ಶಿರಾದಲ್ಲಿ ಡಾ. ರಾಜೇಶ್ ಗೌಡ ಮತ್ತು ರಾಜರಾಜೇಶ್ವರಿ ನಗರ ದಲ್ಲಿ ಮುನಿರತ್ನ ಗೆಲುವು

Tuesday, November 10th, 2020
RR Nagar

ಬೆಂಗಳೂರು : ಬೆಂಗಳೂರಿನ ರಾಜರಾಜೇಶ್ವರಿ ನಗರ ಮತ್ತು ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ ಶಿರಾದಲ್ಲಿ ಡಾ. ರಾಜೇಶ್ ಗೌಡ 63,294 ಮತ. ಟಿ. ಬಿ. ಜಯಚಂದ್ರ 52,914 ಮತ. ಅಮ್ಮಾಜಮ್ಮ 29,166 ಮತಗಳನ್ನು ಪಡೆದಿದ್ದಾರೆ. ಆರ್. ಆರ್. ನಗರ 24ನೇ ಸುತ್ತಿನ ಎಣಿಕೆ. ಮುನಿರತ್ನ 1,24,446 ಮತ. ಕುಸುಮಾ 67,405 ಮತ. ಕೃಷ್ಣಮೂರ್ತಿ 10,187 ಮತಗಳು. ರಾಜರಾಜೇಶ್ವರಿ ನಗರ ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ […]

ಶಿರಾ ಹಾಗೂ ಆರ್ ಆರ್ ನಗರ ಉಪ ಚುನಾವಣೆ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ

Tuesday, November 10th, 2020
By election

ತುಮಕೂರು: ಶಿರಾ ಹಾಗೂ ಆರ್ ಆರ್ ನಗರ ಉಪ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮುಂದುವರೆದಿದ್ದು, ಆರ್ ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಭರ್ಜರಿ ಮುನ್ನಡೆ ಕಾಯ್ದುಕೊಂಡಿದ್ದರೆ, ಶಿರಾದಲ್ಲಿ ನಿರೀಕ್ಷೆಗೂ ಮೀರಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದು, ಕ್ಷೇತ್ರದಲ್ಲಿ ಮೊದಲ ಬಾರಿಗೆ ಖಾತೆ ತೆರೆಯುವ ಮುನ್ಸೂಚನೆ ಇದೆ. ಶಿರಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಎದುರಾಳಿ ಮಾಜಿ ಸಚಿವ ಜಯಚಂದ್ರ ವಿರುದ್ಧ 1,488 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದು, 14,206 ಮತಗಳ ಮುನ್ನಡೆ ಪಡೆದುಕೊಂಡಿದ್ದಾರೆ. […]

ಕಾನೂನು ಹೋರಾಟದಲ್ಲೂ ನಾನು ಗೆಲುವು ಸಾಧಿಸುತ್ತೇನೆ: ಮುನಿರತ್ನ

Thursday, May 31st, 2018
muniratna

ಬೆಂಗಳೂರು: ಇನ್ನುಮುಂದೆ ಕ್ಷೇತ್ರದಲ್ಲಿ ಯಾವ ಗೊಂದಲವೂ ಇರಲ್ಲ. ನನ್ನ ಕಡೆಯಿಂದ ಯಾವುದೇ ಗೊಂದಲ ಸೃಷ್ಟಿಯಾಗಲ್ಲ ಎಂದು ರಾಜರಾಜೇಶ್ವರಿ ನಗರದ ವಿಜೇತ ಕಾಂಗ್ರೆಸ್ ಶಾಸಕ ಮುನಿರತ್ನ ಹೇಳಿದ್ದಾರೆ. ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳಿಂದ ಪ್ರಮಾಣಪತ್ರ ಸ್ವೀಕರಿಸಿ ಮಾತನಾಡಿದ ಮುನಿರತ್ನ, ನಾನು ಕಾನೂನು ಹೋರಾಟದಲ್ಲೂ ಗೆಲವು ಸಾಧಿಸುತ್ತೇನೆ ಎಂದು ಹೇಳಿದರು. ಸ್ವಾರ್ಥ ರಾಜಕಾರಣಕ್ಕಾಗಿ ಕೆಲವರು ನನ್ನ ವಿರುದ್ಧ ವೃಥಾ ಆರೋಪ ಮಾಡಿದರು. ನನ್ನ ವಿರುದ್ಧ ಸುಳ್ಳು ದೂರು ಸೃಷ್ಟಿಸಿದರು. ಅವರೆಲ್ಲರೂ ರಾಜಕೀಯ ದುರುದ್ದೇಶ ಬಿಡಲಿ. ಅವರೆಲ್ಲರೂ ತಮ್ಮ […]

