ಸೋಮೇಶ್ವರ ತೀರದಲ್ಲಿ ಹಸುರು ಮತ್ತು ನೀಲಿ ಬಣ್ಣಕ್ಕೆ ತಿರುಗಿದ ಸಮುದ್ರದ ಅಲೆಗಳ ಬಣ್ಣ

Tuesday, November 24th, 2020
Ullal Beach

ಉಳ್ಳಾಲ : ಸೋಮೇಶ್ವರ ಸಮುದ್ರ ತೀರದಲ್ಲಿ ಅಲೆಗಳ ಬಣ್ಣ ನೀಲಿಯಾಗಿ  ಗೋಚರಿಸಿದ್ದು , ಸೋಮವಾರ ತಡರಾತ್ರಿವರೆಗೂ ಕುತೂಹಲಿಗರು ಸಮುದ್ರ ತಟದಲ್ಲಿ ನಿಂತು ಅಲೆಗಳ  ಬಣ್ಣದ ಆಟವನ್ನು ವೀಕ್ಷಣೆ ನಡೆಸಿದರು. ಅರಬ್ಬಿ ಸಮುದ್ರದ ಮಲ್ಪೆಯ ಪಡುಕೆರೆ,ಕಾರವಾರ ಉದ್ದಕ್ಕೂ ನೀಲಿ ಬೆಳಕು ಕಾಣಿಸಿಕೊಳ್ಳುತ್ತಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುದ್ಧಿ ಹರಡುತ್ತಿದ್ದಂತೆ , ಸೋಮೇಶ್ವರ ಸಮುದ್ರ ತೀರದಲ್ಲಿ ಸೋಮವಾರ ರಾತ್ರಿ ಜನ ಜಮಾಯಿಸಿ ನೀಲಿ ಬೆಳಕು ದಡಕ್ಕೆ ಅಪ್ಪಳಿಸುವುದನ್ನು ಕಂಡರು. ಅರಬ್ಬಿ ಸಮುದ್ರದಲ್ಲಿ ಮೂರು ದಿನಗಳಿಂದ ವಿಚಿತ್ರ ವಿದ್ಯಮಾನ ಜರಗುತ್ತಿದ್ದು, ಹಗಲು ಹೊತ್ತು ಪಾಚಿ ಬಣ್ಣದ ಹಸುರು […]

ಆಟೊ ರಿಕ್ಷಾ ಡಿಕ್ಕಿ : ಚಾಲಕ ಸಾವು, ಮೂವರಿಗೆ ಗಂಭೀರ ಗಾಯ

Wednesday, October 7th, 2020
AutoRikshaw

ಮಂಗಳೂರು  : ಆಟೊ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ನಿಂತಿದ್ದ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟ ಘಟನೆ ಬಿಕರ್ನಕಟ್ಟೆ ಬಳಿ ಬುಧವಾರ ಬೆಳಗ್ಗೆ ಸಂಭವಿಸಿದೆ. ರಿಕ್ಷಾ ಚಾಲಕ ವಳಚ್ಚಿಲ್ ಪದವು ನಿವಾಸಿ ಸಲೀಂ ಮೃತಪಟ್ಟವರು. ಘಟನೆಯಲ್ಲಿ ಶಿಹಾಬ್ ಮತ್ತು ನಿಝಾಮುದ್ದೀನ್ ಎಂಬವರು ಗಾಯಗೊಂಡಿದ್ದಾರೆ. ಈ ಪೈಕಿ ಶಿಹಾಬ್‌ಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಮಲ್ಪೆಯಿಂದ ಆಟೊ ರಿಕ್ಷಾದಲ್ಲಿ ಮೀನು ಹೇರಿಕೊಂಡು ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಬಿಕರ್ನಕಟ್ಟೆ ತಲುಪಿದಾಗ ಆಟೊ ರಿಕ್ಷಾ ಚಾಲಕನ […]

