ಹುಡುಗೀರು ಮಾಡ್ತಾರೆ ಕಣ್ಣಲ್ಲೇ ಲವ್ವು, ಹುಡುಗೀರು ಕೈ ಕೊಟ್ಟರೆ..

Thursday, June 4th, 2020
girl eyes

ನನ್ನವಳು. ನನ್ನ ಗೆಳತಿಯ ಹೆಸರು ಭವ್ಯ , ಅವಳಾಡುವ ತುಂಟಾಟ ಕಂಡರೆ ಬರೆಯಬಹುದು ದಿನಕ್ಕೊಂದು ಕಾವ್ಯ. (01) ****** ಸೋಮಾರಿ. ನನ್ನ ಗಂಡ ಸೋಮಾರಿ ದಿನ ಬೇಕಂತಾನ ದೋಸೆ – ಪೂರಿ, ದುಡಿಯಾಕೋಗಂದರ ಹೊದಿಕೊಂಡು ಮಲಕೋತಾನ್ರೀ. (02) ******* ಬಜಾರಿ ನನ್ನವಳು ಬಜಾರಿ ದಿನ ಬಾಯಾಡ್ಸುತ್ತಾಳೆ ಗರಿಗರಿ ಚುರುಮುರಿ. (03) ******* ಕುಡುಕ ಗೆಳೆಯ ತಂದ್ಕೊಟ್ಟ ನನಗೊಂದು ಬಾಟಲ್, ಅಲ್ಲಿಂದ ಸುರುವಾಯ್ತು ನನಗೊಂದು ಟೈಟಲ್. (04) ******* ಲವ್ವು – ನೋವು ಹುಡುಗೀರು ಮಾಡ್ತಾರೆ ಕಣ್ಣಲ್ಲೇ ಲವ್ವು […]

ತಾಯಿಯ ಪ್ರೇಮ ಎಲ್ಲಕ್ಕಿಂತ ಮಿಗಿಲು

Sunday, May 10th, 2020
Mothers day

ಹೆತ್ತವಳು ತಾಯಿ ಅವಳನ್ನ ನೂರುಕಾಲ ನೀ ಕಾಯಿ, ನಮಗುಸಿರು ನೀಡಿದಳು ತಾಯಿ ಅವಳುಸಿರು ಇರೊವರೆಗೂ ನೀ ಕಾಯಿ. // 1// ಒಂಬತ್ತು ತಿಂಗಳು ಹೆತ್ತು ಹೊತ್ತು ಸಲುವಿ, ಸಾಕಿದಳು ತಾಯಿ, ತೊಂಭತ್ತು ವರುಷ ಅವಳನ್ನ ಪ್ರೀತಿ, ಪ್ರೇಮದಿ ನೀ ಕಾಯಿ. //2// ಹೆತ್ತವಳು ತಾಯಿ ಕೈ ತುತ್ತು ನೀಡಿದ ತಾಯಿ, ಅವಳನ್ನ ನೀನು ಮರೆಯದಿರು ಮೂರೊತ್ತು ಅನ್ನ ನೀಡುತಿರು. //3// ನಮಗೆ ಜನ್ಮವ ಕೊಟ್ಟು ತಾ ಮರುಜನ್ಮ ಪಡೆದಳು ತಾಯಿ, ಅವಳನ್ನ ಅವಮಾನಿಸದೆ ನೋಯಿಸದೆ ನೂರುಕಾಲ ಸುಖದಿ […]

ನನ್ನ ಕಡೆಯದಿರು ಮೂರ್ಖ ಮುಂದಿಹುದು ನಿನಗೆ ನರಕ

Wednesday, April 22nd, 2020
ನನ್ನ ಕಡೆಯದಿರು ಮೂರ್ಖ ಮುಂದಿಹುದು ನಿನಗೆ ನರಕ

ನಾ ನಿನ್ನ ಉಸಿರು : ನನ್ನ ಕಡೆಯದಿರು ಮೂರ್ಖ ಮುಂದಿಹುದು ನಿನಗೆ ನರಕ, ನಾನಿದ್ದರೆ ನಿನಗೆ ಉಸಿರು ನಾನಿದ್ದರೆ ಜಗವೇ ಹಸಿರು….. ಧಣಿದವರಿಗೆ ನೆರಳಾಗುವೆ ಹಸಿದವರಿಗೆ ಹಣ್ಣು ನೀಡುವೆ ಖಗ – ಮೃಗಗಳಿಗೆ ನಾ ಆಸರೆಯಗೂಡಾಗುವೆ…. ಮಕ್ಕಳಿಗೆಲ್ಲ ಮರಕೋತಿ ಜೋಕಾಲಿ, ಕಣ್ಣಾಮುಚ್ಚಾಲೆ ಆಟವಾಡಿ ಖುಷಿಪಡಲು ನಾನು ಬೇಕಾಗಿರುವೆ….. ನನ್ನನ್ನು ಕಡಿದರೆ ನಿನಗಿಲ್ಲ ಉಳಿಗಾಲ, ಮುನಿಯುವ ಮಳೆರಾಯ ರವಿಯು ತರುವ ಉರಿಯ.. ನನ್ನನ್ನು ನೀ ಹರಸು ನಿತ್ಯವೂ ನೀ ಸಂಭ್ರಮಿಸು, ನನ್ನ ಸಂತತಿ ಬೆಳೆಸು ನಿನ್ನ ಬಾಳಾಗುವುದು ಸೊಗಸು…. […]

