ಉರ್ವ ಶ್ರೀ ಮಾರಿಯಮ್ಮ ದೇವರ ಪುನರ್ ಪ್ರತಿಷ್ಟೆ ಸಂಭ್ರಮ, ಸೊಬಗು – ವಿಡಿಯೋ

Tuesday, February 13th, 2024
Urwa-Mariyamma

ಮಂಗಳೂರು : ಸುಮಾರು 600 ವರ್ಷಗಳ ಇತಿಹಾಸವಿರುವ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಬ್ರಹ್ಮಕಲಶದ ಸಂಭ್ರಮ ಆರಂಭಗೊಂಡಿದೆ. ಫೆಬ್ರವರಿ 13ರ ಮಂಗಳವಾರ ಬಾಲಾಲಯದಲ್ಲಿದ್ದ ಶ್ರೀ ಮಾರಿಯಮ್ಮ ದೇವರನ್ನು ಗರ್ಭಗುಡಿಗೆ ವಾದ್ಯಘೋಷಗಳೊಂದಿಗೆ ತಂದು ವಿಜೃಂಭಣೆಯಿಂದ ಪುನರ್ ಪ್ರತಿಷ್ಠಾಪಿಸಲಾಯಿತು. ಈ ಸಂದರ್ಭ ಪ್ರತಿಷ್ಠಾಕಲಶ, ಪಂಚಬ್ರಹ್ಮ ಮಹಾಮಂತ್ರ ಹೋಮ ನಡೆಯಿತು. ಬ್ರಹ್ಮಕಲಶದ ವಿಧಿ ವಿಧಾನಗಳು ಫೆಬ್ರವರಿ 11 ರಿಂದ 15 ರ ವರೆಗೆ ನಡೆದು ಫೆಬ್ರವರಿ 15 ರಂದು ಬೆಳಗ್ಗೆ 8.12 ರ ಸುಮೂಹೂರ್ತದಲ್ಲಿ ಶ್ರೀ ಮಾರಿಯಮ್ಮ ದೇವರಿಗೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ. […]

ಪ್ರಾಯೋಗಿಕ ಕರ್ಫ್ಯೂ ಹೆಸರಲ್ಲಿ ಜನಸಾಮಾನ್ಯರಿಗೆ ತೊಂದರೆ

Thursday, April 8th, 2021
night Curfew

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾತ್ರಿ ನೇಮೋತ್ಸವ, ಬ್ರಹ್ಮಕಲಶಗಳು ನಡೆಯುವುದರಿಂದ ಸರಕಾರ ಪ್ರಾಯೋಗಿಕ ಕರ್ಫ್ಯೂ ಜಾರಿ ರಾತ್ರಿ ದುಡಿಯುವ ಜನಸಾಮಾನ್ಯರಿಗೆ ದೊಡ್ಡ ಹೊಡೆತ ನೀಡಲಿದೆ. ರಾಜ್ಯದಲ್ಲಿ ಬಾರ್, ಪಬ್‌ಗಳು ಮತ್ತು ರೆಸ್ಟೋರೆಂಟ್‌ಗಳು ಮುಚ್ಚುವ ಸಾಧ್ಯತೆಯಿದೆ. ಅಲ್ಲದೆ ಕೆಲವು ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಯಲ್ಲಿಡುವ ಚಿಂತನೆ ಮಾಡಲಾಗಿದೆ. ಏಪ್ರಿಲ್ 8ರ ಗುರುವಾರ ಮುಖ್ಯಮಂತ್ರಿ ಬಿ ಎಸ್ ಯಡಿಯುರಪ್ಪ ಮಾತನಾಡಿ, ಉಡುಪಿ ಸೇರಿದಂತೆ 7 ಜಿಲ್ಲೆಗಳ ಎಂಟು ನಗರಗಳಲ್ಲಿ 10 ದಿನಗಳ ಕಾಲ ರಾತ್ರಿ ಕರ್ಫ್ಯೂ  ರಾತ್ರಿ 10 ರಿಂದ ಬೆಳಿಗ್ಗೆ […]

’ಪಾಂಡೇಶ್ವರ’ ಮಹಾಲಿಂಗೇಶ್ವರ ದೇವರ ಬ್ರಹ್ಮಕಲಶಕ್ಕೆ ಆಗಸ್ಟ್ 28 ರಿಂದ ಅಷ್ಟಮಂಗಳ ಪ್ರಶ್ನೆ

Tuesday, August 27th, 2019
pandeshwara

ಮಂಗಳೂರು : ಪಾಂಡವರಿಂದ ಸ್ಥಾಪಿಸಲ್ಪಟ್ಟ `ಪಾಂಡೇಶ್ವರ’ ಶ್ರೀ ಮಹಾಲಿಂಗೇಶ್ವರ ದೇವರಿಗೆ 2020 ರ ಮಾರ್ಚ್ ಆಸುಪಾಸಿನಲ್ಲಿ ನಡೆಯಲಿರುವ ಬ್ರಹ್ಮಕಲಶ ಮಹೋತ್ಸವದ ಪೂರ್ವ ತಯಾರಿಯಾಗಿ ಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಕ್ಷೇತ್ರದಲ್ಲಿ ಅಷ್ಟಮಂಗಳ ಪ್ರಶ್ನೆ ಆಗಸ್ಟ್ 28,29,30 ರಂದು ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಸುರೇಶ್ ತಲ್ಲಾವಿಕ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ. ಈ ಕುರಿತು ಮಂಗಳವಾರ ’ಪಾಂಡೇಶ್ವರ’ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಾತನಾಡಿದ ಅವರು ಬ್ರಹ್ಮಕಲಶೋತ್ಸವವು ನಡೆದು 14 ವರ್ಷ ಸಂದಿರುವುದರಿಂದ, ಭಕ್ತಾದಿಗಳ ಸಭೆ ಕರೆದು ಶ್ರೀ ಕ್ಷೇತ್ರದ ಪುನರ್ […]

ನಮ್ಮ ರಕ್ಷಣೆಗೆ ನಾಗಾರಾಧನೆ ಅತೀ ಮುಖ್ಯ : ಡಾ. ವೀರೇಂದ್ರ ಹೆಗ್ಗಡೆ

Sunday, February 25th, 2018
Kudupu-hegde

ಮಂಗಳೂರು: ಜ್ಞಾನ ದೇಶದ ಅಭಿವೃದ್ಧಿಯ ಸಂಪತ್ತು. ದರೋಡೆಕೋರರಿಗೆ, ಆಕ್ರಮಣಕಾರರಿಗೆ ಆಕ್ರಮಿಸಲಾಗದ ಸಂಪತ್ತು ಇದ್ದರೆ ಅದು ಜ್ಞಾನ ಮಾತ್ರ. ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಸಂಪತ್ತಿದೆ. ಆದರೆ ಕೇವಲ ಸಂಪತ್ತಿನಿಂದ ಬದುಕಲು ಆಗುವುದಿಲ್ಲ. ಬದುಕಿಗೆ ಪ್ರಕೃತಿಯ ಆರಾಧನೆ ಕೂಡಾ ಬೇಕಾಗಿದೆ. ಯಾಕೆಂದರೆ ಪ್ರಕೃತಿಗೆ ದೊಡ್ಡ ಶಕ್ತಿಯಿದೆ. ಜನರ ಜೀವನದ ಮೇಲೆ ಪರಿಣಾಮ ಪಕೃತಿಯಿಂದ ಬೀರುವುದು ಸಹಜ. ಇದನ್ನು ನಿಯಂತ್ರಿಸಲಿಕ್ಕಾಗಿ ಪ್ರಕೃತಿ ಆರಾಧನೆ ಮಾಡುತ್ತೇವೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಕುಡುಪು ಶ್ರೀ ಅನಂತ ಪದ್ಮನಾಭ […]