ವಿದ್ಯುತ್ ಪ್ರವಹಿಸಿ ಎಸೆಸೆಲ್ಸಿ ವಿದ್ಯಾರ್ಥಿ ಮೃತ್ಯು

Saturday, July 18th, 2020
Goutham

ಉಡುಪಿ : ಎಸೆಸೆಲ್ಸಿ ವಿದ್ಯಾರ್ಥಿಯೊಬ್ಬ ವಿದ್ಯುತ್ ಪ್ರವಹಿಸಿ ಮೃತಪಟ್ಟ ಘಟನೆ ಜು.17ರಂದು ರಾತ್ರಿ ವೇಳೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀನಗರ ಆರನೆ ಕ್ರಾಸ್‌ ನಲ್ಲಿ ನಡೆದಿದೆ. ಮೃತರನ್ನು ಲಕ್ಷ್ಮೀನಗರದ ಮಂಜುನಾಥ್ ನಾಯಕ್ ಎಂಬವರ ಮಗ ಗೌತಮ್(15) ಎಂದು ಗುರುತಿಸಲಾಗಿದೆ. ನೆರೆಮನೆಯವರು ತಮ್ಮ ಬಾವಿಯಿಂದ ಪಂಪ್‌ಸೆಟ್ ಮೇಲಕ್ಕೆತ್ತುವಾಗ ಅಲ್ಲೇ ಸಮೀಪದಲ್ಲಿ ಇದ್ದ ಗೌತಮ್ ವಿದ್ಯುತ್ ಆಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕಲ್ಯಾಣಪುರ ಮಿಲಾಗ್ರಿಸ್ ಪ್ರೌಢಶಾಲೆಯ ಪ್ರತಿಭಾವಂತ ಎಸೆಸೆಲ್ಸಿ ವಿದ್ಯಾರ್ಥಿಯಾಗಿರುವ ಗೌತಮ್, ಇತ್ತೀಚೆಗೆ ನಡೆದ ಎಸೆಸೆಲ್ಸಿ […]

ಮಹಾರಾಷ್ಟ್ರ ಸಮುದ್ರದಲ್ಲಿ ಮಲ್ಪೆಯ 7 ಮಂದಿಗೆ ಮೀನುಗಾರರಿಂದ ಮಾರಣಾಂತಿಕ ಹಲ್ಲೆ

Thursday, October 17th, 2019
vayuputra-boat

ಉಡುಪಿ : ಕರ್ನಾಟಕ ಮಹಾರಾಷ್ಟ್ರದ ಗಡಿ ಸಮಸ್ಯೆ ಬಗೆಹರಿಯುವ ಲಕ್ಷಣವೇ ಕಾಣುತ್ತಿಲ್ಲ. ಇತ್ತೀಚೆಗೆ ಸಮುದ್ರದಲ್ಲಿ ಕೂಡಾ ಕರ್ನಾಟಕ ಮೀನುಗಾರರ ಜೊತೆ ಮಹಾರಾಷ್ಟ್ರ ಕಚ್ಚಾಟ ಶುರುಮಾಡಿದೆ. ಉಡುಪಿಯಿಂದ ಕಸುಬಿಗೆ ತೆರಳಿದ ಮೀನುಗಾರರಿಗೆ ಮಹಾರಾಷ್ಟ್ರದ ಕಡಲ್ಗಳ್ಳರು ಮಾರಣಾಂತಿಕ ಹಲ್ಲೆ ಮಾಡಿ, ಮೀನು ದೋಚಿ ಅಟ್ಟಹಾಸ ಮೆರೆದಿದ್ದಾರೆ. ಮಲ್ಪೆಯಿಂದ ತೆರಳಿ ಮಹಾರಾಷ್ಟ್ರದ ಮಾಲ್ವಾನ್ ಕಡಲ ತೀರದಲ್ಲಿ 7 ಮೀನುಗಾರರು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಉಡುಪಿಯ ಮಲ್ಪೆಯ ಮೀನುಗಾರರ ಮೇಲೆ ಮಹಾರಾಷ್ಟ್ರದ ಕಡಲ್ಗಳ್ಳರು ಹಲ್ಲೆ ಮಾಡಿದ್ದಾರೆ. ಬೋಟ್ ಮೂಲಕ 200 ಮೀನುಗಾರರು […]

ಮಂಗಳೂರು : ಮೀನುಗಾರರಿಗೆ ತೆರಿಗೆ ರಹಿತ ಡೀಸೆಲ್, ಪ್ರಮಾಣ ಹೆಚ್ಚಳ; ಯಡಿಯೂರಪ್ಪ

Thursday, August 22nd, 2019
Meenugaarike

ಮಂಗಳೂರು : ಕರಾವಳಿಯ ಮೀನುಗಾರರಿಗೆ ರಾಜ್ಯ ಸರಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ಯಾಂತ್ರೀಕೃತ ಮೀನುಗಾರರಿಗೆ ನೀಡಲಾಗುವ ತೆರಿಗೆ ರಹಿತ ಡೀಸೆಲ್ ವಿತರಣೆಯ ಪ್ರಮಾಣವನ್ನು ಹೆಚ್ಚಿಸುವಂತೆ ರಾಜ್ಯ ಸರಕಾರ ಸ್ಪಂದಿಸಿದೆ. ಬುಧವಾರದಂದು ನಡೆದ ಸಚಿವ ಸಂಪುಟ ವಿಸ್ತರಣೆಯಲ್ಲಿ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಕೋಟಾ ಶ್ರೀನಿವಾಸ ಪೂಜಾರಿ ಅವರ ನೇತೃತ್ವದ ನಿಯೋಗ ಮುಖ್ಯಮಂತ್ರಿಯವರನ್ನು ಕೃಷ್ಣಾದಲ್ಲಿ ಭೇಟಿಯಾಗಿ ಕೆಲವೊಂದು ಬೇಡಿಕೆಗಳನ್ನು ಮುಂದಿಟ್ಟಿದ್ದರು. ಈ ಸಂದರ್ಭದಲ್ಲಿ ಉಡುಪಿ ಶಾಸಕ ರಘುಪತಿ ಭಟ್ ಹಾಗೂ ಮಲ್ಪೆ ಮೀನುಗಾರರ ನಿಯೋಗದ ಸದಸ್ಯರು ಹಾಜರಿದ್ದರು. ಮೀನುಗಾರರ […]

ಕುಡಿದ ಮತ್ತಿನಲ್ಲಿ ಬೋಟಿನಲ್ಲಿ ಜಗಳ: ಸ್ನೇಹಿತನನ್ನು ಕೊಲೆ ಮಾಡಿ ಆರೋಪಿ ಪರಾರಿ..!

