ಆನಂದ ಪೂಜಾರಿ ಹಳೆಯಂಗಡಿ ನಿಧನ

Friday, August 27th, 2021
Ananda Poojary

ಮುಂಬಯಿ : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕು ಹಳೆಯಂಗಡಿ ಸಾಯಿಕೃಪಾ ನಿವಾಸಿ, ಕೊಡುಗೈದಾನಿ, ಸಾಮಾಜಿಕ ಚಿಂತಕ ಆನಂದ ಪೂಜಾರಿ (85.) ಇಂದು ಸಂಜೆ ಹಳೆಯಂಗಡಿ ಅಲ್ಲಿನ ನಿವಾಸದಲ್ಲಿ ನಿಧನರಾದರು. ಮುಂಬಯಿ ಅಲ್ಲಿನ ಹೆಸರಾಂತ ಸಾಯಿಕೇರ್ ಸಂಸ್ಥೆಯ ಆಡಳಿತ ನಿರ್ದೇಶಕ, ಮದರ್ ಇಂಡಿಯಾ ನೈಟ್ ಹೈಸ್ಕೂಲ್ ಫೋರ್ಟ್ (ಮುಂಬಯಿ) ಇದರ ಅಧ್ಯಕ್ಷ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟç ಸಲಹಾ ಸಮಿತಿ ಸದಸ್ಯ ಸುರೇಂದ್ರ ಎ.ಪೂಜಾರಿ ಸೇರಿದಂತೆ ಮೃತರು ಏಳು ಗಂಡು, ಒಂದು ಹೆಣ್ಣು ಹಾಗೂ ಅಪಾರ ಬಂಧು […]

ಪಾನ್ ಬೀಡಾ ಶಾಪ್ ಮಾಡಿಕೊಂಡಿದ್ದ ಪುತ್ತೂರಿನ ವ್ಯಕ್ತಿ ಮುಂಬಯಿಯಲ್ಲಿ ಮೃತ : ಗುರುತು ಪತ್ತೆಗೆ ಮನವಿ

Tuesday, July 27th, 2021
Shashi Poojary

ಪುತ್ತೂರು/ಮುಂಬಯಿ : ಮುಂಬೈಯ ಬಾಂದ್ರಾ ಪೂರ್ವ(ಈಸ್ಟ್ )ನಲ್ಲಿ ಎವರ್ ಗ್ರೀನ್ ಹೋಟೆಲ್ ಬಳಿ ಪಾನ್ ಬೀಡಾ ಶಾಪ್ ಮಾಡಿಕೊಂಡಿದ್ದ, ಅವಿವಾಹಿತ 55 ವರ್ಷ ಪ್ರಾಯದ, ಶಶಿ ಪೂಜಾರಿಯವರು ದಿನಾಂಕ 26-07-2021 ನೇ ಸೋಮವಾರ ರಾತ್ರಿ ಅಸುನೀಗಿರುತ್ತಾರೆ, ಇವರು ಸುಮಾರು 35 ವರ್ಷ ದಿಂದ ಮುಂಬಯಿಯಲ್ಲಿಯೇ ವಾಸವಾಗಿದ್ದರು, ಅವರ ಹುಟ್ಟೂರು ಪುತ್ತೂರಿನಲ್ಲಿ ಅಕ್ಕ ಮತ್ತು ತಮ್ಮ ಇದ್ದರೆಂದು ಶಶಿ ಪೂಜಾರಿಯವರು ಗೆಳೆಯರೊಂದಿಗೆ ಹೇಳುತ್ತಿದ್ದರು, ಇವರ ಪರಿಚಯ ಇದ್ದವರು, ಸಂಬಂಧಿಕರು ಯಾರಾದರೂ ಇದ್ದಲ್ಲಿ ಆದಷ್ಟು ಬೇಗ ಈ ಕೆಳಗೆ ಇರುವ […]

