ಫೆ.9 ರಿಂದ 18ರವರೆಗೆ ಧರ್ಮಸ್ಥಳದ ಬಾಹುಬಲಿಗೆ ವೈಭವದ ಮಹಾಮಸ್ತಕಾಭಿಷೇಕ

Wednesday, January 2nd, 2019
Masthkabhisheka

ಧರ್ಮಸ್ಥಳ:ತ್ಯಾಗತಪಸ್ಸು ಮತ್ತು ಮೋಕ್ಷದ ಪ್ರತೀಕವಾದ ಬಾಹುಬಲಿ ಜೈನಧರ್ಮದ ಸಮಸ್ಥ ಮೌಲ್ಯಗಳ ಪ್ರತಿರೂಪ. ರಾಜಭೋಗಜೀವನ ತ್ಯಜಿಸಿ ಮೋಕ್ಷದಋಜು ಮಾರ್ಗವನ್ನು ಆರಿಸಿಕೊಂಡು ಆಧ್ಯಾತ್ಮಿಕ ಉತ್ತುಂಗಕ್ಕೇರಿದ ಬಾಹುಬಲಿಯ ಜೀವನ ಇಂದಿಗೂ ಎಲ್ಲಾ ಜೈನಧರ್ಮೀಯರಿಗೆ ಆದರ್ಶ ಪ್ರಾಯವಾದದ್ದು. ರಾಜ್ಯದೊಂದಿಗೆ ಉಟ್ಟ ಬಟ್ಟೆಯನ್ನೂ ತ್ಯಜಿಸಿದ ಬಾಹುಬಲಿ ಆಡಂಬರ, ಅಭಿಷೇಕ ಇವೆಲ್ಲವುಗಳ ಪರಿಧಿಯನ್ನು ಮೀರಿ ನಿಂತವರು. ಆದರೂ ಅವರ ಪರಮೋಚ್ಛತ್ಯಾಗ- ತಪಸ್ಸಿನ ಗುಣಗಳನ್ನು ಆರಾಧಿಸುವ ಭಕ್ತರು 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನೆರವೇರಿಸುವ ಸಂಪ್ರದಾಯವನ್ನು ಪಾಲಿಸುತ್ತಾ ಬಂದಿದ್ದಾರೆ. ಗಗನ ಸದೃಶ ಮೂರ್ತಿಯತಲೆಯಿಂದ ಕಾಲಿನೆಡೆಗೆ ಹರಿದು ಬರುವ ಅಭಿಷೇಕ ದ್ರವ್ಯಗಳು […]

ಬಾಹುಬಲಿ ಎಂದೇ ಹೆಸರಾಗಿದ್ದ ಒಂಟೆ ಹೃದಯಾಘಾತಕ್ಕೆ ಬಲಿ..!

Saturday, July 14th, 2018
camel-died

ಉಡುಪಿ: ಮಲ್ಪೆ ಬೀಚ್ನಲ್ಲಿ ಎಲ್ಲರ ಅಚ್ಚುಮೆಚ್ಚಿಗೆ ಪಾತ್ರವಾಗಿದ್ದ ಒಂಟೆಯೊಂದಕ್ಕೆ ಹೃದಯಾಘಾತವಾಗಿ ಅಸುನೀಗಿದೆ. ಬಾಹುಬಲಿ ಎಂದೇ ಹೆಸರಾಗಿದ್ದ ಒಂಟೆ ಹಠಾತ್ ಹೃದಯಾಘಾತಕ್ಕೆ ಬಲಿಯಾಗಿದ್ದು, ಅಭಿಮಾನಿಗಳನ್ನು ಶೋಕಕ್ಕೆ ತಳ್ಳಿದೆ. ಬಾಹುಬಲಿಗೆ 10 ವರ್ಷ ವಯಸ್ಸಾಗಿತ್ತು. ಬೀಚ್ನಲ್ಲಿದ್ದ ಕಟ್ಟಪ್ಪ, ರಾಣಾ, ಬಾಹುಬಲಿ ಒಂಟೆಗಳ ಪೈಕಿ ಬಾಹುಬಲಿ ಹಠಾತ್ ಸಾವಿಗೀಡಾಗಿದೆ. ದೈತ್ಯ ಗಾತ್ರದ ಒಂಟೆ ಸಾವಿಗೀಡಾದ ನಂತರ ಒಂಟೆಯ ಮಾಲೀಕ ಅದ್ರ ಕಳೇಬರವನ್ನು ತೆಗೆಯಲು ತುಂಬಾ ಪರದಾಡಬೇಕಾಗಿ ಬಂತು. ಆದರೆ ಕೊನೆಗೆ ಸಾಮಾಜಿಕ ಕಾರ್ಯಕರ್ತರ ಸಹಕಾರದಿಂದ ಒಂಟೆಯ ಕಳೇಬರಕ್ಕೆ ಮುಕ್ತಿ ಸಿಕ್ಕಿದೆ.