ಬೊಕ್ಕಪಟ್ನ- ಬೋಳೂರಿನಿಂದ ಕಂಕನಾಡಿ ರೈಲ್ವೇ ನಿಲ್ದಾಣದ ವರೆಗೆ ನೂತನ ಸರಕಾರಿ ಸಿಟಿ ಬಸ್ ಸೇವೆಗೆ ಶಾಸಕ ಕಾಮತ್ ಚಾಲನೆ

Monday, September 27th, 2021
Bokkapatna

ಮಂಗಳೂರು: ಜಿಲ್ಲಾಡಳಿತ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಬೊಕ್ಕಪಟ್ನ- ಬೋಳೂರಿನ ಸುಲ್ತಾನ್ ಬತ್ತೇರಿಯಿಂದ ಅಮೃತಾನಂದಮಯಿ ಆಶ್ರಮದ ಮೂಲಕವಾಗಿ ಕಂಕನಾಡಿ ರೈಲ್ವೇ ಸ್ಟೇಷನ್ ವರೆಗೆ ಮತ್ತು ಅಲ್ಲಿಂದ ವಾಪಸು ಬೋಳೂರು ಸುಲ್ತಾನ್ ಬತ್ತೇರಿ – ಬೊಕ್ಕಪಟ್ನದ ವರೆಗೆ ಸರಕಾರಿ ಸಿಟಿ ಬಸ್ ಸೇವೆಯನ್ನು ಹೊಸದಾಗಿ ದಿನಾಂಕ 27.9.2021 ರಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಶ್ರೀ ಡಿ.ವೇದವ್ಯಾಸ ಕಾಮತ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ಸ್ಥಳೀಯ ಸಾರ್ವಜನಿಕರು ಬಹಳ ಕಾಲದಿಂದಲೂ ಇಲ್ಲಿ ಸರಕಾರಿ […]

ಕೋವಿಡ್ ಸೋಂಕಿನಿಂದ ಮೃತಪಟ್ಟ ಮಹಿಳೆಯ ಪಿಪಿಇ ಕಿಟ್ ತೆರೆದು ಮುಖದರ್ಶನ ಪಡೆದ ಕಾಂಗ್ರೆಸ್ ಮುಖಂಡರು

Monday, July 27th, 2020
ivan

ಮಂಗಳೂರು: ವಿಧಾನ ಪರಿಷತ್ ಮಾಜಿ ಸದಸ್ಯ ಐವಾನ್ ಡಿಸೋಜಾ ಸೇರಿದಂತೆ,  ಶಾಸಕ ಯು.ಟಿ‌. ಖಾದರ್ ಮತ್ತು ಕೆಲವು  ಕಾಂಗ್ರೆಸ್ ನಾಯಕರು ಕೋವಿಡ್ ಸೋಂಕಿನಿಂದ ಮೃತಪಟ್ಟ ಮಹಿಳೆಯ ಅಂತ್ಯಸಂಸ್ಕಾರ ಜಾಗಕ್ಕೆ ತೆರೆಳಿ ಮೃತದೇಹದ ಪಿಪಿಇ ಕಿಟ್ ಅನ್ನು ಬಿಚ್ಚಿ ಅಂತಿಮ ದರ್ಶನ ಪಡೆಯುವ ಮೂಲಕ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ  ಘಟನೆ ಬೋಳೂರಿನ ರುದ್ರಭೂಮಿಯಲ್ಲಿ ನಡೆದಿದೆ. ದ.ಕ. ಜಿಲ್ಲಾ ಕಾಂಗ್ರೆಸ್ ನಾಯಕರು ತೆರಳಿ ಮೃತರ ಅಂತಿಮ ದರ್ಶನ ಪಡೆಯುವ ಮೂಲಕ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿರುವ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ವೃದ್ಧೆ ಜು.24ರಂದು ಮೃತಪಟ್ಟಿದ್ದರು. ಅವರ ಅಂತ್ಯಸಂಸ್ಕಾರ ನಗರದ […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾಗೆ ಮತ್ತೊಬ್ಬರು ಬಲಿ

Thursday, July 9th, 2020
covid-death

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಕೊರೊನಾದಿಂದ ಮತ್ತೊಬ್ಬರು ಮೃತಪಟ್ಟಿದ್ದು ಮೃತರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 48 ವರ್ಷದ ಬೋಳೂರು ನಿವಾಸಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಗುರುವಾರ ಕೂಡಾ 168 ಮಂದಿಗೆ ಕೊರೊನಾ ಸೋಂಕು ತಗುಲಿರುವ ಬಗ್ಗೆ ವರದಿಯಾಗಿದೆ.

ಕೋವಿಡ್ ಸೋಂಕಿಗೆ ಬೋಳೂರಿನ 58 ವರ್ಷದ ಮಹಿಳೆ ಮೃತ್ಯು

Wednesday, May 13th, 2020
boloor-death

ಮಂಗಳೂರು : ಕೋವಿಡ್ ಸೋಂಕಿಗೆ ತುತ್ತಾಗಿದ್ದ  ಬೋಳೂರಿನ 58 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ್ದು ಇದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಮೆದುಳು ಸಂಬಂದಿತ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆಗೆ ಸೋಂಕು ತಗಳಿತ್ತು ನಂತರ ಗಂಟಲಿನ ದ್ರವ ಪರೀಕ್ಷೆಗೆ ಒಳಪಡಿಸಲಾಗಿತ್ತು ಅದರ ವರದಿ ಏಪ್ರಿಲ್ 3೦ರಂದು ಬಂದಿದ್ದು ಅದರಲ್ಲಿ ಕೋವಿಡ್ ದೃಢಪಟ್ಟಿತ್ತು ನಂತರ ಅವರನ್ನು ಮಂಗಳೂರಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಿಸದೆ ಇಂದು ಸಾವನ್ನಪ್ಪಿದ್ದಾರೆ. ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿದ್ದ ಅವಧಿಯಲ್ಲಿ, […]

ಮಂಗಳೂರು ನಗರದಲ್ಲಿ ಮಹಿಳೆಗೆ ಕೋವಿಡ್-19 ಸೋಂಕು ದೃಢ

Thursday, April 30th, 2020
Bolooru Covid

ಮಂಗಳೂರು: ನಗರದ ಬೋಳೂರು ಪ್ರದೇಶದ ಮಹಿಳೆಯೋರ್ವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬೋಳೂರು ಪ್ರದೇಶದ 58 ವರ್ಷದ ಮಹಿಳೆಗೆ ಕೋವಿಡ್-19 ಸೋಂಕು ಇರುವುದು ಆಕೆಯ ಗಂಟಲು ದ್ರವ ಮಾದರಿ ಪರೀಕ್ಷೆ ವರದಿಯಲ್ಲಿ ಗುರುವಾರ ದೃಢಪಟ್ಟಿದೆ. ಸೋಂಕಿತ ಸಂಖ್ಯೆ 501ರ ಸಂಪರ್ಕದಿಂದ ಈ ಮಹಿಳೆಗೆ ಸೋಂಕು ತಾಗಿರುವುದು ಖಚಿತವಾಗಿದೆ. ಬೋಳೂರಿನ ಮಹಿಳಿಗೆ ಸೋಂಕು ತಾಗಿರುವುದು ದೃಢಪಟ್ಟ ಹಿನ್ನಲೆ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗುತ್ತಿದೆ. ಬ್ಯಾರಿಕೇಡ್ ಗಳನ್ನು ತಂದು ಹಾಕಲಾಗುತ್ತಿದೆ. ರಾಜ್ಯದಲ್ಲಿ ಇದುವರೆಗೆ 557 ಸೋಂಕು […]

ಜಗತ್ತು ಸುಂದರವಾಗಬೇಕಾದರೆ ಮನುಷ್ಯನಲ್ಲಿ ಹೃದಯವಂತಿಕೆ ಇರಬೇಕು :ಮಾತಾ ಅಮೃತಾನಂದಮಯಿ

Monday, February 11th, 2013
Matha Amritanandamayi

ಮಂಗಳೂರು : ಇತ್ತೀಚೆಗಿನ ವರ್ಷಗಳಲ್ಲಿ ಬುದ್ಧಿವಂತಿಕೆಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಆದರೆ ಜಗತ್ತು ಸುಂದರವಾಗಬೇಕಾದರೆ, ತಾಳ್ಮೆ, ಸಹನೆಗಳು ಹೆಚ್ಚಾಗಬೇಕಾದರೆ ಮನುಷ್ಯನಲ್ಲಿ ಹೃದಯವಂತಿಕೆ ಇರಬೇಕು. ಬುದ್ಧಿವಂತಿಕೆಯು ಎರಡಲಗಿನ ಕತ್ತಿಯಂತೆ. ಅದು ಕೆಲವೊಮ್ಮೆ ಸಮಾಜವನ್ನು ವಿಘಟನೆಗೊಳಿಸಲೂಬಹುದು. ಆದರೆ ಹೃದಯವಂತಿಕೆ ಎನ್ನುವುದು ಸೂಜಿಯಂತೆ. ಅದು ಪ್ರೀತಿಯಿಂದ ಮನುಷ್ಯರನ್ನು ಜೋಡಿಸಬಲ್ಲುದು ಎಂದು ಮಾತಾ ಅಮೃತಾನಂದಮಯಿ ಹೇಳಿದರು. ಬೋಳೂರಿನಲ್ಲಿರುವ ಅಮೃತ ವಿದ್ಯಾಲಯದಲ್ಲಿ ಶನಿವಾರ ನಡೆದ ಸತ್ಸಂಗ ಕಾರ್ಯಕ್ರಮದಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಸಮಗ್ರ ಜಗತ್ತು ಏಕಭಾವದ ವಿನ್ಯಾಸದಿಂದ ರೂಪುಗೊಂಡಿದೆ. ಬಣ್ಣಗಳಲ್ಲಿ ವಿವಿಧ ಬಗೆಗಳಿದ್ದು […]