ಸೆಪ್ಟೆಂಬರ್ 23 ರೊಳಗೆ ರಾಜ್ಯ ವಿಧಾನಸಭಾ ಅಧಿವೇಶನ : ಸಭಾಧ್ಯಕ್ಷರಿಂದ ಪರಿಶೀಲನೆ

Thursday, August 6th, 2020
Kageri

ಬೆಂಗಳೂರು :ಕಳೆದ ಮಾರ್ಚ್‍ನಲ್ಲಿ ರಾಜ್ಯ ವಿಧಾನ ಸಭಾ ಅಧಿವೇಶನವು ನಡೆದಿದ್ದು, ಸಂವಿಧಾನಬದ್ದವಾಗಿ ಆರು ತಿಂಗಳ ಒಳಗೆ ಅಂದರೆ ಸೆಪ್ಟೆಂಬರ್ 23 ರೊಳಗೆ, ಮತ್ತೊಮ್ಮೆ ಸಮಾವೇಶಗೊಳ್ಳಬೇಕಿರುವ ಹಿನ್ನೆಲೆಯಲ್ಲಿ ಸದನದಲ್ಲಿ ರಾಜ್ಯ ಸಚಿವ ಸಂಪುಟದ ಸದಸ್ಯರು ಮತ್ತು ಸದನದ ಸದಸ್ಯರು, ಸದನದಲ್ಲಿ ಹಾಜರಿರುವ ಅಧಿಕಾರಿಗಳು ಹಾಗೂ ಮಾಧ್ಯಮದವರ ಆರೋಗ್ಯಕ್ಕೆ ಕೋವಿಡ್-19 ರ ಸೋಂಕು ತಗುಲದಂತೆ ಕ್ರಮ ವಹಿಸುವುದು ಹೇಗೆ ? ಎಂಬುದರ ಕುರಿತು ರಾಜ್ಯ ವಿಧಾನ ಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಲ್ಲಿ ಇಂದು ಸದನದಲ್ಲಿನ ವ್ಯವಸ್ಥೆಗಳನ್ನು […]

ಶಾಸಕ ವಿ. ಸುನಿಲ್‌ ಕುಮಾರ್‌ ಅವರು ವಿಧಾನಸಭೆ ಮುಖ್ಯ ಸಚೇತಕರಾಗಿ ನೇಮಕ

Friday, October 11th, 2019
sunil-kumar

ಬೆಂಗಳೂರು : ಉಡುಪಿ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ವಿ. ಸುನಿಲ್‌ ಕುಮಾರ್‌ ಅವರು ವಿಧಾನ ಸಭೆಯ ಮುಖ್ಯ ಸಚೇತಕರಾಗಿ ನೇಮಕಗೊಂಡಿದ್ದಾರೆ. ಮೂರನೇ ಬಾರಿಗೆ ಶಾಸಕರಾಗಿರುವ ಅವರು ಈ ಹಿಂದೆ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿದ್ದರು. 2002ರಲ್ಲಿ ಬಜರಂಗ ದಳ ರಾಜ್ಯ ಸಂಚಾಲಕರಾಗಿ, ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು.  

ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಸ್.ಮೂರ್ತಿ ನಿವಾಸಗಳ ಮೇಲೆ ಎಸಿಬಿ ದಾಳಿ

Thursday, October 3rd, 2019
s-Moorthy

ಬೆಂಗಳೂರು : ದಂದು ವೆಚ್ಚ ಆರೋಪ ಹಾಗೂ ಸರ್ಕಾರದ ಮಹತ್ವದ ಸೀಲ್(ಮುದ್ರೆ)ಗಳ ದುರುಪಯೋಗದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದ ಕರ್ನಾಟಕ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಸ್.ಮೂರ್ತಿ ನಿವಾಸಗಳ ಮೇಲೆ ಗುರುವಾರ ಎಸಿಬಿ ದಾಳಿ ನಡೆಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿಯಾಗಿದ್ದ ಎಸ್.ಮೂರ್ತಿ ಸೀಲ್ ಗಳ ದುರುಪಯೋಗಪಡಿಸಿಕೊಂಡಿರುವ ಆರೋಪ ಬಂದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದರು. ಗುರುವಾರ ಬೆಳಗ್ಗೆ ಸದಾಶಿವನಗರ, ಆರ್ ಟಿ ನಗರದ ನಿವಾಸಗಳ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೇ ಕೊಡಗು ಬಳಿಯ ಕಾಫಿ ತೋಟದ […]

ಮತ್ತೆ ಮತದಾನ ಮರೆತ ರಮ್ಯಾ… ಸತತ ಮೂರನೇ ಬಾರಿ ಗೈರು!

