ಮಂಗಳೂರು ವಿವಿ: ಬೋಧಕರ ಪುನಶ್ಚೇತನಾ ಕಾರ್ಯಾಗಾರ ಮುಕ್ತಾಯ

Wednesday, March 6th, 2024
university

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಗಣಕ ವಿಜ್ಞಾನ ವಿಭಾಗದಲ್ಲಿ, ಎ.ಐ.ಸಿ.ಟಿ.ಇ. – ಎ.ಟಿ.ಎ.ಎಲ್ ಸಹಯೋಗದೊಂದಿಗೆ ಆಯೋಜಿಸಲಾದ, ಒಂದು ವಾರದ “ಎಲಿವೇಟಿಂಗ್ ಹೆಲ್ತ್ ಕೇರ್ ಥ್ರೂ ಡೀಪ್ ಲರ್ನಿಂಗ್ : ಇನ್ನೋವೇಶನ್ಸ್ ಇನ್ ಮೆಡಿಕಲ್ ಇಮೇಜ್ ಪ್ರೊಸೆಸಿಂಗ್” ಎಂಬ ಬೋಧಕರ ಪುನಶ್ಚಾತನ ಕಾರ್ಯಾಗಾರದ ಸಮಾರೋಪ ಸಮಾರಂಭ ಐ.ಬಿ.ಎಂ. ಸೆಂಟರ್ ಆಫ್ ಎಕ್ಸಲೆನ್ಸ್ ಹಾಲ್ ನಲ್ಲಿ ಇತ್ತೀಚೆಗೆ ನಡೆಯಿತು. ಮುಖ್ಯ ಅತಿಥಿ, ಸಂಪನ್ಮೂಲ ವ್ಯಕ್ತಿ ಡಾ. ದಿನೇಶ್ ಆರ್ (ಸ್ಯಾಮ್ ಸಂಗ್, ಬೆಂಗಳೂರು) ಮಾತನಾಡಿ, ಕೃತಕ ಬುದ್ದಿಮತ್ತೆ ಹಾಗೂ ಯಂತ್ರಕಲಿಕೆ […]

ಮಂಗಳೂರು ವಿವಿಯಲ್ಲಿ ಅಂತರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ

Thursday, September 21st, 2023
mangalore-university

ಮಂಗಳೂರು : ಯಾವುದೇ ಸಂಶೋಧನೆಯ ಕ್ಷೇತ್ರದಲ್ಲಿ ಯಶಸ್ಸನ್ನು ಕಾಣಬೇಕಾದರೆ ಆ ಸಂಶೋಧನಾ ಕಾರ್ಯದ ಹಿಂದೆ‌ ನಮ್ಮ ತಾಳ್ಮೆ, ಉತ್ಸಾಹ, ಕಠಿಣ ಪರಿಶ್ರಮ ಪ್ರಮುಖ ಪಾತ್ರವಹಿಸುತ್ತದೆ. ವಿಜ್ಞಾನ ಹಾಗೂ ಇಂದಿನ‌ ಆಧುನಿಕ ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ‌ ಯುವ ಸಮುದಾಯ ಹೆಚ್ಷೆಚ್ಷು ತೊಡಗಿಸಿಕೊಂಡು ಹೊಸ ಹೊಸ ಆವಿಷ್ಕಾರದೊಂದಿಗೆ ಸಮಾಜಕ್ಕೆ‌ ತಮ್ಮದೇ ಆದ ಕೊಡುಗೆ‌ ನೀಡಬೇಕಿದೆ, ಎಂದು ಐಐಟಿಎಂ ಚೆನ್ನೈ ಸಂಸ್ಥೆಯ ಪ್ರಾಧ್ಯಾಪಕ ಪ್ರೊ. ಎ.ಎಸ್.ರಾಮಚಂದ್ರರಾವ್ ಅವರು ಹೇಳಿದರು. ಅವರು ಮಂಗಳೂರು ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಆಶ್ರಯದಲ್ಲಿ ನಡೆಯಲಿರುವ ‘ಭೌತಶಾಸ್ತ್ರ ಮತ್ತು ನ್ಯಾನೋತಂತ್ರಜ್ಞಾನ’ […]

ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ, ಮಂಗಳೂರು – ವರ್ಷಾವಧಿ ಉತ್ಸವ

Saturday, March 19th, 2022
mangaladevi-jatre

ಮಂಗಳೂರು-ಮೊಂಟೆಪದವು ಮಾರ್ಗವಾಗಿ ಮುಡಿಪುವಿಗೆ ಸರಕಾರಿ ಬಸ್ ಸಂಚಾರ ಆರಂಭ

Thursday, August 26th, 2021
ksrtc-bus

ಮಂಗಳೂರು :  ಮಂಗಳೂರು-ಮೊಂಟೆಪದವು ಮಾರ್ಗವಾಗಿ ಮುಡಿಪುವಿಗೆ ಸರಕಾರಿ ಬಸ್ ಸಂಚಾರ ಆರಂಭಿಸಿದ ಹಿನ್ನಲೆಯಲ್ಲಿ ಮೊಂಟೆಪದವು ನಾಗರಿಕರು ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು. ಮಂಗಳೂರಿನಿಂದ ನಾಟೆಕಲ್-ಮೊಂಟೆಪದವು ಮಾರ್ಗವಾಗಿ ಮುಡಿಪುವಿಗೆ ಸರಕಾರಿ ಬಸ್ ಒದಗಿಸುವಂತೆ ಸುಮಾರು 10 ವರ್ಷಗಳಿಂದ ಈ ಭಾಗದ ಜನರು ಒತ್ತಾಯಿಸುತ್ತಾ ಬಂದಿದ್ದರಲ್ಲದೆ, ಇಲ್ಲಿನ ಸಂಘ ಸಂಸ್ಥೆಗಳು ಹಲವು ಬಾರಿ ಹೋರಾಟವನ್ನೂ ನಡೆಸಿತ್ತು. ಸಂಬಂಧಪಟ್ಟವರಿಗೆ ಮನವಿಯನ್ನೂ ಸಲ್ಲಿಸಿತ್ತು. 10 ವರ್ಷದ ಹೋರಾಟದ ಫಲವಾಗಿ ಸರಕಾರಿ ಬಸ್ ಓಡಾಟ ಆರಂಭಿಸಿದ ಹಿನ್ನೆಲೆಯಲ್ಲಿ ನಾಗರಿಕರು ಸಂಭ್ರಮಿಸಿದರು.

ಗುದನಾಳದಲ್ಲಿ 20,89 ಲಕ್ಷ ಮೌಲ್ಯದ ಅಕ್ರಮ ಚಿನ್ನ ಸಾಗಾಟ, ಆರೋಪಿ ವಶಕ್ಕೆ

Friday, July 2nd, 2021
Illigal Gold

ಮಂಗಳೂರು : ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 20,89,800 ರೂ. ಮೌಲ್ಯದ 430 ಗ್ರಾಂ ಅಕ್ರಮ ಚಿನ್ನ ಸಾಗಾಟವನ್ನು ಕಸ್ಟಮ್ಸ್ ಅಧಿಕಾರಿಗಳು ಶುಕ್ರವಾರ ಪತ್ತೆ ಮಾಡಿದ್ದಾರೆ. ಕಾಸರಗೋಡು ನಿವಾಸಿ ದುಬಾಯಿಂದ ಏರ್ ಇಂಡಿಯಾ ವಿಮಾನದಲ್ಲಿ ಆಗಮಿಸಿದ್ದು, ಈತ ಚಿನ್ನದ ಪೌಡರನ್ನು ಗಮ್ ಬೆರೆಸಿ ಗುದನಾಳದೊಳಗಿಟ್ಟು ಸಾಗಾಟ ಮಾಡಿದ್ದ. ಚಿನ್ನ ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಕಸ್ಟಮ್ಸ್‌ನ ಉಪ ಆಯುಕ್ತ ಪ್ರವೀಣ್ ಕಂಡಿ, ಅಧಿಕಾರಿಗಳಾದ ರಾಕೇಶ್‌ಕುಮಾರ್, ವಿಕಾಸ್‌ಕುಮಾರ್, ಬಿಕ್ರಮ್ […]

ಮಂಗಳೂರು ವಿಮಾನ ನಿಲ್ದಾಣ ಸಂಪರ್ಕಿಸುವ ಸೇತುವೆ ಕುಸಿತ, ವಾಹನ ಸಂಚಾರ ಬಂದ್

Tuesday, June 15th, 2021
palguni-bridge

ಮಂಗಳೂರು : ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ, ಕಟೀಲು, ಕಿನ್ನಿಗೋಳಿಗೆ  ಸಂಪರ್ಕ ಕಲ್ಪಿಸುವ ಪಲ್ಗುಣಿ ನದಿ ಸೇತುವೆ ಕುಸಿದ ಘಟನೆ ಮಂಗಳವಾರ ಮುಂಜಾನೆ ನಡೆದಿದೆ. ಸೇತುವೆಯ ಒಂದು ಭಾಗದ ಪಿಲ್ಲರ್ ಕುಸಿದು ಸೇತುವೆಗೆ ಹಾನಿಯಾಗಿದ್ದು, ರಸ್ತೆ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಸೇತುವೆ ಮಧ್ಯರಾತ್ರಿ 3 ಗಂಟೆಗೆ ಕುಸಿದಿದೆ. ಸೇತುವೆ ಸದ್ಯ ರಸ್ತೆ ಸಂಚಾರಕ್ಕೆ ಸೂಕ್ತವಲ್ಲದ ಕಾರಣ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ವಿಮಾನ ನಿಲ್ದಾಣಕ್ಕೆ ಉಡುಪಿಯಿಂದ ಬರುವವರು ಮುಲ್ಕಿ, ಕಿನ್ನಿಗೋಳಿ, ಕಟೀಲು, ಬಜ್ಪೆ ಮೂಲಕ ಬರಬಹುದು. ಕಾಸರಗೋಡು, […]