Tuesday, December 18th, 2018
murder

ಉಡುಪಿ: ಕುಡಿದ ಮತ್ತಿನಲ್ಲಿ ಸ್ನೇಹಿತರಿಬ್ಬರು ಜಗಳ ಮಾಡಿಕೊಂಡು,ಒಬ್ಬನನ್ನು ಕೊಲೆ ಮಾಡಿದ ಘಟನೆ ಮಲ್ಪೆ ಬಂದರಿನ ಬೋಟಿನ ಒಳಗೆ ನಡೆದಿದೆ. ಮೀನುಗಾರಿಕೆಗೆ ತೆರಳಿದ್ದ ಬೋಟ್‌ ರಿಪೇರಿಗೆ ಎಂದು ದಡಕ್ಕೆ ಬಂದಿತ್ತು. ಬೋಟಿನಲ್ಲಿದ್ದವರೆಲ್ಲಾ ಮನೆಗೆ ತೆರಳಿದ್ದರು.ಕೊಪ್ಪಳದ ಮಾರುತಿ ಮತ್ತು ಒರಿಸ್ಸದ ಪ್ರೀತಮ್ ಎಂಬವರು ಬೋಟಿನಲ್ಲಿ ಉಳಿದುಕೊಂಡಿದ್ದರು.ರಾತ್ರಿಯಲ್ಲಿ ಮಾರುತಿ ಮತ್ತು ಪ್ರೀತಮ್ ಬೋಟಿನ ಒಳಗೆ ಪಾರ್ಟಿ ಮಾಡಿದ್ದಾರೆ. ಕುಡಿದ ಮತ್ತಿನಲ್ಲಿ ಜಗಳ ಮಾಡಿಕೊಂಡು,ಮಾರುತಿ ಆಯುಧದಿಂದ ಪ್ರೀತಮ್ ಮೇಲೆ ಹಲ್ಲೆ ನಡೆಸಿದ್ದಾನೆ,ರಕ್ತದ ಮಡುವಿನಲ್ಲಿ ಪ್ರೀತಮ್ ಸಾವನ್ನಪ್ಪಿದ್ದಾನೆ.ನಂತರ ಆರೋಪಿ ಮಾರುತಿ ಪರಾರಿಯಾಗಿದ್ದಾನೆ. ಮಲ್ಪೆ ಪೊಲೀಸ್ […]

ಅತ್ಯಂತ ಸುಂದರ ಬೀಚ್‌ ಆಗಿ ಮಲ್ಪೆ-ಪಡುಕರೆ: ಪ್ರಮೋದ್‌ ಆಶಯ

Monday, January 1st, 2018
malpe-beach

ಉಡುಪಿ: ಒಂದೆಡೆ ಭೋರ್ಗರೆಯುವ ಸಮುದ್ರ, ಇನ್ನೊಂದೆಡೆ ಜನಸಾಗರದ ನಡುವೆ ಮಲ್ಪೆ ಕಡಲ ಕಿನಾರೆಯಲ್ಲಿ ಮೂರು ದಿನಗಳ ಕಾಲ ನಡೆದ ಉಡುಪಿ ಪರ್ಬ, ಅಡ್ವೆಂಚರ್‌ ಫೆಸ್ಟಿವಲ್‌ ರವಿವಾರ ಸಮಾಪನಗೊಂಡಿತು. ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಮಲ್ಪೆ- ಪಡುಕರೆ ಜಗತ್ತಿನಲ್ಲಿ ಸುಂದರ, ಅತ್ಯುತ್ತಮ ಪ್ರವಾಸಿ ಕೇಂದ್ರವಾಗಿ ಬೆಳೆಯಬೇಕೆಂಬುದು ನನ್ನ ಹಂಬಲವಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಪ್ರಥಮ ಹಂತದಲ್ಲಿ ಇಲ್ಲಿ 75 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಸೀ ವಾಟರ್‌ ನ್ಪೋರ್ಟ್ಸ್ ಅಡ್ವೆಂಚರ್‌ ಸೆಂಟರನ್ನು […]

