ಬೆಳೆ ಸಮೀಕ್ಷೆ ವಿನೂತನ ಕೃಷಿ ಆ್ಯಪ್ ಬಿಡುಗಡೆಗೊಳಿಸಿದ ಡಾ.ಭರತ್ ಶೆಟ್ಟಿ ವೈ

Tuesday, August 24th, 2021
krishi App

ಸುರತ್ಕಲ್ : ರೈತರಿಗೆ ಮಾಹಿತಿ ನೀಡುವ ಸಲುವಾಗಿ,ಬೆಳೆ ಸಮೀಕ್ಷೆ, ಹಾನಿಯಾದಲ್ಲಿ ಪರಿಹಾರ ಪಡೆಯಲು ಅನುಕೂಲವಾಗುವಂತೆ ದಾಖಲೀಕರಣಕ್ಕೆ ಸರಕಾರ ಹೊಸ ತಂತ್ರಜ್ಞಾನ ಬಳಸಿ ಕೃಷಿ ಆ್ಯಪ್ ಹೊರ ತಂದಿದ್ದು ಕೃಷಿ ಇಲಾಖೆಯ ಅಧಿಕಾರಿಗಳು ಗ್ರಾಮ ಮಟ್ಟದಲ್ಲಿ ಮಾಹಿತಿ ನೀಡುವ ಮೂಲಕ ಇದರ ಸದುಪಯೋಗ ಆಗಬೇಕಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದರು. ಅವರು ಕಾವೂರಿನಲ್ಲಿ ಕೃಷಿ ಇಲಾಖೆ ಆಯೋಜಿಸಿದ್ದ ಆ್ಯಪ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರೈತ ತಾನು ಬೆಳೆಯುವ ಬೆಳೆಯ ಬಗ್ಗೆ ಈ ಆಪ್‍ನಲ್ಲಿ ಹಾಕಿ ಮಾಹಿತಿ […]

ಸೂಕ್ಷ್ಮ ನೀರಾವರಿ ಯೋಜನೆಯಡಿ ಎಲ್ಲಾ ವರ್ಗದ ರೈತರಿಗೆ ಈ ಹಿಂದೆ ನೀಡುತ್ತಿದ್ದ ಸಬ್ಸಿಡಿ ಮುಂದುವರಿಕೆ : ಕೃಷಿ ಸಚಿವ ಬಿ.ಸಿ.ಪಾಟೀಲ್

Friday, July 16th, 2021
BC Pateel

ಬೆಂಗಳೂರು : ಮುಖ್ಯಮಂತ್ರಿಗಳ ಸೂಕ್ಷ್ಮ ನೀರಾವರಿ ಯೋಜನೆಯಡಿ ಎಲ್ಲಾ ವರ್ಗದ ರೈತರಿಗೆ ಈ ಹಿಂದೆ ನೀಡುತ್ತಿದ್ದ ಸಬ್ಸಿಡಿಯನ್ನು ಅದೇ ಮಾದರಿಯಲ್ಲಿ ಮುಂದುವರೆಸುತ್ತಿರುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಶುಕ್ರವಾರ ವಿಕಾಸಸೌಧದ ಸಮ್ಮೇಳನ ಸಭಾಂಗಣದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾ ಕೃಷಿ ಅಧಿಕಾರಿಗಳ ಜೊತೆ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಜಿಲ್ಲೆಗಳಲ್ಲಿನ ಪ್ರಗತಿ ಕುರಿತು ಕೃಷಿ ಸಚಿವರು ಹಾಗೂ ಇಲಾಖಾಧಿಕಾರಿಗಳು ಸಭೆ ನಡೆಸಿದರು. ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಈ ಹಿಂದೆ ಎಲ್ಲಾ ವರ್ಗದ 2 ಹೆಕ್ಟೇರ್ […]

