ಮೀನುಗಾರಿಕೆಗೆ ತೆರಳಿದ್ದ ದೋಣಿ ಮಗುಚಿ ನಾಲ್ವರು ಮೃತ್ಯು

Sunday, August 16th, 2020
boat

ಕುಂದಾಪುರ : ಮೀನುಗಾರಿಕೆಗೆ ತೆರಳಿದ್ದ ನಾಡದೋಣಿಯೊಂದು ಅಲೆಗಳ ಹೊಡೆತಕ್ಕೆ ಮಗುಚಿ ಬಿದ್ದ ಪರಿಣಾಮ ನಾಲ್ವರು ಮೀನುಗಾರರು ಮೃತಪಟ್ಟ ಘಟನೆ ಬೈಂದೂರು ತಾಲೂಕಿನ ಕೊಡೇರಿ ಎಂಬಲ್ಲಿ ರವಿವಾರ ಮಧ್ಯಾಹ್ನ 3.30ರ ಸುಮಾರಿಗೆ ನಡೆದಿದೆ. ಬೆಳಗ್ಗೆ 10.30ರ ಸುಮಾರಿಗೆ ಸಾಗರಶ್ರೀ ಎಂಬ ನಾಡದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಸಮುದ್ರದ ದೈತ್ಯ ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿ ಮಗುಚಿ ಬಿತ್ತೆನ್ನಲಾಗಿದೆ. ಇದರಿಂದ ನಾಗರಾಜ್ ಖಾರ್ವಿ, ಲಕ್ಷ್ಮಣ್ ಖಾರ್ವಿ, ಶೇಖರ್, ಮಂಜುನಾಥ್ ನೀರಿನಲ್ಲಿ ಮುಳುಗಿ ಮೃತಪಟ್ಟರೆಂದು ತಿಳಿದುಬಂದಿದೆ.  ಒಟ್ಟು 9 ಮಂದಿ ಮೀನುಗಾರರು ತೆರಳಿದ್ದರು. […]

ಸರಕಾರಿ ಸಾಲಮನ್ನಾದ ಹೆಚ್ಚಿನ ಲಾಭ ಪಡೆದವರು ದಕ್ಷಿಣ ಕನ್ನಡ, ಉಡುಪಿ ಮೀನುಗಾರರು

Sunday, May 31st, 2020
fishing

ಭಟ್ಕಳ : ರಾಜ್ಯ ಸರಕಾರ ಘೋಷಣೆ ಮಾಡಿದ್ದ ಮೀನುಗಾರರ ಸಾಲಮನ್ನಾದ ಲಾಭವನ್ನು ದಕ್ಷಿಣ ಕನ್ನಡ ಮತ್ತು ಉಡುಪಿಯ ಮೀನುಗಾರರೇ ಹೆಚ್ಚಿನ ಪ್ರಮಾಣದಲ್ಲಿ ಪಡೆದಿದ್ದಾರೆ ಎಂದು ಇಲ್ಲಿಯ ಮೀನುಗಾರರ ಮುಖಂಡ ವಸಂತ ಖಾರ್ವಿ ಹೇಳಿದ್ದಾರೆ. ಅವರು ನಗರದ ಮಾವಿನಕುರ್ವೆ ಬಂದರಿನ ಬೋಟ್‌ ಯೂನಿಯನ್‌ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಕೋವಿಡ್‌ ಹಿನ್ನೆಲೆಯಲ್ಲಿ ಸರಕಾರ ಎಲ್ಲ ಸಮುದಾಯದವರಿಗೂ ನೆರವು ನೀಡುತ್ತಿದೆ. ಆದರೆ ಮೀನುಗಾರರನ್ನು ಕಡೆಗಣಿಸಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ. ಮೀನು ಕ್ಷಾಮ ಕಳೆದೆರಡು ವರ್ಷಗಳಿಂದ ಮೀನುಗಾರರನ್ನು […]

ಉಳ್ಳಾಲ ಅಳಿವೆಯಲ್ಲಿ ಮೀನುಗಾರಿಕ ಬೋಟ್ ಮುಳುಗಿ ಮೀನುಗಾರ ನಾಪತ್ತೆ

Wednesday, September 21st, 2016
fish-boat

ಮಂಗಳೂರು: ಉಳ್ಳಾಲ ಅಳಿವೆಯಲ್ಲಿ ಮೀನುಗಾರಿಕ ಬೋಟ್ ಮುಳುಗಿ ಮೀನುಗಾರ ನಾಪತ್ತೆಯಾದ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಗರ್ ಗ್ರಾಮದ ನಿವಾಸಿ ಹಮೀದ್ ನಾಪತ್ತೆಯಾಗಿರುವ ಮೀನುಗಾರ. ದೋಣಿಯಲ್ಲಿದ್ದ ಕುಮಟಾದ ಕಾಗಲ್‌ನ ನಿವಾಸಿಗಳಾದ ಸಮೀರ್ ಇಸ್ಮಾಯಿಲ್ (30), ರಹೀಂ ಇಸಾಕ್ ವಡೇಕರ್ (30), ಬಗರ್‌ ಗ್ರಾಮದ ಅಬ್ದುಲ್ಲ ಇಸ್ಮಾಲ್ (42), ಪರದ್ ಬಾಹರ್ ಗ್ರಾಮದ ಭುವನ ಕುಮಾರ್ (26) ಮತ್ತು ರಿಶಿಕುಮಾರ್ (30) ಈಜಿ ದಡ ಸೇರಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಸಬಾ ಬೆಂಗ್ರೆಯ ಅಬೂಬಕ್ಕರ್ ಅಶ್ರಫ್ […]

ಪಾಕಿಸ್ಥಾನಃ ಗಡಿ ಉಲ್ಲಂಘನೆ ಮಾಡಿದ ಆರೋಪ ೨೫ ಮೀನುಗಾರರ ಬಂಧನ

Tuesday, September 30th, 2014
Fishermen

ಇಸ್ಲಮಾಬಾದ್‌ : ಭಾನುವಾರ ಸಂಜೆ ಮೀನು ಹಿಡಿಯಲು ತೆರಳಿದ 25 ಭಾರತೀಯ ಮೀನುಗಾರರನ್ನು ಪಾಕಿಸ್ತಾನದ ಬಂದರು ರಕ್ಷಣಾ ಪಡೆ ಭಂದಿಸಿದೆ. ಗಡಿ ಉಲ್ಲಂಘನೆ ಮಾಡಿದ ಆರೋಪ ಎದುರಿಸಿತ್ತುರುವ  ಎಲ್ಲಾ ಮೀನುಗಾರರನ್ನು ಕರಾಚಿಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಇವರೆಲ್ಲರಿಗೂ ಕನಿಷ್ಠ 1 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆಗಳಿವೆ.