ಶ್ರೀ ಕಾವಿ ಸುಬ್ರಹ್ಮಣ್ಯ ದೇವರ ‘ವರ್ಕಾಡಿದ ಬ್ರಹ್ಮಕಲಶೋತ್ಸವ’ ತುಳು ಭಕ್ತಿಗೀತೆ ಬಿಡುಗಡೆ

Monday, February 19th, 2024
Vorkady-song

ವರ್ಕಾಡಿ : ಶ್ರೀ ಕಾವಿ ಸುಬ್ರಹ್ಮಣ್ಯ ದೇವಸ್ಥಾನ ವರ್ಕಾಡಿ ಮಂಜೇಶ್ವರ ಇದರ ಬ್ರಹ್ಮಕಲಶೋತ್ಸವದ ಭಕ್ತಿಗೀತೆಯನ್ನು ಶ್ರೀ ಕಾವಿ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸುಭಾಷ್ ಅಡಪ ಕಲ್ಲೂರು ಇವರು ದೇವಸ್ಥಾನದಲ್ಲಿ ಬಿಡುಗಡೆ ಗೊಳಿಸಿದರು. ಬ್ರಹ್ಮಕಲಶೋತ್ಸವದ ಈ ಶುಭ ಸಂದರ್ಭದಲ್ಲಿ ಶ್ರೀ ಕಾವಿ ಸುಬ್ರಹ್ಮಣ್ಯ ದೇವರ ಭಕ್ತಿ ಸ್ತುತಿಯನ್ನು ಶಿವಪ್ರಸಾದ್ ತೌಡುಗೋಳಿ ಅವರು ತನ್ನ ಸಾಹಿತ್ಯದ ಸೇವೆ ಮೂಲಕ ಬರೆದು ದೇವರಿಗೆ ಅರ್ಪಣೆ ಮಾಡಿದ್ದಾರೆ. ಅವರಿಗೆ ಇನ್ನಷ್ಟು ಸಾಹಿತ್ಯ ಬರೆಯುವ ಶಕ್ತಿಯನ್ನು ಶ್ರೀ ಕಾವಿ ಸುಬ್ರಹ್ಮಣ್ಯ ಸ್ವಾಮಿ ಕರುಣಿಸಲಿ […]

ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನ, ಉರ್ವ ಬ್ರಹ್ಮಕಲಶೋತ್ಸವ ಫೆಬ್ರವರಿ 11 ರಿಂದ 15,2024

Sunday, February 11th, 2024
ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನ, ಉರ್ವ ಬ್ರಹ್ಮಕಲಶೋತ್ಸವ ಫೆಬ್ರವರಿ 11 ರಿಂದ 15,2024

ಫೆ.11-15: ಉರ್ವ ಶ್ರೀ ಮಾರಿಯಮ್ಮ ನ ಸನ್ನಿಧಿಯಲ್ಲಿ ಬ್ರಹ್ಮಕಲಶೋತ್ಸವ 

Tuesday, January 16th, 2024
Mariyamma-Temple

ಮಂಗಳೂರು: “ಪುರಾಣ ಪ್ರಸಿದ್ಧ ದೇವಸ್ಥಾನಗಳಲ್ಲಿ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನ ಕೂಡಾ ಪ್ರಾಮುಖ್ಯತೆ ಪಡೆದಿರುತ್ತದೆ. ದ.ಕ. ಜಿಲ್ಲೆ ಮಾತ್ರವಲ್ಲದೇ ನಾಡಿನ ಸಮಸ್ತ ವರ್ಗದ ಭಕ್ತಾಭಿಮಾನಿಗಳು ಉರ್ವ ಶ್ರೀ ಮಾರಿಯಮ್ಮ ದೇವಿಯ ಕ್ಷೇತ್ರದ ಬಗ್ಗೆ ಅಪಾರ ಭಕ್ತಿ ಮತ್ತು ನಂಬಿಕೆಯನ್ನಿಟ್ಟು, ಶ್ರದ್ಧೆಯಿಂದ ಆರಾಧಿಸಿಕೊಂಡು ಬಂದಿದ್ದಾರೆ. ಇಂತಹ ದಿವ್ಯ ಮಾತೆಯ ಕ್ಷೇತ್ರದಲ್ಲಿ ಫೆ.11ರಿಂದ 15ರವರೆಗೆ ಬ್ರಹ್ಮಕಲಶೋತ್ಸವವು ನಡೆಯಲಿದ್ದು ಈ ಸಂದರ್ಭದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಾದ್ಯಂತ ಪ್ರಚಾರ ರಥದ ಸಂಚಾರ, ಹೊರೆಕಾಣಿಕೆ ಮೆರವಣಿಗೆ, ಬೃಹತ್ ನೂತನ ಸಭಾಂಗಣ ಉದ್ಘಾಟನೆ ನಡೆಯಲಿದೆ” […]