ಮಂಗಳೂರು ಬಿಎಎಸ್‍ಎಫ್ ಕಂಪೆನಿಯಲ್ಲಿ ರಾಸಾಯನಿಕ ದುರಂತ : ಅಣುಕು ಪ್ರದರ್ಶನ

Saturday, March 20th, 2021
BSF

ಮಂಗಳೂರು : ನಗರದ ಹೊರವಲಯದಲ್ಲಿರುವ ಬಿಎಎಸ್‍ಎಫ್ ರಾಸಾಯನಿಕ ಕಾರ್ಖಾನೆಗೆ ಶನಿವಾರ ಎಂದಿನಂತೆ ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿಗಳು, ಕೆಲವೇ ಗಂಟೆಗಳಲ್ಲಿ ಘಟಕದಲ್ಲಿ ತಾಪಮಾನ ಹೆಚ್ಚಾಗಿ ರಾಸಾಯನಿಕ ಸೋರಿಕೆ ಉಂಟಾಗಿರುವುದನ್ನು ಗಮನಿಸಿ , ನೀರು ಸಿಂಪಡಿಸತೊಡಗಿದರು. ಆದರೆ ಎರಡು ರಾಸಾಯನಿಕ ಘಟಕದ ಸ್ಪಿಂಕ್ಲರ್ ಗಳಿಂದ ನೀರು ಚಿಮ್ಮತೊಡಗಿತು. ಅಪಾಯದ ಸೂಚನೆಗಾಗಿ ಕಂಪೆನಿ ಆವರಣದಲ್ಲಿ ಅಳವಡಿಸಿದ್ದ ಸೈರನ್ ಮೊಳಗಿ, ಕಾರ್ಮಿಕರಿಗೆ ಎಚ್ಚರಿಕೆ ನೀಡಿತು. ತಕ್ಷಣವೇ ಹೊರಬಂದ ಸಿಬ್ಬಂದಿಗಳಲ್ಲಿ ಆತಂಕ ಮನೆ ಮಾಡಿತ್ತು. ಘಟಕದಿಂದ ಕೊನೆಯದಾಗಿ ಹೊರಬಂದ ಕಾರ್ಮಿಕ ತೀವ್ರ ಅಸ್ವಸ್ಥನಾಗಿ ಬಿದ್ದಾಗ ವೈದ್ಯಕೀಯ […]

ಮಂಗಳೂರು – ಮಂತ್ರಾಲಯ ಸ್ಲೀಪರ್ ಕ್ಲಾಸ್ ಬಸ್ ಸೇವೆಗೆ ಶಾಸಕ ಡಿ.ವೇದವ್ಯಾಸ ಕಾಮತ್‌ ಚಾಲನೆ

Thursday, January 14th, 2021
Mantralaya Bus

ಮಂಗಳೂರು: ಮಂಗಳೂರಿನಿಂದ ವಿವಿಧ ಮಾರ್ಗಗಳಿಗೆ ನೂತನವಾಗಿ ಬಸ್‌ ಕಾರ್ಯಾಚರಣೆ ಆರಂಭಗೊಂಡಿದ್ದು, ಮಂಗಳೂರಿನಿಂದ ರಾತ್ರಿ 8.50ಕ್ಕೆ ಹೊರಟು ಹಾಸನ ಬೆಂಗಳೂರು ಮಾರ್ಗವಾಗಿ ತಿರುಪತಿಗೆ ಕ್ಲಬ್‌ ಕ್ಲಾಸ್‌ ವೋಲ್ವೋ, ಮಂಗಳೂರಿನಿಂದ ರಾತ್ರಿ 9 ಗಂಟೆಗೆ ದೇರಳಕಟ್ಟೆ, ಕಾಸರಗೋಡು, ಕೋಜಿಕೋಡ್‌ ಮಾರ್ಗವಾಗಿ ಎರ್ನಾಕುಲಂಗೆ ಕ್ಲಬ್‌ ಕ್ಲಾಸ್‌ ವೋಲ್ವೋ, ಮಂಗಳೂರಿನಿಂದ ರಾತ್ರಿ 8.01ಕ್ಕೆ ಕುಂದಾಪುರ, ಹುಬ್ಬಳ್ಳಿ ಮಾರ್ಗವಾಗಿ ಬೆಳಗಾವಿಗೆ ನಾನ್‌ ಎಸಿ ಸ್ಲೀಪರ್‌, ಮಂಗಳೂರು ಬಸ್‌ ನಿಲ್ದಾಣದಿಂದ ರಾತ್ರಿ 8.01ಕ್ಕೆ ಕುಂದಾಪುರ, ತೀರ್ಥಹಳ್ಳಿ, ಶಿವಮೊಗ್ಗ ಮಾರ್ಗವಾಗಿ ರಾಯಚೂರಿಗೆ ನಾನ್‌ ಎಸಿ ಸ್ಲೀಪರ್‌, ಮಂಗಳೂರಿನಿಂದ […]

