ಹೊಸ ಮನೆ ನಿರ್ಮಾಣಕ್ಕೆ ಹಣ ಕೊಡಲಿಲ್ಲ ಎಂದು ಮಾಜಿ ಕಾರ್ಪೊರೇಟರ್ ಹತ್ಯೆ, ಇಬ್ಬರು ಸಂಭದಿಕರ ಬಂಧನ

Friday, June 25th, 2021
Peter Surya

ಬೆಂಗಳೂರು : ಬಿಬಿಎಂಪಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ರೇಖಾ ಪತಿ ಕದಿರೇಶ್ ಸಂಬಂಧಿಗಳಾದ ಪೀಟರ್ ಮತ್ತು ಸೂರ್ಯ ಬಂಧಿತ ಆರೋಪಿಗಳು. ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಲು ಹೋದಾಗ ಪೊಲೀಸರ ಮೇಳೆ ಹಲ್ಲೆಗೆ ಮುಂದಾಗಿದ್ದಾರೆ. ಓರ್ವ ಪಿಎಸ್ ಐ ಹಾಗು ಓರ್ವ ಕಾನ್ ಸ್ಟೇಬಲ್ ಮೆಲೆ ಹಲ್ಲೆ ಮಾಡಿದ್ದಾರೆ. ಹೀಗಾಗಿ ಇನ್ಸ್ ಪೆಕ್ಟರ್ ಶಿವಸ್ವಾಮಿ ಮತ್ತು ಕಾಟನ್ ಪೇಟೆ ಇನ್ಸ್ ಪೆಕ್ಟರ್ ಚಿದಾನಂದ್ ಆತ್ಮರಕ್ಷಣೆಗಾಗಿ […]

ದುಷ್ಕರ್ಮಿಗಳ ತಂಡದಿಂದ ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರೇಖಾ ಹತ್ಯೆ

Thursday, June 24th, 2021
Rekha--Kadiresh

ಬೆಂಗಳೂರು  : ದುಷ್ಕರ್ಮಿಗಳ ತಂಡವೊಂದು ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಒಬ್ಬರನ್ನು ಭೀಕರವಾಗಿ ಕೊಲೆ ಮಾಡಿ ಪರಾರಿಯಾಡಾ ಘಟನೆ    ಗುರುವಾರ ನಡೆದಿದೆ. ಛಲವಾದಿಪಾಳ್ಯದ 138ನೇ ವಾರ್ಡ್ನ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆಯಾದ ದುರ್ದೈವಿ. ಪತಿ ಕದಿರೇಶ್ ಅವರನ್ನು ಮನೆ ಸಮೀಪದ ಮುನೇಶ್ವರ ದೇವಸ್ಥಾನದ ಬಳಿ 2018ರ ಫೆಬ್ರವರಿ 8ರಂದು ಆಟೋದಲ್ಲಿ ಬಂದ ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದರು. ಕದಿರೇಶ್ರ ಸಹೋದರರು ಮತ್ತು ಸಾರ್ವಜನಿಕರ ಕಣ್ಣೆದುರಲ್ಲೇ ಈ ಹತ್ಯೆ ನಡೆದಿತ್ತು. ಬೆಳಗ್ಗೆ ಛಲವಾದಿಪಾಳ್ಯದ ಫ್ಲವರ್ ಗಾರ್ಡನ್ನ ಮನೆಯಲ್ಲಿದ್ದ ರೇಖಾ ಕದಿರೇಶ್ ಅವರನ್ನು ಹೊರ […]

