ಪೊಳಲಿ, ಕಟೀಲು, ಕುತ್ತಾರು ಕೊರಗಜ್ಜ ದೈವದ ಆದಿಕ್ಷೇತ್ರಕ್ಕೆ ಭೇಟಿ ನೀಡಿದ ನಟಿ ರಕ್ಷಿತಾ ಪ್ರೇಮ್ ಮತ್ತು ತಂಡ

Wednesday, October 6th, 2021
Rakshitha-Kuttaru

ಮಂಗಳೂರು : ಝೀ ಕನ್ನಡ ವಾಹಿನಿಯಲ್ಲಿ ಕಾಮಿಡಿ ಕಿಲಾಡಿ, ಡಾನ್ಸ್ ಕರ್ನಾಟಕ ರಿಯಾಲಿಟಿ ಶೋ ಜಡ್ಜ್ ಕನ್ನಡ ಚಿತ್ರರಂಗದ ಖ್ಯಾತ ನಟಿ ರಕ್ಷಿತಾ ಪ್ರೇಮ್ ಹಾಗೂ ಡಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ಕೊರಿಯೋಗ್ರಾಫರ್ ರಾಹುಲ್ ಮತ್ತು ಪ್ರಜ್ವಲ್ ಪೊಳಲಿ ಶ್ರೀ ರಾಜರಾಜೇಶ್ವರಿ ಮತ್ತು ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರ ದರ್ಶನ ನಡೆಸಿ ಇಂದು ಕುತ್ತಾರು ಕೊರಗಜ್ಜನ ಆದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಡಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ಕೊರಿಯೋಗ್ರಾಫರ್ ರಾಹುಲ್ ಅವರ ಹರಕೆ ತೀರಿಸುವುದಕ್ಕೋಸ್ಕರ ನಟಿ […]

ಡ್ರಗ್ಸ್ ದಂಧೆ : ಮಂಡ್ಯದ ಮಾಜಿ ಸಂಸದರ ಮಕ್ಕಳಿಬ್ಬರಿಗೆ ಲಿಂಕ್

Saturday, September 5th, 2020
Rahul

ಮಂಡ್ಯ :  ಸಿಸಿಬಿ ವಶದಲ್ಲಿರುವ ನಟಿ ಸಂಜನಾ ಆಪ್ತ ರಾಹುಲ್ ಜತೆ ನಿರಂತರ ಸಂಪರ್ಕ ಹೊಂದಿರುವ ಶಂಕೆಯ ಮೇರೆಗೆ ಮಂಡ್ಯ ಜಿಲ್ಲೆಯ ಮಾಜಿ ಸಂಸದರ ಮಗ ಹಾಗೂ ಮಗಳಿಗೆ ಸಿಸಿಬಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಬೆಂಗಳೂರಿನಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದರ ಮಾಲೀಕರಾಗಿರುವ ಮಾಜಿ ಸಂಸದರ ಪುತ್ರ ಸಂಜನಾ ಆಪ್ತ ರಾಹುಲ್ ಜತೆ ನಿರಂತರ ಸಂಪರ್ಕದಲ್ಲಿದ್ದು ರಾಹುಲ್‍ನ ವಾಟ್ಸ್ ಆಪ್ ಚಾಟ್, ಕಾಲ್‍ಲಿಸ್ಟ್ ನಲ್ಲಿ ಈ ಸಂಗತಿ ಬೆಳಕಿಗೆ ಬಂದಿದೆ. ಜತೆಗೆ ಪಾರ್ಟಿ, ಕ್ಲಬ್‍ಗಳಲ್ಲಿ […]

ಪಂಚರಾಜ್ಯಗಳ ಚುನಾವಣೆ: ದೇಶದಲ್ಲಿ ಅಲೆ ಎಬ್ಬಿಸಿದ್ದ ಬಿಜೆಪಿಗೆ ಕಾಂಗ್ರೆಸ್​ ಚಾಟಿ ಏಟು..!

