ಮಂಗಳಾದೇವಿ ನವರಾತ್ರಿ ಉತ್ಸವದ ಉದ್ಘಾಟನೆ – ವಿಡಿಯೋ

Monday, October 16th, 2023
Mangaladevi

ಮಂಗಳೂರು : ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಅ. 15ರಿಂದ 25ರ ವರೆಗೆ ನವರಾತ್ರಿ ಮಹೋತ್ಸವದ ಉದ್ಘಾಟನೆಯನ್ನು ಅಕ್ಟೊಬರ್ 15ರಂದು ಬೆಳಗ್ಗೆ 9 ಗಂಟೆಗೆ ವಿದ್ವಾನ್ ಪಂಜ ಭಾಸ್ಕರ ಭಟ್ ಅವರು ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಮಂಗಳಾದೇವಿ ದೇವಸ್ಥಾನದ ಮಹತ್ವವನ್ನು ವಿವರಿಸಿದರು. ಬೆಳಿಗ್ಗೆ ಭಜನಾ ಕಾರ್ಯಕ್ರಮದ ಉದ್ಘಾಟನೆ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಕಾರ್ಪೊರೇಟರ್ ಪ್ರೇಮಾನಂದ ಶೆಟ್ಟಿ ನೆರವೇರಿಸಿದರು. ನವರಾತ್ರಿ ಮಹೋತ್ಸವದ ವೈದಿಕ ವಿಧಿ ವಿಧಾನಗಳು ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿ ನೇತೃತ್ವದಲ್ಲಿ […]

ಶ್ರೀ ಮಂಗಳಾದೇವಿ ಅಮ್ಮನ ಶರನ್ನವರಾತ್ರಿ ಮಹೋತ್ಸವ ಶುಭಾರಂಭ

Thursday, October 7th, 2021
Mangaladevi Navaratri

ಮಂಗಳೂರು : ಆಶ್ವಯುಜ ಶುಕ್ಲ ಪ್ರಥಮದಿನ ಪಾಡ್ಯದ ದಿನವಾದ ಗುರುವಾರ ಅಕ್ಟೊಬರ್ 7 ರಿಂದ ಶ್ರೀ ಮಂಗಳಾದೇವಿ ಅಮ್ಮನವರ ಶರನ್ನವರಾತ್ರಿ ಮಹೋತ್ಸವವು ಪ್ರಾರಂಭವಾಗವುದರೊಡನೆ ಶ್ರೀ ಮಹಾಗಣಪತಿ ದೇವರ ಸಾನಿಧ್ಯ, ಮಹಾತಾಯಿಯ ಸನ್ನಿಧಾನದಲ್ಲಿ ದೇವತಾ ಪ್ರಾರ್ಥನೆಯೊಂದಿಗೆ ಕೊಪ್ಪರಿಗೆ ಮುಹೂರ್ತವನ್ನಿಟ್ಟು ನವರಾತ್ರಿ ಉತ್ಸವವು ಉದ್ಘಾಟನೆಯಾಗಿ ಶ್ರೀ ಮಂಗಳಾದೇವಿಯ ಮಂಗಳೂರು ದಸರಾ ಶುಭಾರಂಭ’ಗೊಂಡಿತು. ದಿನಾಂಕ 8’ರ ಶುಕ್ರವಾರದಂದು ಒಂದೇ ದಿನ ಬಿದಿಗೆ- ತದಿಗೆ ಎರಡೂ ತಿಥಿಗಳು ಬೀಳುವುದರಿಂದ ಶರನ್ನವರಾತ್ರಿಯು ಪ್ರಸ್ತುತವಾಗಿ 8′ ದಿನಗಳಿಗೆ ಸೀಮಿತವಾಗಿರುತ್ತದೆ ಅಕ್ಟೋಬರ 8’ರ ಶುಕ್ರವಾರದ ಪ್ರಾತಃಕಾಲ 10.48 ಗಂಟೆಯವರೆಗೆ […]

