ಮಂಗಳೂರಿನಲ್ಲಿ ನಾಯಿ ಸಾಕಬೇಕಾದರೆ ನೆರೆಹೊರೆಯವರಿಂದ ನಿರಾಕ್ಷೇಪಣಾ ಪತ್ರ ಅಗತ್ಯ

Monday, November 27th, 2023
ಮಂಗಳೂರಿನಲ್ಲಿ ನಾಯಿ ಸಾಕಬೇಕಾದರೆ ನೆರೆಹೊರೆಯವರಿಂದ ನಿರಾಕ್ಷೇಪಣಾ ಪತ್ರ ಅಗತ್ಯ

ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ 60 ವಾರ್ಡ್‌ಗಳಲ್ಲಿ ಬೀದಿ ನಾಯಿ ಗಳ ಹಾವಳಿಗಳು ಹೆಚ್ಚಾಗಿದ್ದು ಬೀದಿ ನಾಯಿಗಳಿಂದ ಕಡಿತಕ್ಕೊಳಗಾಗುವವರ ಸಂಖ್ಯೆಯೂ ಆಧಿಕವಾಗಿರುತ್ತದೆ. ನಗರದಲ್ಲಿ ರೇಬಿಸ್‌ಹರಡುವ ಸಂಭವ ಹೆಚ್ಚಾಗಿರುತ್ತದೆ. ಈ ಎಲ್ಲ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಾಲಿಕೆಯು ನಗರದಲ್ಲಿ ಸಾಕು ನಾಯಿಗಳಿಗೆ ಪರವಾನಿಗೆ ಪಡೆಯುವಂತೆ ಸೂಚಿಸಿದೆ. ಸಾರ್ವಜನಿಕರು ತಮ್ಮ ಸಾಕು ನಾಯಿಗಳಿಗೆ ಪಾಲಿಕೆಯಿಂದ ಪರವಾನಿಗೆ ಪಡೆಯಲು ಅರ್ಜಿ ಪ್ರತಿ ಪಡೆದುಕೊಳ್ಳಬೇಕು. ಸಾಕು ನಾಯಿಗೆ ನೀಡಲಾಗಿರುವ ಲಸಿಕಾ ದಾಖಲೆ, ಮಾಲೀಕರ ಆಧಾರ್ ಕಾರ್ಡ್, ನೆರೆಹೊರೆಯವರಿಂದ ನಿರಾಕ್ಷೇಪಣಾ ಪತ್ರ, ಸಾಕು […]

ಮಂಗಳೂರು ಮಹಾನಗರಪಾಲಿಕೆಯ ಬೋಳೂರು ಸ್ಮಶಾನದಲ್ಲಿ ವಿದ್ಯುತ್ ಚಿತಾಗಾರ ಕಾರ್ಯಾರಂಭ

Saturday, June 19th, 2021
crematorium

ಮಂಗಳೂರು : ಮಹಾನಗರಪಾಲಿಕೆ ವ್ಯಾಪ್ತಿಯೊಳಗೆ ಕೋವಿಡ್ ಹಾಗು ಇತರೆ ಕಾರಣಗಳಿಂದ ಮೃತಪಟ್ಟ ಶವಗಳ ಅಂತ್ಯಕ್ರಿಯೆಗಾಗಿ ಮನಪಾ ಅಧೀನದ ಬೋಳೂರು ಸ್ಮಶಾನದಲ್ಲಿ ಸರ್ಕಾರದ ಅನುದಾನದಡಿ ರೂ. 71.00 ಲಕ್ಷ ವೆಚ್ಚದಲ್ಲಿ ವಿದ್ಯುತ್ ಚಿತಾಗಾರವನ್ನು ಅಭಿವೃದ್ದಿಪಡಿಸುವ ಕಾಮಗಾರಿಯನ್ನು ಮಂಗಳೂರು ಮಹಾನಗರಪಾಲಿಕೆ ವತಿಯಿಂದ ಕೈಗೆತ್ತಿಕೊಂಡಿದ್ದು,  ಪ್ರಸ್ತುತ 2 ಸಂಖ್ಯೆಯ ವಿದ್ಯುತ್ ಕುಲುಮೆ (Furnace) ಯನ್ನು ಅಭಿವೃದ್ದಿಪಡಿಸಲಾಗುತ್ತಿದ್ದು, ಈ ಪೈಕಿ ಈಗಾಗಲೇ 1 ವಿದ್ಯುತ್ ಕುಲುಮೆ (Furnace) ಯ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಉಪಯೋಗಕ್ಕೆ ಸಿದ್ಧವಾಗಿದ್ದು, ಇನ್ನೊಂದು ವಿದ್ಯುತ್ ಕುಲುಮೆ (Furnace) ಯು […]

