ಭಜನೆ ಬಂದವರಿಗೆ ಚೂರಿ ತೋರಿಸಿ, ಜೀವ ಬೆದರಿಕೆ ಹಾಕಿದ ವ್ಯಕ್ತಿಯ ಬಂಧನ

Wednesday, October 11th, 2023
Ananda-Acharya

ಬೆಳ್ತಂಗಡಿ : ವೇಣೂರು ಶ್ರೀ ಬಾಹುಬಲಿ ಕ್ಷೇತ್ರದ ಪರಿಸರದಲ್ಲಿ ಭಜನೆ ಮಾಡಲು ಬಂದವರಿಗೆ ಚೂರಿ ತೋರಿಸಿ, ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿರುವ ವ್ಯಕ್ತಿಯೊಬ್ಬನನ್ನು ಪೋಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮುಂಡೂರಿನ ಆನಂದ ಆಚಾರ್ಯ (38) ಎಂದು ಗುರುತಿಸಲಾಗಿದೆ. ವೇಣೂರು ಬಾಹುಬಲಿ ಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕದ ಪ್ರಯುಕ್ತ ಮಂಗಳವಾರ ರಾತ್ರಿ ವಲಯ ಮಟ್ಟದ ಜಿನ ಭಜನಾ ಸ್ಪರ್ದೆಗೆ ಮಹಿಳೆಯರು,ಮಕ್ಕಳು ಸೇರಿ ಸುಮಾರು 70 ಮಂದಿ ಅಭ್ಯಾಸ ನಡೆತ್ತಿದ್ದರು.ಈ ಸಂದರ್ಭ ಅಲ್ಲಿಗೆ ಬಂದ ಈತ ಚೂರಿ ತೋರಿಸಿ, ಬೊಬ್ಬೆ […]

ಕುಲಶೇಖರ ವೀರನಾರಾಯಣ ದೇವಸ್ಥಾನದಲ್ಲಿ ಗೋಪೂಜೆ ಭಜನೆ ಸತ್ಯನಾರಾಯಣ ಮಹಾಪೂಜೆ ಅನ್ನಸಂತರ್ಪಣೆ

Wednesday, November 17th, 2021
Veeranarayana Temple

ಮಂಗಳೂರು: ಕುಲಶೇಖರ ವೀರನಾರಾಯಣ ದೇವಸ್ಥಾನ ಜೀರ್ಣೋದ್ಧಾರದ ಪ್ರಕ್ರಿಯೆ ಪ್ರಾರಂಭಗೊಂಡಿದ್ದು ಆ ಪ್ರಯುಕ್ತ ನವೆಂಬರ್ 14 ರಂದು ರವಿವಾರ ದೇವಸ್ಥಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘ ಮತ್ತು ವೀರನಾರಾಯಣ ದೇವಸ್ಥಾನದ ಆಡಳಿತ ಮಂಡಳಿ ಜಂಟಿಯಾಗಿ ಭಜನೆ. ಗೋಪೂಜೆ. ಸತ್ಯನಾರಾಯಣ ಮಹಾಪೂಜೆ, ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ದೇವಸ್ಥಾನದ ತಂತ್ರಿ ಗಳಾಗಿರುವ ಶ್ರೀಹರಿ ಉಪಾಧ್ಯಾಯರು ಅವರ ಮಾರ್ಗದರ್ಶನದಂತೆ ಪ್ರಧಾನ ಅರ್ಚಕರು ಜನರ್ಧನ್ ಭಟ್ ಅವರು ಶ್ರೀದೇವರಿಗೆ ವಿಶೇಷ ಪೂಜೆ ನಡೆಸಿದರು. ಆ ಬಳಿಕ ದಕ್ಷಿಣ ಕನ್ನಡ […]

