ಏರ್ ಇಂಡಿಯಾ IX 812 ವಿಮಾನ ದುರಂತದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ

Wednesday, May 22nd, 2019
Tribute

ಮಂಗಳೂರು : ಏರ್ ಇಂಡಿಯಾ  IX 812 ವಿಮಾನ ದುರಂತದ ವಾರ್ಷಿಕ ಸ್ಮರಣಾರ್ಥ ಮಡಿದವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವು ನಗರ ಹೊರವಲಯದ ಕೂಳೂರು ಸೇತುವೆ ಸಮೀಪದ ಉದ್ಯಾನವನದಲ್ಲಿ ಬುಧವಾರ ನಡೆಯಿತು. ದ.ಕ.ಜಿಲ್ಲಾಡಳಿತ, ನವಮಂಗಳೂರು ಬಂದರು ಮಂಡಳಿ, ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಸಿಕಾಂಥ್ ಸೆಂಥಿಲ್, ದ.ಕ.ಜಿಲ್ಲಾ ಗೃಹರಕ್ಷಕ ದಳದ ಅಧೀಕ್ಷಕ ಮುರಳಿ ಮೋಹನ್ ಚೂಂತಾರ್, ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ದ.ಕ.ಜಿ.ಪಂ. ಸಿಇಒ ಸೆಲ್ವಮಣಿ, ಅಪರ ಜಿಲ್ಲಾಧಿಕಾರಿ ವೆಂಕಟಾಚಲಪತಿ, ಮಂಗಳೂರು ತಹಶೀಲ್ದಾರ್ […]

ಕೇರಳ ಹೈಕೋಟ್ ತೀರ್ಪು : ವಿಮಾನ ದುರಂತ ಮೃತರ ಕುಟುಂಬಕ್ಕೆ ತಲಾ 75 ಲಕ್ಷ ರೂ. ಪರಿಹಾರ

Wednesday, July 20th, 2011
Air Crash/ವಿಮಾನ ದುರಂತ

ಮಂಗಳೂರು: ಬಜಪೆ ಏರ್ಇಂಡಿಯಾ ವಿಮಾನ ದುರಂತ ಕಳೆದು ಒಂದು ವರುಷದ ಬಳಿಕ ಮೃತರಾದ ಪ್ರಯಾಣಿಕರ ಮನೆಯವರಿಗೆ  ತಲಾ 75 ಲಕ್ಷ ರೂ. ಪರಿಹಾರ ನೀಡುವಂತೆ ಕೇರಳ ಹೈಕೋಟ್ ತೀರ್ಪು ನೀಡಿದೆ. ದುಬೈಯಿಂದ ಮಂಗಳೂರಿಗೆ ತೆರಳುತ್ತಿದ್ದ ಏರ್‌ಇಂಡಿಯಾ ಸಂಸ್ಥೆಗೆ ಸೇರಿದ ಬೋಯಿಂಗ್ IX 892 ವಿಮಾನ ಮೇ 22 2010ರಂದು ಬಜಪೆ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿತ್ತು. ಈ ವಿಮಾನದಲ್ಲಿ 165 ಮಂದಿ ಪ್ರಯಾಣಿಕರಿದ್ದು, ಅವರಲ್ಲಿ 158 ಮಂದಿ ಸಾವಿಗೀಡಾಗಿದ್ದರು. ಇದರಲ್ಲಿ ಮೃತರಾದವರಿಗೆ ಏರ್‌ಇಂಡಿಯಾ ಸಂಸ್ಥೆ ಅತ್ಯಲ್ಪ ಪರಿಹಾರವನ್ನು ನೀಡಿ ಕೈತೊಳೆದುಕೊಂಡಿತ್ತು. ಕುಂಬಳೆಯ ಅಬ್ದುಲ್ […]

ಡಿ.ವೈ.ಎಫ್.ಐ ನೇತೃತ್ವದಲ್ಲಿ ವಿಮಾನ ದುರಂತ ಸಂತ್ರಸ್ತರಿಗೆ ನ್ಯಾಯಯುತವಾದಪರಿಹಾರ ಒದಗಿಸಬೇಕೆಂದು ಪ್ರತಿಭಟನೆ

Thursday, September 9th, 2010
 ಡಿ.ವೈ.ಎಫ್.ಐ ನೇತೃತ್ವದಲ್ಲಿ ವಿಮಾನ ದುರಂತ ಸಂತ್ರಸ್ತರಿಗೆ ನ್ಯಾಯಯುತವಾದಪರಿಹಾರ ಒದಗಿಸಬೇಕೆಂದು ಪ್ರತಿಭಟನೆ

ಮಂಗಳೂರು: ಡಿ.ವೈ.ಎಫ್.ಐ ನೇತೃತ್ವದಲ್ಲಿ ಜೈಲ್ ರೋಡ್ ನಿಂದ ಏರ್ ಇಂಡಿಯಾ ಕಛೇರಿ ತನಕ ಪ್ರತಿಭಟನಾ ಮೆರವಣಿಗೆ ನಿನ್ನೆ ಬೆಳಿಗ್ಗೆ ನಡೆಯಿತು. ಬಜಪೆಯಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಮಾಂಟ್ರಿಯಲ್ ಒಪ್ಪಂದದ ಪ್ರಕಾರ ನ್ಯಾಯಯುತವಾದ ಪರಿಹಾರ ಸಿಗಬೇಕೆಂದು ಆಗ್ರಹಿಸಿ ಬ್ರಹತ್ ಏರ್ ಇಂಡಿಯಾ ಕಛೇರಿ ಚಲೋ ಜರಗಿತು. ಕಾಸರಗೋಡು ಲೋಕಸಭಾ ಸದಸ್ಯ ಪಿ. ಕರುಣಾಕರನ್ ಸಭೆಯನ್ನು ಉದ್ಘಾಟಿಸಿದರು , ಬಳಿಕ ಮಾತನಾಡಿದ ಅವರು ಸಂತ್ರಸ್ತರಿಗೆ ಆಗಿರುವ ಅನ್ಯಾಯದ ಕುರಿತು ಲೋಕಸಭೆಯಲ್ಲಿ ಪ್ರಸ್ತಾಪಿಸುವುದಾಗಿ ತಿಳಿಸಿದರು. ಏರ್ ಇಂಡಿಯಾ ದುರಂತದ […]