ಬೀದಿ ಬದಿ ವ್ಯಾಪಾರಿಗಳಿಗೆ ಕೊರೊನಾ ಲಸಿಕೆ ನೀಡಿದ ಮಂಗಳೂರು ಮಹಾನಗರಪಾಲಿಕೆ

Wednesday, June 9th, 2021
street-vendors

ಮಂಗಳೂರು :  ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿರುವ ಬೀದಿ ಬದಿ ವ್ಯಾಪಾರಸ್ಥರಿಗೆ ಕೋರೊನಾ ನಿಯಂತ್ರಣ ಲಸಿಕೆ ನೀಡುವ ಕಾಯ೯ಕ್ರಮವು ಬುಧವಾರದಂದು ಜರಗಿದ್ದು ಸದ್ರಿ ಕಾಯ೯ಕ್ರಮಕ್ಕೆ ಮೇಯರ್ ಪ್ರೇಮಾನಂದ ಶೆಟ್ಟಿಯವರು ಚಾಲನೆ ನೀಡಿದರು. ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕಾಯ೯ ನಿವ೯ಹಿಸುವ ಎಲ್ಲಾ ಬೀದಿ ಬದಿ ವ್ಯಾಪಾರಸ್ಥರಿಗೆ ಸರಕಾರದ ಮಾಗ೯ಸೂಚಿಯಂತೆ ಲಸಿಕೆ ಕಾಯ೯ಕ್ರಮವು ಪಾಲಿಕೆಯ ಕುದ್ಮುಲ್ ರಂಗ ರಾವ್ ಮಿನಿ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದ್ದು, ಸುಮಾರು 200 ಮಂದಿ ಬೀದಿ ಬದಿ ವ್ಯಾಪಾರಸ್ಥರಿಗೆ ಲಸಿಕೆಯನ್ನು ನೀಡಲು ವ್ಯವಸ್ಥೆ ಮಾಡಲಾಗಿತ್ತು. ಕಾಯ೯ಕ್ರಮದಲ್ಲಿ ಲಸಿಕೆಯ ಜೊತೆಗೆ […]

ಮಂಗಳೂರು : ಖರ್ಚುವೆಚ್ಚ ವಿವರ ನೀಡದಿದ್ದರೆ ಅಭ್ಯರ್ಥಿಗಳು ಅನರ್ಹ : ರಾಜ್ಯ ಚುನಾವಣಾ ಆಯುಕ್ತರ ಎಚ್ಚರಿಕೆ

Monday, November 4th, 2019
Election-commision

ಮಂಗಳೂರು :  ಮಂಗಳೂರು ಮಹಾನಗರಪಾಲಿಕೆಗೆ ನಡೆಯುವ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ದೈನಂದಿನ ಖರ್ಚುವೆಚ್ಚದ ವಿವರಗಳನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು. ಇಲ್ಲದಿದ್ದರೆ ಅಂತಹವರನ್ನು ಅನರ್ಹಗೊಳಿಸಲಾಗುವುದು ಎಂದು ರಾಜ್ಯ ಚುನಾವಣಾ ಆಯುಕ್ತ ಡಾ. ಬಿ. ಬಸವರಾಜು ಎಚ್ಚರಿಕೆ ನೀಡಿದ್ದಾರೆ. ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳೂರು ಮಹಾನಗರಪಾಲಿಕೆ ಚುನಾವಣೆಯ ಸಿದ್ದತೆಗಳ ಪರಿಶೀಲನೆ ನಡೆಸಿ ಮಾತನಾಡುತ್ತಿದ್ದರು. ಅಭ್ಯರ್ಥಿಗಳ ನಾಮಪತ್ರ ಸಲ್ಲಿಸಿದಾಕ್ಷಣದಿಂದ ತಮ್ಮ ಚುನಾವಣಾ ಖರ್ಚುವೆಚ್ಚಗಳ ನಿಖರವಾದ ದೈನಂದಿನ ಮಾಹಿತಿಗಳನ್ನು ಎರಡು ದಿನಗಳಿಗೊಮ್ಮೆ ಸಲ್ಲಿಸಬೇಕು. ಚುನಾವಣಾಧಿಕಾರಿಗಳು ಈ ಸಂಬಂಧ  ಸೂಕ್ಷ್ಮವಾಗಿ  ಪರಿಶೀಲಿಸಬೇಕು. ಒಂದು […]