ದೇವಂದಬೆಟ್ಟು ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

Wednesday, February 16th, 2022
devandabettu

ಬಂಟ್ವಾಳ : ತಾಲ್ಲೂಕಿನ ಕಳ್ಳಿಗೆ ಗ್ರಾಮದ ದೇವಂದಬೆಟ್ಟು ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುತಕ್ತ ಬುಧವಾರ ನಡೆದ ‘ಕುಟುಂಬ ಸಮಾವೇಶ’ ಕಾರ್ಯಕ್ರಮದಲ್ಲಿ ಆರ್ ಎಸ್ ಎಸ್ ಕುಟುಂಬ ಪ್ರಭೋದನ್ ಪ್ರಮುಖ್ ಶ್ರೀ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮಾತನಾಡಿದರು. ಪ್ರತಿದಿನ ನಾವು ಮನೆಯಲ್ಲಿ ಭಜನೆ ಮತ್ತು ಭೋಜನಕ್ಕೆ ಒಟ್ಟಾಗಿ ಕುಟುಂಬಸ್ಥರು ಸೇರಿಕೊಂಡಾಗ ಅಂತಹ ಮನೆ ದೇವಾಲಯವಾಗಿ ಪರಿವರ್ತನೆಗೊಳ್ಳುತ್ತದೆ. ಅನ್ನಬ್ರಹ್ಮನನ್ನು ನಾವು ಸ್ವೀಕರಿಸುವ ಮೊದಲು ಭಗವಂತನ ಸ್ಮರಿಸಿ ಭಕ್ತಿಯಿಂದ ಪ್ರಸಾದ ರೂಪದಲ್ಲಿ ಸ್ವೀಕರಿಸಬೇಕು ಎಂದು ಆರ್ ಎಸ್ ಎಸ್ […]

ತಾಳ್ಮೆ ಸಹನೆಗೆ ಇನ್ನೊಂದು ಹೆಸರು ವಿಶ್ವಕರ್ಮ ಸಮಾಜ -ಗುರು ದೇವಾನಂದ ಸ್ವಾಮಿ, ಶ್ರೀ ಗುರುದೇವದತ್ತ ಸಂಸ್ಥಾನಮ್ ಓಡಿಯೂರು

Thursday, January 20th, 2022
Kalikamba-Brahmmakalasha

ಮಂಗಳೂರು : ತಾಳ್ಮೆ ಸಹನೆಗೆ ಇನ್ನೊಂದು ಹೆಸರು ವಿಶ್ವಕರ್ಮ ಸಮಾಜ, ವಿಶ್ವಕರ್ಮ ಬ್ರಾಹ್ಮಣ ಸಮಾಜ ಇಲ್ಲದೆ ಸಮಾಜವೇ ಇಲ್ಲ ಸಮಾಜದ ವಿವಿಧ ಸ್ತರಗಳಲ್ಲಿ ವಿಶ್ವಕರ್ಮರ ಕೊಡುಗೆ ಅನನ್ಯ ವಾದುದು. ಕ್ಷೇತ್ರದ ಮೊಕ್ತೇಸರರು ಬೆನ್ನು ಮೂಳೆಯಂತೆ ಆಡಳಿತವನ್ನು ಎಲ್ಲರ ಸಹಕಾರದಿಂದ ನಡೆಸಿದಲ್ಲಿ ಕ್ಷೇತ್ರ ಅಭಿವೃದ್ಧಿ ಪರಿಪೂರ್ಣತೆ ಕಾಣುವಂತಾಗುತ್ತದೆ, ದತ್ತಾತ್ರೇಯನಿಗೂ ಕಾಳಿಕಾಂಬೆಯ ಕ್ಷೇತ್ರಕ್ಕೂ ಅವಿನಾಭವ ಸಂಬಂಧವಿದೆ, ಧರ್ಮ ಶ್ರದ್ದೆಯಿಂದ ನಮ್ಮ ಸಂಸ್ಕಾರ ರೂಪುಗೊಳ್ಳುತ್ತದೆ ಇದಕ್ಕಾಗಿ ವೇದಿಕೆಗಳು ಸಿದ್ದವಾಗಬೇಕು ಎಂದು ಶ್ರೀ ಕಾಳಿಕಾಂಬಾ ರಂಗ ಮಂಟಪದಲ್ಲಿ ಜನವರಿ 19ರಂದು ಬ್ರಹ್ಮಕಲಶೋತ್ಸವ ಸಮಾರಂಭದ ಸಲುವಾಗಿ […]

ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಮುಖ್ಯ ಮಂತ್ರಿಯವರಿಗೆ ಆಹ್ವಾನ

Friday, December 31st, 2021
Kalikamba CM invite

ಮಂಗಳೂರು : ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಶಿಲಾಮಯ ಸುತ್ತು ಪೌಳಿಯ ಜೀರ್ಣೋದ್ದಾರ ಕಾಮಗಾರಿಗೆ ವಿಶೇಷ ಅನುದಾನ ಕೋರಿ ಮನವಿಯನ್ನು ಮಾನ್ಯ ಸಂಸದ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ರವರ ಶಿಫಾರಿಸಿನ ಮೇಲೆ ಮಂಗಳೂರು ದಕ್ಷಿಣ ವಿಭಾಗ ಕ್ಷೇತ್ರದ ಶಾಸಕರಾದ ಡಿ ವೇದವ್ಯಾಸ್ ಕಾಮತ್ ನೇತ್ರತ್ವದಲ್ಲಿ ಮಾನ್ಯ ಮುಖ್ಯ ಮಂತ್ರಿಗಳಾದ ಎಸ್ ಆರ್ ಬೊಮ್ಮಯಿ ಯವರಿಗೆ ಕ್ಷೇತ್ರದ ಮೊಕ್ತೇಸರ್ ಕೆ ಕೇಶವ ಆಚಾರ್ಯರು ಡಿಸೆಂಬರ್ 31 ರಂದು ಬೆಂಗಳೂರಿನಲ್ಲಿ ವಿಧಾನ ಸೌಧದಲ್ಲಿ ನೀಡಿದರು. ಜನವರಿ 17 […]

ಬ್ರಹ್ಮಕಲಶೋತ್ಸವದಲ್ಲಿ ಭಾಗವಹಿಸಿ, ನಂತರ ವಿಹಾರಕ್ಕೆ ತೆರಳಿದ್ದ ವ್ಯಕ್ತಿ ನಾಪತ್ತೆ

Wednesday, April 28th, 2021
Nithin

ಮಂಗಳೂರು : ಸ್ನೇಹಿತರೊಂದಿಗೆ ವಿಹಾರಕ್ಕೆ ತೆರಳಿದ್ದ ವ್ಯಕ್ತಿಯೋರ್ವ ದಿಢೀರ್ ನಾಪತ್ತೆಯಾದ ಘಟನೆ ಸೋಮವಾರ ಸಂಜೆ ನಡೆದಿದ್ದು, ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಉಳ್ಳಾಲಬೈಲ್ ನಿವಾಸಿ ನಿತಿನ್ (32) ನಾಪತ್ತೆಯಾದ ವ್ಯಕ್ತಿ. ನಿತಿನ್ ಸೋಮವಾರ ಮಧ್ಯಾಹ್ನ ಇಬ್ಬರು ಸ್ನೇಹಿತರ ಜೊತೆಗೆ ಸೋಮೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಭಾಗವಹಿಸಿದ್ದ. ತದನಂತರ ಸಂಜೆ ಮೂವರು ಸೇರಿ ನೇತ್ರಾವತಿ ರೈಲ್ವೇ ಸೇತುವೆ ಬಳಿ ತೆರಳಿದ್ದರು. ಅಲ್ಲಿಂದ ನಿತಿನ್ ನಾಪತ್ತೆಯಾಗಿದ್ದಾನೆ ಎನ್ನಲಾಗ್ತಿದೆ. ಆ ಬಗ್ಗೆ ನಿತಿನ್ ಸಹೋದರ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ […]

