ಮೀನುಗಾರಿಕಾ ಬೋಟ್ ಗೆ ಆಕಸ್ಮಿಕವಾಗಿ ಬೆಂಕಿ, ಲಕ್ಷಾಂತರ ರೂಪಾಯಿ ನಷ್ಟ

Tuesday, October 10th, 2023
boat-fire

ಮಂಗಳೂರು: ಮೀನುಗಾರಿಕಾ ಬೋಟ್ ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ನಗರದ ಹಳೆಬಂದರು (ದಕ್ಕೆ) ಬಳಿ ಮಂಗಳವಾರ ಮುಂಜಾನೆ ನಡೆದಿದೆ. ಇಂದು ಮುಂಜಾನೆ ಸುಮಾರು 5 ಗಂಟೆಗೆ ಈ ಘಟನೆ ಸಂಭವಿಸಿದೆ ಎನ್ನಲಾಗಿದ್ದು, ಇತರ ಬೋಟ್ ಗಳಿಗೆ ಬೆಂಕಿ‌ ಹರಡುವುದನ್ನು ತಪ್ಪಿಸಲಾಗಿದೆ. ತಕ್ಷಣವೇ ಸ್ಥಳಕ್ಕಾಗಮಿಸಿದ ಪಾಂಡೇಶ್ವರ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಹೇಳಲಾಗಿದೆ. ‘ಲಂಗರು ಹಾಕಿದ್ದ ದೋಣಿಯಲ್ಲಿದ್ದ ಡೀಸೆಲ್‌ಗೆ ಬೆಂಕಿ ಹೊತ್ತಿಕೊಂಡಿತ್ತು. ಆದರೆ ಹಗ್ಗ […]

ಸಾಲಗಾರರ ಕಿರಿಕಿರಿ ತನ್ನ ಸ್ವಂತ ಬೈಕ್ ಗೆ ಶೋ ರೂಂ ಎದುರು ಬೆಂಕಿ ಹಚ್ಚಿದ ಯುವಕ

Tuesday, February 8th, 2022
Bike

ಬಂಟ್ವಾಳ : ವ್ಯಕ್ತಿಯೊಬ್ಬ ತನ್ನ ಸ್ವಂತ ಬೈಕ್ ಗೆ ಬೈಕ್ ಶೋ ರೂಂ ಎದುರೇ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ಸೋಮವಾರ ಬಿ.ಸಿ.ರೋಡ್ ಕೈಕಂಬ ಸಮೀಪ ನಡೆದಿದೆ. ಫರಂಗಿಪೇಟೆ ನಿವಾಸಿ ಮುಹಮ್ಮದ್ ಹರ್ಷಾದ್ ಬೈಕ್ ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ವ್ಯಕ್ತಿ ಎನ್ನಲಾಗಿದೆ. ಹರ್ಷಾದ್ ಫೈನಾನ್ಸ್ ನಿಂದ ಸಾಲ ಮಾಡಿ ಬೈಕ್ ಕೊಂಡುಕೊಂಡಿದ್ದು ಸಾಲದ ಕಂತು ಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ಫೈನಾನ್ಸ್ ನವರು ಬೈಕ್ ಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಆತನ ಕೈಯಿಂದ […]

ಮಗನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ತಂದೆ

Tuesday, June 22nd, 2021
Vishwanath-Shetty

ಮಂಗಳೂರು  : ತಂದೆಯೇ ತನ್ನ ಮಗನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಮಂಗಳೂರಿನ ಜಪ್ಪಿನಮೊಗರು ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ. ಮನೆಯ ದನಗಳನ್ನು ಹೊರಗಡೆ ಕಟ್ಟಿ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಜಗಳವಾಗಿ ಈ ಘಟನೆ ನಡೆದಿದೆ. ಕೊಪ್ಪರಿಗೆಗುತ್ತು ನಿವಾಸಿ ಆರೋಪಿ ವಿಶ್ವನಾಥ ಶೆಟ್ಟಿ (52) ಎಂಬಾತ ಮಗ ಸ್ವಾಮೀತ್ ಶೆಟ್ಟಿ (25) ಯನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಆರೋಪಿಯಾಗಿದ್ದಾನೆ. ಸ್ವಾಮೀತ್ ಶೆಟ್ಟಿ (25) ಸುಟ್ಟ ಗಾಯಗೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾಕುದನಗಳನ್ನು ಹೊರಗಡೆ ಕಟ್ಟಿಹಾಕಿದ್ದ ಬಗ್ಗೆ ಸ್ವಾಮೀತ್ ಶೆಟ್ಟಿಯ ತಂದೆ […]

