ಕೋಡಿಕಲ್ ನಾಗಬ್ರಹ್ಮ ದೇವಸ್ಥಾನದ ನಾಗನ ಕಲ್ಲನ್ನು ಹೊರಗೆ ಎಸೆದು ದುಷ್ಕೃತ್ಯ

Saturday, November 13th, 2021
Kodikal-Naga

ಮಂಗಳೂರು : ನಗರದ ಕೋಡಿಕಲ್ ನ ನಾಗಬ್ರಹ್ಮ ದೇವಸ್ಥಾನದ ನಾಗನ ಕಲ್ಲನ್ನು ದುಷ್ಕರ್ಮಿಗಳು ಹೊರಗಡೆ ಎಸೆದು ಧ್ವಂಸ ಮಾಡಿದ ಘಟನೆ ನಡೆದಿದೆ. ಶುಕ್ರವಾರ ರಾತ್ರಿ ಘಟನೆ ನಡೆದಿದ್ದು, ಶನಿವಾರ ಬೆಳಕಿಗೆ ಬಂದಿದೆ. ಘಟನಾ ಸ್ಥಳದಲ್ಲಿ ವಿಶ್ವ ಹಿಂದು ಪರಿಷತ್ ಬಜರಂಗದಳ ಕಾರ್ಯಕರ್ತರು ಹಾಗು ಸ್ಥಳೀಯರು ಪ್ರತಿಭಟನೆ ನಡೆಸಿ ದುಷ್ಕರ್ಮಿಗಳನ್ನು ಶೀಘ್ರ ಬಂಧಿಸುವಂತೆ ಆಗ್ರಹಿಸಿದ್ದಾರೆ. ಸುದ್ದಿ ತಿಳಿದ ಶಾಸಕ ಡಾ.ಭರತ್ ಶೆಟ್ಟಿ ವೈ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.  ವಿಶೇಷ ತಂಡ ರಚಿಸಿ ಪ್ರಕರಣ ಭೇದಿಸುವಂತೆ ಶಾಸಕರು ಪೊಲೀಸ್ ಅಧಿಕಾರಿಗಳಿಗೆ […]

ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯ ಹಾಗೂ ಹಿಂದೂ ಮನೆಗಳ ಧ್ವಂಸ, ವಿಶ್ವ ಹಿಂದು ಪರಿಷತ್ ಪ್ರತಿಭಟನೆ

Wednesday, October 20th, 2021
VHP protest

ಮಂಗಳೂರು : ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಿಖ್ಖರ ಮೇಲಿನ ದೌರ್ಜನ್ಯ, ಹಿಂದೂ ದೇವಾಲಯ ಹಾಗೂ ಹಿಂದೂ ಮನೆಗಳ ಧ್ವಂಸವನ್ನು ಖಂಡಿಸಿ ವಿಶ್ವಹಿಂದು ಪರಿಷತ್ ವತಿಯಿಂದ  ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿ ತಾಲೂಕು ಕೇಂದ್ರಗಳಲ್ಲಿಯೂ ಬುಧವಾರ ಪ್ರತಿಭಟನೆ ನಡೆಯಿತು. ಮಲ್ಲಿಕಟ್ಟೆ ದ್ವಾರದ ಬಳಿ ಸೇರಿದ ನೂರಾರು ಕಾರ್ಯಕರ್ತರು ಬಾಂಗ್ಲಾ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಬಾಂಗ್ಲಾ ಸರಕಾರದ ನಡೆಯನ್ನು ಖಂಡಿಸಿದರು. ಅಲ್ಲದೆ ಕೆಲಹೊತ್ತು ರಸ್ತೆ ತಡೆಯ ಮೂಲಕ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವಿಹಿಂಪ ವಿಭಾಗ ಕಾರ್ಯದರ್ಶಿ […]

ರಾಜ್ಯದಾದ್ಯಂತ ರಸ್ತೆ ಅಗಲೀಕರಣಕ್ಕೆ ಪುರಾತನ ದೇವಸ್ಥಾನಗಳ ತೆರವು, ವಿಶ್ವ ಹಿಂದು ಪರಿಷತ್, ಬಜರಂಗದಳ ಖಂಡನೆ