Tuesday, December 11th, 2018
congress

ನವದೆಹಲಿ: ಜನರ ಕುತೂಹಲ ಕೆರಳಿಸಿದ್ದ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಈಗಾಗಲೇ ಮಹತ್ವದ ಘಟ್ಟ ತಲುಪಿದೆ. ದೇಶದಲ್ಲಿ ಅಲೆ ಎಬ್ಬಿಸಿದ್ದ ಬಿಜೆಪಿಗೆ ಕಾಂಗ್ರೆಸ್ ಚಾಟಿ ಏಟು ನೀಡುತ್ತಿದೆ. ಚುನಾವಣೆಯಲ್ಲಿ ಬಲ ಸಾಧಿಸುತ್ತಿರುವ ಕೈ ಪಾಳಯಕ್ಕೆ ಇಂದು ಮತ್ತೊಂದು ಖುಷಿ ಇದೆ. ರಾಹುಲ್ ಗಾಂಧಿ ಎಐಸಿಸಿಯ ಅಧ್ಯಕ್ಷ ಪಟ್ಟಕ್ಕೇರಿ ಇಂದಿಗೆ ಒಂದು ವರ್ಷ ಸಂದಿದೆ. ಅಧ್ಯಕ್ಷರಾದಾಗಿನಿಂದ ಸದಾ ಟೀಕೆಗೆ ಒಳಗಾಗುತ್ತಿದ್ದ ರಾಹುಲ್ ಈ ಬಾರಿ ಡಬಲ್ ಖುಷಿ ಅನುಭವಿಸುತ್ತಿದ್ದಾರೆ. ವರ್ಷ ಪೂರ್ಣಗೊಂಡ ಬೆನ್ನಲ್ಲೆ ಚುನಾವಣೆ ಫಲಿತಾಂಶದಲ್ಲಿ ಮುನ್ನಡೆಯೂ ಅವರಿಗೆ ಅಪಾರ […]

ವಿಶ್ವಾಸಮತ ಸಾಧಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯಶಸ್ವಿ..!

Saturday, July 21st, 2018
narendra-modi

ನವದೆಹಲಿ: ಲೋಕಸಭೆಯಲ್ಲಿ ಶುಕ್ರವಾರ ನಿರೀಕ್ಷೆಯಂತೆ ವಿಶ್ವಾಸಮತ ಸಾಧಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯಶಸ್ವಿಯಾಗಿದೆ. ಈ ವೇಳೆ ಪ್ರಧಾನಿ ಮೋದಿಯವರು ತಮ್ಮ ಭಾಷಣದಲ್ಲಿ ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದರು. ವಿಶ್ವಾಸಮತಕ್ಕೆ 226 ಮಾತ್ರ ಬೇಕಾಗಿತ್ತು. ಎನ್ಡಿಎ 325 ಹಾಗೂ ಪ್ರತಿಪಕ್ಷಗಳು ಕೇವಲ126 ಮತ ಪಡೆದವು. ಹೀಗಾಗಿ ಮೋದಿ ಸರ್ಕಾರ ನಿರೀಕ್ಷೆಯಂತೆ ವಿಶ್ವಾಸ ಮತ ಪರೀಕ್ಷೆಯಲ್ಲಿ ಪಾಸಾಯಿತು. ಒಬ್ಬ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಲು ಇಷ್ಟೊಂದು ಪ್ರಯತ್ನ ಮಾಡುವ ಅಗತ್ಯತೆ ಇತ್ತಾ ಎಂದು ಪ್ರಧಾನಿ ಪ್ರಶ್ನಿಸಿದರು. ಇನ್ನು ಸದನದಲ್ಲಿ […]

ರೆಡ್ಡಿ ಸೋದರರನ್ನು ಶೋಲೆ ಚಿತ್ರದ ಪಾತ್ರಗಳಿಗೆ ಹೋಲಿಸಿದ ರಾಹುಲ್‌

Tuesday, May 8th, 2018
rahul-gandhi

ಚಿಕ್ಕಬಳ್ಳಾಪುರ: ಬಿಜೆಪಿ, ಆರ್‌ಎಸ್ಎಸ್ ಬಡವರ ಬಗ್ಗೆ ಕಾರ್ಯಕ್ರಮ ಮಾಡ್ತಿಲ್ಲ. ಬಡವರ ವಿರೋಧಿ ಕೆಲಸ ಮಾಡ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಿಡಿಕಾರಿದರು. ಗೌರಿಬಿದನೂರಿನಲ್ಲಿ ಮಾತನಾಡಿದ ರಾಹುಲ್, ಬಿಜೆಪಿ ಜಾತಿ, ಧರ್ಮ, ಭಾಷೆಯ ಹೆಸರಲ್ಲಿ ಕರ್ನಾಟಕವನ್ನು ಇಬ್ಭಾಗ ಮಾಡಲು ಹೊರಟಿದೆ. ಸೂಟು ಬೂಟು ಹಾಕಿಕೊಂಡವರಿಗೆ ಮಾತ್ರ ಪ್ರಧಾನಿ ಕಚೇರಿ ಬಾಗಿಲು ತೆರೆಯುತ್ತೆ ಎಂದು ಲೇವಡಿ ಮಾಡಿದರು. ಇದೇ ವೇಳೆ ಶೋಲೆ ಸಿನಿಮಾದ ಗಬ್ಬರ್, ಸಾಂಬಾ, ಕಾಲಿಯಾ ಪಾತ್ರಗಳನ್ನು ರಾಹುಲ್ ನೆನಪಿಸಿದರು. ಪ್ರಧಾನಿ ಮೋದಿ ಅವರು ರೆಡ್ಡಿ ಬ್ರದರ್ಸ್‌ರಂತಹ […]

ಮೋದಿ ನಂತರ ಕಲಬುರಗಿಗೆ ಇಂದು ರಾಹುಲ್‌‌ ಭೇಟಿ..