ಕರ್ನಾಟಕದ ಕೋವಿಡ್ ಲಾಕ್ ಡೌನ್ ಪ್ಯಾಕೇಜ್ ಇಲ್ಲಿದೆ ನೋಡಿ

Wednesday, May 19th, 2021
yedyurappa

ಬೆಂಗಳೂರು: ಕೊರೋನಾ ಎರಡನೇ ಅಲೆ ತೀವ್ರವಾಗಿ ಹೆಚ್ಚಳವಾಗಿದ್ದರಿಂದ ಲಾಕ್ ಡೌನ್ ಮಾಡುವುದು ಅನಿವಾರ್ಯವಾಗಿತ್ತು. ಈ ಲಾಕ್ ಡೌನ್ ನಿಂದ ಹಲವು ಅಸಂಘಟಿತ ವಲಯಗಳಿಗೆ, ರೈತರಿಗೆ, ದಿನಗೂಲಿ ನೌಕರರಿಗೆ, ಬಡವರು-ನಿರ್ಗತಿಕರಿಗೆ ತೀವ್ರ ಸಂಕಷ್ಟವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಸುಮಾರು 1,250 ಕೋಟಿ ರೂಪಾಯಿಗೂ ಅಧಿಕ ವಿಶೇಷ ಪರಿಹಾರ ಪ್ಯಾಕೇಜ್ ನ್ನು ವಿವಿಧ ವರ್ಗಗಳ ಹಿತರಕ್ಷಣೆಗೆ ಬಿಡುಗಡೆ ಮಾಡಿದೆ. ಮುಖ್ಯಮಂತ್ರಿಗಳು ಇಂದು ಪ್ರಕಟಿಸಿದ ಪರಿಹಾರ ಪ್ಯಾಕೇಜ್  ಇಲ್ಲಿದೆ ನೋಡಿ.  *ಹೂವು ಬೆಳೆಯುವ ರೈತರಿಗೆ ಹಾನಿ ಆಗಿದ್ದರೆ ಹೆಕ್ಟೇರ್‌ಗೆ ₹10,000 ನೀಡಲಾಗುವುದು. ಇದರಿಂದ 20 […]

ದೇಶದ 9 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ಸುಮಾರು 18,000 ಕೋಟಿ ರೂ.ಗಳು ವರ್ಗಾವಣೆ

Friday, December 25th, 2020
Vajapayee Birthday

ಮಂಗಳೂರು :  ರಾಜಕೀಯವನ್ನು ಪ್ರಾಮಾಣಿಕತೆ, ಶ್ರದ್ಧೆ ಹಾಗೂ ರಾಷ್ಟ್ರಭಕ್ತಿಯ ಚೌಕಟ್ಟಿನಲ್ಲಿ ನಿಲ್ಲಿಸಿದವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. ಇದೀಗ ಅವರ ಚಿಂತನಾ ಹಾದಿಯಲ್ಲಿ ಪ್ರಧಾನಿ ಮೋದಿಯವರು ಕಿಸಾನ್ ಸಮ್ಮಾನ್‌ನಂತಹ ಹಲವಾರು ಯೋಜನೆ, ಕಾಯ್ದೆಗಳ ಮೂಲಕ ರೈತರಿಗೂ ಸ್ವಾಭಿಮಾನದ ಬದುಕನ್ನು ಕಲ್ಪಿಸುತ್ತಿದ್ದಾರೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ನಗದರ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ದ.ಕ. ಜಿಲ್ಲಾ ಬಿಜೆಪಿ ಘಟಕ ಹಾಗೂ ರೈತ ಮೋರ್ಛಾದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಮಾಜಿ ಪ್ರಧಾನಿ ಅಟಲ್ […]

ಸಿಪಿಎಂ ಪಕ್ಷದ ಹಿರಿಯ ಮುಂದಾಳು ಮೋರ್ಲ ವೆಂಕಪ್ಪ‌ ಶೆಟ್ಟಿ ನಿಧನ

Saturday, November 28th, 2020
Venkappa Shetty

ಮಂಗಳೂರು : ಸಿಪಿಎಂ ಪಕ್ಷದ ಹಿರಿಯ ಮುಂದಾಳು, ಯಕ್ಷಗಾನ ತಾಳಮದ್ದಲೆ ಅರ್ಥಧಾರಿ, ಕಂಚಿನ ಕಂಠದ ಮಾತುಗಾರ, ವಿಮರ್ಶಕರು, ಚಿಂತಕರಾಗಿರುವ ಮೋರ್ಲ ವೆಂಕಪ್ಪ‌ ಶೆಟ್ಟಿ (87) ಶನಿವಾರ ಬೆಳಗ್ಗೆ ನಿಧನರಾದರು. ಸಿಪಿಎಂ ಪಕ್ಷದಲ್ಲಿ 1965 ರಲ್ಲಿ ರೈತರ ಬೇಡಿಕೆ ಈಡೇರಿಸಲು ಮಂಗಳೂರಿನಿಂದ ಬೆಂಗಳೂರು ತನಕ ಕಾಲ್ನಡಿಗೆ ಜಾಥಾ ನಡೆಸಿದ್ದರು. ಬೀಡಿ ಕಾರ್ಮಿಕರ, ರೈತರ ಪರ ಹೋರಾಟ ಮಾಡಿ ಜನ ಮೆಚ್ಚುಗೆ ಗಳಿಸಿದ್ದರು. ವರ್ಕಾಡಿ ಗಡಿಪ್ರಧಾನ ಮನೆಯವರಾಗಿದ್ದ ವೆಂಕಪ್ಪ‌ ಶೆಟ್ಟಿ ಜ್ಞಾನ ಭಂಡಾರ ಅತಿ ದೊಡ್ಡದು, ಸರಸ್ವತಿ ನಾಲಗೆಯ ತುದಿಯಲ್ಲೇ […]