ಕುಡುಪು ಬ್ರಹ್ಮಕಲಶ ಧಾರ್ಮಿಕ ಸಮಾರಂಭ

Monday, February 19th, 2018
kudupu

ಮಂಗಳೂರು: ಕುಡುಪು ಶ್ರೀಅನಂತ ಪದ್ಮನಾಭ ದೇವಸ್ಥಾನ ನಾಗರಾಧನೆಯ ಪ್ರಸಿದ್ಧ ಕ್ಷೇತ್ರವಾಗಿದ್ದು, ಬಹಳ ವರ್ಷಗಳ ಬಳಿಕ ಜೀರ್ಣೋದ್ಧಾರ ಕಾಣುತ್ತಿದೆ. ಸಮಗ್ರ ಭೂಮಿಯಲ್ಲಿ ನಾಗ ದೇವರ ಸ್ಥಾನ ಇದೆ. ಪ್ರಸಕ್ತ ನಾಗನಿಗೆ ನಿರ್ದಿಷ್ಟ ಸ್ಥಾನ ಕಲ್ಪಿಸಲಾಗಿದೆ. ನಾಗದೇವರ ಸಾನಿಧ್ಯವಿರುವ ದೇವಸ್ಥಾನಗಳಲ್ಲಿ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನ ಕೂಡಾ ಒಂದು ಎಂದು ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು. ಅವರು ಕುಡುಪು ಅನಂತ ಪದ್ಮನಾಭ ದೇವಸ್ಥಾನದ ಅನಂತ ಪದ್ಮನಾಭ ವೇದಿಕೆಯಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ […]

ಕದ್ರಿ ದೇವಸ್ಥಾನಕ್ಕೆ ಶಾಸಕ ಲೋಬೊ ಭೇಟಿ ಬ್ರಹ್ಮಕಲಶ ಪೂರ್ವ ತಯಾರಿಗೆ ಸೂಚನೆ

Wednesday, November 29th, 2017
kadri-lobo

ಮಂಗಳೂರು: ಕದ್ರಿ ದೇವಸ್ಥಾನದ ಬ್ರಹ್ಮಕಲಶ ಕಾರ್ಯಕ್ರಮ 2019ರಲ್ಲಿ ನಡೆಯಲಿದ್ದು ಅದನ್ನು ಅದ್ದೂರಿಯಾಗಿ ಆಯೋಜಿಸಲು ಪೂರ್ವ ತಯಾರಿ ಮಾಡಬೇಕು ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು. ಕದ್ರಿ ದೇವಸ್ಥಾನಕ್ಕೆ ಭೇಟಿ ನೀಡಿ, ಅವಶ್ಯಕ ಕಾಮಗಾರಿಗಳ ಬಗ್ಗೆ ಪರಿಶೀಲನೆ ಮಾಡಿ ಅವರು ಮಾತನಾಡಿದರು. ‘ಬ್ರಹ್ಮಕಲಶ ಕಾರ್ಯಕ್ರಮ ಈ ಭಾಗದ ಜನರಿಗೆ ಮಹತ್ವವಾಗಲಿದೆ. ಅದಕ್ಕೆ ಬೇಕಾದ ಕೆಲಸಗಳನ್ನು ಈಗಿನಿಂದಲೇ ಮಾಡಬೇಕು. ಧಾರ್ಮಿಕ ಕೆಲಸವನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಮಾಡಬೇಕಾಗುತ್ತದೆ’ ಎಂದರು. ‘ಕದ್ರಿ ದೇವಸ್ಥಾನವೆಂದರೆ ಜನರಿಗೆ ವಿಶೇಷ ಭಾವನೆ ಇದೆ. ಇಲ್ಲಿಗೆ ಬರುವ […]