Friday, May 4th, 2018
rahul-gandhi

ಕಲಬುರಗಿ: ಜಿಲ್ಲೆಯಲ್ಲಿ ಸ್ಟಾರ್ ಕ್ಯಾಂಪೇನರ್ಸ್‌ ಅಬ್ಬರ ಜೋರಾಗಿದೆ. ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಆಗಮಿಸಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದ್ದರು. ಇದರ ಬೆನ್ನಲ್ಲೇ ಇಂದು ರಾಹುಲ್ ಗಾಂಧಿ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಚಿಂಚೋಳಿ ತಾಲೂಕಿನ ಕಾಳಗಿಗೆ 12ಗಂಟೆಗೆ ಹೆಲಿಕಾಪ್ಟರ್‌‌ ಮೂಲಕ ಬಂದಿಳಿಯಲಿರುವ ರಾಗಾ ಜಿಲ್ಲೆಯ 9 ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಪರ ಸಮಾವೇಶ ಮೂಲಕ ಮತಯಾಚನೆ ಮಾಡಲಿದ್ದಾರೆ. ಇದಕ್ಕಾಗಿ ಕಾಳಗಿಯಲ್ಲಿ ಸರ್ವ ಸಿದ್ಧತೆ ಮಾಡಿಕೊಂಡಿದ್ದು, ಬೃಹತ್ ವೇದಿಕೆ ಹಾಕಲಾಗಿದೆ. ಜಿಲ್ಲೆಯ 9 ಕ್ಷೇತ್ರಗಳಿಂದ ಜನರನ್ನು ಸೇರಿಸುವ ಕೆಲಸವನ್ನು ಕಾಂಗ್ರೆಸ್ […]

ಚೀಟಿ ಇಲ್ಲದೇ 15 ನಿಮಿಷ ಮಾತನಾಡುವ ಚಾಲೆಂಜ್‌‌ ಸ್ವೀಕರಿಸಿ: ರಾಹುಲ್‌ಗೆ ಉಮರ್‌ ಅಬ್ದುಲ್ಲಾ ಸಲಹೆ

Wednesday, May 2nd, 2018
rahul-gandhi

ಶ್ರೀನಗರ: ರಾಹುಲ್ ಗಾಂಧಿ ಚೀಟಿ ಇಲ್ಲದೇ ಕರ್ನಾಟಕ ಸರ್ಕಾರದ ಸಾಧನೆಯನ್ನು 15 ನಿಮಿಷ ಭಾಷಣ ಮಾಡಲಿಕ್ಕೆ ಆಗುತ್ತಾ? ವಿಶ್ವೇಶ್ವರಯ್ಯ ಹೆಸರನ್ನು 5 ಬಾರಿ ಸ್ಪಷ್ಟವಾಗಿ ಹೇಳಲು ಸಾಧ್ಯವೇ ಎಂದು ಮೋದಿ ಹಾಕಿರುವ ಬಹಿರಂಗ ಸವಾಲು ಸ್ವೀಕರಿಸಿ ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್‌ ಅಬ್ದುಲ್ಲಾ ರಾಹುಲ್‌ ಗಾಂಧಿಗೆ ಸಲಹೆ ನೀಡಿದ್ದಾರೆ. ಕೈಯಲ್ಲಿ ಚೀಟಿ ಹಿಡಿದುಕೊಳ್ಳದೆ ಕರ್ನಾಟಕದಲ್ಲಿ ಕಾಂಗ್ರೆಸ್‌ ಸರಕಾರ ಮಾಡಿರುವ ಸಾಧನೆಯ ಬಗ್ಗೆ ನಿಮಗೆ ತಿಳಿದಿರುವ ಹಿಂದಿ, ಇಂಗ್ಲಿಷ್‌ ಅಥವಾ ಯಾವುದೇ ಭಾಷೆಯಲ್ಲಿ ಹದಿನೈದು ನಿಮಿಷಗಳ ಮಾತನಾಡಿ […]