ರಾಜರಾಜೇಶ್ವರಿ ನಗರ ಚುನಾವಣೆ, ಕಾಂಗ್ರೆಸ್ ನ ಮುನಿರತ್ನ 40 ಸಾವಿರ ಮತಗಳ ಅಂತರದಿಂದ ಗೆಲುವು

Thursday, May 31st, 2018
muniratna

ಬೆಂಗಳೂರು: ರಾಜರಾಜೇಶ್ವರಿ ನಗರದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಮುನಿರತ್ನ 40 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದಾರೆ. ಬಿಜೆಪಿಯ ತುಳಸಿ ಮುನಿರಾಜು ಎರಡನೇ ಸ್ಥಾನ ಪಡೆದರೆ, ಜೆಡಿಎಸ್‍ನ ರಾಮಚಂದ್ರ ಮೂರನೇ ಸ್ಥಾನ ಪಡೆದಿದ್ದಾರೆ. ಮುನಿರತ್ನ – 97,440 ತುಳಸಿ ಮುನಿರಾಜು – 56,278 ರಾಮಚಂದ್ರ -45,345 ಅಂತರ – 41,162

ರಾಜರಾಜೇಶ್ವರಿ ನಗರ ಮತ ಎಣಿಕೆ, ಕೈ ಅಭ್ಯರ್ಥಿ ಮುನಿರತ್ನ ಮುನ್ನಡೆ..!

Thursday, May 31st, 2018
muniratna

ಬೆಂಗಳೂರು: ರಾಜರಾಜೇಶ್ವರಿ ನಗರದ ವಿಧಾನಸಭೆಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಈಗಾಗಲೇ ಆರಂಭವಾಗಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಮುನಿರತ್ನ ಮುನ್ನಡೆ ಸಾಧಿಸಿದ್ದಾರೆ. ಮೊದಲ ಸುತ್ತಿನಲ್ಲಿ 9342 ಮತಗಳನ್ನು ಪಡೆದ ಮುನಿರತ್ನ ಗೆಲುವಿನತ್ತ ಮುನ್ನುಗುತ್ತಿದ್ದು, ಬಿಜೆಪಿ ಅಭ್ಯರ್ಥಿ ಮೊದಲ ಸುತ್ತಿನಲ್ಲಿ 5220 ಮತಗಳನ್ನು ಪಡೆಯುವ ಮೂಲಕ 2ನೇ ಸ್ಥಾನದಲ್ಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಮುನ್ನಡೆ ಸಾಧಿಸುತ್ತಿದ್ದಂತೆ ಮತ ಎಣಿಕೆ ಕೇಂದ್ರದ ಮುಂದೆ ಮುನಿರತ್ನ ಬೆಂಬಲಿಗರು ಸಂಭ್ರಮಾಚರಣೆ ಶುರು ಮಾಡಿದ್ದಾರೆ. ಎರಡನೇ ಸುತ್ತಿನಲ್ಲೂ ಮುನಿರತ್ನ 16, 581 ಮತ ಪಡೆಯುವ […]