ಕೆಳಗಿನ ಕುಂಜಾಡಿ ತರವಾಡು‌ ಮನೆಯಲ್ಲಿ ಏಪ್ರಿಲ್ 8 ಮತ್ತು 9ರಂದು ಧರ್ಮ ‌ನೇಮೋತ್ಸವ

Friday, April 2nd, 2021
Kunjady

ಮಂಗಳೂರು :  ಕೆಳಗಿನ ಕುಂಜಾಡಿ ತರವಾಡು‌ ಮನೆಯ ಧರ್ಮ ‌ನೇಮೋತ್ಸವ ಏಪ್ರಿಲ್ 8 ಮತ್ತು 9ರಂದು ಎರಡು ದಿನಗಳ ಕಾಲ ನಡೆಯಲಿದೆ ಎಂದು ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು. ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ  ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು  ಸುಮಾರು 6 ದಶಕಗಳಿಂದ ನಿಂತು ಹೋಗಿದ್ದ  ಬಂಬಿಲಗುತ್ತು ಮೇಗಿನ ಕುಂಜಾಡಿ ಮತ್ತು ಕೆಳಗಿನ ಕುಂಜಾಡಿ ಮಧ್ಯಸ್ಥರ ಮುಂದಾಳತ್ವದಲ್ಲಿ ಈ ಧರ್ಮನೇಮೋತ್ಸವ ನಡೆಯುತ್ತವೆ ಎಂದರು. ಕೊರೊನಾ ಕಾರಣದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೈಬಿಟ್ಟು ನಾಲ್ಕು ದಿನಗಳ ಬದಲು ಎರಡು ‌ದಿನಗಳ ನೇಮೋತ್ಸವ […]

ಮಾಣಿಲ ಕ್ಷೇತ್ರದಲ್ಲಿ ಸಕಲ ವೈಭವದಿಂದ ಸಂಪನ್ನಗೊಂಡ ಅಷ್ಟ ಪವಿತ್ರ ನಾಗಮಂಡಲ

Friday, February 23rd, 2018
Manila Nagamandala

ಮಾಣಿಲ:  ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಬುಧವಾರ ರಾತ್ರಿ 12.30 ರಿಂದ ಶ್ರೀ ನಾಗ ಸಾನ್ನಿಧ್ಯದಲ್ಲಿ ಹಾಲಿಟ್ಟು ಸೇವೆಯಾದ , ಬಳಿಕ ನಾಗಪಾತ್ರಿ ಪೆರ್ಡೂರು ಶ್ರೀ ಕ್ಷೇತ್ರ ಕಲ್ಲಂಗಲದ ವೇದಮೂರ್ತಿ ರಾಮಚಂದ್ರ ಕುಂಜಿತ್ತಾಯರ ನೇತೃತ್ವದಲ್ಲಿ ಶ್ರೀ ಮುದ್ದೂರು ಕೃಷ್ಣಪ್ರಸಾದ ವೈದ್ಯ ಮತ್ತು ಶ್ರೀ ಬಾಲಕೃಷ್ಣ ವೈದ್ಯ, ಶ್ರೀ ನಟರಾಜ ವೈದ್ಯ ಬಳಗದವರಿಂದ ಸಕಲ ವೈಭವದಿಂದ ಅಷ್ಟ ಪವಿತ್ರ ನಾಗಮಂಡಲ ಸೇವೆ ನಡೆಯಿತು. ಕ್ಷೇತ್ರದಲ್ಲಿ ಬೆಳಿಗ್ಗೆ 8 ಕ್ಕೆ ಆರಂಭವಾದ ವಿವಿಧ ವೈದಿಕ ಕಾರ್ಯಕ್ರಮಗಳಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು. ಕಟೀಲು ಕ್ಷೇತ್ರದ ವೇದಮೂರ್ತಿ ಶ್ರೀ ಕಮಲಾದೇವಿಪ್ರಸಾದ ಆಸ್ರಣ್ಣರ ಪೌರೋಹಿತ್ವದಲ್ಲಿ […]

ಪ್ರತಿಯೊಂದು ಧಾರ್ಮಿಕ ಕ್ಷೇತ್ರದಿಂದಲೂ ಸಂಸ್ಕಾರ ನೀಡುವ ಕಾರ್ಯವಾಗಬೇಕು : ಡಾ. ಡಿ. ವೀರೇಂದ್ರ ಹೆಗ್ಗಡೆ

Wednesday, February 21st, 2018
Manila

ಮಾಣಿಲ :  ಮುನಷ್ಯ ಸ್ವಾಇಚ್ಚೆಯಿಂದ ಬದಲಾದಲ್ಲಿ ಸಮಾಜ ಪರಿವರ್ತನೆಯಾಗಲು ಸಾಧ್ಯ. ಭಜನೆ, ಪ್ರಾರ್ಥನೆ, ಆಚರಣೆ ಮೂಲಕ ಸಂಸ್ಕಾರ ಸಿಗುತ್ತದೆ. ಪ್ರತಿಯೊಂದು ಧಾರ್ಮಿಕ ಕ್ಷೇತ್ರದಿಂದಲೂ ಸಂಸ್ಕಾರ ನೀಡುವ ಕಾರ್ಯವಾಗಬೇಕು  ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು  ಮಾಣಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಮೂರನೇ ದಿನವಾದ ಮಂಗಳವಾರ  ಭಜನೋತ್ಸ ವದ ಅಂಗವಾಗಿ ಶ್ರೀಧಾಮದ ಶ್ರೀ ನಿತ್ಯಾನಂದ ವೇದಿಕೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜವನ್ನು ದುಶ್ಚಟಮುಕ್ತವಾಗಿಸಿ ಅದನ್ನು ತಿದ್ದುವ ಕಾರ್ಯ ಮಾಣಿಲ ಶ್ರೀಗಳಿಂದ […]

ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಫೆ. 21 ರಂದು ಅಷ್ಟಪವಿತ್ರ ನಾಗಮಂಡಲೋತ್ಸವ

Friday, February 16th, 2018
Manila

ಮಂಗಳೂರು  :  ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರ. ಫೆ. 18 ರಿಂದ ಶ್ರೀ ಕ್ಷೇತ್ರದಲ್ಲಿ ಲೋಕಕಲ್ಯಾಣಾರ್ಥವಾಗಿ ಅಷ್ಟಪವಿತ್ರ ನಾಗಮಂಡಲೋತ್ಸವ, ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಪ್ರತಿಷ್ಠಾ ವರ್ಧಂತ್ಯುತ್ಸವ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ  ಮೋಹನದಾಸ ಪರಮಹಂಸ ಸ್ವಾಮೀಜಿ  ಯವರು ಕ್ಷೇತ್ರದಲ್ಲಿ ಈ ವರ್ಷ ಅಪೂರ್ವ ಕಾರ್ಯಕ್ರಮವೊಂದಕ್ಕೆ ಭರದ ಸಿದ್ಧತೆ ನಡೆಯುತ್ತಿದೆ.   ಫೆ. 18ರಂದು ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ, ದುರ್ಗಾಪರಮೇಶ್ವರಿಗೆ ಸ್ವರ್ಣ ಪ್ರಭಾವಳಿಯ ಮೆರವಣಿಗೆ, ಫೆ. 19ರಂದು ಶ್ರೀನಿವಾಸ ಕಲ್ಯಾಣೋತ್ಸವ, ಫೆ. 20ರಂದು ಪ್ರತಿಷ್ಠಾ ವರ್ಧಂತ್ಯುತ್ಸವ, […]