ಕಾರ್ಕಳಕ್ಕೆ ಬಿ.ಎಸ್ಸಿ ನರ್ಸಿಂಗ್ ಕಾಲೇಜು ಮಂಜೂರು : ವಿ ಸುನಿಲ್ ಕುಮಾರ್

Tuesday, January 25th, 2022
Sunil Kumar

ಕಾರ್ಕಳ : ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾರ್ಕಳ ಮತ್ತು ಹೆಬ್ರಿ ತಾಲೂಕುಗಳು ಮಲೆನಾಡಿನ ತಪ್ಪಲಿನ ಪ್ರದೇಶಗಳನ್ನು ಹೊಂದಿದ್ದು ಹೆಚ್ಚಿನ ಪ್ರದೇಶಗಳು ತಾಲೂಕು ಕೇಂದ್ರದಿಂದ 20 ಕಿ.ಮೀ ವ್ಯಾಪ್ತಿಯನ್ನು ಹೊಂದಿರುತ್ತದೆ. ಕಾರ್ಕಳದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನರ್ಸಿಂಗ್, ಮೆಡಿಕಲ್ ಸೇರಿದಂತೆ ವೃತ್ತಿಪರ ಕೋರ್ಸುಗಳನ್ನು ವ್ಯಾಸಂಗ ಮಾಡಬೇಕಾದರೆ ಜಿಲ್ಲಾ ಕೇಂದ್ರಗಳಿಗೆ ಹೋಗಬೇಕಾಗಿತ್ತು. ಬಿ.ಎಸ್ಸಿ ನರ್ಸಿಂಗ್ ಮಾಡಬೇಕಾದರೆ ಮಂಗಳೂರು ವೆನ್ಲಾಕ್ ಇಲ್ಲವೇ ಅಧಿಕ ಪ್ರವೇಶ ಶುಲ್ಕ ಪಾವತಿಸಿ ಖಾಸಗಿ ನರ್ಸಿಂಗ್ ಕಾಲೇಜುಗಳನ್ನು ಆಶ್ರಯಿಸಬೇಕಾಗಿತ್ತು. ಕಾರ್ಕಳ ತಾಲೂಕಿನ ಗ್ರಾಮೀಣ ಭಾಗದ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳ […]

ಕೆಪಿಟಿಸಿಎಲ್ ನ 1899 ಹುದ್ದೆಗಳ ಭರ್ತಿಗೆ ಚಾಲನೆ- ಸಚಿವ ಸುನಿಲ್ ಕುಮಾರ್

Tuesday, October 12th, 2021
Power Minister

ಬೆಂಗಳೂರು  : ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ 1899 ಕಿರಿಯ ಪವರ್ ಮ್ಯಾನ್ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ ,ಇಂದು ಅದರ ಮೊದಲ ಹಂತವಾಗಿ, ಸಾಂಕೇತಿಕವಾಗಿ 21 ಜನರಿಗೆ ನೇಮಕಾತಿ ಆದೇಶ ಪತ್ರವನ್ನು ವಿತರಿಸಲಾಗುತ್ತಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನಿಲ್ ಕುಮಾರ್ ಹೇಳಿದ್ದಾರೆ. ಅವರು ಇಂದು ಬೆಂಗಳೂರಿನ ಕಾವೇರಿ ಭವನದಲ್ಲಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ದ ಸಭಾಂಗಣದಲ್ಲಿ ಈ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು […]

ರಾಷ್ಟ್ರಪತಿಗಳಿಗೆ ರಾಮಾಯಣ ದರ್ಶನಂ ಮತ್ತು ಪರ್ವ ಕಾದಂಬರಿ ