ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತೆ ಮೈಸೂರಿನ ಜಿಲ್ಲಾಧಿಕಾರಿ ಆಗಬೇಕೆಂದು ಸಹಿ ಸಂಗ್ರಹ

Sunday, June 13th, 2021
sindoori

ಮೈಸೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಮತ್ತೆ ಮೈಸೂರಿನ ಜಿಲ್ಲಾಧಿಕಾರಿಯನ್ನಾಗಿ ನೇಮಿಸಬೇಕು ಎಂದು ಆನ್ಲೈನ್ ಕ್ಯಾಂಪೇನ್ ಶುರುವಾಗಿದೆ. ‘ಚೇಂಜ್ ಆರ್ಗ್’ ಸಾಮಾಜಿಕ ಮಾಧ್ಯಮದಲ್ಲಿ “ಬ್ರಿಂಗ್ ಬ್ಯಾಕ್ ರೋಹಿಣಿ ಸಿಂಧೂರಿ” ಹೆಸರಲ್ಲಿ ಸಹಿ ಸಂಗ್ರಹ ಅಭಿಯಾನ ಆರಂಭವಾಗಿದ್ದು, ಈಗಾಗಲೇ ಸುಮಾರು 26 ಸಾವಿರ ಜನರಿಂದ ಸಹಿ ಸಂಗ್ರಹ ಆಗಿದೆ. ಮೈಸೂರಿನಲ್ಲಿ  ಭೂಮಿ ಒತ್ತುವರಿ ತೆರವು. ಕೆರೆಗಳ ಅಕ್ರಮ, ಸರ್ಕಾರಿ ಭೂಮಿ ಅಕ್ರಮ  ಮತ್ತು  ಭೂ ಮಾಫಿಯಾದ ಬುಡಕ್ಕೆ ಕೊಡಲಿ ಇಡುವ ಕೆಲಸವನ್ನು ರೋಹಿಣಿ ಸಿಂಧೂರಿ ಮಾಡಿದ್ದರು. ರೋಹಿಣಿ ಸಿಂಧೂರಿ ಮತ್ತು ಶಿಲ್ಪಾನಾಗ್  ಕಿತ್ತಾಟದಲ್ಲಿ  ಇಬ್ಬರನ್ನೂ ಸರ್ಕಾರ […]

ರೋಹಿಣಿ ಸಿಂಧೂರಿಯವರನ್ನು ಅಮಾನತು ಮಾಡಿ ಆಂಧ್ರಕ್ಕೆ ಕಳುಹಿಸಿ : ಸಾ.ರಾ.ಮಹೇಶ್

Thursday, June 10th, 2021
SaRa Mahesh

ಮೈಸೂರು : ಶಾಸಕ ಸಾ.ರಾ.ಮಹೇಶ್ ಒಡೆತನದಲ್ಲಿರುವ ಸಾ‌.ರಾ. ಚೌಲ್ಟ್ರಿ ರಾಜಕಾಲುವೆ ಮೇಲೆ ನಿರ್ಮಾಣ ಆಗಿದೆ ಎಂದು  ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ದಾಖಲೆ ಬಿಡುಗಡೆ ಮಾಡಿದ ಬೆನ್ನಲ್ಲೇ  ಶಾಸಕ ಸಾ.ರಾ.ಮಹೇಶ್ ಸಿಂಧೂರಿ ವಿರುದ್ಧ ಪ್ರಾದೇಶಿಕ ಆಯುಕ್ತರ ಕಚೇರಿ ಎದುರು  ಏಕಾಂಗಿಯಾಗಿ ಗುರುವಾರ ಪ್ರತಿಭಟನೆಗೆ ಕುಳಿತ್ತಿದ್ದಾರೆ. ಈ ಸಂದರ್ಭ ಮಾತನಾಡಿದ ಅವರು  ಸಾ‌.ರಾ. ಚೌಲ್ಟ್ರಿ ರಾಜಕಾಲುವೆ ಮೇಲೆ ನಿರ್ಮಾಣ ಆಗಿದ್ದೇ  ಆದರೆ ಉನ್ನತ ಮಟ್ಟದ ಅಧಿಕಾರಿಗಳು ಜಾಗದ ಸರ್ವೇ ಮಾಡಲಿ‌. ರಾಜಕಾಲುವೆ ಮೇಲೆ ನಿರ್ಮಾಣ ಆಗಿದ್ದರೆ ಅದನ್ನು ಸಾರ್ವಜನಿಕರ ಬಳಕೆಗಾಗಿ ರಾಜ್ಯಪಾಲರಿಗೆ ಹಸ್ತಾಂತರ […]

