ಸರಕಾರಿ ಜಾಗದಲ್ಲಿ ಮೀನು ಮಾರುತ್ತಿದ್ದ ಗೂಡಂಗಡಿಗಳ ತೆರವು

Saturday, July 10th, 2021
Petty Shop

ಉಡುಪಿ : ಸರಕಾರಿ ಜಾಗದಲ್ಲಿ ಮೀನು ಮಾರುತ್ತಿದ್ದ ಗೂಡಂಗಡಿಗಳನ್ನು ಸಾರ್ವಜನಿಕರ ದೂರಿನ ಮೇರೆಗೆ ಉಡುಪಿ ನಗರಸಭೆ ಅಧಿಕಾರಿಗಳು ಕಾರ್ಯಾಚರಣೆ ಮೂಲಕ ತೆರವುಗೊಳಿಸಿದ್ದಾರೆ. ನಗರಸಭೆಯ ಅಧಿಕಾರಿಗಳು ನಗರದ ಪೋಲಿಸರ ನೇತೃತ್ವದಲ್ಲಿ ಬ್ರಹ್ಮಗಿರಿ ಸರ್ಕಲ್ ಸುತ್ತಮುತ್ತಲಿನ ಒಟ್ಟು ಐದು ಅಂಗಡಿಗಳನ್ನು ತೆರವು ಮಾಡಿದ್ದಾರೆ. ಯಾವುದೇ ನೋಟೀಸ್ ನೀಡದೆ ಏಕಾಏಕಿ ತೆರವುಗೊಳಿಸಿರುವುದಕ್ಕೆಅಂಗಡಿ ಮಾಲಕರಾದ ಅಶೋಕ್ ರಾಜ್ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ ಗೂಡಂಗಡಿ ಸಾಗಿಸುವ ವಾಹನದಡಿ ಮಲಗಿ ಪ್ರತಿಭಟಿಸಿದರು.   ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಡಾ.ಉದಯ ಶೆಟ್ಟಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಮೋಹನ್‌ರಾಜ್, […]

ಒಂದೇ ಸ್ಥಳದಲ್ಲಿ ಇಬ್ಬರು ಮೃತ್ಯು, ಒಬ್ಬರು ಕೆರೆಯಲ್ಲಿ ಮುಳುಗಿದರೆ, ಇನ್ನೊಬ್ಬರಿಗೆ ಹೃದಯಾಘಾತ

Wednesday, July 7th, 2021
jokim

ಮಂಗಳೂರು : ಪಂಜಿಮೊಗರು ಸಮೀಪದ ಮಾಯಿಲ ಎಂಬಲ್ಲಿ ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ ವ್ಯಕ್ತಿಯೊಬ್ಬರು ಪತ್ನಿ ಮತ್ತು ಪುತ್ರನ ಎದುರಲ್ಲೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಅವರನ್ನು ರಕ್ಷಿಸಲು ಮುಂದಾದ ಮತ್ತೊಬ್ಬ ವ್ಯಕ್ತಿಯು ಹೃದಯಾಘಾತದಿಂದ ಮೃತಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ. ಪಂಜಿಮೊಗರು ಸಮೀಪದ ಅಂಬಿಕಾನಗರದ ನಿವಾಸಿ ಜೋಕಿಂ ಮಸ್ಕರೇನಸ್ (58) ಮೃತಪಟ್ಟ ಮೀನುಗಾರ. ಕೆರೆಯಲ್ಲಿ ಜೋಕಿಂ ಮೀನು ಹಿಡಿಯುತ್ತಿದ್ದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದರು. ತಕ್ಷಣ ಅಲ್ಲೇ ಇದ್ದ ಶೇಷಪ್ಪ (50) ಎಂಬವರು ಮಸ್ಕರೇನಸ್‌ರನ್ನು ರಕ್ಷಿಸಲು ಮುಂದಾದರು. ಆದರೆ ಈ ಆಘಾತದಿಂದ ಶೇಷಪ್ಪ […]

ದಿನಕ್ಕೊಂದು ಮೀನು ತಿಂದು ಹರಸುವ ವರಾಹಿ!