Saturday, November 3rd, 2018
Ramya

ಮಂಡ್ಯ: ಮಾಜಿ ಸಂಸದೆ, ಎಐಸಿಸಿ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ಮತದಾನಕ್ಕೆ ಬಾರದಿರುವುದನ್ನ ರಮ್ಯಾ ಆಪ್ತ ವಲಯ ಖಚಿತ ಪಡಿಸಿದೆ. ಕಳೆದ ವಿಧಾನಸಭೆ, ನಗರಸಭೆ ಚುನಾವಣೆಯಲ್ಲೂ ಮತದಾನ ಮಾಡದ ರಮ್ಯಾ, ಈಗ ಸತತ ಮೂರನೇ ಬಾರಿ ಗೈರಾಗುತ್ತಿದ್ದಾರೆ. ಸದ್ಯ ದೆಹಲಿಯಲ್ಲಿರುವ ರಮ್ಯಾ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಅವರು ಮತದಾನ ಮಾಡದಿರುವ ಬಗ್ಗೆ ಆಪ್ತ ವಲಯದಿಂದ ಮಾಹಿತಿ ದೊರೆತಿದೆ.

ವಿಧಾನಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಝಾಕ್ ನಿಧನ

Saturday, October 20th, 2018
abdul

ಮಂಗಳೂರು: ಕೇರಳ ವಿಧಾನಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಝಾಕ್ ಅವರು ಇಂದು ನಿಧನರಾಗಿದ್ದಾರೆ. ಜ್ವರದಿಂದ ಬಳಲುತ್ತಿದ್ದ ಅವರು ಇಂದು ಮಂಜಾನೆ. 5.30ಕ್ಕೆ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರ ಪಾರ್ಥಿವ ಶರೀರವನ್ನು ಕಾಸರಗೋಡು ಜಿಲ್ಲೆಯ ನಾಯನ್ಮಾರ್ ಮೂಲೆಯ ಅವರ ಮನೆಗೆ ಕೊಂಡೊಯ್ಯಲಾಗಿದೆ. ಎರಡು ಬಾರಿ ಮಂಜೇಶ್ವರ ಕ್ಷೇತ್ರದಿಂದ ಕೇರಳ ವಿಧಾನಸಭೆಗೆ ಆಯ್ಕೆಯಾದ ಅಬ್ದುಲ್ ರಜಾಕ್ 2011ರ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಲೀಗ್ ಪಕ್ಷದಿಂದ ಸ್ಪರ್ಧಿಸಿದ್ದರು. ಅವರು ಸಿಪಿಎಂನ ಸಿ.ಎಚ್. ಕುಂಞಂಬುರನ್ನು 5825 […]

ವಿಧಾನಸಭೆ ಉಪ ಸಭಾಧ್ಯಕ್ಷರಾಗಿ ಎಂ.ಕೃಷ್ಣಾರೆಡ್ಡಿ ಅವಿರೋಧ ಆಯ್ಕೆ

Friday, July 6th, 2018
krishna-reddy

ಬೆಂಗಳೂರು: ವಿಧಾನಸಭೆ ಉಪ ಸಭಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ ಸದನಕ್ಕೆ ನೂತನ ಉಪ ಸಭಾಧ್ಯಕ್ಷ ಎಂ.ಕೃಷ್ಣಾರೆಡ್ಡಿ ಅಭಿನಂದನೆ ಸಲ್ಲಿಸಿದರು. ನೂತನ ಉಪ ಸಭಾಧ್ಯಕ್ಷರಾಗಿ ಆಯ್ಕೆಯಾದ ನಂತರ ಸಭಾನಾಯಕರು, ಹಲವು ಮಂದಿ ನಾಯಕರು ಹೇಳಿದ ಅಭಿನಂದನಾ ನುಡಿಗಳಿಗೆ ಪ್ರತಿಯಾಗಿ ಮಾತನಾಡಿದ ಕೃಷ್ಣಾರೆಡ್ಡಿ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಮತ್ತು ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಆಶೀರ್ವಾದದಿಂದ ಪ್ರತಿಪಕ್ಷದ ನಾಯಕರಾದ ಬಿ.ಎಸ್.ಯಡಿಯೂರಪ್ಪ ಅವರ ಸಹಕಾರದಿಂದ ಉಪ ಸಭಾಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ ಎಂದರು. ಈ […]

ವಿಧಾನಸಭೆಯ ಸದ್ಯದ ಮ್ಯಾಜಿಕ್ ನಂಬರ್ 110…!

Saturday, May 19th, 2018
siddaramaih

ಬೆಂಗಳೂರು: ವಿಧಾನಸಭೆಯಲ್ಲಿ ವಿಜಯನಗರ ಶಾಸಕ ಆನಂದ್ ಸಿಂಗ್ ಹಾಗೂ ಮಸ್ಕಿ ಶಾಸಕ ಪ್ರತಾಪ್ ಗೌಡ ಗೈರಾದ ಹಿನ್ನೆಲೆಯಲ್ಲಿ ಮ್ಯಾಜಿಕ್ ಸಂಖ್ಯೆ 110ಕ್ಕೆ ಇಳಿದಿದೆ. ಬಿಜೆಪಿ ಕಡೆಯಿಂದ ಎಲ್ಲಾ 104 ಸದಸ್ಯರಿದ್ದಾರೆ. ಕಾಂಗ್ರೆಸ್‌ನ 78 ಸದಸ್ಯರ ಪೈಕಿ 76 ಮಂದಿ ಉಪಸ್ಥಿತರಿದ್ದಾರೆ. ಜೆಡಿಎಸ್‌ನ 37 ಶಾಸಕರ ಪೈಕಿ 36 ಮಂದಿ ಇದ್ದಾರೆ. ಇವರ ಒಟ್ಟು ಸದಸ್ಯರ ಸಂಖ್ಯೆ 38 ಆಗಿದ್ದರೂ, ಕುಮಾರಸ್ವಾಮಿ ಎರಡು ಕ್ಷೇತ್ರದಲ್ಲಿ ಗೆದ್ದಿರುವ ಕಾರಣ ಇವರ ಶಾಸಕರ ಬಲ 37. ಇಂದು ಎಲ್ಲರೂ ಹಾಜರಾಗುತ್ತಿದ್ದು, ಹೆಚ್.ಡಿ. […]

ಕಾಂಗ್ರೆಸ್ ಸೋತಿದ್ದಕ್ಕೆ ಕಣ್ಣೀರಿಟ್ಟ ಸಿದ್ದರಾಮಯ್ಯ.!

Wednesday, May 16th, 2018
siddaramaih-sad

ಬೆಂಗಳೂರು: ಸಿಎಂ ಕುರ್ಚಿಯಲ್ಲಿ ಕೂರುತ್ತಿದ್ದಾಗ, ಅಕ್ಷರಶಃ ಹುಲಿಯಂತೆ ಘರ್ಜಿಸುತ್ತಿದ್ದ ಸಿದ್ದರಾಮಯ್ಯ ಇದೀಗ ‘ಕುರಿ’ಯಂತಾಗಿದ್ದಾರೆ. ಸದನದಲ್ಲಿ ವಿರೋಧ ಪಕ್ಷಗಳಿಗೆ ಮಾತಲ್ಲೇ ಪೆಟ್ಟು ಕೊಡುತ್ತಿದ್ದ ಸಿದ್ದರಾಮಯ್ಯ ಈಗ ತಾವೇ ಮಂಕಾಗಿಬಿಟ್ಟಿದ್ದಾರೆ. ನಿನ್ನೆಯಷ್ಟೇ (ಮೇ 15) ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿತ್ತು. ”ಈ ಬಾರಿ ಸರ್ಕಾರ ನಮ್ದೇ” ಎಂದು ಬೀಗುತ್ತಿದ್ದ ಸಿದ್ದರಾಮಯ್ಯ, ಜನಾದೇಶ ನೋಡಿ ತಲೆ ಮೇಲೆ ಕೈ ಹೊತ್ತುಕೊಂಡಿದ್ದಾರೆ. ‘ದಾಸ’ ಬಂದರೂ ಸಿದ್ದು ಗೆಲ್ಲಲಿಲ್ಲ: ದರ್ಶನ್ ಪ್ರಚಾರ ಫಲಿಸಲಿಲ್ಲ.! ”ಗೆದ್ದೇ ಗೆಲ್ಲುವೆ” ಎಂಬ ಆತ್ಮವಿಶ್ವಾಸದಿಂದ ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ […]