ವಿಭಜನೆಯಿಲ್ಲದ ಭಜನೆಯ ಕಂಠಗಳು ಎಲ್ಲೆಡೆ ಮೊಳಗಲಿ : ಶ್ರೀ ಮೋಹನದಾಸ ಪರಮಸಿಂಹ ಸ್ವಾಮೀಜಿ

Sunday, November 7th, 2021
Bhajane

ಮಂಗಳೂರು : ಭಜನೆ ಎಂದರೆ ಕೇವಲ ಹಾಡುವುದೆಂದಷ್ಟೇ ಅರ್ಥವಲ್ಲ. ಭಕ್ತಿ, ಜಪ, ನೆನವರಿಕೆ ಮಾಡುತ್ತಾ ಭಗವಂತನಿಗೆ ಹತ್ತಿರವಾಗುವುದು. ಆಧ್ಯಾತ್ಮಕ ಪ್ರಭಾವಲಯವನ್ನು ವೃದ್ಧಿಸಿಕೊಳ್ಳುವುದೇ ಆಗಿದೆ. ಇಂದು ಕೊರೋನದಂತಹ ಕಷ್ಟ ಕಾಲದಲ್ಲಿ ನಮ್ಮ ಪೀಳಿಗೆ ಸನಾತನೀಯವಾದ ಧರ್ಮದ ಸಾರವನ್ನು ಮರೆತಿವೆ. ಅವರನ್ನು ಪುನಃ ಧಾರ್ಮಿಕ ಹಳಿಗೆ ತಂದು ಈ ರಾಷ್ಟ್ರವನ್ನು ಪ್ರೀತಿಸುವ ಪ್ರಜೆಗಳನ್ನಾಗಿಸುವ ಕಾರ್ಯ ನಡೆಯಬೇಕಿದೆ. ಅಲ್ಲಲ್ಲಿ ಅಲ್ಲಲ್ಲಿ ಇಂತಹಾ ಜನಜಾಗೃತಿಯ ಕಾರ್ಯ ಆಗಬೇಕು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇಂತಹ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದ್ದು, ಜನಮನವನ್ನು ತಲುಪಿದೆ. […]

ಬಿಲ್ಲವರ ಅಸೋಷಿಯೇಶನ್ ಮುಂಬಯಿ, 166ನೇ ಶ್ರೀ ನಾರಾಯಣ ಗುರುಜಯಂತಿ ಆಚರಣೆ

Saturday, September 5th, 2020
billavaMumbai

ಮುಂಬಯಿ : ಮಹಾನಗರದ ಪ್ರತಿಷ್ಠಿತ ಜಾತೀಯ ಸಂಘಟನೆಗಳಲ್ಲೊಂದಾದ ಬಿಲ್ಲವರ ಅಸೋಷಿಯೇಶನ್ ಮುಂಬಯಿ, ಇದರ ವತಿಯಿಂದ ಸಂತಾಕ್ರೂಸ್ ಪೂರ್ವದ ಬಿಲ್ಲವ ಭವನದಲ್ಲಿ ಶ್ರೀ ನಾರಾಯಣ ಗುರುಗಳ 166 ಜಯಂತಿಯನ್ನು ಸೆ. 2ರಂದು ಆಚರಿಸಲಾಯಿತು. ನಾರಾಯಣ ಗುರುಗಳ ನಾಮಸ್ಮರಣೆ, ಭಜನೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕಾರ್ಯಕ್ರಮವು ಆರಂಭಗೊಂಡಿತು. ಮಧ್ಯಾಹ್ನ ನಡೆದ ಮಹಾಪೂಜೆಯನ್ನು ಬಿಲ್ಲವರ ಅಸೋಷಿಯೇಶನ್ ಮುಂಬಯಿಯ ಗೌರವ ಪ್ರಧಾನ ಕಾರ್ಯದರ್ಶಿ ರವೀಂದ್ರ ಶಾಂತಿಯವರು ನೆರವೇರಿಸಿದರು. ಬಿಲ್ಲವರ ಅಸೋಷಿಯೇಶನ್ ನ ಅಧ್ಯಕ್ಷರಾದ ಚಂದ್ರಶೇಖರ ಪೂಜಾರಿ ಯವರ ಅಧ್ಯಕ್ಷರೆಯಲ್ಲಿ ನಡೆದ ಈ ಸರಳ […]