Sunday, May 30th, 2021
varahi

ವರಾಹಸ್ವಾಮಿ ಎಂಬುದು ನಾರಾಯಣನ ಇನ್ನೊಂದು ಹೆಸರು ಹಾಗೂ ರೂಪ ಎಂದು ನಿಮ್ಮಲ್ಲಿ ಬಹುತೇಕರಿಗೆ ಗೊತ್ತಿರಬಹುದು. ಆದರೆ ಯಾರೀ ವರಾಹಿ ದೇವಿ? ಯಾರು ಈಕೆಯನ್ನು ಆರಾಧಿಸುತ್ತಾರೆ ಎಂಬುದು ನಿಮಗೆ ಗೊತ್ತೆ? ಬಹು ಜನರಿಗೆ ಗೊತ್ತಿರಲಿಕ್ಕಿಲ್ಲ, ಅಲ್ಲವೆ? ಹಾಗಾದರೆ ಈ ಲೇಖನ ಓದಿ. ವರಾಹಿ ದೇವಿಗೆ ಮುಡಿಪಾದ ದೇವಾಲಯವೊಂದರ ಕುರಿತು ತಿಳಿಸುತ್ತದೆ. ವರಾಹಿ ಮೂಲತಃ ಸಪ್ತ ಮಾತ್ರಿಕೆಯರಲ್ಲಿ ಒಬ್ಬಳು. ಜಗನ್ಮಾತೆಯ ಅವತಾರ ಇವಳೆಂದು ಪರಿಗಣಿಸಲಾಗುತ್ತದೆ. ಅಲ್ಲದೆ ವರಾಹ ಅಂದರೆ ಕಾಡು ಹಂದಿಯ ಅಪರಿಮಿತವಾದಂತಹ ಶಕ್ತಿಯ ರೂಪ ಹೊಂದಿರುವ ದೇವಿ ಇವಳೆಂದು […]

ಮೀನು ಹಿಡಿಯಲು ಹೋದ ಯುವಕ ಹೆಣವಾಗಿ ಪತ್ತೆ

Friday, July 3rd, 2020
prakash Naik

ಉಪ್ಪಿನಂಗಡಿ  : ಕುಮಾರಧಾರ ನದಿಯಲ್ಲಿ ಮೀನು ಹಿಡಿಯಲು ಹೋದ ಯುವಕ ನೀರಿನಲ್ಲಿ ಮುಳುಗಿ ನಾಪತ್ತೆಗಿದ್ದು, ಮೃತದೇಹ ಸ್ವಲ್ಪ ದೂರದಲ್ಲಿ ನದಿಯಲ್ಲಿಶುಕ್ರವಾರ  ಮಧ್ಯಾಹ್ನ ಪತ್ತೆಯಾಗಿದೆ. ಕಡಬ ತಾಲೂಕಿನ ಎಡಮಂಗಲದ ದೊಳ್ತಿಲ ಎಂಬಲ್ಲಿ ಕುಮಾರಧಾರ ನದಿಗೆ ಮೀನು ಹಿಡಿಯಲು ಹೋದ ಯುವಕನೊಬ್ಬ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ಗುರುವಾರ ತಡರಾತ್ರಿ ನಡೆದಿತ್ತು. ನಾಪತ್ತೆಯಾದ ಯುವಕನನ್ನು ದೊಳ್ತಿಲ ರಾಮಣ್ಣ ನಾಯ್ಕ್ ಅವರ ಪುತ್ರ ಪ್ರಕಾಶ್ 26(ವ) ಎಂದು ಗುರುತಿಸಲಾಗಿದ್ದು, ಪ್ರಕಾಶ್ ಹಾಗೂ ತನ್ನ ಸ್ನೇಹಿತರಿಬ್ಬರ ಜೊತೆ ಮೀನು ಹಿಡಿಯಲು ಬಿಟ್ಟಿದ್ದ ಬಲೆಯನ್ನು ಈಜಿ ತರುತ್ತಿರುವಾಗ […]

ಮೀನಿನಲ್ಲಿ ರಾಸಾಯನಿಕ ಅಂಶ.. ಪತ್ತೆ ಹಚ್ಚುವ ಕಿಟ್‌ ಇದೀಗ ಮಂಗಳೂರಿಗೆ!