ಕಣ್ಣೂರಿನಿಂದ ರಾಜ್ಯಕ್ಕೆ ಮೂರನೇ ಮುಖ್ಯಮಂತ್ರಿಯಾಗಿ ಪಿಣರಾಯಿ ವಿಜಯನ್

Friday, May 20th, 2016
pinarayi-vijayan

ಕುಂಬಳೆ: ಸಿಪಿಎಂ ಶಕ್ತಿಕೇಂದ್ರವೆಂದೇ ಪರಿಗಣಿಸಲ್ಪಡುವ ಕಣ್ಣೂರು ಜಿಲ್ಲೆಯಿಂದ ಕೇರಳದ ಮೂರನೇ ಮುಖ್ಯಮಂತ್ರಿಯಾಗಿ ಪಿಣರಾಯಿ ವಿಜಯನ್ ಆಯೆ ಆಗಿದ್ದಾರೆ. ಈ ಹಿಂದೆಕಣ್ಣೂರಿನವರಾಗಿದ್ದ ಹಿರಿಯ ಕಾಂಗ್ರೆಸ್ ರಾಜಕಾರಣಿ ಕೆ.ಕರುಣಾಕರನ್ ಮೂರು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆಸಲ್ಲಿಸಿದ್ದರು. ಸಿಪಿಎಂ ಪಕ್ಷದ ಪ್ರಭಾವಿ ನಾಯಕ ಇ.ಕೆ ನಾಯನಾರ್ ಕೂಡಾ ಮೂರು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದು, ಕಣ್ಣೂರು ಜಿಲ್ಲೆಯ ಬಹು ಉತ್ತರದ ಪ್ರದೇಶದವಾದ ಕಲ್ಯಾಣಶ್ಯೇರಿಯಿಂದ ಬಂದವರಾಗಿದ್ದರು. ಪ್ರಸ್ತುತ ಮುಖ್ಯಮಂತ್ರಿಯಾಗಿ 14ನೇ ವಿಧಾನಸಭೆಯಲ್ಲಿ ಅಧಿಕಾರ ವಹಿಸಲಿರುವ ಪಿಣರಾಯಿ ವಿಜಯನ್ ಸಹ ಕಾಸರಗೋಡು ಸಮೀಪದ ಜಿಲ್ಲೆ ಕಣ್ಣೂರಿನ […]

ಕೃಷ್ಣಾ ನ್ಯಾಯಾಧೀಕರಣ ತೀರ್ಪು ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ

Tuesday, February 18th, 2014
Siddaramaiah

ಬೆಂಗಳೂರು: ಕೃಷ್ಣಾ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ 2013 ನವೆಂಬರ್ 29 ರಂದು ಕೃಷ್ಣಾ ನ್ಯಾಯಾಧೀಕರಣ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ಮಂಗಳವಾರ ನಿರ್ಧರಿಸಿದೆ. ಹಿರಿಯ ವಕೀಲ ನಾರಿಮನ್ ಅವರ ಸಲಹೆಯಂತೆ ಕೃಷ್ಟಾ ನ್ಯಾಯಾಧೀಕರಣ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಕೆಲವೊಂದು ಮಾರ್ಪಾಡು ಮಾಡುವ ಅಗತ್ಯತೆ ಇದ್ದು, ಈ ಸಂಬಂಧ ಸ್ಪಷ್ಟಿಕರಣಕ್ಕಾಗಿ ಸುಪ್ರೀಂಕೋರ್ಟ್‌ಗೆ ವಿಶೇಷ ಮೇಲ್ಮನವಿ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಕೃಷ್ಣಾ ನ್ಯಾಯಾಧೀಕರಣ ತೀರ್ಪಿಗೆ […]