ಕೊರೆನೋ ಮಹಾಮಾರಿಯನ್ನು ಹತೋಟಿಗೆ ತರಲು ಶಾಸಕರ ಮನೆಯಲ್ಲಿ ಭಜನೆ

Sunday, March 22nd, 2020
Vedvyas Kamath

ಮಂಗಳೂರು : ಕೊರೆನೋ ಭೀತಿ ನಿವಾರಣೆಗಾಗಿ ಮಂಗಳೂರು ನಗರ ದಕ್ಷಿಣ ಶಾಸಕರಾದ ಡಿ.ವೇದವ್ಯಾಸ್ ಕಾಮತ್ ಅವರು ತಮ್ಮ ಮನೆಯಲ್ಲಿ ಕುಟುಂಬದ ಸದಸ್ಯರೊಂದಿಗೆ ಭಜನೆಯ ಮಾಡುವ ಮೂಲಕ ದೇವರ ಮೊರೆ ಹೋದರು‌. ಈಗಾಗಲೇ ವೈದ್ಯರು ಕೊರೆನೋ ವೈರಸ್ ತಡೆಗಟ್ಟಲು ಹರ ಸಾಹಸ ಪಡುವ ವಿಚಾರ ಎಲ್ಲರಿಗೂ ತಿಳಿದಿದೆ. ಆದರೆ ದೇವರ ಕೃಪಾಕಟಾಕ್ಷ ಮತ್ತು ವೈದ್ಯರ ಶ್ರಮ ಎರಡರಿಂದ ಮಾತ್ರವೇ ಈ ಮಹಾಮಾರಿಯನ್ನು ಹತೋಟಿಗೆ ತರಬಹುದು ಎಂದು ಶಾಸಕರು ಹೇಳಿದ್ದಾರೆ. ವೈದ್ಯಕೀಯ ಜಗತ್ತಿಗೂ ಸವಾಲಾಗಿರುವ ಕೊರೆನೋ ನಿವಾರಣೆಗೆ ಭಗವಂತನ ಕೃಪಾ […]

ಸೂರ್ಯಗ್ರಹಣ : ಶ್ರೀ ಕ್ಷೇತ್ರ ಕದ್ರಿಯಲ್ಲಿ ಲೋಕಕಲ್ಯಾಣಾರ್ಥ ಮಂತ್ರ ಪಠನ; ಭಜನೆ

Friday, December 27th, 2019
Kadri

ಮಂಗಳೂರು : ಡಿಸೆಂಬರ್ 26 ರಂದು ಕದ್ರಿ ಶ್ರೀ ಮಂಜುನಾಥ ದೇವಳದಲ್ಲಿ ಕಲ್ಕೂರ ಪ್ರತಿಷ್ಠಾನದ ಆಯೋಜಕತ್ವದೊಂದಿಗೆ ಕಂಕಣ ಸೂರ್ಯಗ್ರಹಣದ ಪ್ರಯುಕ್ತ, ಲೋಕಕಲ್ಯಾಣಾರ್ಥ ಸುಭಿಕ್ಷೆಗಾಗಿ ಸಾಮೂಹಿಕ ರುದ್ರಪಾರಾಯಣ, ವಿಷ್ಣು ಸಹಸ್ರನಾಮ ಪಠನ, ಹಾಗು ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ನೇತೃತ್ವದಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ ವೇ.ಮೂ.ಡಾ.ಪ್ರಭಾಕರ ಅಡಿಗರ ಮಾರ್ಗದರ್ಶನದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ರಾಘವೇಂದ್ರ ಅಡಿಗ, ವಿದ್ವಾನ್ ರವಿ ಅಡಿಗ, ಕೃಷ್ಣ ಅಡಿಗ, ಗಣೇಶ ಹೆಬ್ಬಾರ್ ಕದ್ರಿ, ಡಾ.ಪ್ರಕಾಶ್‌ಕೃಷ್ಣ, ಸುಧಾಕರ ರಾವ್ ಪೇಜಾವರ, ಪ್ರಭಾಕರ […]

