ಮಹಾತ್ಮಾ ಗಾಂಧೀಜಿಯವರು ಕಟ್ಟಾ ಹಿಂದೂವಾದಿಯಾಗಿದ್ದರು : ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​

Tuesday, February 18th, 2020
RSS

ನವದೆಹಲಿ : ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಾ ಗಾಂಧೀಜಿ ಕಟ್ಟಾ ಹಿಂದೂವಾದಿಯಾಗಿದ್ದರು ಎಂದು ಆರ್ಎಸ್ಎಸ್ ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಎನ್ಸಿಇಆರ್ಟಿಯ ಮಾಜಿ ನಿರ್ದೇಶಕ ಜೆ.ಎಸ್.ರಜಪೂತ್ ಅವರ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, “ಗಾಂಧೀಜಿ ಭಾರತವನ್ನು ಅರಿತುಕೊಳ್ಳುವ ಸಲುವಾಗಿ ಪೂರ್ತಿ ದೇಶವನ್ನು ಸುತ್ತಿದರು. ಅವರು ಹಿಂದೂ ಎಂದು ಹೇಳಿಕೊಳ್ಳಲು ಎಂದೂ ಅಂಜುತ್ತಿರಲಿಲ್ಲ. ನಾನು ಕಟ್ಟಾ ಸನಾತನೀ ಹಿಂದೂ ಎಂದು ಅವರು ಹೇಳಿಕೊಂಡಿದ್ದರು. ಹಾಗೆಯೇ ಬೇರೆ ಧರ್ಮಗಳನ್ನೂ ಗೌರವಿಸುತ್ತಿದ್ದರು.” ಎಂದು ಹೇಳಿದರು. ಗಾಂಧೀಜಿಯನ್ನು ಇಂದಿನವರಿಗೆ ಹೋಲಿಕೆ […]

ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮದಿನಾಚರಣೆ : ಪ್ರಧಾನಿ ಮೋದಿಯವರಿಂದ ಮಹತ್ವದ ಘೋಷಣೆಗಳ ನಿರೀಕ್ಷೆ

Wednesday, October 2nd, 2019
gandhi-150

ನವದೆಹಲಿ : ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ 150ನೇ ಜನ್ಮದಿನಾಚರಣೆಯ ಐತಿಹಾಸಿಕ ಸಂಭ್ರಮದಲ್ಲಿ ಭಾರತ ಹಲವಾರು ಮಹತ್ವದ ಘಟನೆಗಳಿಗೆ ಸಾಕ್ಷಿಯಾಗುವ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ಮಹತ್ವದ ಘೋಷಣೆಗಳನ್ನು ಮಾಡುವ ನಿರೀಕ್ಷೆ ಇದೆ. ಇಂದು ಸಾಯಂಕಾಲ ಪ್ರಧಾನಿ ಮೋದಿ ಅವರು ಗುಜರಾತ್ ನಲ್ಲಿರುವ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಸಾಬರ್ ಮತಿ ನದಿ ದಂಡೆಯಲ್ಲಿ ಸುಮಾರು 20,000 ಗ್ರಾಮ ಮುಖಂಡರ ಸನ್ಮುಖದಲ್ಲಿ ಮೋದಿ ಅವರು ಭಾರತ ಬಹಿರ್ದೆಶೆ ಮುಕ್ತ […]

‘ಸ್ವಚ್ಛ ಮಂಗಳೂರು’ ತೃತೀಯ ಹಂತದ ಅಭಿಯಾನಕ್ಕೆ ನಾಳೆ ಚಾಲನೆ

Saturday, October 1st, 2016
swach-mangaluru

ಮಂಗಳೂರು: ‘ಸ್ವಚ್ಛ ಭಾರತ ಮಿಷನ್’ ಕಾರ್ಯಕ್ರಮದಡಿ ಮಂಗಳಾದೇವಿ ಸಮೀಪದ ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಹಮ್ಮಿಕೊಂಡಿರುವ ‘ಸ್ವಚ್ಛ ಮಂಗಳೂರು’ ತೃತೀಯ ಹಂತದ ಅಭಿಯಾನಕ್ಕೆ ನಾಳೆ ಚಾಲನೆ ದೊರೆಯಲಿದೆ ಎಂದು ರಾಮಕೃಷ್ಣ ಮಿಷನ್ ಕಾರ್ಯದರ್ಶಿ ಸ್ವಾಮಿ ಜಿತಕಾಮಾನಂದ ಹೇಳಿದರು. ಶುಕ್ರವಾರ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾತ್ಮಾ ಗಾಂಧೀಜಿಯವರ ಜನ್ಮ ಜಯಂತಿಯಿಂದ ಆರಂಭಿಸಿ ಮುಂದಿನ ಹತ್ತು ತಿಂಗಳುಗಳ ಕಾಲ ತೃತೀಯ ಹಂತದ ಅಭಿಯಾನ ನಡೆಯಲಿದೆ. ಕಳೆದ ಬಾರಿ ಒಂದೇ ತಂಡ ನಗರದ 40 ಬೇರೆ ಬೇರೆ ಸ್ಥಳಗಳಿಗೆ […]