ಬಿಲ್ಲವರ ಎಸೋಸಿಯೇಷನ್ ಮುಂಬಯಿ ವತಿಯಿಂದ ಜೋಗೇಶ್ವರಿ ಕಚೇರಿಯಲ್ಲಿ ಕಿಟ್ ವಿತರಣೆ

Sunday, July 4th, 2021
Billavara Association

ಮುಂಬಯಿ : ಬಿಲ್ಲವರ ಅಶೋಸಿಯೇಶನ್ ಮುಂಬಯಿ ಅಧ್ಯಕ್ಷರಾದ ಹರೀಶ್ ಜಿ. ಅಮೀನ್ ಅವರ ನೇತೃತ್ವದಲ್ಲಿ ಸಮಾಜದ ದಾನಿಗಳ ಸಹಾಯದಿಂದ ಎಸೋಸಿಯೇಷನ್ 23 ಸ್ಥಳೀಯ ಕಚೇರಿಯಲ್ಲಿ ಸಮಾಜದ ಅಸಾಯಕ ಕುಟುಂಬಗಳಿಗೆ ಅಹಾರ ಕಿಟ್ ನೀಡುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜುಲೈ 4 ರಂದು ಬಿಲ್ಲವರ ಎಸೋಸಿಯೇಷನ್ ಜೋಗೇಶ್ವರಿ ಸ್ಥಳೀಯ ಕಚೇರಿಯ ಕಾರ್ಯಾಲಯದಲ್ಲಿ ಸಮಾಜದ ಬಂಧುಗಳಿಗೆ ಕಿಟ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸಮಾಜದ ಅರ್ಹ ಕುಟುಂಬಗಳಿಗೆ ಕಿಟ್ ವಿತರಿಸುತ್ತಾ ಎಸೋಸಿಯೇಷನ್ ಉಪಾಧ್ಯಕ್ಷ ಶಂಕರ್ ಡಿ. ಪೂಜಾರಿಯವರು ಮಾತನಾಡುತ್ತಾ ಹಿಂದಿನಿಂದ ಪ್ರತಿ ಸ್ಥಳೀಯ […]

ಬಿಲ್ಲವರ ಅಸೋಷಿಯೇಶನ್ ಮುಂಬಯಿ, 166ನೇ ಶ್ರೀ ನಾರಾಯಣ ಗುರುಜಯಂತಿ ಆಚರಣೆ

Saturday, September 5th, 2020
billavaMumbai

ಮುಂಬಯಿ : ಮಹಾನಗರದ ಪ್ರತಿಷ್ಠಿತ ಜಾತೀಯ ಸಂಘಟನೆಗಳಲ್ಲೊಂದಾದ ಬಿಲ್ಲವರ ಅಸೋಷಿಯೇಶನ್ ಮುಂಬಯಿ, ಇದರ ವತಿಯಿಂದ ಸಂತಾಕ್ರೂಸ್ ಪೂರ್ವದ ಬಿಲ್ಲವ ಭವನದಲ್ಲಿ ಶ್ರೀ ನಾರಾಯಣ ಗುರುಗಳ 166 ಜಯಂತಿಯನ್ನು ಸೆ. 2ರಂದು ಆಚರಿಸಲಾಯಿತು. ನಾರಾಯಣ ಗುರುಗಳ ನಾಮಸ್ಮರಣೆ, ಭಜನೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕಾರ್ಯಕ್ರಮವು ಆರಂಭಗೊಂಡಿತು. ಮಧ್ಯಾಹ್ನ ನಡೆದ ಮಹಾಪೂಜೆಯನ್ನು ಬಿಲ್ಲವರ ಅಸೋಷಿಯೇಶನ್ ಮುಂಬಯಿಯ ಗೌರವ ಪ್ರಧಾನ ಕಾರ್ಯದರ್ಶಿ ರವೀಂದ್ರ ಶಾಂತಿಯವರು ನೆರವೇರಿಸಿದರು. ಬಿಲ್ಲವರ ಅಸೋಷಿಯೇಶನ್ ನ ಅಧ್ಯಕ್ಷರಾದ ಚಂದ್ರಶೇಖರ ಪೂಜಾರಿ ಯವರ ಅಧ್ಯಕ್ಷರೆಯಲ್ಲಿ ನಡೆದ ಈ ಸರಳ […]