ಅಕ್ರಮ ಮೀನುಗಾರಿಕೆ ಮಲ್ಪೆ ಬಂದರಿನಿಂದ ಅನ್ಯರಾಜ್ಯದ ದೋಣಿಗಳ ತೆರವು

Saturday, November 17th, 2012
Illegal fishing

ಉಡುಪಿ :ಮಲ್ಪೆ ಬಂದರಿನಲ್ಲಿ ಅಕ್ರಮವಾಗಿ ಮೀನುಗಾರಿಕೆಯನ್ನು ನಡೆಸಲಾಗುತ್ತಿದೆ ಎಂಬ ಹಿನ್ನಲೆಯಲ್ಲಿ ಶುಕ್ರವಾರ ಮಲ್ಪೆ ಮೀನುಗಾರರು ಬಂದರಿನ ಹೊರಗೆ ನಿಲ್ಲಿಸಿದ್ದ ತಮಿಳುನಾಡಿನ ದೋಣಿಗಳನ್ನು ಅಲ್ಲಿಂದ ತೆರವುಗೊಳಿಸಿ ಪ್ರತಿಭಟಿಸಿದರು. ಶುಕ್ರವಾರ ಮಲ್ಪೆ ಮೀನುಗಾರರ ಸಂಘದ ನೇತೃತ್ವದಲ್ಲಿ 22 ಮೀನುಗಾರಿಕಾ ಸಂಘಟನೆಗಳು ಪಾಲ್ಗೊಂಡು ಸಭೆ ನಡೆಸಿದವು. ಮೀನುಗಾರರು ಆಕ್ರೋಶಿತರಾಗಿ ತಮಿಳುನಾಡಿನ ಬೋಟ್‌ಗಳನ್ನು ಹಾನಿಗೀಡು ಮಾಡುವ ಸಾಧ್ಯತೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಅನ್ಯರಾಜ್ಯದ ಎಲ್ಲ ಬೋಟುಗಳನ್ನು ಅಲ್ಲಿಂದ ತೆರವುಗೊಳಿಸಲಾಯಿತು. ಸರಕಾರ, ಜಿಲ್ಲಾಡಳಿತ ಅಕ್ರಮ ಮೀನುಗಾರಿಕೆ ನಿಷೇಧವನ್ನು ಜಾರಿಗೊಳಿಸಿದ್ದರೂ ತಮಿಳುನಾಡು ಮೀನುಗಾರರು ಮೀನುಗಾರಿಕೆ ನಡೆಸುತ್ತಿದ್ದರೂ ಇಲಾಖೆ […]

ಸೈಂಟ್‌ ಮೇರೀಸ್‌ ದ್ವೀಪದಲ್ಲಿ ಮೂರು ದಿನಗಳ ‘ಸ್ಪ್ರಿಂಗ್‌ ಝೂಕ್‌’ ಕಲಾ ಉತ್ಸವ

Saturday, February 4th, 2012
St. Mary’s Islands Spring Zouk 2012

ಉಡುಪಿ: ಮಲ್ಪೆಯ ಸೈಂಟ್‌ ಮೇರೀಸ್‌ ದ್ವೀಪದಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಮತ್ತು 3ಡಬ್ಲ್ಯು ಕಾನ್ಸೆಪ್ಟ್ ಸಂಸ್ಥೆ ಜಂಟಿಯಾಗಿ ಫೆ. 3ರಿಂದ 5ರ ವರೆಗೆ ಆಯೋಜಿಸಿದ ‘ಸ್ಪ್ರಿಂಗ್‌ ಝೂಕ್‌’ ಅಂತಾರಾಷ್ಟ್ರೀಯ ಮಟ್ಟದ ಸಂಗೀತ ಮತ್ತು ಕಲಾ ಉತ್ಸವ ಶುಕ್ರವಾರ ಶುಭಾರಂಭಗೊಂಡಿತು. ಮೂರುದಿನಗಳಕಾಲ ನಡೆಯುವ ‘ಸ್ಪ್ರಿಂಗ್‌ ಝೂಕ್‌’ ಕಲಾ ಉತ್ಸವದಲ್ಲಿ ಪ್ರಸಿದ್ಧ ಕಲಾವಿದರು ಪಾಲ್ಗೊಳ್ಳುತ್ತಿದ್ದಾರೆ. ಹುಲಿಕುಣಿತ, ಯಕ್ಷಗಾನ, ಭೂತಕೋಲ ವಾದ್ಯ, ಕುಡುಬಿಯವರ ನೃತ್ಯ, ಡೊಳ್ಳುಕುಣಿತ, ಮರಾಠಿಗರ ನೃತ್ಯವೇ ಮೊದಲಾದ ಸ್ಥಳೀಯ ತಂಡಗಳು ಪಾಲ್ಗೊಳ್ಳುತ್ತಿವೆ. ರಾಜ್ಯದ ಇತರ ಭಾಗದ ಮೂರು ಜಾನಪದ […]