ದಸರಾ ಸ್ವಾಗತಿಸಲು ಮೈಸೂರು ನಗರಕ್ಕೆ ದೀಪಾಲಂಕಾರ!
Sunday, October 18th, 2020ಮೈಸೂರು: ಮೈಸೂರು ಅರಮನೆಯಲ್ಲಿ ಈ ಬಾರಿ ದಸರಾ ಸರಳವಾಗಿ ಸಾಂಪ್ರದಾಯಿಕವಾಗಿ ನಡೆಯುತ್ತಿದ್ದು, ಇದುವರೆಗೆ ಕಾಣುತ್ತಿದ್ದ ಸಂಭ್ರಮವೂ ಇಲ್ಲದಾಗಿದೆ. ಆದರೆ ದಸರಾ ನಡೆಯುತ್ತಿದೆ ಎಂಬುದನ್ನು ನಗರಕ್ಕೆ ಮಾಡಿರುವ ದೀಪಾಲಂಕಾರಗಳು ಮಾತ್ರ ಹೇಳುತ್ತಿವೆ. ಮೈಸೂರಿಗೂ ದೀಪಾಲಂಕಾರಕ್ಕೂ ಬಿಡಿಸಲಾರದ ನಂಟಿದೆ. ಮೈಸೂರಿಗೆ ವಿದ್ಯುದ್ದೀಪಗಳು ಬರುವ ಮೊದಲು ನಗರದ ಪ್ರಮುಖ ಬೀದಿಗಳಲ್ಲಿ ಹಾಗೂ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಸ್ಥಳಗಳಲ್ಲಿ ಹರಳೆಣ್ಣೆ ಮತ್ತು ಸೀಮೆ ಎಣ್ಣೆಯ ಬುಡ್ಡಿದೀಪಗಳನ್ನು ಹಚ್ಚಲಾಗುತ್ತಿತ್ತು. ಬೀದಿಯಲ್ಲಿರುವ ಮರ ಅಥವಾ ಕಲ್ಲಿನ ಕಂಬಗಳಲ್ಲಿ ಇಡಲಾಗುತಿದ್ದ ದೀಪಕ್ಕೆ ಅದರ ಉಸ್ತುವಾರಿಗೆ ನೇಮಿಸಿದ್ದ ನೌಕರ […]