5 ವಿದ್ಯುತ್‌ ಕಂಬಗಳ ಜೊತೆ, ರಸ್ತೆಗುರುಳಿದ ಟ್ರಾನ್ಸ್‌ಫಾರ್ಮರ್‌

Wednesday, June 16th, 2021
Transformer

ಮಂಗಳೂರು :  ನಿರಂತರವಾಗಿ ಸುರಿಯುತ್ತಿರುವ ಮಳೆ,  ಭಾರಿ ಗಾಳಿಯಿಂದ  ಬುಧವಾರ ಮಧ್ಯಾಹ್ನ ಮಂಗಳಾದೇವಿ ಬಳಿ ಟ್ರಾನ್ಸ್‌ಫಾರ್ಮರ್‌ ಒಂದು  ರಸ್ತೆಗೆ ಬಿದ್ದಿದ್ದು, ಅಕ್ಕಪಕ್ಕದಲ್ಲಿದ್ದ 5 ವಿದ್ಯುತ್‌ ಕಂಬಗಳೂ ತುಂಡಾಗಿವೆ. ರಸ್ತೆಯಲ್ಲಿ ವಾಹನ ಸಂಚಾರ ಇಲ್ಲದಿದ್ದುದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಘಟನೆಯಿಂದ ಮಂಗಳಾದೇವಿ ವ್ಯಾಪ್ತಿಯಲ್ಲಿ ವಿದ್ಯುತ್‌ ವ್ಯತ್ಯಯವುಂಟಾಗಿದೆ. ಸ್ಥಳಕ್ಕೆ ಮೆಸ್ಕಾಂ ಸಿಬ್ಬಂದಿ ಧಾವಿಸಿ, ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ. ಟ್ರಾನ್ಸ್‌ಫಾರ್ಮರ್‌ ಇದ್ದ ಜಾಗದಲ್ಲಿ ಮರಗಳೂ ಇದ್ದು, ರಸ್ತೆಯ ಇನ್ನೊಂದು ಬದಿಗೆ ಸ್ಥಳಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕ್ರೇಜಿ ಗೈಸ್ ಮಂಕಿಸ್ಟ್ಯಾಂಡ್ ಆಶ್ರಯದಲ್ಲಿ ಆಯುಷ್ಮಾನ್ ಕಾರ್ಡ್ ನೊಂದಣಿ ಹಾಗೂ ವಿತರಣೆ

Sunday, October 11th, 2020
crazy guys

ಮಂಗಳೂರು  : ಕ್ರೇಜಿ ಗೈಸ್ ಮಂಕಿಸ್ಟ್ಯಾಂಡ್ ಮಂಗಳಾದೇವಿ ಇದರ ಆಶ್ರಯದಲ್ಲಿ ಆಯುಷ್ಮಾನ್ ಕಾರ್ಡ್ ನೊಂದಣಿ ಹಾಗೂ ವಿತರಣೆಯ ಶಿಬಿರವನ್ನು ಶಾಸಕ ವೇದವ್ಯಾಸ ಕಾಮತ್ ರವರು  ಅಕ್ಟೋಬರ್  11, ರವಿವಾರ ಮಂಗಳಾದೇವಿ ಬಳಿ ಇರುವ ಅಮರ್ ಆಳ್ವಾ ರಸ್ತೆಯ ಮಂಕಿಸ್ಟ್ಯಾಂಡ್  ಗ್ರೌಂಡ್ ನಲ್ಲಿ ಉದ್ಘಾಟಿಸಿದರು. ಈ ಸಂಧರ್ಭದಲ್ಲಿ ಮಹಾನಗರ ಪಾಲಿಕೆಯ ಮುಖ್ಯ ಸಚೇತರಕರಾದ ಪ್ರೇಮಾನಂದ ಶೆಟ್ಟಿ ಜನಪದ ಪರಿಷತ್ ನ ಜಿಲ್ಲಾಧ್ಯಕ್ಷರಾದ ಪ್ರವೀಣ್ ಕೊಡಿಯಲ್ ಬೈಲ್ ಹಾಗೂ ಕ್ರೇಜಿ ಗೈಸ್ ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಬೆಳಗ್ಗೆಯಿಂದ ಸಂಜೆ […]

ಮಂಗಳಾದೇವಿಯಲ್ಲಿ ಮಾರ್ಚ್ 12ರಿಂದ ಜಾತ್ರಾ ಮಹೋತ್ಸವ

Tuesday, March 10th, 2020
mangaladevi

ಮಂಗಳೂರು : ಇತಿಹಾಸ ಪ್ರಸಿದ್ಧ ಮಹತೋಭಾರ ಮಂಗಳಾದೇವಿ ದೇವಸ್ಥಾನದಲ್ಲಿ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಮಾ. 12, 2020 ಗುರುವಾರದಿಂದ ಮಾ. 17, 2020ನೇ ಮಂಗಳವಾರದವರೆಗೆ ಜಾತ್ರಾ ಮಹೋತ್ಸವ ಜರಗಲಿರುವುದು. ಮಾ.16 ಸೋಮವಾರ ಮಧ್ಯಾಹ್ನ ಗಂಟೆ 12 ಕ್ಕೆ ರಥಾರೋಹಣ ನಂತರ ಅನ್ನದಾನ ಸೇವೆ ರಾತ್ರಿ 7 ರಿಂದ ರಥೋತ್ಸವ, ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಭೂತಬಲಿ, ಕವಾಟ ಬಂಧನ, ಶಯನ ಮೊದಲಾದ ಧಾರ್ಮಿಕ ವಿಧಿಗಳು ನಡೆಯಲಿದೆ. ಮಾ.17ರಂದು ತುಲಾಭಾರ ಸಂಜೆ 7ಕ್ಕೆ ಬಳಿ […]