ಪಚ್ಚನಾಡಿ ಪ್ಲಾಸ್ಟಿಕ್ ಸಂಸ್ಕರಣಾ ಘಟಕಕ್ಕೆ ನ್ಯಾಯಾಧೀಶೆ ಶೀಲಾ ಎ.ಜಿ ಭೇಟಿ

Tuesday, April 6th, 2021
pacchanady

ಮಂಗಳೂರು : ನಗರದ ಹೊರವಲಯದ ಪಚ್ಚನಾಡಿಯಲ್ಲಿರುವ ಪ್ಲಾಸ್ಟಿಕ್ ಸಂಸ್ಕರಣಾ ಘಟಕದಲ್ಲಿ ಬೆಂಕಿ ಅವಘಡ ಸಂಭವಿಸಿ ಲಕ್ಷಾಂತರ ಮೌಲ್ಯದ ಪ್ಲಾಸ್ಟಿಕ್ ತ್ಯಾಜ್ಯಗಳು ಬೆಂಕಿಗಾಹುತಿಯಾಗಿ ನಷ್ಟಸಂಭವಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಶಿಲ್ಪಾ ಎ.ಜಿ. ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸೂಚನೆಯ ಮೇರೆಗೆ ಭೇಟಿ ನೀಡಿ ಸಂಗ್ರಹಣೆಯಾಗಿರುವ ಕಸಕ್ಕೆ ಬೆಂಕಿ ಬಿದ್ದು ಸ್ಥಳೀಯರಿಗೆ ತೊಂದರೆಯಾಗಿದೆಯೇ ಎಂಬ ಬಗ್ಗೆ ವರದಿ ನೀಡಲು ಸೂಚಿಸಲಾಗಿದ್ದು, ಈ […]

ಪಚ್ಚನಾಡಿ ತ್ಯಾಜ್ಯ ಘಟಕದಲ್ಲಿ ಬೆಂಕಿ, ಸುತ್ತಮುತ್ತಲಿನ ಪರಿಸರದಲ್ಲಿ ದಟ್ಟ ಹೊಗೆ

Monday, April 5th, 2021
pachanady

ಮಂಗಳೂರು: ಪಚ್ಚನಾಡಿ ತ್ಯಾಜ್ಯ ಘಟಕದಲ್ಲಿ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ಆ ಪ್ರದೇಶದ ಸುತ್ತ ದಟ್ಟವಾದ ಹೊಗೆ ಕಂಡುಬಂತು. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಐದಾರು ಅಗ್ನಿಶಾಮಕ ವಾಹನಗಳಲ್ಲಿ ಆಗಮಿಸಿದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಆದರೆ ಬೆಂಕಿಯ ಜ್ವಾಲೆ ಮತ್ತು ದಟ್ಟ ಹೊಗೆಯಿಂದ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು.

ತೊಕೊಟ್ಟು ಗುಜರಿ ಅಂಗಡಿಗೆ ಬೆಂಕಿ, ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕದಳ

Saturday, March 20th, 2021
Kallapu-fire

ಮಂಗಳೂರು : ತೊಕೊಟ್ಟು ಸಮೀಪದ ಕಲ್ಲಾಪುವಿನಲ್ಲಿ ಗುಜರಿ ಅಂಗಡಿ ಬೆಂಕಿ ಅನಾಹುತದಿಂದ ಹೊತ್ತಿ ಉರಿದ ಘಟನೆ ಶನಿವಾರ ಸಂಜೆ ನಡೆದಿದೆ. ಬೆಂಕಿಯ ಕೆನ್ನಾಲಿಗೆಗೆ ಲಕ್ಷಾಂತರ ರೂಪಾಯಿ ಗುಜರಿ ಸಾಮಾನುಗಳು ಭಸ್ಮಗೊಂಡಿದೆ ಎನ್ನಲಾಗಿದ್ದು. ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಅಗ್ನಿ ಶಾಮಕದಳದಿಂದ ಕಾರ್ಯಚರಣೆ ನಡೆಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಉಂಟಾಗಿದೆ ಎನ್ನಲಾಗಿದ್ದು,  ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ಯಾಟರಿ ಶಾರ್ಟ್ ಸರ್ಕ್ಯೂಟ್ – ಕಾರು ಚಲಿಸುತ್ತಿರುವಾಗಲೇ ಬೆಂಕಿ

Tuesday, March 16th, 2021
Mudradi Car

ಹೆಬ್ರಿ :  ಮಂಗಳವಾರ ಮುಂಜಾನೆ ಚಲಿಸುತ್ತಿದ್ದ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಕಾರು ಸಂಪೂರ್ಣವಾಗಿ ಹೊತ್ತಿ ಉರಿದ ಘಟನೆ ತಾಲೂಕಿನ ಮುದ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೋಮೇಶ್ವರ ರಸ್ತೆಯಲ್ಲಿ ನಡೆದಿದೆ. ಘಟನೆಯಲ್ಲಿ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾವೇರಿ ಮೂಲದ ರಮೇಶ್ ಎಂಬವರು ಹಿರಿಯಡ್ಕದಲ್ಲಿ ಪೂಜೆ ಕಾರ್ಯಕ್ರಮ ಮುಗಿಸಿ ಇಂದು ಮುಂಜಾನೆ 5 ಗಂಟೆ ಸುಮಾರಿಗೆ ತನ್ನ ಮಾರುತಿ ಆಲ್ಟೋ ಕಾರಿನಲ್ಲಿ ಮನೆಗೆ ವಾಪಾಸುಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ತಕ್ಷಣ ಅವರು ಕಾರಿನಿಂದ ಕೆಳಗಿದು ಬಚಾವ್ ಆಗಿದ್ದಾರೆ. ಸ್ಥಳಕ್ಕಾಗಮಿಸಿದ […]