ಭಾಸ್ಕರ್ ಎಂ ಸಾಲ್ಯಾನ್ ರಿಗೆ ಮಾತೃ ವಿಯೋಗ

Friday, July 31st, 2020
Kamala

ಮುಂಬಯಿ : ಭಾರತ್ ಬ್ಯಾಂಕಿನ ನಿರ್ದೇಶಕ ಭಾಸ್ಕರ್ ಎಂ ಸಾಲ್ಯಾನ್ ಅವರ ತಾಯಿ ಕಮಲಾ ಎಂ ಸಾಲ್ಯಾನ್ (82) ಜು. 30ರಂದು ಮೂಲ್ಕಿಯ ಸ್ವಗೃಹ ಕಮಲ ಸದನದಲ್ಲಿ ನಿಧನ ಹೊಂದಿದರು. ಮೃತರು ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷರೂ, ಬಿಲ್ಲವ ಸಮಾಜದ ಮುಖಂಡರಾದ ಜಯ ಸಿ. ಸುವರ್ಣರ ಹಿರಿಯ ಸಹೋದರಿ. ಸಮಾಜ ಸೇವಕ ದಿ. ಮುದ್ದು ಸಾಲ್ಯಾನ್ ಅವರ ಧರ್ಮಪತ್ನಿ. ಕಮಲಾ ಎಂ ಸಾಲ್ಯಾನ್ ಇವರು ಮಕ್ಕಳಾದ ತಾರಾ ಡಾ. ಜಗನ್ನಾಥ್, ಶಶೀಂದ್ರ ಎಂ ಸಾಲ್ಯಾನ್, ರವಿ. ಎಂ ಸಾಲ್ಯಾನ್, […]

ಸದಸ್ಯರಿಗೆ ಆಸರೆಯಾದ ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿ

Monday, June 8th, 2020
soorya s

ಮುಂಬಯಿ : ಸಮಾಜ ಬಾಂಧವರ ಶ್ರೇಯೋಭಿವೃದ್ಧಿಗಾಗಿ ಸದಾ ಶ್ರಮಿಸುತ್ತಿರುವ ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿಯು ಶ್ರೀ ನಾರಾಯಣ ಗುರುಗಳ ತತ್ವ – ಉಪದೇಶಗಳನ್ನು ಅಳವಡಿಸಿಕೊಂಡು ವಿದ್ಯೆಗೆ ಹೆಚ್ಚಿನ ಮಹತ್ವ ನೀಡಿ ಪ್ರತಿವರ್ಷ ಅಸಹಾಯಕ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ ನೀಡುವುದಲ್ಲದೆ ಅಸಹಾಯಕ ಸಮಾಜ ಬಾಂಧವರಿಗೆ ವೈದ್ಯಕೀಯ ನೆರವು ನೀಡುತ್ತಾ, ವಧು-ವರರ ಅನ್ವೇಷಣೆಗೆ ಸಹಾಯ ಮಾಡುತ್ತಾ ಬಂದಿರುವ ಸಂಘವು ಸದಸ್ಯ ಬಾಂಧವರ ಸುಖ-ದುಃಖಗಳಿಗೆ ಸದಾ ಸ್ಪಂದಿಸಿ ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿದ್ದು ಇದೀಗ […]

ಮುಂಬಯಿ ಯಿಂದ ಹಿಂತಿರುಗಿ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿ ಆತ್ಮಹತ್ಯೆ, ಉಳಿದವರನ್ನು ಶಾಲೆಯಿಂದ ಸ್ಥಳಾಂತರ