ಶ್ರೀ ಮಂಗಳಾದೇವಿ ಸೇವಾ ಸಮಿತಿ, (ರಿ.) ಮಂಗಳಾದೇವಿ, ತಿರುಗುವ ಗುರ್ಜಿಯ ದೀಪೋತ್ಸವ ತಾ 20.11.2019 ಸಂಜೆ 6 ರಿಂದ

Wednesday, November 20th, 2019
ಶ್ರೀ ಮಂಗಳಾದೇವಿ ಸೇವಾ ಸಮಿತಿ, (ರಿ.) ಮಂಗಳಾದೇವಿ, ತಿರುಗುವ ಗುರ್ಜಿಯ ದೀಪೋತ್ಸವ ತಾ 20.11.2019 ಸಂಜೆ 6 ರಿಂದ

ಪ್ರೇಮಾನಂದ ಶೆಟ್ಟಿ ಮಂಗಳಾದೇವಿ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿ ಸ್ಪರ್ಧೆ

Monday, November 11th, 2019
premanada shetty

ಮಂಗಳೂರು : ಮಂಗಳೂರು ಮಹಾನಗರಪಾಲಿಕೆಯಲ್ಲಿ ಪ್ರತಿಪಕ್ಷ ನಾಯಕನಾಗಿದ್ದ ಪ್ರೇಮಾನಂದ ಶೆಟ್ಟಿ ಮಂಗಳಾದೇವಿ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಈಗಾಗಲೇ ಕಾರ್ಪೋರೇಟರ್ ಆಗಿ ಜನಾನುರಾಗಿಯಾಗಿದ್ದಾರೆ ಪ್ರೇಮಾನಂದ ಶೆಟ್ಟಿ. ಮಹಾನಗರ ಪಾಲಿಕೆಯ 56ನೇ ವಾರ್ಡಿನಲ್ಲಿ ಕಳೆದ ಐದು ವರ್ಷಗಳಲ್ಲಿ ಸುಮಾರು ಆರು ಕೋಟಿ ರೂಪಾಯಿಗೆ ಹೆಚ್ಚಿನ ಮೊತ್ತದ ಅನುದಾನದಲ್ಲಿ ವಿವಿಧ ಅಬಿವೃದ್ಧಿ ಕೆಲಸಗಳು ನಡೆದಿವೆ. ಈ ವಾರ್ಡ್‌ನ ಪ್ರಮುಖ ರಸ್ತೆಗಳು ಕಾಂಕ್ರೀಟ್‌ಮಾಡಲಾಗಿದ್ದು ಕೆಲವೊಂದು ಒಳರಸ್ತೆಗಳಿಗೂ ಹಿಂದೆಯಷ್ಟೇ ಡಾಮರೀಕರಣ ಮಾಡಲಾಗಿದೆ. ಸುಭಾಷ್‌ನಗರ-ಮಂಗಳಾದೇವಿ ದೇವಸ್ಥಾನ ರಸ್ತೆ ಕಾಂಕ್ರೀಟಿಕರಣ, ಶಿವನಗರ ಬಡಾವಣೆ ಮುಖ್ಯ ರಸ್ತೆ […]

ಪಾಂಡೇಶ್ವರದಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ನಾಲ್ಕು ವಿದ್ಯುತ್ ಕಂಬಗಳು..!

Thursday, August 16th, 2018
pandeshwara-2

ಮಂಗಳೂರು: ಮಂಗಳೂರಿನಲ್ಲಿ ಸುರಿದ ಭಾರಿ ಗಾಳಿ ಸಹಿತ ಮಳೆಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಆವರಣದ ಒಳಗೆ ಇದ್ದ ಮರ ಧರೆಗುರುಳಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಕಂಬದ ಮೇಲೆ ಬಿದ್ದ ಪರಿಣಾಮ ನಾಲ್ಕು ವಿದ್ಯುತ್ ಕಂಬಗಳು ಉರುಳಿ ನಗರದ ಹಲವೆಡೆ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಈ ಸಂದರ್ಭ ಪಾಂಡೇಶ್ವರ ಮಂಗಳಾದೇವಿ ರಸ್ತೆಯ ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು. ಈ ವೇಳೆ ಜೋರಾಗಿ ಗಾಳಿ ಮಳೆ ಇದ್ದುದ್ದರಿಂದ ಯಾವುದೇ ಅನಾಹುತ  ಸಂಭವಿಸಲಿಲ್ಲ.   

