ಟನ್‌ಗಟ್ಟಲೆ ಮೀನು, ಮತ್ಸ್ಯಪ್ರಿಯರಿಗೆ ಫುಲ್ ಖುಷಿ

Saturday, August 29th, 2020
fish

ಕಾಪು : ಬಲೆಗೆ ಬಿದ್ದ ಟನ್‌ಗಟ್ಟಲೆ ಮೀನುಗಳನ್ನು ದಡಕ್ಕೆ ಎಳೆಯಲು ಮೀನುಗಾರರು ಬಹಳಷ್ಟು ಶ್ರಮಪಡುತ್ತಿದ್ದರು . ಭಾರೀ ಪ್ರಮಾಣದ ಮೀನಿನಿಂದಾಗಿ ಕೈರಂಪಣಿಯ ಬಲೆ ಹರಿದು, ಮೀನು ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ತೀರದಲ್ಲಿ ಮೀನುಗಳು ಮೇಲಕ್ಕೆ ಚಿಮ್ಮುತ್ತಿ ರುವ ದೃಶ್ಯಗಳು ಕಂಡುಬರುತ್ತಿದ್ದವು ಇದು ನಡೆದದ್ದು ಶುಕ್ರವಾರ ಕಟಪಾಡಿ ಮಟ್ಟು ಕಡಲ ತೀರದಲ್ಲಿ. ಕಳೆದ ಎರಡು ದಿನಗಳಿಂದ ಮಟ್ಟು ಕಡಲತೀರದಲ್ಲಿ ರಾಶಿರಾಶಿಯಾಗಿ ಮೀನುಗಳು ಕಂಡುಬರುತ್ತಿದ್ದು. ಕೈರಂಪಣಿ ಬಲೆಗೆ  ಸಿಕ್ಕಿಬಿದ್ದ ಭಾರೀ ಪ್ರಮಾಣದ ಮೀನುಗಳನ್ನು ತೀರಕ್ಕೆ ಎಳೆದು ತರಲು ಮೀನುಗಾರರು ಹರ ಸಾಹಸಪಟ್ಟರು. ಇಲ್ಲಿ ಹೆಜಮಾಡಿಯ ಮೀನುಗಾರರ ತಂಡ […]

ಎನ್ಎಂಪಿಟಿ ಗುತ್ತಿಗೆ ಬೋಟಿಗೆ ಗೆ ಸಿಲುಕಿದ್ದ ಬಲೆ ತೆಗೆಯುತ್ತಿದ್ದ ವ್ಯಕ್ತಿ ಸಮುದ್ರದಲ್ಲಿ ಮುಳುಗಿ ಸಾವು

Tuesday, August 11th, 2020
nmptboat

ಪಣಂಬೂರು: ನವಮಂಗಳೂರು ಬಂದರಿನಲ್ಲಿರುವ ಮಾಲಿನ್ಯ ಸ್ವಚ್ಚಗೊಳಿಸುವ ಗುತ್ತಿಗೆ ಬೋಟೊಂದರ ಪ್ರೊಫೈಲ್ಲರ್ ಗೆ ಸಿಲುಕಿದ್ದ ಬಲೆ ತೆಗೆಯಲು ಹೋದ ವ್ಯಕ್ತಿಯೊಬ್ಬ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ನವಮಂಗಳೂರು ಬಂದರಿನಲ್ಲಿ ಮಂಗಳವಾರ ನಡೆದಿದೆ. ಬೈಕಂಪಾಡಿ ಸಮೀಪದ ಮೀನಕಳಿಯ ನಿವಾಸಿ ಪ್ರದೀಪ್(42) ಮೃತಪಟ್ಟವರು. ಮಂಗಳವಾರ ಮುಂಜಾನೆ ಬೋಟಿನ ಗುತ್ತಿಗೆದಾರ ಕಂಪನಿಯ ಸಿಬಂದಿ ಪ್ರದೀಪನನ್ನು ಬಲೆ ತೆಗೆಯಲು ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ. ಆದರೆ ನೀರಿನಲ್ಲಿ ಮುಳುಗುವಾಗ ಸಂದರ್ಭ ಸೂಕ್ತ ರಕ್ಷಣಾ ವ್ಯವಸ್ಥೆ ನೀಡದೆ ಈ ಘಟನೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದು ಐಪಿಸಿ […]