ರಾಹುಲ್‌ ಭೇಟಿಯಿಂದ ಪಕ್ಷಕ್ಕೆ ಬಲ… ದ.ಕ. 8 ಸ್ಥಾನಗಳಲ್ಲೂ ಗೆಲ್ಲುತ್ತೇವೆ: ಖಾದರ್‌‌‌‌‌‌

Thursday, March 22nd, 2018
u-t-kader

ಮಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ದಕ್ಷಿಣ ಕನ್ನಡ ಜಿಲ್ಲೆಗೆ ಬೇಟಿ ನೀಡಿದ್ದರಿಂದ ಪಕ್ಷಕ್ಕೆ ಬಲ ಬಂದಿದೆ. ಜಿಲ್ಲೆಯ ಎಂಟೂ ವಿಧಾನಸಭಾ ಕ್ಷೇತ್ರಗಳನ್ನು ಕಾಂಗ್ರೆಸ್ ಜಯಿಸಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಭೇಟಿಯಿಂದ ಕಾರ್ಯಕರ್ತರಲ್ಲಿ ಹುರುಪು ಬಂದಿದೆ. ಮಂಗಳವಾರ ನಡೆದ ಕಾರ್ಯಕ್ರಮ ಯಶಸ್ವಿಯಾಗಿದ್ದು, ಈಗ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ 7ರಲ್ಲಿ ಕಾಂಗ್ರೆಸ್ ಶಾಸಕರಿದ್ದು, ಈ ಸಲದ ಚುನಾವಣೆಯಲ್ಲಿ ಎಂಟೂ ಸ್ಥಾನಗಳಲ್ಲೂ ಕಾಂಗ್ರೆಸ್ […]

ರಾಹುಲ್ ಪ್ರವಾಸದ ಬೆನ್ನಲ್ಲೇ ಮಾ.26 ರಿಂದ ಅಮಿತ್‌ ಶಾ ರಾಜ್ಯ ಪ್ರವಾಸ

Wednesday, March 21st, 2018
amit-shah

ಬೆಂಗಳೂರು: ಒಂದೆಡೆ ಕರಾವಳಿ ಜಿಲ್ಲೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪಕ್ಷದ ಸಂಘಟನೆಗೆ ರಾಜ್ಯ ಪ್ರವಾಸ ನಡೆಸುತ್ತಿದ್ದರೆ, ಮತ್ತೊಂದೆಡೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾ. 26 ರಿಂದ ರಾಜ್ಯ ಪ್ರವಾಸ ಆರಂಭಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಚುನಾವಣಾ ಆಯೋಗ ಯಾವುದೇ ಸಂದರ್ಭದಲ್ಲಿ ವಿಧಾನಸಭಾ ಚುನಾವಣೆಗೆ ಮುಹೂರ್ತ ನಿಗದಿಪಡಿಸಲು ಸಜ್ಜಾಗಿದೆ. ಇದರ ಸುಳಿವು ಅರಿತಿರುವ ಬಿಜೆಪಿ ಕಾರ್ಯಕರ್ತರನ್ನು ಹುರಿದುಂಬಿಸಲು ಸರಣಿ ಸಮಾರಂಭಗಳನ್ನು ಹಮ್ಮಿಕೊಂಡಿದೆ. ಮಾ. 26ರಿಂದ ಮೂರು ದಿನಗಳ ಕಾಲ ಅಮಿತ್ ಶಾ ಅವರು […]

ರಾಹುಲ್ ಜನಾಶೀರ್ವಾದ ಯಾತ್ರೆಗೆ ಸಿಕ್ಕ ಬೆಂಬಲದಿಂದ ಬಿಜೆಪಿಗೆ ನಿರಾಶೆ: ಐವನ್‌ ಡಿಸೋಜಾ

Monday, March 5th, 2018
ivan-desouza

ಮಂಗಳೂರು: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರ ಜನಾಶೀರ್ವಾದ ಯಾತ್ರೆಗೆ ರಾಜ್ಯದಲ್ಲಿ ಸಿಗುತ್ತಿರುವ ಜನಬೆಂಬಲದಿಂದ ಬಿಜೆಪಿಗೆ ನಿರಾಸೆಯಾಗಿದ್ದು, ಸೋಲಿನ ಭೀತಿ ಕಾಡಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ, ರಾಜ್ಯ ಕಾಂಗ್ರೆಸ್ ವಕ್ತಾರ ಐವನ್ ಡಿಸೋಜಾ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಯಾತ್ರೆಗೆ ಅಭೂತಪೂರ್ವ ಜನಬೆಂಬಲ ದೊರೆತಿದೆ. ರಾಜ್ಯ ಸರ್ಕಾರದ ಅಭಿವೃದ್ಧಿ ಕೆಲಸಗಳಿಗೂ ಜನ ಮನ್ನಣೆ ದೊರೆತಿದೆ. ಆದರೆ ಮೋದಿಯವರು ಬೆಂಗಳೂರು, ದಾವಣಗೆರೆಯಲ್ಲಿ ನಡೆಸಿದ ಸಭೆಗೆ ನಿರೀಕ್ಷಿತ ಪ್ರಮಾಣದಲ್ಲಿ ಜನೋತ್ಸಾಹ ಕಂಡಿಲ್ಲ. ಇದರಿಂದ ಕಂಗೆಟ್ಟಿರುವ ಬಿಜೆಪಿ […]