ಬೆಂಗಳೂರು ಛೇಂಬರ್‌ ಆಫ್‌ ಕಾಮರ್ಸ್‌ ಮುಂದಾಳತ್ವದಲ್ಲಿ ಬಿಬಿಎಂಪಿಗೆ ವಿವಿಧ ನೆರವು

Tuesday, June 15th, 2021
BCC

ಬೆಂಗಳೂರು :  ಮಾನ್ಯ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್‌ ಶೆಟ್ಟರ್‌ ಅವರು ಬೆಂಗಳೂರು ಛೇಂಬರ್‌ ಆಫ್‌ ಕಾಮರ್ಸ್‌ ಮುಂದಾಳತ್ವದಲ್ಲಿ ವಿವಿಧ ಕಂಪನಿಗಳು ತಮ್ಮ ಸಿಎಸ್‌ಆರ್‌ ಅನುದಾನದ ಅಡಿಯಲ್ಲಿ ನೀಡುತ್ತಿರುವ 2 ಎಲ್‌ಪಿಜಿ ಬಳಸಿ ಶವದಹನ ಮಾಡುವ ಚಿತಾಗಾರಗಳನ್ನು, 5 ದೇಹವನ್ನು ಕಾಪಿಡುವ ಶೈತ್ಯಾಗಾರಗಳನ್ನು, ಐಟಿಐ ಕೋವಿಡ್‌ ಆಸ್ಪತ್ರೆಗೆ 10 ಆಕ್ಸಿಜನ್‌ ಕಾನ್ಸನ್ಟ್ರೇಟರ್‌ ಮತ್ತು ಜಿಗಣಿ ಸರಕಾರಿ ಆಸ್ಪತ್ರೆಗೆ ಆಮ್ಲಜನಕ ಉತ್ಪಾದನಾ ಘಟಕವನ್ನು ಮಂಗಳವಾರ  ಬಿಬಿಎಂಪಿ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ಬಿಸಿಐಸಿ ಯ ಅಧ್ಯಕ್ಷರಾದ […]

ಬಡವರಿಗೆ ಫಾರಂ ಕೋಳಿ ಮತ್ತು ತರಕಾರಿ ವಿತರಣೆ ಮಾಡಿದ ಬಿಬಿಎಂಪಿ ಮಾಜಿ ಸದಸ್ಯೆ

Thursday, June 10th, 2021
Manjula

ಬೆಂಗಳೂರು : ಉದ್ಯೋಗವಿಲ್ಲದೆ ಆರ್ಥಿಕ ಸಂಕಷ್ಟದಲ್ಲಿರುವ ಬಡವರಿಗೆ ಶಿವನಗರ ವಾರ್ಡ್ನಲ್ಲಿ ಬಿಬಿಎಂಪಿ ಮಾಜಿ ಸದಸ್ಯೆ ಮಂಜುಳಾ ವಿಜಯಕುಮಾರ್ ಗುರುವಾರ ಬಡವರಿಗೆ ಫಾರಂ ಕೋಳಿ ಮತ್ತು 21 ಬಗೆಯ ತರಕಾರಿ ವಿತರಣೆ ಮಾಡಿದರು. ಬಡವರು ಲಾಕ್ ಡೌನ್ ಜಾರಿಯಿಂದ ಉದ್ಯೋಗವಿಲ್ಲದೆ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಕಷ್ಟಕರ ಸನ್ನಿವೇಶದಲ್ಲಿ ಅವರಿಗೂ ಮಾಂಸಹಾರ ಸೇವನೆ ಮಾಡಬೇಕು ಎಂದು ಆಸೆ ಇರುತ್ತದೆ. ಅದ್ದರಿಂದ, ಪ್ರತಿಯೊಬ್ಬರಿಗೂ ಒಂದು ಕೋಳಿ ಮತ್ತು ಪೌಷ್ಟಿಕಾಂಶ ತರಕಾರಿ ವಿತರಿಸಲಾಗಿದೆ ಎಂದು ಮಂಜುಳಾ ವಿಜಯಕುಮಾರ್ ತಿಳಿಸಿದ್ದಾರೆ. ಶ್ರೀಮಂತರಿಗೆ ಹಣ ಇರುತ್ತದೆ ಉತ್ತಮ ಆಹಾರ […]

ಆಸ್ಪತ್ರೆಯಿಂದ ಮಗು ಕದ್ದು 15 ಲಕ್ಷ ರೂಪಾಯಿಗೆ ಮಾರಿದ ವೈದ್ಯೆಯ ಬಂಧನ

Tuesday, June 1st, 2021
Reshma

ಬೆಂಗಳೂರು: ಚಾಮರಾಜಪೇಟೆ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಿಂದ ಮಗು ಕಳ್ಳತನ ಮಾಡಿಕೊಂಡು ಎಸ್ಕೇಪ್ ಆಗಿದ್ದ ಮನೋ ವೈದ್ಯ ರೊಬ್ಬರನ್ನು ತಲಘಟ್ಟಪುರ ಪಿಎಸ್ ಐ ಶ್ರೀನಿವಾಸ್ ತಂಡ ಬಂಧಿಸಿದೆ. ಆರೋಪಿ ರೇಷ್ಮಾ ಮನೋ ವೈದ್ಯೆ  ದಂಪತಿ ಗಳಿಗೆ  ಮಗು ಮಾಡಿಕೊಡೊದಾಗಿ 15 ಲಕ್ಷ ರೂಪಾಯಿ ಹಣ ಪಡೆದಿದ್ದಳು. ದಂಪತಿಯ ಮೊದಲ ಮಗು ಬುದ್ದಿ ಮಾಂದ್ಯತೆಯಿಂದ ಇದ್ದು. ಆ ಮಗುವಿಗೆ ಆರೋಪಿ ಡಾಕ್ಟರ್ ರೇಷ್ಮಾ ಚಿಕಿತ್ಸೆ ನೀಡುತ್ತಿರುತ್ತಾರೆ. ಆಗ ನಿಮ್ಮದೇ ಮಗು ಮಾಡಿಕೊಡೊದಾಗಿ ಪತಿ, ಪತ್ನಿಯ ವೀರ್ಯಾಣು ಮತ್ತು ಅಂಡಾಣು ತೆಗೆದುಕೊಂಡಿದ್ದಳು. 2020 ರಲ್ಲಿ ಹಣ […]

