ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ನಿವೃತ್ತ ನೌಕರರ ವಾರ್ಷಿಕ ಸ್ನೇಹ ಮಿಲನ 

Tuesday, January 12th, 2021
sneha milana

ಮಂಗಳೂರು : ಕುಲಶೇಖರದಲ್ಲಿರುವ ಒಕ್ಕೂಟದ ಸಭಾಗೃಹದಲ್ಲಿ ದಕ್ಷಿಣ ಕನ್ನಡ ಹಾಲು ಒಕ್ಕೂಟದ ನಿವೃತ್ತ ನೌಕರರು ತೃತೀಯ ವರ್ಷದ ಸ್ನೇಹ ಮಿಲನ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಿದರು. ಕಾರ್ಯಕ್ರಮಕ್ಕೆ ದೀಪ ಪ್ರಜ್ವಲನದ ಮೂಲಕ ಚಾಲನೆ ನೀಡಿದ, ಒಕ್ಕೂಟದ ಅಧ್ಯಕ್ಷರಾದ ರವಿರಾಜ ಹೆಗ್ಡೆಯವರು, ನಿವೃತ್ತ ನೌಕರರಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪರಿಣಿತಿ ಪಡೆದ ಸಂಪನ್ಮೂಲ ವ್ಯಕ್ತಿಗಳಿದ್ದು, ತಮ್ಮ ಅನನ್ಯ ಸೇವೆಯಿಂದ ಸಂಸ್ಥೆಗೆ ಭದ್ರ ಬುನಾದಿ ಹಾಕಿದ್ದಾರೆ. ಇವರ ಸೇವಾ ತತ್ಪರತೆ, ಅಭಿಮಾನ ಪರಿಶ್ರಮದಿಂದ ಒಕ್ಕೂಟವು ರಾಜ್ಯ, ರಾಷ್ಟ್ರ ಮಟ್ಟದ ಕೀರ್ತಿಗೆ ಪಾತ್ರವಾಗಿದೆಯೆಂದು ನೌಕರರ […]

ದಕ್ಷಿಣ ಕನ್ನಡ ಸಹಕಾರಿ ಉತ್ಪಾದಕರ ಒಕ್ಕೂಟ ರೂ.850.27 ಕೋಟಿ ವಹಿವಾಟು ಮಾಡಿ ರೂ.707.16ಲಕ್ಷ ನಿವ್ವಳ ಲಾಭ

Saturday, December 5th, 2020
Raviraja Hegde

ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ಉತ್ಪಾದಕರ ಒಕ್ಕೂಟ ನಿ, ಕುಲಶೇಖರ, ಮಂಗಳೂರು  ಒಕ್ಕೂಟದ ಸರ್ವ ಸದಸ್ಯರ (ವರ್ಚುವಲ್ ಕಾನ್ಫ್ಪರೆನ್ಸ್) ವಾರ್ಷಿಕ ಸಾಮಾನ್ಯ ಸಭೆ ದಿನಾಂಕ 05-12-20220 ರಂದು ನಡೆಯಿತು . ಒಕ್ಕೂಟದ ಅಧ್ಯಕರಾದ ಶ್ರೀ ರವಿರಾಜ ಹೆಗ್ಡೆಯವರು ಸಭೆಯ ಅಧ್ಯಕ್ಷತೆಯನ್ನು  ವಹಿಸಿ ಮಾತಾನಾಡುತ್ತಾ, ವರದಿ ಸಾಲಿನಲ್ಲಿ ಒಕ್ಕೂಟವು ಅಭಿವೃದ್ಧಿ ಪಥದತ್ತ ಸಾಗುವ ಬಗ್ಗೆ ವಿವರಿಸುತ್ತಾ, 2019-20 ನೇ ಸಾಲಿನಲ್ಲಿ ಸರಾಸರಿ 602 ಕೆ.ಜಿ.ಯಂತೆ 726  ಸಂಘಗಳಿಂದ ದಿನಂಪ್ರತಿ 436936 ಕೆ.ಜಿ. ಹಾಲಿನ ಸಂಗ್ರಹಣೆ ಮಾಡಲಾಗಿದೆ. ಒಟ್ಟಾರೆ ಶೇ. 4.25 ರ ಪ್ರಗತಿಯೊಂದಿಗೆ […]