ಕೇಂದ್ರದ ಬಿದಿರು ಮಿಷನ್ : ಬಿದಿರು ಸಸಿ ಪಡೆಯಲು ನೋಂದಣಿಗೆ ಸೂಚನೆ

Tuesday, July 21st, 2020
bambo

ಗದಗ : ರಾಷ್ಟ್ರೀಯ ಬಿದಿರು ಮಿಷನ್ ಯೋಜನೆಯಡಿ ಅರಣ್ಯೇತರ ಮತ್ತು ಖಾಸಗೀ ಜಮೀನುಗಳಲ್ಲಿ ಬಿದಿರು ನೆಡುತೋಪು ಬೆಳೆಸಲು ಅವಕಾಶ ಇದ್ದು ಗದಗ ಜಿಲ್ಲೆಯ ಆಸಕ್ತಿಯುಳ್ಳ ರೈತರು ಎನಬಿಎಂ ಡಾಟ್ ಎನೈಸಿ ಡಾಟ ಇನ್ ವೆಬಸೈಟನಲ್ಲಿ ನೋಂದಣಿ ಮಾಡಿಕೊಳ್ಳಲು ಗದಗ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರೈತರ ಮತ್ತು ಜಮೀನು ಇರುವವರ ಆದಾಯ ಹೆಚ್ಚಿಸುವ, ವಾತಾವರಣದ ಬದಲಾವಣೆಗೆ ಹಾಗೂ ಕೈಗಾರಿಕೆಗಳಿಗೆ ಕಚ್ಚಾವಸ್ತು ಪೂರೈಕೆಗೆ ಪೂರಕವಾದ ರಾಷ್ಟಿಯ ಬಿದಿರು ಮಿಶನ್ ಯೋಜನೆಯನ್ನು ಕೇಂದ್ರದ ಕೃಷಿ […]

ಭಾರೀ ಮಳೆಯಿಂದಾಗಿ ಈರುಳ್ಳಿ ಬೆಲೆ ಕುಸಿತ: ರೈತರು ಕಂಗಾಲು

Friday, September 28th, 2018
onion-cost

ಚಿಕ್ಕಮಗಳೂರು: ಕಳೆದ ಮೂರು ವರ್ಷದ ಹಿಂದೆ ಬಂಪರ್ ಬೆಳೆಯಿಂದಾಗಿ ರೈತರಿಗೆ ಹೆಚ್ಚಿನ ಲಾಭ ತಂದುಕೊಟ್ಟಿದ್ದ ಈರುಳ್ಳಿ ಈ ಬಾರಿ ರೈತರಿಗೆ ಕಣ್ಣೀರು ತರಿಸಿದೆ. ಚಿಕ್ಕಮಗಳೂರಿನ ಬಯಲುಸೀಮೆ ಭಾಗದಲ್ಲಿ ಬೆಳೆದ ಶೇ. 50 ರಷ್ಟು ಈರುಳ್ಳಿ ಈ ಬಾರಿಯ ಅತಿಯಾದ ಮಳೆಯಿಂದ ಸಂಪೂರ್ಣ ಹಾನಿಯಾಗಿತ್ತು. ಸದ್ಯ ಮಾರುಕಟ್ಟೆಯಲ್ಲಿ ಈರುಳ್ಳಿ ಧಾರಣೆ ಕೆಜಿಗೆ 3 ರಿಂದ 4 ರೂ. ಕುಸಿತ ಕಂಡಿರೋದು ಈರುಳ್ಳಿ ಬೆಳೆಗಾರರನ್ನ ಕಂಲಾಗಿಸಿದೆ. ಹೌದು, ಬಿರು ಬಿಸಿಲಲ್ಲಿ ಈರುಳ್ಳಿ ಚೀಲ ರೆಡಿ ಮಾಡ್ತಿರೋ ರೈತರ ಮನದಲ್ಲಿ ಈಗ […]