ಬಿಬಿಎಂಪಿ ಮೇಯರ್ ಆಯ್ಕೆ : ಕನ್ನಡಪರ ಸಂಘಟನೆಗಳು ಬಿಜೆಪಿ ವಿರುದ್ಧ ಆಕ್ರೋಶ

Tuesday, October 1st, 2019
kannada-flag

ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಆಗಿ ಬಿಜೆಪಿಯ ಎಂ. ಗೌತಮ್ ಕುಮಾರ್ ಜೈನ್ ಆಯ್ಕೆಯಾದರು. ನೂತನ ಮೇಯರ್ ಆಯ್ಕೆ ವಿಚಾರದಲ್ಲಿ ಕನ್ನಡಪರ ಸಂಘಟನೆಗಳು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ಮಂಗಳವಾರ ಬಿಬಿಎಂಪಿ ಮೇಯರ್, ಉಪ ಮೇಯರ್ ಚುನಾವಣೆ ನಡೆಯಿತು. ಶಾಂತಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಜೋಗುಪಾಳ್ಯದ ಕಾರ್ಪೊರೇಟರ್ ಗೌತಮ್ ಕುಮಾರ್ ಜೈನ್ ಮೇಯರ್ ಆಗಿ ಆಯ್ಕೆಯಾದರು. ಕನ್ನಡಿಗರನ್ನು ಮೇಯರ್ ಆಗಿ ಆಯ್ಕೆ ಮಾಡಲು ಬಿಜೆಪಿ ವಿಫಲವಾಗಿದೆ. ಬೆಂಗಳೂರಿನ ಆಡಳಿತ ಮಾರ್ವಾಡಿಗಳ ಕೈಗೆ ಸಿಕ್ಕಿದೆ […]

ಬಿಬಿಎಂಪಿ ನೂತನ ಮೇಯರ್ ಆಗಿ ಬಿಜೆಪಿ ಅಭ್ಯರ್ಥಿ ಎಂ.ಗೌತಮ್ ಕುಮಾರ್ ಆಯ್ಕೆ

Tuesday, October 1st, 2019
M.Gawtham

ಬೆಂಗಳೂರು : ಸಾಕಷ್ಟು ಗೊಂದಲಗಳ ನಡುವೆ ಬಿಬಿಎಂಪಿ ಮೇಯರ್ ಆಗಿ ಬಿಜೆಪಿ ಅಭ್ಯರ್ಥಿ ಗೌತಮ್ ಕುಮಾರ್ ಆಯ್ಕೆಯಾಗಿದ್ದಾರೆ. ಚುನಾವಣೆ ಖಚಿತವಾದರೂ ಬಿಜೆಪಿ ಪಕ್ಷದೊಳಗಿನ ಭಿನ್ನಮತ ಮಾತ್ರ ಹಾಗೆಯೇ ಮುಂದುವರೆದಿದೆ. ಇದಕ್ಕೆ ಸಿಎಂ ಬಿಎಸ್ವೈ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನಡುವಿನ ಮುಸುಕಿನ ಗುದ್ದಾಟವೇ ಕಾರಣವಾಗಿದೆ. ಉಪಮೇಯರ್ ಆಗಿ ಗುರುಮೂರ್ತಿ ಆಯ್ಕೆಯಾಗಿದ್ದಾರೆ. ಕಳೆದ ನಾಲ್ಕು ವರ್ಷದಿಂದ ಬಿಬಿಎಂಪಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿ ಸಾಧಿಸಿಕೊಂಡು ಅಧಿಕಾರ ನಡೆಸುತ್ತಿವೆ. ಹೀಗಾಗಿ ಮೇಯರ್ ಉಪ ಮೇಯರ್ ಸ್ಥಾನ […]