ಕಲಾ ಪ್ರಕಾರವು ಭಾರತೀಯ ಸಂಸ್ಕ್ರತಿಯಲ್ಲಿ ಹಿರಿತನವಾದವು -ಪಿ.ಜಯರಾಮ ಭಟ್

Wednesday, March 7th, 2018
mangaladevi

ಮಂಗಳೂರು:ಭಾರತೀಯ ಕಲಾ ಪ್ರಕಾರಗಳಲ್ಲಿ ಸಿರಿವಂತಿಕೆಯ ಸಂಸ್ಕ್ರತಿ ಇದ್ದು ಈ ಎಲ್ಲಾ ಕಲಾ ಪ್ರಕಾರಗಳಲ್ಲಿ ಅತ್ಯಂತ ಹಿರಿತನವಾದ ಸಾಂಸ್ಕೃತಿಯ ಕಲೆಯನ್ನು ನಾವು ಗೌರವಿಸಲೇಬೇಕು ಎಂದು ಕರ್ನಾಟಕ ಬ್ಯಾಂಕಿನ ಅಧ್ಯಕ್ಷ ಪಿ.ಜಯರಾಮ ಭಟ್ ಹೇಳಿದರು. ಅವರು ಮಂಗಳೂರಿನ ಮಂಗಳಾದೇವಿ ದೇವಳದ ವರ್ಷಾವಧಿ ಜಾತ್ರಾ ಮಹೋತ್ಸವ ಸಂದರ್ಭ ಜರಗಿದ ಸಾಂಸ್ಕ್ರತಿಯ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು. ಆರು ದಿನಗಳ ಈ ಜಾತ್ರಾ ಮಹೋತ್ಸವದ ಸಂದರ್ಭ ಪ್ರತಿದಿನವೂ ಅತ್ಯಂತ ಶ್ರದ್ಧಾ ಭಕ್ತಿಯಿಂದ ಕೂಡಿದ ಸಾಂಸ್ಕೃತಿಯ ಕಾರ್ಯಕ್ರಮಗಳು ಮೂಡಿಬರಲಿದ್ದು ಶ್ರೀ ಮಂಗಳಾಂಬಿಕೆಯ ಸನ್ನಿದಾನ ಕಲಾ ಪ್ರಕಾರಕ್ಕೆ […]

ಸೂಪರ್‌‌ ಮೂನ್‌ ಎಫೆಕ್ಟ್‌… ದ.ಕ ಜಿಲ್ಲೆಯ ದೇಗುಲಗಳ ದರ್ಶನ ಸಮಯ ಬದಲು

Wednesday, January 31st, 2018
super-moon

ಮಂಗಳೂರು: ಪೂರ್ಣ ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ದೇವಸ್ಥಾನಗಳಾದ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳ ದೇವಸ್ಥಾನದಲ್ಲಿ ದೇವರ ದರ್ಶನದಲ್ಲಿ ಸಮಯ ಬದಲಾವಣೆ ಮಾಡಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಬೆಳಗ್ಗೆ 6.30ರಿಂದ 9 ಗಂಟೆಯವರೆಗೆ ಪೂಜೆಗೆ ಅವಕಾಶ ಕಲ್ಪಿಸಲಾಗಿತ್ತು. ಬೆಳಗ್ಗೆ 9ರಿಂದ ರಾತ್ರಿ 8.30ರವರೆಗೆ ದೇವಸ್ಥಾನದ ಬಾಗಿಲು ಮುಚ್ಚಿರುತ್ತದೆ. ಸಾಮಾನ್ಯವಾಗಿ ನಡೆಯುವ ಮಧ್ಯಾಹ್ನದ ಪೂಜೆಯೂ ಗ್ರಹಣದಿಂದಾಗಿ ಬೆಳಗ್ಗೆಯೇ ದೇವರಿಗೆ ಸಮರ್ಪಣೆಗೊಂಡಿದೆ. ಧರ್ಮಸ್ಥಳದಲ್ಲೂ ಮಧ್ಯಾಹ್ನ 2.30ರಿಂದ ರಾತ್ರಿ 9 ಗಂಟೆಯವರೆಗೆ ದೇವರ ದರ್ಶನಕ್ಕೆ ಅವಕಾಶವಿಲ್ಲ. ರಾತ್ರಿ […]