Tuesday, September 14th, 2021
temple Demolish

ಮಂಗಳೂರು : ರಾಜ್ಯ ಹೆದ್ದಾರಿ-57ರಲ್ಲಿದ್ದ ಹರದನಹಳ್ಳಿ ಉಚ್ಚಗಣಿಯ ಮಹದೇವಮ್ಮ ದೇಗುಲವನ್ನು ಮೈಸೂರು ಜಿಲ್ಲಾಡಳಿತ ಧ್ವಂಸ ಮಾಡಿದ್ದು, ಪೊಲೀಸ್ ಬಂದೋಬಸ್ತ್ನಲ್ಲಿ ಜೆಸಿಬಿ ಮೂಲಕ ಪುರಾತನ ದೇಗುಲ ಕೆಡವಿರುವುರುದನ್ನು ಖಂಡಿಸಿ ವಿಶ್ವ ಹಿಂದು ಪರಿಷತ್, ಬಜರಂಗದಳ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗೆ ಸಜ್ಜಾಗಿದೆ. ಸರಕಾರ ರಾಜ್ಯದಾದ್ಯಂತ ರಸ್ತೆ ಅಗಲೀಕರಣಕ್ಕೆ ಪುರಾತನ ದೇವಸ್ಥಾನಗಳನ್ನು ತೆರವುಗೊಳಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದನ್ನು ಪ್ರಶ್ನಿಸಿರುವ ವಿಶ್ವ ಹಿಂದು ಪರಿಷತ್, ಬಜರಂಗದಳ ತಕ್ಷಣ ಸರಕಾರ ದೇವಸ್ಥಾನಗಳನ್ನು ತೆರವುಗೊಳಿಸುವ ನಿರ್ಧಾರದಿಂದ ಹಿಂದೆ ಸರಿಯಬೇಕು ಮತ್ತು ಒಡೆದು ಹಾಕಿರುವ ದೇವಸ್ಥಾನವನ್ನು ಪುನರ್ನಿರ್ಮಾಣ […]

ಗೋವು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿಸಲು ವಿಹೆಚ್ ಪಿ ಮನವಿ

Friday, September 3rd, 2021
cow

ಮಂಗಳೂರು  : ಗೋವು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ ಅವುಗಳ ರಕ್ಷಣೆಯನ್ನು ಹಿಂದೂಗಳ ಮೂಲಭೂತ ಹಕ್ಕನ್ನಾಗಿ ಮಾಡಿ ಎಂದು ಅಲಹಾಬಾದ್ ಹೈಕೋರ್ಟ್ ನೀಡಿದ ಸೂಚನೆಗೆ ಸ್ವಾಗತಿಸುತ್ತೇವೆ ಎಂದು  ವಿಶ್ವ ಹಿಂದು ಪರಿಷತ್ ಹೇಳಿದೆ. ಗೋಹತ್ಯೆ ಆರೋಪದಲ್ಲಿ ಜಾವೇದ್ ಎಂಬಾತನಿಗೆ ಜಾಮೀನು ನಿರಾಕರಿಸುವ ವೇಳೆ ಅಲಹಾಬಾದ್ ಹೈಕೋರ್ಟ್ ಗೋವು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ ಅವುಗಳ ರಕ್ಷಣೆಯನ್ನು ಹಿಂದೂಗಳ ಮೂಲಭೂತ ಹಕ್ಕನ್ನಾಗಿ ಮಾಡಿ ಎಂದು ಅಲಹಾಬಾದ್ ಹೈಕೋರ್ಟ್ ನೀಡಿದೆ ಅಲ್ಲದೆ ದೇಶದ ಸಂಸ್ಕೃತಿ ಮತ್ತು ನಂಬಿಕೆಗೆ ಧಕ್ಕೆಯಾದಾಗ ಇಡೀ ದೇಶ ದುರ್ಭಲವಾಗುತ್ತದೆ. […]

ಸಾಮಾಜಿಕ ಜಾಲತಾಣಗಳಲ್ಲಿ ಶರಣ್ ಪಂಪವೆಲ್ ವಿರುದ್ಧ ಅಪಪ್ರಚಾರ, ಆರೋಪಿಗಳ ಬಂಧನಕ್ಕೆ ವಿಶ್ವ ಹಿಂದು ಪರಿಷತ್ ಆಗ್ರಹ

Saturday, January 16th, 2021
Sharan Pumpwell

ಮಂಗಳೂರು  : ವಿಶ್ವ ಹಿಂದು ಪರಿಷತ್ತಿನ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ಮೇಲೆ ಅಪಪ್ರಚಾರ ಮಾಡುವ ದುಷ್ಟ ಶಕ್ತಿಗಳ ಬಂಧನಕ್ಕೆ  ವಿಶ್ವ ಹಿಂದು ಪರಿಷತ್ ಆಗ್ರಹಿಸಿದೆ. ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಯಾವುದಾದರೂ ಅಹಿತಕರ ಘಟನೆಗಳು ನಡೆದಾಗ ಅದನ್ನು ಚಿತ್ರೀಕರಿಸಿ ಆಧುನಿಕ ಅಂತರ್ಜಾಲದ ಮೂಲಕ ಅನಗತ್ಯ ಸುಳ್ಳು ವಿಷಯಗಳನ್ನು ಸೇರಿಸಿ ವಿಶ್ವ ಹಿಂದು ಪರಿಷತ್ತಿನ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ಮೇಲೆ ನಿರಾಧಾರ ಆರೋಪಗಳನ್ನು ಮಾಡುತ್ತಿರುವುದನ್ನು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಪಪ್ರಚಾರ ಹಬ್ಬುತ್ತಿರುವ ವಿಷಯ ಬಹಳ ಖೇಧಕಾರಿಯಾಗಿದ್ದು ಇದರ […]