ಉಳ್ಳಾಲ : ಸೋಮೇಶ್ವರ ದೇವಸ್ಥಾನದಲ್ಲಿ ಕೊರೊನಾ ನಿಯಮ ಉಲ್ಲಂಘಿಸಿ ಪಾಲ್ಗೊಂಡ ಸಾವಿರಾರು ಭಕ್ತರು

Tuesday, April 27th, 2021
Someshwara

ಮಂಗಳೂರು : ಉಳ್ಳಾಲದ ಸೋಮೇಶ್ವರ ದೇವಸ್ಥಾನದಲ್ಲಿ ಏಪ್ರಿಲ್ 26 ರ ರಾತ್ರಿ  ಬ್ರಹ್ಮಕಲಶೋತ್ಸವ ದ ರಥೋತ್ಸವದಲ್ಲಿ ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಮಾಸ್ಕ್ ಧರಿಸದೇ ಜನರು ಗುಂಪಾಗಿ ಸೇರಿದ ಘಟನೆ ನಡೆದಿದೆ. ಈ  ವೇಳೆ  ಸಹಾಯಕ ಆಯುಕ್ತ(ಎಸಿ) ಮದನ್ ಮೋಹನ್ ದೇವಾಲಯದ ಆವರಣದ ಮೇಲೆ ದಾಳಿ ನಡೆಸಿ ನೆರೆದಿದ್ದ ಜನರನ್ನು ವಾಪಸ್ ಕಳುಹಿಸಿದ್ದಾರೆ. ಈ ದೇವಾಲಯವು ಕೊರೊನಾ ಮಾರ್ಗಸೂಚಿಯನ್ನು ಉಲ್ಲಂಘಿಸಿ ದೇವಸ್ಥಾನಕ್ಕೆ ನೂತನ ರಥ ಮತ್ತು ಹೊರೆ ಕಾಣಿಕೆ ಮೆರವಣಿಗೆ ನಡೆಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾಸ್ಕ್ ಧರಿಸದೇ ಅಂತರ ಕಾಯ್ದುಕೊಳ್ಳದೇ […]

ಕೊರೋನ ಹಿನ್ನೆಲೆಯಲ್ಲಿ ಸೋಮೇಶ್ವರದ ಶ್ರೀ ಸೋಮನಾಥ ದೇವಳದ ಬ್ರಹ್ಮಕಲಶೋತ್ಸವ ರದ್ದು

Tuesday, April 20th, 2021
Somanatha

ಮಂಗಳೂರು :  ಸೋಮೇಶ್ವರದ ಶ್ರೀ ಸೋಮನಾಥ ದೇವಳದ ಬ್ರಹ್ಮಕಲಶೋತ್ಸವ ಹಾಗೂ ವರ್ಷಾವಧಿ ಉತ್ಸವವನ್ನು ರದ್ದುಗೊಳಿಸಲಾಗಿದೆ ಎಂದು ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಎ.18ರಿಂದ ಆರಂಭಗೊಂಡು ಮೇ 1ರವರೆಗೆ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ, ಕೊರೋನ ಹಿನ್ನೆಲೆಯಲ್ಲಿ ತಾಲೂಕು ದಂಡಾಧಿಕಾರಿಯ ಆದೇಶದಂತೆ ಧಾರ್ಮಿಕ ಕಾರ್ಯಕ್ರಮ ರದ್ದುಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಪಾಂಡೇಶ್ವರ ಮಹಾಲಿಂಗೇಶ್ವರ ದೇವರ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Thursday, December 24th, 2020
Pandeshwara Invitation

ಮಂಗಳೂರು : ಜನವರಿ 3, 2021  ರಿಂದ ಜನವರಿ 8, 2021 ರವರೆಗೆ ಪಾಂಡೇಶ್ವರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಯನ್ನು ಮಂಗಳೂರು ಮಹಾನಗರ ಪಾಲಿಕೆ ಮೇಯರ್ ದಿವಾಕರ ಪಾಂಡೇಶ್ವರ ಬಿಡುಗಡೆ ಗುರುವಾರ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಿದರು. ಪಾಂಡೇಶ್ವರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜನವರಿ ಮೂರರಿಂದ ಆರು ದಿನಗಳ ಕಾಲ ವಿವಿಧ ದೈವಿಕ ವಿಧಿ ವಿಧಾನಗಳೊಂದಿಗೆ ಮಹಾಲಿಂಗೇಶ್ವರ ದೇವರಿಗೆ ಬ್ರಹ್ಮಕಲಶೋತ್ಸವ ಮತ್ತು ವಿವಿಧ ಸಾಂಸ್ಕೃತಿಕ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮಗಳು ನಡೆಯಲಿದೆ. ಆಮಂತ್ರಣ ಬಿಡುಗಡೆಯ ಸಂಧರ್ಭದಲ್ಲಿ ವ್ಯವಸ್ಥಾಪನಾ […]