ಮಳೆಗಾಲದ ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ‘ಗ್ಯಾಂಗ್‌’ ರಚನೆ

Wednesday, May 7th, 2014
Mahabala Marla

ಮಂಗಳೂರು : ಮಳೆಗಾಲದ ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ 60 ವಾರ್ಡ್‌ಗಳಲ್ಲಿ ಒಂದೊಂದು ‘ಗ್ಯಾಂಗ್‌’ ರಚನೆ ಮಾಡಬೇಕು ಎಂದು ಮೇಯರ್‌ ಮಹಾಬಲ ಮಾರ್ಲ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮಂಗಳವಾರ ಪಾಲಿಕೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ಸೋಮವಾರದಿಂದ ಗ್ಯಾಂಗ್‌’ ರಚನೆ ನಡೆಯಲಿದೆ. ಮಳೆಗಾಲ ಹತ್ತಿರವಾದ್ದರಿಂದ ತುರ್ತಾಗಿ ತೋಡು, ಚರಂಡಿಗಳ ಕೆಲಸ ಮಾಡಬೇಕು. ಪ್ರತೀ ಪಾಲಿಕೆ ಸದಸ್ಯರು ಆಯಾಯ ವಾರ್ಡ್‌ಗಳಲ್ಲಿ ಮಳೆಗಾಲ ಎದುರಿಸಲು ಸಿದ್ಧತೆ ಮಾಡಬೇಕು ಎಂದು ಅವರು ಹೇಳಿದರು. ತಾಂತ್ರಿಕ ಕಾರಣಗಳನ್ನು ನೀಡಿ ಪಾಲಿಕೆ ಅಧಿಕಾರಿಗಳು […]

ಮಂಗಳೂರು ಮಹಾನಗರಪಾಲಿಕೆ ಮತ್ತು ಉಡುಪಿ ನಗರ ಸಭೆ ಕಾಂಗ್ರೆಸ್ ತೆಕ್ಕೆಗೆ, ಬಿಜೆಪಿ ಹೀನಾಯ ಸೋಲು

Monday, March 11th, 2013
MCC Election Winners

ಮಂಗಳೂರು : ಮಂಗಳೂರು ಮಹಾನಗರಪಾಲಿಕೆಯ ಆಡಳಿತ ಕಾಂಗ್ರೆಸ್ ತೆಕ್ಕೆಗೆ ಬಿದ್ದಿದ್ದು, ಮಾರ್ಚ್ 7 ರಂದು ನಡೆದ 60 ವಾರ್ಡ್ ಗಳ ಫಲಿತಾಂಶ  ಮಾರ್ಚ್ 11 ರಂದು ಬೆಳಗ್ಗೆ 11 ಗಂಟೆಯ ಹೊತ್ತಿಗೆ ಹೊರಬಿದ್ದಿದೆ. ಮಂಗಳೂರು ಮಹಾನಗರಪಾಲಿಕೆ ಕಾಂಗ್ರೆಸ್ 35, ಬಿಜೆಪಿ 20, ಜೆಡಿಎಸ್-2, ಸಿಪಿಐಯು-1, ಪಕ್ಷೇತರ-1. ಪುತ್ತೂರು ಒಟ್ಟು  27, ಘೋಷಿತ-27. ಬಿಜೆಪಿ-12, ಕಾಂಗ್ರೆಸ್-15, ಜೆಡಿಎಸ್-1. ಮೂಡಬಿದ್ರೆ ಒಟ್ಟು 23 ಸ್ಥಾನಗಳು ಘೋಷಿತ 23 ಸ್ಥಾನಗಳು. ಬಿಜೆಪಿ-5, ಕಾಂಗ್ರೆಸ್-14, ಜೆಡಿಎಸ್-3, ಸಿಪಿಐಯಂ -1. ಬಂಟ್ವಾಳ ಒಟ್ಟು 23 […]

ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿರುವ ಮಂಗಳೂರು ಮಹಾನಗರಪಾಲಿಕೆ ಚುನಾವಣೆ

Monday, February 25th, 2013
Mangalore City Corporation

ಮಂಗಳೂರು : ಸ್ಥಳೀಯ ಸಂಸ್ಥೆಗಳ ಚುನಾವಣೆಯು ಪ್ರಮುಖ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದ್ದು, ಮಂಗಳೂರು ಮಹಾನಗರಪಾಲಿಕೆಯ 60 ವಾರ್ಡುಗಳಲ್ಲಿ ಈಗಾಗಲೇ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಿದ್ದು ಒಟ್ಟು  369 ನಾಮಪತ್ರಗಳು ಸ್ವೀಕೃತವಾಗಿವೆ. ಈ ನಾಮ ಪತ್ರಗಳಲ್ಲಿ ಬಿಜೆಪಿಯ 120 ನಾಮಪತ್ರಗಳು , ಕಾಂಗ್ರೆಸ್ ನ 83 ನಾಮಪತ್ರಗಳು, ಜೆಡಿಎಸ್ ನ 53 ಅಭ್ಯರ್ಥಿಗಳ ನಾಮಪತ್ರಗಳು ಸಿಪಿಐ 1, ಸಿಪಿಐಎಂ 15, ಪಕ್ಷೇತರರ 50, ಜೆಡಿಯುನ 2, ಕೆಜೆಪಿಯ 16, ಬಿಎಸ್ ಆರ್ ಕಾಂಗ್ರೆಸ್ ನ 10, ಡಬ್ಲ್ಯೂಪಿಐ […]

ಮಂಗಳೂರು ಮಹಾನಗರಪಾಲಿಕೆಗೆ ವಾಮಾಚಾರ ಮಂತ್ರಿಸಿದ ತಗಡು, ನಿಂಬೆಹಣ್ಣು, ಕುಂಬಳಕಾಯಿ ಪತ್ತೆ

Tuesday, July 5th, 2011
Vamachara/ವಾಮಾಚಾರ

ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ಕಚೇರಿಯೆದುರು ಇಂದು ಮುಂಜಾನೆ ವಾಮಾಚಾರ ನಡೆಸಿರುವ ಕುರುಹುಗಳು ಪತ್ತೆಯಾಗಿದೆ. ಮೇಯರ್ ಪ್ರವೀಣ್ ಕುಮಾರ್ ಅವರ ಕಾರು ನಿಲ್ಲುವ ಜಾಗದಲ್ಲಿ ಮಂತ್ರಿಸಿದ ತಗಡು,ನಿಂಬೆಹಣ್ಣು,  ಕುಂಬಳಕಾಯಿಯನ್ನು ಕಡಿದು ಅದಕ್ಕೆ ಕುಂಕುಮ ಸುರಿಯಲಾಗಿದೆ.ಲಾಲ್‌ಬಾಗ್‌ನ ಮಹಾನಗರ ಪಾಲಿಕೆ ಕಚೇರಿ ಎದುರುಗಡೆ ಮುಂಜಾನೆ ಕಾವಲು ಕಾಯುವ ವಾಚ್‌ಮೆನ್‌ಗೆ ವಾಮಾಚಾರದ ಕುರುಹು ಪತ್ತೆಯಾಗಿವೆ.ಈ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ಪಾಲಿಕೆಗೆ ವಾಚ್‌ಮೆನ್‌ ಇದ್ದರೂ,ರಾತ್ರಿಯ ವೇಳೆ ಯಾರೋ ವಾಚ್‌ಮೆನ್ ಕಣ್ಣು ತಪ್ಪಿಸಿ ವಾಮಾಚಾರ ಮಾಡಿರಬಹುದು ಎನ್ನಲಾಗಿದೆ. ಸ್ಥಳದಲ್ಲಿ ಪೂಜೆ ನಡೆಸಿರುವ ಕುರುಹು ಕೂಡಾ […]