Saturday, July 7th, 2018
fisheries

ಮಂಗಳೂರು: ಇತ್ತೀಚೆಗೆ ಮೀನುಗಳಿಗೆ ರಾಸಾಯನಿಕ ಸಿಂಪಡಿಸಿ ತಾಜಾವಾಗಿಡಲಾಗುತ್ತಿದೆ ಎಂಬ ಸುದ್ದಿಗಳು ಹರಡುತ್ತಿರುವುದರಿಂದ ಕರಾವಳಿಯಲ್ಲಿ ಮೀನು ಪ್ರೀಯರು ಆತಂಕಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಮೀನಿನ ತಾಜಾತನ ಕಾಪಾಡುವುದಕ್ಕೆ “ಫಾರ್ಮಾಲಿನ್‌’ ಅಥವಾ “ಅಮೋನಿಯಾ’ ರಾಸಾಯನಿಕ ವಸ್ತುಗಳನ್ನು ಪತ್ತೆ ಹಚ್ಚುವ ಕಿಟ್‌ ಇದೀಗ ಮಂಗಳೂರಿಗೂ ಬಂದಿದೆ. ಈ ಕಿಟ್‌ ಅನ್ನು ಕೇರಳದ ಕೊಚ್ಚಿಯಲ್ಲಿರುವ ಕೇಂದ್ರ ಮೀನುಗಾರಿಕೆ ತಂತ್ರಜ್ಞಾನ ಸಂಸ್ಥೆಯಿಂದ ತರಿಸಿಕೊಳ್ಳಲಾಗಿದೆ. ಜಿಲ್ಲೆಯ ಆಹಾರ ಇಲಾಖೆಯ ಅಧಿಕಾರಿಗಳಿಗೆ ಈ ಕಿಟ್ ಹಸ್ತಾಂತರಿಸಲಾಗಿದ್ದು ಮಾರುಕಟ್ಟೆ ಪ್ರದೇಶದಲ್ಲಿ, ಮೀನು ಮಾರಾಟವಾಗುವ ಜಾಗಗಳಲ್ಲಿ ರಾಸಾಯನಿಕ ಮಿಶ್ರಣ ಕುರಿತಂತೆ ತಪಾಸಣೆ […]

ಸಮುದ್ರ ತೀರಕ್ಕೆ ಅಪ್ಪಳಿಸಿದ ಬೃಹತ್ ಮೀನು… ಸಾಮಾಜಿಕ ಜಾಲತಾಣದಲ್ಲಿ ವೈರಲ್

Wednesday, April 11th, 2018
sea-fish

ಮಂಗಳೂರು: ಬೃಹತ್ ಗಾತ್ರದ ಮೀನೊಂದು ಸಮುದ್ರ ತೀರಕ್ಕೆ ಅಪ್ಪಳಿಸಿದ ಸಂದರ್ಭದಲ್ಲಿ ಇಬ್ಬರು ಯುವಕರು ಅದನ್ನು ಸಮುದ್ರಕ್ಕೆ ಸೇರಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಘಟನೆ ನಡೆದ ಸ್ಥಳದ ಬಗ್ಗೆ ತಿಳಿದು ಬಂದಿಲ್ಲ. ಆದರೆ ಮೀನುಗಾರರು ಇದು ಉಳ್ಳಾಲ ಬೀಚ್ ಆಗಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಡುತ್ತಾರೆ. ಸಮುದ್ರ ತೀರದಲ್ಲಿ ಅಪ್ಪಳಿಸಿದ ಬೃಹತ್ ಗಾತ್ರದ ಮೀನನ್ನು ಕಂಡು ಕರಾವಳಿಯಲ್ಲಿ ಮಾತನಾಡುವ ಬ್ಯಾರಿ ಭಾಷೆಯ ಸಂಭಾಷಣೆ‌ ವಿಡಿಯೋದಲ್ಲಿದೆ. ಸಮುದ್ರ ದಂಡೆಗೆ ಬಂದು ಬಿದ್ದು ಅಸಹಾಯಕ ಸ್ಥಿತಿಯಲ್ಲಿದ್ದ […]