21ನೇ ವರ್ಷದ ಭಜನಾ ತರಬೇತಿ ಶಿಬಿರ ಮತ್ತು ಸಂಸ್ಕೃತಿ ಸಂವರ್ಧನ ಶಿಬಿರದ ಸಮಾರೋಪ ಸಮಾರಂಭ

Monday, September 23rd, 2019
belthangady

ಬೆಳ್ತಂಗಡಿ : ಬದುಕಿನುದ್ದಕ್ಕೂ ಪರಿಶುದ್ಧ ಮನಸ್ಸು ಪಡೆಯುವ ಏಕೈಕ ಮಾರ್ಗ ಭಜನೆ. ಭಜನೆಯಿಂದ ದೈವತ್ವ ಮತ್ತು ಉತ್ತಮ ಸಂಸ್ಕಾರ ಜಾಗೃತವಾಗುತ್ತದೆ ಎಂದು ಹರಿಹರಪುರದ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನರಸಿಂಹ ಪೀಠದ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ನುಡಿದರು. ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಒಂದು ವಾರ ನಡೆದ 21ನೇ ವರ್ಷದ ಭಜನ ತರಬೇತಿ ಶಿಬಿರ ಮತ್ತು ಸಂಸ್ಕೃತಿ ಸಂವರ್ಧನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು. ಸಂಸ್ಕಾರದ ಸಮಷ್ಟಿ ರೂಪವೇ ಸಂಸ್ಕೃತಿ. ವಿಶ್ವವೇ ಒಂದು ಕುಟುಂಬ ಎಂಬ […]

ಧರ್ಮಸ್ಥಳದಲ್ಲಿ ಶಿವರಾತ್ರಿ ವೈಭವ. ಶಿವ ಪಂಚಾಕ್ಷರಿ ಪಠಣ, ಭಜನೆ, ಅರ್ಚನೆ, ಜಾಗರಣೆ.

Wednesday, March 6th, 2019
Dharmasthala Shivaratri

ಧರ್ಮಸ್ಥಳ : ದೃಢ ಸಂಕಲ್ಪದೊಂದಿಗೆ ಏಕಾಗ್ರತೆಯಿಂದ ದೇವರ ಭಕ್ತಿ ಮಾಡಿದರೆ ನಮ್ಮ ಎಲ್ಲಾ ಸಂಕಷ್ಟಗಳ ಮುಕ್ತಿಯಾಗಿ ನಾವು ಭಗವಂತನ ಅನುಗ್ರಹಕ್ಕೆ ಪಾತ್ರರಾಗುತ್ತೇವೆ ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಸೋಮವಾರ ಶಿವರಾತ್ರಿ ಸಂದರ್ಭ ಧರ್ಮಸ್ಥಳದಲ್ಲಿ ಅಹೋರಾತ್ರಿ ನಡೆಯುವ ಶಿವಪಂಚಾಕ್ಷರಿ ಪಠಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶ್ರವಣ, ಕೀರ್ತನ, ಅರ್ಚನೆ, ವಂದನೆ, ಧ್ಯಾನ, ಆತ್ಮ ನಿವೇದನೆ ಮೊದಲಾದ ನವವಿಧ ಭಕ್ತಿಯಿಂದ ನಾವು ದೇವರ ಅನುಗ್ರಹಕ್ಕೆ ಪಾತ್ರರಾಗಬಹುದು. ಶಿವರಾತ್ರಿಯ ಪವಿತ್ರ ಸಂದರ್ಭದಲ್ಲಿ ಭಕ್ತಾದಿಗಳು ಪುಣ್ಯ ಸಂಚಯನಕ್ಕಾಗಿ ಧರ್ಮಸ್ಥಳಕ್ಕೆ […]