ಮಂಗಳೂರು ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹ ಕ್ರಿಸ್ಮಸ್ ಸಂದೇಶ

Wednesday, December 23rd, 2020
Bhisop

ಮಂಗಳೂರು   : ಕ್ರಿಸ್ಮಸ್ ಒಂದು ಮಹತ್ತರ ಸತ್ಯವನ್ನು ನಮ್ಮ ಮುಂದೆ ತೆರೆದಿಡುತ್ತದೆ. ದೇವರು ಮಾನವ ಮಗುವಾಗಲು ಇಚ್ಛಿಸಿದ್ದಾರೆ. ಇದು ಬೈಬಲ್‌ನಲ್ಲಿ ಯೆಶಾಯಾ ಪ್ರವಾದಿ ಮುಂದಾಗಿ ತಿಳಿಸಿದಂತೆ ನೆರವೇರಿದೆ: “ಇಗೊ ಒಂದು ಮಗುವು ನಮಗೆ ಜನಿಸಿದೆ, ಒಬ್ಬ ವರಪುತ್ರನನ್ನು ನಮಗೆ ಕೊಡಲಾಗಿದೆ (ಯೆಶಾಚಿಯಾ  ೯:೬). ಮಗುವಿನ ಇರುವಿಕೆ ನಮ್ಮನ್ನು ತನ್ನತ್ತ ಸೆಳೆಯುತ್ತದೆ. ಮಗು ನಮ್ಮತ್ತ ಬರಲಿಚ್ಚಿಸುವಾಗ, ನಮ್ಮೊಡನೆ ಆಟವಾಡುವಾಗ ನಾವು ಹರ್ಷಭರಿತರಾಗುತ್ತೇವೆ. ದೇವರೆಂದರೆ ಒಂದು ವಿಚಿತ್ರ ವಿಸ್ಮಯ, ಭಯಂಕರ ವಾಸ್ತವ ಎಂಬುದಾಗಿ ಹೇಳಲಾಗುತ್ತಿತ್ತು. ಆದರೆ ಈಗ ಯೇಸುವು ದೇವರು […]

ಮಂಗಳೂರು ವ್ಯಾಪ್ತಿಯ ಎಂಟು ಪೊಲೀಸರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರದಾನ

Friday, November 20th, 2020
Police Medal

ಮಂಗಳೂರು : ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಮತ್ತು ಎಸ್ಪಿ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಮತ್ತು ಸಲ್ಲಿಸಿದ ಎಂಟು ಮಂದಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಶುಕ್ರವಾರ ಬೆಂಗಳೂರಿನಲ್ಲಿ ಪ್ರದಾನ ಮಾಡಲಾಯಿತು. ಪಶ್ಚಿಮ ವಲಯದ ಬೆರಳಚ್ಚು ವಿಭಾಗದ ಡಿವೈಎಸ್ಪಿ ಗೌರೀಶ್ ಎ.ಸಿ., ಪಣಂಬೂರು ಪೊಲೀಸ್ ಇನ್‌ಸ್ಪೆಕ್ಟರ್ ಆಗಿದ್ದು, ಪ್ರಸ್ತುತ ಬೆಂಗಳೂರು ವಿವೇಕ ನಗರ ಇನ್‌ಸ್ಪೆಕ್ಟರ್ ಆಗಿರುವ ರಫೀಕ್ ಕೆ.ಎಂ., ಸಿಸಿಬಿ ಎಎಸ್‌ಐ ಆಗಿರುವ ಹರೀಶ್ ಪದವಿನಂಗಡಿ, ಎನ್‌ಸಿಪಿಎಸ್‌ನ ಚಂದ್ರಶೇಖರ್, ಡಿಸಿಐಬಿನ ಉದಯ ರೈ ಮಂದಾರ, ಸಿಎಆರ್ ಹೆಡ್ ಕಾನ್‌ಸ್ಟೇಬಲ್ […]