ರೈತರಿಗೆ ಹಾಗೂ ಜೇನು ಕೃಷಿ ಆಸಕ್ತರಿಗೆ ತರಬೇತಿ ಮತ್ತು ಸಹಾಯಧನ

Wednesday, August 8th, 2018
Honey farm

ಮಂಗಳೂರು : ರೈತರಿಗೆ ಹಾಗೂ ಜೇನು ಕೃಷಿ ಆಸಕ್ತರಿಗೆ ತೋಟಗಾರಿಕಾ ಇಲಾಖಾ ವತಿಯಿಂದ ಜೇನು ಕೃಷಿ ತರಭೇತಿ ಕಾರ್ಯಕ್ರಮ ಆಯೋಜಿಲಾಗುತ್ತಿದ್ದು, ಆಸಕ್ತ ರೈತರು ಅರ್ಜಿಯನ್ನು ಹಾಗೂ ಆದಾರ್ ಪ್ರತಿಯನ್ನು ಆಗಸ್ಟ್ 10 ರ ಒಳಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ, ಮಂಗಳೂರು ಅಥವಾ ರೈತ ಸಂಪರ್ಕ ಕೇಂದ್ರ ಮೂಡುಬಿದಿರೆಯಲ್ಲಿ ನೀಡಿ ನೋಂದಾಯಿಸಲು ಕೋರಿದೆ. ತರಭೇತಿ ಪಡೆದ ರೈತರಿಗೆ ಜೇನುಪೆಟ್ಟಿಗೆ ಹಾಗೂ ಕುಟುಂಬಗಳಿಗೆ ಸಹಾಯಧನ ನೀಡಲಾಗುವುದು. ಎಂದು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಪ್ರಕಟಣೆ ತಿಳಿಸಿದೆ.  ದೂರವಾಣಿ 0824 […]

ರೈತ ಪರ ಯಾತ್ರೆ ಮಾಡಲು ಸಜ್ಜಾಗಿರುವ ಕುಮಾರಸ್ವಾಮಿ

Monday, January 22nd, 2018
kumaraswamy

ಶಿವಮೊಗ್ಗ: ಬಿಜೆಪಿಯ ಪರಿವರ್ತನಾ ಯಾತ್ರೆ ಮುಗಿದ ನಂತರ ರೈತರ ಪರವಾದ ಯಾತ್ರೆಯೊಂದನ್ನು ಆರಂಭಿಸುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಭದ್ರಾವತಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಹಾಗೂ ಯಡ್ಡಿಯೂರಪ್ಪ ಅವರಿಗೆ ರಾಜ್ಯದ ರೈತರ ಬಗ್ಗೆ ಕಾಳಜಿ ಪ್ರಾರಂಭವಾದಂತೆ ಕಾಣುತ್ತಿದೆ. ಪರಿವರ್ತನಾ ರ್ಯಾಲಿಯಲ್ಲಿ ರೈತರ ಆತ್ಮಹತ್ಯೆಗೆ ರಾಜ್ಯ ಸರ್ಕಾರ ಸ್ಪಂಧಿಸುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಹಾಗಾದರೆ ಇಷ್ಟುದಿನ ಅವರು ನಿದ್ದೆ ಮಾಡುತ್ತಿದ್ದರಾ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಕೀಳು ಮಟ್ಟದ ರಾಜಕೀಯ ಆರಂಭವಾಗಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ […]

ಕೃಷಿ ಕೆಲಸಕ್ಕೆ ಕಾರ್ಮಿಕರ ಕೊರತೆ… ರೈತರಿಂದ ಹೊಸ ಉಪಾಯ

Tuesday, January 16th, 2018
workers

ಮಂಗಳೂರು: ನಗರೀಕರಣ, ಕೈಗಾರೀಕರಣದಿಂದ ಕೃಷಿ ಭೂಮಿ ನಾಶವಾಗುತ್ತಿದ್ದರೂ ಇರುವ ಅಲ್ಪ ಸ್ವಲ್ಪ ಜಮೀನಿನಲ್ಲಿ ಇನ್ನೂ ದುಡಿಯುವವರಿದ್ದಾರೆ. ಆದರೆ, ಅಲ್ಲೂ ಕೂಲಿ ಕಾರ್ಮಿಕರ ಕೊರತೆ. ಈ ಸಮಸ್ಯೆಯನ್ನು ಸರಿದೂಗಿಸಲು ರೈತರೇ ಒಂದು ಉಪಾಯ ಕಂಡುಕೊಂಡಿದ್ದಾರೆ. ಹಿಂದೆಲ್ಲಾ ಭತ್ತದ ತೆನೆ ಕಟಾವು ಮಾಡಿ ಮನೆಯಂಗಳಕ್ಕೆ ರಾಶಿ ಹಾಕಿದರೆ ಸಾಕು, ಅಲ್ಲಿಯೇ ಪಡಿ (ಭತ್ತ ಬೇರ್ಪಡಿಸಲು ಬಳಸುವ ಸಾಧನ) ಬಡಿಯುತ್ತಿದ್ದರು. ಭತ್ತ ಕುಟ್ಟಿ ಮುಡಿ ಕಟ್ಟುತ್ತಿದ್ದರು. ಆದರೆ, ಈಗ ಹಾಗಲ್ಲ. ಪಡಿಯನ್ನೇ ಗದ್ದೆ ಬಳಿಯಿಟ್ಟು ಭತ್ತ ಬೇರ್ಪಡಿಸುತ್ತಿದ್ದಾರೆ. ನೀರಿನ ಅಭಾವದಿಂದಾಗಿ ತಮ್ಮೂರಿನಲ್ಲಿ […]