ಭಜನೆ ಮೂಲಕ ಆಂತರಿಕ ಹಾಗೂ ಬಾಹ್ಯ ಉನ್ನತಿ ಮಾಡಿ ಆತ್ಮೋನ್ನತಿ ಸಾಧಿಸಬಹುದು: ಪ್ರಮೋದ್‌ ಮಧ್ವರಾಜ್‌

Monday, September 26th, 2016
pramod-madhwaraj

ಬೆಳ್ತಂಗಡಿ: ರಕ್ತವನ್ನು ಬೆವರಾಗಿಸಿ ಕುಣಿದು ಭಜಿಸುವ ಸೇವೆಗೆ ಭಜನೆಯಲ್ಲಿ ಮಾತ್ರ ಅವಕಾಶ ಇರುವುದು. ಭಜನೆ ಮೂಲಕ ಆಂತರಿಕ ಹಾಗೂ ಬಾಹ್ಯ ಉನ್ನತಿ ಮಾಡಿ ಆತ್ಮೋನ್ನತಿ ಸಾಧಿಸಬಹುದು ಎಂದು ಯುವಜನ, ಮೀನುಗಾರಿಕಾ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು. ಅವರು ರವಿವಾರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನ ಪರಿಷತ್‌ ವತಿಯಿಂದ ನಡೆದ 18ನೇ ವರ್ಷದ ಭಜನ ತರಬೇತಿ ಕಮ್ಮಟದ ಸಮಾರೋಪ ಹಾಗೂ ಭಜನೋತ್ಸವದಲ್ಲಿ ಮಾತನಾಡಿದರು. ಅನನ್ಯ ಭಕ್ತಿಯಿಂದ ಮಾತ್ರ ಮನದ ಪರಿವರ್ತನೆ ಸಾಧ್ಯ. ದೇವರ ಓಲೈಕೆಗೆ […]

ಕಟೀಲು ದೇವಿಯ ಬಗ್ಗೆ ಅವಹೇಳನ ಮಾಡಿರುವುದನ್ನು ಖಂಡಿಸಿ ಭಜನೆ ಹಾಗೂ ಸಾಮೂಹಿಕ ಪ್ರಾರ್ಥನೆ

Tuesday, September 6th, 2016
mass-prayers

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಹಾಗೂ ದೇವಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿರುವುದನ್ನು ಖಂಡಿಸಿ ರವಿವಾರ ಭಜನ ತಂಡಗಳಿಂದ ಭಜನೆ ಹಾಗೂ ಸಾಮೂಹಿಕ ಪ್ರಾರ್ಥನೆ ನಡೆಯಿತು. ಎಕ್ಕಾರು ಭಜನ ತಂಡದವರು ಭಜನೆ ಮಾಡುತ್ತ ಪಾದಯಾತ್ರೆ ಮೂಲಕ ಕಟೀಲಿನ ಸರಸ್ವತೀ ಸದನಕ್ಕೆ ಆಗಮಿಸಿದ ಬಳಿಕ ಮಾಣಿಲದ ಶ್ರೀ ಮೋಹನದಾಸ ಸ್ವಾಮಿಜಿಯವರು ಭಜನೆ ಮಾಡುತ್ತ ದೇವಸ್ಥಾನಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಕನ್ಯಾನದ ಶ್ರೀ ಮಹಾಬಲ ಸ್ವಾಮೀಜಿ, ದೇವಸ್ಥಾನದ ಆನುವಂಶಿಕ ಮೊಕ್ತೇಸರರಾದ ವಾಸುದೇವ ಆಸ್ರಣ್ಣ, ಡಾ| ರವೀಂದ್ರನಾಥ […]