ಸಹಕಾರಿ ಸಪ್ತಾಹದ ಅಂಗವಾಗಿ ನಂದಿನಿ ಅನ್ ವೀಲ್ಸ್ ವಾಹನಕ್ಕೆ ಚಾಲನೆ

Wednesday, November 18th, 2020
DKMUL saptaha

ಮಂಗಳೂರು : ದ.ಕ. ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಆಶ್ರಯದಲ್ಲಿ ಅಖಿಲ ಭಾರತ ಸಹಕಾರಿ ಸಪ್ತಾಹದ ಅಂಗವಾಗಿ ಕುಲಶೇಖರದ ಕೆಎಂಎಫ್‌ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ನಂದಿನಿ ಅನ್ ವೀಲ್ಸ್ ವಾಹನಕ್ಕೆ ಚಾಲನೆ ಬುಧವಾರ ಚಾಲನೆ ನೀಡಲಾಯಿತು, ಕೊರೋನದಿಂದಾಗಿ ಕೆಲ ಸಮಯ ಹಾಲು ಉತ್ಪಾದಕರಿಂದ ಸಂಗ್ರಹಿಸಿದ ಹಾಲನ್ನು ವಿತರಿಸಲು ಸಾಧ್ಯವಾಗದೆ ಕೆಎಂಎಫ್ ನಷ್ಟ ಅನುಭವಿಸಬೇಕಾಯಿತಾದರೂ, ಈಗ ಚೇತರಿಸಿಕೊಳ್ಳುತ್ತಿದೆ. ಹಾಗಾಗಿ ಗ್ರಾಮಾಂತರ ಸೊಸೈಟಿಗೆ ಹಾಲು ಹಾಕುವವರ ಬಗ್ಗೆ ಚಿಂತಿಸಿ ಮುಂದಿನ ಜನವರಿಯಿಂದಲಾದರೂ ಅವರಿಗೆ ಹಿಂದಿನ ಧಾರಣೆ […]

ಕೋವಿಡ್-19 ನಿಂದ ನಂದಿನಿ ಹಾಲಿನ ವ್ಯವಹಾರ ರೂ.30.00 ಕೋಟಿ ಕುಸಿತ, ಹಾಲಿನ ಹುಡಿ ದರ ರೂ.160ಕ್ಕೆ ಇಳಿಕೆ

Saturday, June 20th, 2020
nandini Milk

ಮಂಗಳೂರು  : ಒಕ್ಕೂಟದಲ್ಲಿ ಹಾಲು ಶೇಖರಣೆ ಏರಿಕೆಯಾಗಿ, ದಿನವಹಿ 5.0 ಲಕ್ಷ ಕೆಜಿಗೂ ಮೀರಿ ಹಾಲು ಸಂಗ್ರಹಣೆಯಾಗುತ್ತಿದೆ. ಕೋವಿಡ್-19ರ ಸಮಸ್ಯೆಯಿಂದಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಕರ್ನಾಟಕ  ಹಾಲು ಮಹಾಮಂಡಳಿಗೆ ದಿನವಹಿ 86.73 ಲಕ್ಷ ಲೀಟರ್ ಹಾಲು ಸಂಗ್ರಹಣೆಯಾಗುತ್ತಿದ್ದು, ರಾಜ್ಯದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದಲ್ಲಿ ಸುಮಾರು ಶೇ.25ರಷ್ಟು ಕುಸಿತವಾಗಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟಕ್ಕೆ 39.54 ಲಕ್ಷ ಲೀಟರ್ ಬಳಕೆಯಾಗಿ, ದಿನವಹಿ 47.19 ಲಕ್ಷ ಲೀಟರ್ […]

ಹಾಲು ಉತ್ಪಾದಕರ ಸಂಘಗಳ ಎಲ್ಲಾ ಸದಸ್ಯರುಗಳ ರಾಸುಗಳಿಗೆ ವಿಮೆ : ರವಿರಾಜ ಹೆಗ್ಡೆ

Tuesday, May 26th, 2020
Raviraj-Hegde

ಮಂಗಳೂರು  : ಒಕ್ಕೂಟದ ವ್ಯಾಪ್ತಿಗೆ ಬರುವ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರುಗಳ ರಾಸುಗಳು ಮರಣ ಹೊಂದಿದ ಸಂಧರ್ಭದಲ್ಲಿ, ಹೈನುಗಾರರಿಗೆ ಆರ್ಥಿಕ ನಷ್ಟವಾಗುತ್ತಿದ್ದು, ಇದರಿಂದ ಹೈನುಗಾರರು ಹೈನುಗಾರಿಕೆಯಲ್ಲಿ ಮುಂದುವರಿಯಲು ಕಷ್ಟವಾಗುತ್ತದೆ. ಆದುದರಿಂದ ಹೈನುಗಾರರನ್ನು ಹೆಚ್ಚಿನ ರೀತಿಯಲ್ಲಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಉತ್ತೇಜಿಸುವ ದೃಷ್ಟಿಯಿಂದ ಹಾಗೂ ರಾಸುಗಳ ಆಕಸ್ಮಿಕ ಮರಣ ದಿಂದಾಗುವ ಅನಿರೀಕ್ಷಿತ ನಷ್ಟಕ್ಕೆ ಪರಿಹಾರ ನೀಡುವ ಉದ್ಧೇಶದಿಂದ ಹೈನುಗಾರರ ಎಲ್ಲಾ ರಾಸುಗಳಿಗೆ ವಿಮಾ ಸೌಲಭ್ಯಒದಗಿಸಲು ಒಕ್ಕೂಟದ ಆಡಳಿತ ಮಂಡಳಿ ತೀರ್ಮಾನಿಸಿದ್ದು, ಅದರಂತೆ ಒಕ್ಕೂಟದ ಎಲ್ಲಾ ಹಾಲು ಉತ್ಪಾದಕ ಸದಸ್ಯರನ್ನು […]