ಬಿಬಿಎಂಪಿ ಮೇಯರ್ ಚುನಾವಣೆ ನಡೆಸಲು ನಮ್ಮ ಅಭ್ಯಂತರವಿಲ್ಲ : ಸಿಎಂ ಬಿ.ಎಸ್. ಯಡಿಯೂರಪ್ಪ

Monday, September 30th, 2019
BSY

ಶಿವಮೊಗ್ಗ : ಮಂಗಳವಾರ ನಡೆಯುವ ಬಿಬಿಎಂಪಿ ಮೇಯರ್, ಉಪಮೇಯರ್ ಚುನಾವಣೆ ನಡೆಸಲು ನಮ್ಮಿಂದ ಯಾವುದೇ ಅಭ್ಯಂತರವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆಯನ್ನು ಹೈಕೋರ್ಟ್ ಮುಂದೂಡಿತ್ತು. ಹೀಗಾಗಿ ಸ್ಥಾಯಿ ಸಮಿತಿಯೊಂದಿಗೆ ಮೇಯರ್ ಉಪಮೇಯರ್ ಚುನಾವಣೆ ನಡೆಸಲು ಉದ್ದೇಶಿಸಿದ್ದೆ. ಆದರೆ ನಾಳೆಯೇ ಮೇಯರ್ ಉಪಮೇಯರ್ ಚುನಾವಣೆ ನಡೆಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಇದಕ್ಕೆ ನಮ್ಮ ಅಭ್ಯಂತರವಿಲ್ಲ ನಾಳೆಯೇ ಚುನಾವಣೆ ನಡೆಯಲಿ. ಬಿಬಿಎಂಪಿ ಮೇಯರ್, ಉಪಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯಾಧ್ಯಕ್ಷರೊಂದಿಗೆ […]

ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದ ಡಿಸಿಎಂ

Thursday, October 25th, 2018
parameshwar

ಬೆಂಗಳೂರು: ಎಲ್ಲದಕ್ಕೂ ನಿಮಗೆ ಕೋರ್ಟ್ ಹೇಳಬೇಕಾ? ಸರ್ಕಾರದ ಇರುವುದು ಯಾಕೆ, ನಾವೆಲ್ಲ ಇರುವುದು ಏಕೆ? ನಿಮಗೆ ಜವಾಬ್ದಾರಿ ಇಲ್ಲವೇ ಎಂದು ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಾ. ಜಿ. ಪರಮೇಶ್ವರ್ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ವಿಕಾಸಸೌಧದಲ್ಲಿ ಇಂದು ಬಿಬಿಎಂಪಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ವೇಳೆ ಗರಂ ಆದ ಡಿಸಿಎಂ, ಕೆಲಸ ಮಾಡದೆ ಸುಮ್ಮನೆ ಕುಳಿತು ಸರ್ಕಾರದ ಮೇಲೆ ನ್ಯಾಯಾಲಯ ಚಾಟಿ ಬೀಸುವಂತೆ ಮಾಡುತ್ತೀರಾ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಿಮಗೆ ಕರ್ತವ್ಯ ನಿರ್ವಹಣೆ ಮಾಡೋಕೆ […]

ಸಚಿವ ಡಿ.ಕೆ.ಶಿವಕುಮಾರ್​ ವಿರುದ್ಧ ಮತ್ತೊಂದು ಎಫ್​ಐಆರ್​​!

Monday, October 8th, 2018
d-k-shivkumar

ಬೆಂಗಳೂರು: ಸಚಿವ ಡಿ.ಕೆ.ಶಿವಕುಮಾರ್ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಬಿಬಿಎಂಪಿ ಅಧಿಕಾರಿ ನೀಡಿದ ದೂರಿನನ್ವಯ ಸಚಿವರ ವಿರುದ್ಧ ಪೊಲೀಸರು ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಅನಧಿಕೃತ ಜಾಹೀರಾತು ಫಲಕ ಅಳವಡಿಸಿದಕ್ಕಾಗಿ ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿ ಮುತ್ತುರಾಜ್ ರಾಜ್ಯ ನೀರಾವರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ದೂರು ನೀಡಿದ್ದಾರೆ. ಅನಧಿಕೃತ ಜಾಹೀರಾತು ಫಲಕ ಪ್ರದರ್ಶಿಸಿದಕ್ಕೆ ಡಿಕೆಶಿ ವಿರುದ್ಧ ಬಿಬಿಎಂಪಿ ಅಧಿಕಾರಿ ದೂರು ನೀಡಿದ್ದಾರೆ. ಅನಧಿಕೃತ ಜಾಹೀರಾತು ಫಲಕಗಳನ್ನು ನಿಷೇಧಿಸಿದ್ದ ಹೈಕೋರ್ಟ್, ಬಳಿಕ ನ್ಯಾಯಾಲಯದ ಸೂಚನೆಯಂತೆ ನಗರದಾದ್ಯಂತ […]