ಮುಖದಲ್ಲಿ ಮೊಡವೆಯಿದೆ ಎಂದು 15ರ ಬಾಲಕಿ ನೇಣಿಗೆ ಶರಣು

Monday, January 4th, 2021
Divya

ಪುತ್ತೂರು :  ಮುಖದಲ್ಲಿ ಮೊಡವೆಯಿದೆ ಎಂದು ಬಾಲಕಿಯೊಬ್ಬಳು  ಮುಜುಗರಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರಿನ ಪಾಲ್ತಾಡಿ ಯಲ್ಲಿ ನಡೆದಿದೆ. ಕೆಯ್ಯೂರಿನ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನಲ್ಲಿ ಒಂಬತ್ತನೇ ತರಗತಿ ವಿದ್ಯಾರ್ಥಿನಿಯಾಗಿರುವ ದಿವ್ಯಾ (15) ಮೊಡೆವೆಯಿದೆ ಎಂದು ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಮುಖದಲ್ಲಿ ಮೊಡವೆಗಳು ಕಾಣಿಸಿಕೊಂಡ ಬಳಿಕ ತುಂಬಾ ದುಃಖಿತಳಾಗಿದ್ದ ದಿವ್ಯಾ ಅದೇ ಕಾರಣದಿಂದ  ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ. ಬೆಳ್ಳಾರೆ ಪೊಲೀಸ್‌ ಠಾಣೆ ವ್ಯಾಪ್ತಿಯ ಗೇರುಗುಡ್ಡೆಯಲ್ಲಿ ಬಾಲಕಿ ನೇಣಿಗೆ ಶರಣಾಗಿದ್ದಾರೆ.  

ಮೆಸ್ಕಾಂ ಉದ್ಯೋಗಿಯಿಂದ ಪಿಯುಸಿ ಬಾಲಕಿಗೆ ಲವ್‌ಜೆಹಾದ್ ಯತ್ನ, ಆರೋಪಿಯ ಬಂಧನ

Tuesday, December 22nd, 2020
soyab

ಸವಣೂರು : ಸವಣೂರಿನ ಪೆರಿಯಡ್ಕ ಸಮೀಪದ‌ ನಿವಾಸಿಯಾಗಿರುವ ಪಿಯುಸಿ ಓದುತ್ತಿರುವ ಬಾಲಕಿಗೆ ಸಾಮಾಜಿಕ ಜಾಲತಾಣದಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿ, ಪ್ರೀತಿಸುವಂತೆ ಕಿರುಕುಳ ಕೊಡುತ್ತಿದ್ದ ಆರೋಪದ ಮೇರೆಗೆ ಸವಣೂರಿನ‌ ಮೆಸ್ಕಾಂ ಸಿಬ್ಬಂದಿಯೊಬ್ಬನನ್ನು ಪೋಕ್ಸೋ ಕಾಯ್ದೆಯಡಿ ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ. ಮೆಸ್ಕಾಂ ಉದ್ಯೋಗಿಯಾಗಿರುವ ಸೊಯೂಬ್ ಕೊತ್ವಾಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂ ಮೂಲಕ ಪ್ರೀತಿಸುವಂತೆ ಕಿರುಕುಳ ಕೊಡುತ್ತಿದ್ದ, ಅಲ್ಲದೇ ಅಸಭ್ಯವಾಗಿ ಸಂದೇಶ ರವಾನಿಸುತ್ತಿದ್ದ, ತನ್ನ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸುತ್ತಿದ್ದ ಎಂದು ಬಾಲಕಿ ಆರೋಪಿಸಿದ್ದಾಳೆ. ಈ ವಿಚಾರ ಸವಣೂರಿನ ಹಿಂದೂ […]