ಕಾರು ಗ್ಯಾರೇಜ್ ನಲ್ಲಿ ಬೆಂಕಿ, ಸುಟ್ಟು ಕರಕಲಾದ ಕಾರುಗಳು

Monday, March 15th, 2021
Car Garage

ವಿಟ್ಲ : ನಗರ ಹೊರವಲಯದ ಚಂದಳಿಕೆ ಎಂಬಲ್ಲಿ ಗ್ಯಾರೇಜ್ ವೊಂದು ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಸೋಮವಾರ ಬೆಳಗ್ಗೆ ಸಂಭವಿಸಿದೆ. ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯಿಂದ ಗ್ಯಾರೇಜ್ ಭಾಗಶಃ ಸುಟ್ಟು ಕರಕಲಾಗಿತ್ತು. ಗ್ಯಾರೇಜ್ ಒಳಗಡೆ ರಿಪೇರಿಗೆಂದು ಇರಿಸಲಾಗಿದ್ದ ಕೆಲವೊಂದು ಕಾರುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ತಕ್ಷಣ ಪುತ್ತೂರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದರೂ ಅವರು ಸ್ಥಳಕ್ಕಾಗಮಿಸುವಷ್ಟರಲ್ಲಿ ಗ್ಯಾರೇಜ್ ಭಾಗಶಃ ಸುಟ್ಟು ಸುಟ್ಟು  ಹೋಗಿದೆ. ಕಾರು ಗ್ಯಾರೇಜ್  ಚಂದಳಿಕೆ ಹರೀಶ್ ಎಂಬವರದ್ದಾಗಿದೆ.  ಗ್ಯಾರೇಜ್ ಒಳಗಡೆ 10ಕ್ಕಿಂತಲೂ ಅಧಿಕ ವಾಹನಗಳಿದ್ದವು. ಬೆಂಕಿ ಕಾಣಿಸಿಕೊಂಡ ಕೂಡಲೇ […]

ಸಿಡಿಲು ಬಡಿದು ಹೋಟೆಲ್ ಬೆಂಕಿಗಾಹುತಿ

Thursday, January 7th, 2021
Hotel

ಉಡುಪಿ : ಅನಿರೀಕ್ಷಿತವಾಗಿ ಸುರಿದ ಗುಡುಗು ಸಹಿತ‌ ಭಾರೀ ಮಳೆಯ ಹಿನ್ನಲೆಯಲ್ಲಿ ಸಿಡಿಲು ಬಡಿದು ಹೋಟೆಲೊಂದು ಬೆಂಕಿಗಾಹುತಿಯಾದ ಘಟನೆ ಬುಧವಾರ ರಾತ್ರಿ ನಡೆದಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಆಕಾಶವಾಣಿ ಸಮೀಪವಿರುವ ಸಪ್ತಮಿ ಹೋಟೆಲಿಗೆ ಸಿಡಿಲು ಬಡಿದ ಪರಿಣಾಮ ಹೋಟೆಲು ಬೆಂಕಿಗಾಹುತಿಯಾಗಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಅಗ್ನಿ ‌ಶಾಮಕ ದಳ  ಆಗಮಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದೆ.

ವಿಟ್ಲದಲ್ಲಿ ಎಸ್‌ಡಿಪಿಐ ಕಚೇರಿಗೆ ಬೆಂಕಿ

Monday, January 4th, 2021
sdpi

ವಿಟ್ಲ :  ಎಸ್‌ಡಿಪಿಐ ವಿಟ್ಲ ವಲಯ ಕಚೇರಿಗೆ ಬೆಂಕಿ ಹಾಕಿರುವ ಘಟನೆ ಮೇಗಿನಪೇಟೆಯಲ್ಲಿ ನಡೆದಿದೆ. ಕಚೇರಿಯ ಮುಂಭಾಗದ ಬಾಗಿಲಿನ ಭಾಗಕ್ಕೆ ಬೆಂಕಿ ಹಚ್ಚಿದ್ದು, ಸ್ಥಳದಲ್ಲಿ ಪೈಂಟ್ ಡಬ್ಬಗಳು ಪತ್ತೆಯಾಗಿದ್ದು, ಪೈಂಟ್ ಹಚ್ಚಿ ಬೆಂಕಿ ಹಾಕಿದ್ದಾರೆಂಬ ಶಂಕೆ ವ್ಯಕ್ತವಾಗಿದೆ. ಕಚೇರಿಯ ಮುಂಭಾಗ ಹಾನಿಗೊಂಡಿದೆ. ಸೋಮವಾರ ಬೆಳಿಗ್ಗೆ ಈ ಘಟನೆ ಬೆಳಕಿಗೆ ಬಂದಿದ್ದು, ಭಾನುವಾರ ರಾತ್ರಿ ಈ ಕೃತ್ಯ ನಡೆದಿದೆನ್ನಲಾಗಿದೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.