ಸರ್ಕಾರಕ್ಕೆ ಮುಜುಗರ ಉಂಟು ಮಾಡಿದ ರೋಹಿಣಿ ಸಿಂಧೂರಿ ಮತ್ತು ಶಿಲ್ಪಾ ನಾಗ್ ಕಿತ್ತಾಟ, ವರ್ಗಾವಣೆಯಲ್ಲಿ ಅಂತ್ಯ

Sunday, June 6th, 2021
Rohini Sindhoori-Shilpa Nag

ಬೆಂಗಳೂರು : ರಾಜ್ಯ ಸರ್ಕಾರ ತಡರಾತ್ರಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರನ್ನು ವರ್ಗಾವಣೆ  ಮಾಡಿದೆ. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರನ್ನಾಗಿ ವರ್ಗಾವಣೆ ಮಾಡಿದರೆ, ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ. ರೋಹಿಣಿ ಇಂದು ಬೆಳಗ್ಗೆಯೇ ಸಿಎಂ ಬಿಎಸ್ ಯಡಿಯೂರಪ್ಪನವರನ್ನು ಭೇಟಿ ಮಾಡಲು ಮುಂದಾಗಿದ್ದರು. ಸುಮಾರು ಎರಡೂವರೆ ಗಂಟೆಗಳ ಕಾಲ […]

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಗೆ ಸಜ್ಜಾದ ಭೂಮಾಫಿಯಾ

Wednesday, June 2nd, 2021
Rohini-Sindhoori

ಮೈಸೂರು: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರನ್ನು ವರ್ಗಾವಣೆ ಮಾಡಬೇಕೆನ್ನುವ ರಾಜಕೀಯ ನಾಯಕರ ಪ್ರಯತ್ನ ತೆರೆಮರೆಯಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿದ್ದು, ಇದರ ಹಿಂದೆ ಭೂಮಾಫಿಯಾ ಕೈವಾಡ ಶಂಕೆ ಕೇಳಿಬಂದಿದೆ. ಕರೊನಾ ನಡುವೆಯೂ ಭೂ ಅಕ್ರಮದ ದೂರುಗಳಿಗೆ ಸಂಬಂಧಿಸಿದ ಫೈಲ್ಗಳನ್ನು ವಿಲೇವಾರಿ ಮಾಡುವ ಪ್ರಯತ್ನಕ್ಕೆ ರೋಹಿಣಿ ಸಿಂಧೂರಿ ಕೈಹಾಕಿ ಭೂಗಳ್ಳರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ರಿಯಲ್ ಎಸ್ಟೇಟ್ ಉದ್ಯಮಿಗಳ ಹಿಂದೆಯೂ ರೋಹಿಣಿ ಬಿದ್ದಿದ್ದಾರೆ. ಹೀಗಾಗಿ ಅಕ್ರಮದಲ್ಲಿ ಭಾಗಿಯಾಗಿರುವವರ ಎದೆಯಲ್ಲಿ ನಡುಕು ಶುರುವಾಗಿದ್ದು, ಕ್ರಮಕ್ಕೂ ಮುನ್ನವೇ ಅವರನ್ನು ವರ್ಗಾವಣೆ ಮಾಡಿಸುವ ಪ್ರಯತ್ನ […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತಮ ಆಡಳಿತ ಅನುಭವ ತಂದಿದೆ- ರೋಹಿಣಿ ಸಿಂಧೂರಿ

Wednesday, April 27th, 2011
ರೋಹಿಣಿ ಸಿಂಧೂರಿ

ಮಂಗಳೂರು : ಭಾರತ ಆಡಳಿತ ಸೇವೆ ಖಾಯಂ ಪೂರ್ವ ಅವಧಿ (ಪ್ರೊಬೇಷನರಿ)ಸೇವೆಗೆ ದಕ್ಷಿಣಕನ್ನಡ ಜಿಲ್ಲೆಗೆ ನಿಯೋಜಿಸಿದ ತಮಗೆ ಜಿಲ್ಲೆಯಲ್ಲಿ ವಿಶಿಷ್ಟವಾದ ಉತ್ತಮ ಆಡಳಿತ ಅನುಭವ ಆಗಿದೆ. ಇದರಿಂದ ನನ್ನ ಮುಂದಿನ ಸರ್ಕಾರಿ ಸೇವೆಗೆ ಬಹಳಷ್ಟು ನೆರವಾಗಲಿದೆ ಎಂದು ಐಎಎಸ್ ಪ್ರೊಬೇಷನರಿ ಜಿಲ್ಲಾಧಿಕಾರಿ ಶ್ರೀಮತಿ ರೋಹಿಣಿ ಸಿಂಧೂರಿ ಅವರು ಜಿಲ್ಲೆಯ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತ ಪಡಿಸಿದರು. ಅವರು ಇಂದು ಪ್ರೋಬೆಷನರಿ ಅವಧಿ ಮುಗಿಸಿದ ಬಗ್ಗೆ  ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದರು. ಇಲ್ಲಿಯ […]