ಜಿಲ್ಲೆಯಲ್ಲಿ ಒಟ್ಟು 16,98,868 ಅರ್ಹ ಮತದಾರರ ಪಟ್ಟಿ ಪ್ರಕಟ

Wednesday, January 16th, 2019
Dc-voters

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಅರ್ಹ ಮತದಾರರ ಪಟ್ಟಿಯ ಅಂತಿಮ ಯಾದಿಯನ್ನು ಇಂದು ಪ್ರಕಟಿಸಲಾಗುತ್ತಿದೆ. ಅದರಂತೆ ಜಿಲ್ಲೆಯಲ್ಲಿ ಒಟ್ಟು 16,98,868 ಮತದಾರರಿದ್ದಾರೆ. ಅದರಲ್ಲಿ 8,64,045 ಮಹಿಳೆಯರಿದ್ದು ಲಿಂಗಾನುಪಾತ 1,035 ಆಗಿದೆ ಎಂದು ಜಿಲ್ಲಾಧಿಕಾರಿ ಎಸ್.ಸಸಿಕಾಂತ ಸೆಂಥಿಲ್ ತಿಳಿಸಿದ್ದಾರೆ. ಅವರು ಬುಧವಾರ ತಮ್ಮ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅಂತಿಮ ಮತದಾರ ಪಟ್ಟಿಯ ಮಾಹಿತಿಗಳನ್ನು ಬಹಿರಂಗ ಪಡಿಸಿದರು. ಒಟ್ಟು ಮತದಾರರಲ್ಲಿ 8,34,725 ಪುರುಷ ಮತದಾರರು ಮತ್ತು 98 ಇತರರಾಗಿದ್ದಾರೆ. ಮತದಾರ ಮತ್ತು ಜನಸಂಖ್ಯಾ ದರ ಪ್ರತಿಶತ 75.06 ಆಗಿದ್ದು, […]

ಮಗನನ್ನು ಮತದಾರರಿಗೆ ಪರಿಚಯಿಸಿದ್ದರಲ್ಲಿ ತಪ್ಪೇನಿದೆ : ಸಿದ್ದರಾಮಯ್ಯ

Monday, October 10th, 2016
cm airport

ಮಂಗಳೂರು: ಕಾವೇರಿ ಕಣಿವೆ ವ್ಯಾಪ್ತಿಯ ಜಲಾಶಯಗಳನ್ನು ಪರಿಶೀಲನೆ ನಡೆಸಿರುವ ಕೇಂದ್ರ ತಜ್ಞರ ತಂಡಕ್ಕೆ ರಾಜ್ಯದ ಸಂಕಷ್ಟ ಪರಿಸ್ಥಿತಿ ಅರ್ಥವಾಗಿದ್ದು, ರಾಜ್ಯಕ್ಕೆ ನ್ಯಾಯ ಸಿಗುವ ಭರವಸೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ದ.ಕ. ಜಿಲ್ಲೆಯಲ್ಲಿ ರವಿವಾರ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿದ ಸಂದರ್ಭ ಬಜಪೆ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನದಿ ನೀರು ಬಗ್ಗೆ ಎರಡೂ ರಾಜ್ಯಗಳಲ್ಲಿರುವ ವಸ್ತುಸ್ಥಿತಿ ಅಧ್ಯಯನ ನಡೆಸಲು ಒಂದು ತಜ್ಞರ ತಂಡ ಕಳುಹಿಸುವಂತೆ ನಾವೇ ಕೇಳಿದ್ದು. ಕರ್ನಾಟಕ ಹಾಗೂ ತಮಿಳುನಾಡಿನ […]

ಮತದಾರರ ಕೈಯಲ್ಲಿ ದೇಶದ ಭವಿಷ್ಯ

Monday, April 11th, 2016
Kerala Vote

ಕಾಸರಗೋಡು : ನಾಡಿನ ಭವಿಷ್ಯ ತಮ್ಮ ಕೈಯ್ಯಲಿದೆ ಎಂಬುದನ್ನು ಮತದಾರರು ತಿಳಿದಿರಬೇಕು ಎಂದು ಖ್ಯಾತ ಸಾಹಿತಿ ಡಾ.ಅಂಬಿಕಾಸುತನ್ ಮಾಂಙಾಡ್ ಹೇಳಿದ್ದಾರೆ. ಕೇರಳ ವಿಧಾನಸಭಾ ಚುನಾವಣೆಯ ಅಂಗವಾಗಿ ಕಾಸರಗೋಡು ಹೊಸ ಬಸ್ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾದ ಮತದಾರರಿಗಿರುವ ತಿಳುವಳಿಕಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಪ್ರತಿಯೊಬ್ಬರ ಕೈಯಲ್ಲೂ ಅಧಿಕಾರವಿದ್ದು , ಅದರ ಸ್ಪಷ್ಟ ಅರಿವು ನಮಗಿರಬೇಕೆಂದು ಅವರು ತಿಳಿಸಿದರು. ಕಾರ್ಯಕ್ರಮದ ಅಂಗವಾಗಿ ಪಾಲ್ಗೊಂಡಿದ್ದ ಪ್ರತಿಯೊಬ್ಬರೂ ‘ತಾನು ಮತ ಚಲಾಯಿಸಿ ತನ್ನ ಕರ್ತವ್ಯವನ್ನು ಪಾಲಿಸುತ್ತೇನೆ’ […]

ಮತದಾರ ಬದಲಾಗುತ್ತಿದ್ದಾನೆ ಪಕ್ಷಗಳು ಎಚ್ಚರವಾಗಬೇಕಿದೆ

Monday, March 25th, 2013

ಮಂಗಳೂರು : ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ರಾಜ್ಯದ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶಗಳನ್ನು ನೋಡಿದರೆ ಮತದಾರ ಬದಲಾವಣೆಯನ್ನು ಬಯಸಿರುವುದು ಸ್ಪಷ್ಟವಾಗಿ ಎದ್ದುಕಾಣುತ್ತದೆ. ನಿರೀಕ್ಷೆಯಂತೆಯೇ ಆಡಳಿತರೂಢ ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್ ನತ್ತ ಮತದಾರ ಒಲವು ತೋರಿದ್ದಾನೆ. ಹಣದ ಹೊಳೆಯೇ ಹರಿದರೂ ಮತದಾರ ಕೆಲವು ಕಡೆಯಾದರೂ ಅದರಿಂದ ಪ್ರಭಾವಿತನಾದಂತೆ ಕಾಣುತ್ತಿಲ್ಲ. ಹಲವು ಸ್ಥಳೀಯ ಸಂಸ್ಥೆಗಳ ಆಡಳಿತದಿಂದ ಬಿಜೆಪಿಯನ್ನು ಕಿತ್ತೊಗೆದು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾನೆ. ಸಂಘ ಪರಿವಾರದವರು ಅಟ್ಟಹಾಸದಿಂದ ಮೆರೆದ ದಕ್ಷಿಣ ಕನ್ನಡದಲ್ಲಿ ಜನರು ಬಿಜೆಪಿಯನ್ನು ಮಣ್ಣು ಮುಕ್ಕಿಸಿದ್ದಾರೆ. ಮುಖ್ಯಮಂತ್ರಿ […]