Thursday, May 21st, 2020
Mudabidre Man

ಮೂಡುಬಿದಿರೆ : ಮುಂಬಯಿ ಯಿಂದ ಹಿಂತಿರುಗಿ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಕಡಂದಲೆ ಶಾಲೆಯಲ್ಲಿ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಕಡಂದಲೆ ನಿವಾಸಿ ದಯಾನಂದ ಪೂಜಾರಿ ಎಂದು ಗುರುತಿಸಲಾಗಿದೆ ಮೃತ ವ್ಯಕ್ತಿ  ಮುಂಬೈಯಲ್ಲಿ ಹೋಟೆಲ್ ಕೆಲಸದಲ್ಲಿದ್ದರು ಎಂದು ತಿಳಿದುಬಂದಿದೆ ಬುಧವಾರ ರಾತ್ರಿ ಇಬ್ಬರು ಸಹೋದರರ ಜೊತೆಗೆ ಮೂಡುಬಿದಿರೆಗೆ ಬಂದಿದ್ದರು. ಊರಿಗೆ ಬಂದವರನ್ನು ತಡರಾತ್ರಿ 1 ಗಂಟೆಗೆ  ಕಡಂದಲೆ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಆದರೆ ಮುಂಜಾನೆ 3 ಗಂಟೆಯ ಹೊತ್ತಿಗೆ ಶಾಲೆಯ […]

ಲಾಕ್ ಡೌನ್ ಸಂದರ್ಭದಲ್ಲಿ ಮುಂಬಯಿ ಜನತೆಯ ಹಸಿವು ನೀಗಿಸುವ ಹೋಟೆಲು ಉದ್ಯಮಿ, ಇನ್ನಂಜೆ ಶಶಿಧರ ಕೆ. ಶೆಟ್ಟಿ

Sunday, May 17th, 2020
shashidhara shetty

ಮುಂಬಯಿ : ಕೊರೋನಾ ಮಹಾಮಾರಿಯಿಂದಾಗಿ ಲೋಕ್ ಡೌನ್ ನ ಅಂಧಕಾರದಲ್ಲಿ ಮುಂಬಯಿ ಮಹಾನಗರ ಹಾಗೂ ಉಪನಗರಗಳು ಸಂಕಷ್ಟವನ್ನು ಅನುಭವಿಸುತ್ತಿರುವ ಈ ಸಮಯದಲ್ಲಿ ತವರೂರಲ್ಲಿ ಇದ್ದೂ ಮುಂಬಯಿಯಲ್ಲಿರುವ ತುಳು ಕನ್ನಡಿಗರ ಬಗ್ಗೆ ಕಾಳಜಿ ವಹಿಸುತ್ತಿದ್ದವರು ನಲಾಸೋಪಾರದ ಜನಪ್ರಿಯ ಹೋಟೇಲು ಉದ್ಯಮಿ ಇನ್ನಂಜೆ ಶಶಿಧರ ಕೆ. ಶೆಟ್ಟಿ ಇವರು. ಬಂಟರ ಸಂಘ ಮುಂಬಯಿ ವಸಯಿ-ದಹಾಣು ಪ್ರಾದೇಶಿಕ ಸಮಿತಿಯ ಸಂಚಾಲಕರೂ ಆದ ಇನ್ನಂಜೆ ಶಶಿಧರ ಕೆ. ಶೆಟ್ಟಿ ಯವರು ಲಾಕ್ ಡೌನ್ ನಿಂದಾಗಿ ಊರಲ್ಲಿದ್ದು ಮುಂಬಯಿಗೆ ಬರಲು ಅಸಾಧ್ಯವಾದರೂ, ಲಾಕ್ ಡೌನ್ […]