ಸಮಾನತೆಯ ಹರಿಕಾರ ಬಾಬಾ ಸಾಹೇಬ್ ಅಂಬೇಡ್ಕರ ಜಯಂತಿ

Tuesday, April 14th, 2020
Ambedkar

ಭವ್ಯ ಭಾರತ ದೇಶದಲುಟ್ಟಿದ ದೀನ ದಲಿತರ ಆಶಾಕಿರಣ ದೇಶ ಸಮಾನತೆಯ ಹರಿಕಾರ ಬಾಬಾ ಸಾಹೇಬ್ ಅಂಬೇಡ್ಕರ. //1// ಮಹಾರಾಷ್ಟ್ರದ ರತ್ನಗಿರಿಯ ಅಂಬೇವಾಡಿ ಗ್ರಾಮದಲಿ ರಾಮ್ ಜೀ – ಭೀಮಾಬಾಯಿಯ ಉದರದಿ ಜನ್ಮಿಸಿ ಬಂದ ಬಾಬಾ ಸಾಹೇಬ್ ಅಂಬೇಡ್ಕರ. //2// ದೇಶದ ಸುಭದ್ರತೆ ಕಲ್ಪಿಸಿಕೊಂಡು ದೀನ ದಲಿತರ ರಕ್ಷಣೆಗೆಂದು, ಬರೆದೆ ಬಿಟ್ಟರು ದೇಶಕ್ಕೊಂದು ನೆಚ್ಚಿನ ಸಂವಿಧಾನವೊಂದು ಬಾಬಾ ಸಾಹೇಬ್ ಅಂಬೇಡ್ಕರ. //3// ದೀನ ದಲಿತರ ಬಾಳಿನ ಜ್ಯೋತಿ ದೇಶ ವಿದೇಶದಿ ಪಡೆದರು ಖ್ಯಾತಿ, ದೇಶದಲ್ಲಿದ್ದ ಜಾತಿಯ ಕಲಹ ಹೊಡೆದುರುಳಿಸಿದ […]

ಹೈಕುಗಳು : ಯಾರದ್ದೋ ತಪ್ಪು ಯಾರು ಯಾರಿಗೋ ಶಿಕ್ಷೆ

Sunday, April 12th, 2020
Manjunath

ಹಿಂದೆ ಪ್ರಕೃತಿ ನಳನಳಿಸುತಿತ್ತು ಇಂದು ವಿಕೃತಿ. ಯಾರದ್ದೋ ತಪ್ಪು ಯಾರು ಯಾರಿಗೋ ಶಿಕ್ಷೆ ಇದು ನ್ಯಾಯವೇ. ಎಲ್ಲಿತ್ತೋ ಏನೋ ಜಗತ್ತನ್ನೆ ನುಂಗಲು ಬಂತು ಕರೋನಾ. ತಾಯಿಯ ರೂಪ ದೇವರ ಪ್ರತಿರೂಪ ಎರಡೂ ಒಂದೇ. ಸ್ವಯಂ ಸ್ವಚ್ಛತೆ ಕರೋನಾ ತಡೆಯುತ್ತೆ ನಿನ್ನ ಜಾಗೃತೆ. ಕನಸುಗಳು ಗುರಿ ಮುಟ್ಟಲು ದಿಟ ಸಾಧನಗಳು. ಕನಸುಗಳು ಕಾಣದೆಯೇ ಮೂಡುವ ವಿಸ್ಮಯಗಳು. ತ್ಯಾಗದ ದೀಪ ಇವಳಿಗಿಲ್ಲ ಕೋಪ, ಹೆಣ್ಣಲ್ಲಾ ಶಾಪ. ಅಮ್ಮನ ಪ್ರೇಮ ಎಲ್ಲೆಲ್ಲಿಯೂ ಸಿಗದ ಅಮೃತದಂತೆ. ಏನು ಚೆಂದವೋ ಸೂರ್ಯನ ಕಿರಣವು ಪ್ರತಿ […]

ಕೊರೋನಾ ಬಂದೈತೀ ಅಣ್ಣಾ ಎಚ್ಚರಗೊಳ್ಳಣ್ಣ

Wednesday, April 1st, 2020
corona

ನಮ್ಮ ನಾಡಿಗೆ ಕೊರೋನಾ ಬಂದೈತೀ ಅಣ್ಣಾ ಎಚ್ಚರಗೊಳ್ಳಣ್ಣ ಭಯ – ಭೀತಿ ಯಾಕಣ್ಣ ಸ್ವಚ್ಛತೆಯಾ ಕಾಪಾಡಣ್ಣ . ಮಾಸ್ಕನು ಮುಖಕ್ಕೆ ಧರಿಸು ಒಳಗಿನ ಅಹಂ ನೀ ಸರಿಸು , ಸ್ವಚ್ಛತೆಯ ನೀ ಸ್ಮರಿಸು ಬಳಿ ಸುಳಿಯಲ್ಲಾ ಯಾವ ವೈರಸ್ಸು . ಅಕ್ಕ ಪಕ್ಕದವರಿಗೆ ತಿಳಿಸು ಈ ನಾಡನು ನೀ ಉಳಿಸು ವಿದೇಶದಲ್ಲಿ ಹೆಚ್ಚು ಹರಡೈತೀ ಸಾವಿನ ಸಂಖ್ಯಿ ಮುಗಿಲು ಮುಟೈತೀ, ಯಾಮಾರಿದರ ನಿನ್ನ ಬಳಿಗೂ ಬರುತೈತೀ ಸಾವಿನ ಭಯ ತರುತೈತೀ ನಿನ್ನ ಸ್ವಯಂ ಸ್ವಚ್ಛತೆಯೇ ಇದಕ್ಕ ಮದ್ದು […]