ಭಾರತಕ್ಕೆ ನುಸುಳಿರುವ ರೋಹಿಂಗ್ಯಾ ಮುಸ್ಲಿಮರನ್ನು ಗಡಿಪಾರಿಗೆ ‘ವಿಹಿಂಪ’ ಒತ್ತಾಯ

Thursday, September 28th, 2017
ಭಾರತಕ್ಕೆ ನುಸುಳಿರುವ ರೋಹಿಂಗ್ಯಾ ಮುಸ್ಲಿಮರನ್ನು ಗಡಿಪಾರಿಗೆ 'ವಿಹಿಂಪ' ಒತ್ತಾಯ

ಮಂಗಳೂರು :  ರೋಹಿಂಗ್ಯಾ ಮುಸ್ಲಿಮರನ್ನು ಈ ಕೂಡಲೇ ಗಡಿಪಾರು ಮಾಡಬೇಕೆಂದು ವಿಶ್ವ ಹಿಂದು ಪರಿಷತ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಮಂಗಳೂರಿನಲ್ಲಿ ಈ ಕುರಿತು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ, “ಮಯಾನ್ಮಾರ್ ನಿಂದ ಭಾರತಕ್ಕೆ ನುಸುಳಿರುವ ರೋಹಿಂಗ್ಯಾ ಮುಸ್ಲಿಮರು ಭಾರತದ ಆಂತರಿಕ ಭದ್ರತೆಗೆ ಭಂಗ ತರುವ ಸಾಧ್ಯತೆ ಇದೆ,” ಎಂದು ಆತಂಕ ವ್ಯಕ್ತಪಡಿಸಿದರು . “ಮಯಾನ್ಮಾರ್ ನ ಹಿಂಸಾ ಪೀಡಿತ ರಖಿನೆ ಪ್ರಾಂತ್ಯದಲ್ಲಿ ರೋಹಿಂಗ್ಯಾ ಮುಸ್ಲಿಮರು ಹಿಂದೂಗಳ ಸಾಮೂಹಿಕ ಹತ್ಯೆ ಮಾಡಿರುವುದು ಈಗಾಗಲೇ […]

ವಿಶ್ವ ಹಿಂದು ಪರಿಷತ್, ಭಜರಂಗದಳದಿಂದ ಮಂಗಳೂರಿನಲ್ಲಿ ಚೀನಾ ವಸ್ತುಗಳನ್ನು ಸುಟ್ಟು ಪ್ರತಿಭ‌ಟನಾ ಪ್ರದರ್ಶನ

Friday, September 1st, 2017
china item

ಮಂಗಳೂರು : ಬಜರಂಗದಳ ದೇಶದಲ್ಲಿ ಚೀನಾ ವಸ್ತುಗಳ ಬಹಿಷ್ಕಾರಕ್ಕಾಗಿ ಆಂದೋಲನವನ್ನು ಹಮ್ಮಿಕೊಂಡ ಹಿನ್ನಲೆಯಲ್ಲಿ  ಮಂಗಳೂರಿನಲ್ಲಿ ವಿಶ್ವ ಹಿಂದು ಪರಿಷತ್, ಭಜರಂಗದಳದ ಕಾರ್ಯಕರ್ತರು ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ಪ್ರತಿಭ‌ಟನಾ ಪ್ರದರ್ಶನ ನಡೆಸಿದರು. ಮಂಗಳೂರಿನ ಕದ್ರಿ ಮೈದಾನದಲ್ಲಿ ಸೇರಿದ ನೂರಾರು ವಿ.ಎಚ್.ಪಿ ಹಾಗೂ ಬಜರಂಗದಳದ ಕಾರ್ಯಕರ್ತರು ಚೀನಾ ನಿರ್ಮಿತ ಆಟಿಕೆ ಸಾಮಾಗ್ರಿ, ಎಲೆಕ್ಟ್ರಾನಿಕ್ ಉಪಕರಣ ಹಾಗೂ ಚೀನಾದಿಂದ ಆಮದಾದ ಇತರ ವಸ್ತುಗಳನ್ನು ದಹಿಸುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ವಿಶ್ವ ಹಿಂದೂ ಪರಿಷತ್ ಪ್ರಾಂತ ಅಧ್ಯಕ್ಷ ಎಂ.ಬಿ.ಪುರಾಣಿಕ್  ಮಾತನಾಡಿ  ಚೀನಾ ಭಾರತದ ಸೇನೆಗೆ […]