ಒಕ್ಕಲಿಗರ ಸಂಘ ಮಹಾರಾಷ್ಟ್ರದ ವತಿಯಿಂದ ಮುಂಬಯಿಯಲ್ಲಿ ಸಂಕಷ್ಟದಲ್ಲಿರುವವರಿಗೆ ಸಹಾಯ

Monday, May 11th, 2020
okkaliga sangha mumbai

ಮುಂಬಯಿ : ಲಾಕ್ ಡೌನ್ ನಿಂದಾಗಿ ಈಗಾಗಲೇ ಸಮಾಜ ಬಾಂಧವರು ಮಾತ್ರವಲ್ಲದೆ ಮಹಾನಗರದಲ್ಲಿ ನೆಲೆಸಿರುವ ಅನೇಕ ಕನ್ನಡಿಗರು ವಿವಿಧ ರೀತಿಯಲ್ಲಿ ಸಂಕಷ್ಟಕ್ಕೊಳಗಾಗಿದ್ದು, ಒಕ್ಕಲಿಗರ ಸಂಘ ಮಹಾರಾಷ್ಟ್ರವು ಅಧ್ಯಕ್ಷರಾದ ಜಿತೇಂದ್ರ ಗೌಡ ಇವರ ನೇತೃತ್ವದಲ್ಲಿ ಸಮಾಜ ಬಾಂಧವರೂ ಸೇರಿ 610 ಕ್ಕೂ ಅಧಿಕ ತುಳು ಕನ್ನಡಿಗ ಕುಟುಂಬಗಳಿಗೆ ಲಕ್ಷಾಂತರ ರೂಪಾಯಿಗಳ ಕಿಟ್ ವಿತರಿಸಿ ಸಹಕರಿಸಿದೆ. ನಮ್ಮ ಸಮಾಜದಲ್ಲಿ ಅನೇಕರು ಹೋಟೇಲು ಕಾರ್ಮಿಕರು, ಸಣ್ಣ ವ್ಯಾಪಾರಿಗಳಾಗಿದ್ದು ದೈನಂದಿನ ಖರ್ಚಿಗೆ ಬೇಕಾದಷ್ಟು ಮಾತ್ರ ಸಂಪಾದಿಸುತ್ತಿದ್ದು ಲಾಕ್ ಡೌನ್ ನಿಂದಾಗಿ ಇದೀಗ ಸಂಕಷ್ಟದಲ್ಲಿ […]

ಮುಂಬಯಿಯಲ್ಲಿ 53 ಪತ್ರಕರ್ತರಿಗೆ ಕೊರೋನಾ ಪೋಸಿಟಿವ್

Monday, April 20th, 2020
Mumbai-covid

ಮುಂಬಯಿ ; ಮಹಾಮಾರಿ ಕೊರೋನಾ ಸಾಂಕ್ರಾಂಮಿಕದ ವರದಿ ಮಾಡಲು ಹೋದ 53 ಪತ್ರಕರ್ತರಿಗೆ ಕೊರೋನಾ ಪೋಸಿಟಿವ್ ಆಗಿದೆ ಎಂದು ಬಿಎಂಸಿಯ ಆರೋಗ್ಯ ಸಮಿತಿ ಸದಸ್ಯ ಅಮೆ ಘೋಲ್ ಖಚಿತಪಡಿಸಿದ್ದಾರೆ ಪತ್ರಕರ್ತರುಗಳಿಗಾಗಿಯೇ ಏರ್ಪಡಿಸಿದ್ದ ವಿಶೇಷ ಕೋವಿಡ್ 19 ತಪಾಸಣೆಗಳ ಪರೀಕ್ಷಾ ವರದಿಗಳು ಬಂದಿದ್ದು ದೃಶ್ಯ ಮಾಧ್ಯಮ, ಮುದ್ರಣ ಮಾಧ್ಯಮ ಹಾಗೂ ವೆಭ್ ಮಾಧ್ಯಮದ ವರದಿಗಾರರು ಮತ್ತು ಛಾಯಾಗ್ರಾಹಕರು ಸೇರಿ 53 ಮಂದಿ ಪತ್ರಕರ್ತರಿಗೆ ಕೊರೋನಾ ಪೋಸಿಟಿವ್ ಆಗಿದೆ. ಇವರಲ್ಲಿ ಹೆಚ್ಚಿನವರು ಕಸ್ತೂರ್ ಬಾ ಆಸ್ಫತ್ರೆ ಹಾಗೂ ಧಾರಾವಿ ಯಲ್ಲಿಂದ ವರದಿ ಮಾಡುತ್ತಿದ್ದರು. ಮಹಿಳಾ ವರದಿಗಾರರೊಬ್ಬರೂ ಇದರಲ್ಲಿ ಸೇರಿರಿವರು ಎಂದು ತಿಳಿದು ಬಂದಿದೆ. […]