ಮೀನು ತಿಂದು ಅಸ್ವಸ್ಥರಾದ ಕಾರ್ಮಿಕರು ಆಸ್ಪತ್ರೆಗೆ ದಾಖಲು

Monday, October 3rd, 2016
fish

ಮಂಗಳೂರು: ಮೀನು ತಿಂದು ಅಸ್ವಸ್ಥರಾದ ಸುಮಾರು 200 ಕಾರ್ಮಿಕರು ಆಸ್ಪತ್ರೆಗೆ ದಾಖಲಾದ ಘಟನೆ ಜಿಲ್ಲೆಯ ಉಳ್ಳಾಲದಲ್ಲಿ ನಡೆದಿದೆ. ಇಲ್ಲಿನ ಬರಾಕಾ ಮೀನಿನ ಕಾರ್ಖಾನೆಯ ಕಾರ್ಮಿಕರು ಸಹಿತ ನಾಟೆಕಲ್ ಹಾಗೂ ಉಳ್ಳಾಲದ ಮನೆಮಂದಿ ಅಸ್ವಸ್ಥರಾಗಿ ತೊಕ್ಕೊಟ್ಟು ಸಹಿತ ದೇರಳಕಟ್ಟೆಯ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಇವರ ಪೈಕಿ ಒಂದೇ ಮನೆಯ ನಾಲ್ವರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ. ಉಳ್ಳಾಲದಲ್ಲಿರುವ ಫಿಶ್ ಮಿಲ್‌‌ನಲ್ಲಿ ಇರುವ ಸುಮಾರು 300 ಕಾರ್ಮಿಕರು ಶುಕ್ರವಾರ ರಾತ್ರಿ ಊಟ ಮುಗಿಸಿ ಮಲಗುವ ವೇಳೆಗೆ ಅಸ್ವಸ್ಥಗೊಂಡಿದ್ದರು. ಊಟ ಮುಗಿದ ತಕ್ಷಣ […]

ಮಲ್ಪೆ ಬೀಚ್‌ ನಲ್ಲಿ ಬಾಲಕಿಯ ಮೇಲೆ ಬೀದಿ ನಾಯಿಗಳ ದಾಳಿ, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

Sunday, July 21st, 2013
Dog fighting

ಮಲ್ಪೆ: ಮಲ್ಪೆ ಬೀಚ್‌ ಕಡಲತೀರದಲ್ಲಿ ಮೀನು ಹಿಡಿಯುವುದನ್ನು ನೋಡಲು ಹೋಗಿದ್ದ ಬಾಲಕಿಯೊರ್ವಳ ಮೇಲೆ ಏಳೆಂಟು ನಾಯಿಗಳು ದಾಳಿ ನಡೆಸಿ ಗಂಭೀರಗಾಯಗೊಳಿಸಿದ ಘಟನೆ ಶನಿವಾರ ಸಂಜೆ ನಡೆದಿದೆ. ಬಾಲಕಿಯನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಲ್ಪೆ ಕೊಳದಲ್ಲಿ ವಾಸವಾಗಿರುವ ಪ್ರಕಾಶ್‌ ಅವರ ಮಗಳು ಸೌಂದರ್ಯ (6) ನಾಯಿ ದಾಳಿಗೆ ಒಳಗಾದ ಮಗು. ತಾಯಿಯ ಹಿಂದೆ ನಡೆದು ಹೋಗುತ್ತಿದ್ದ ಮಗುವಿನ ಮೇಲೆ ಸುಮಾರು 7-8 ನಾಯಿಗಳು ಏಕಾಏಕಿ  ದಾಳಿ ನಡೆಸಿ ಬೆನ್ನು, ತೊಡೆ ಮತ್ತು ಕಾಲುಗಳಿಗೆ ಕಚ್ಚಿ ತೀವ್ರ ಗಾಯಗೊಳಿಸಿದೆ. ಈ […]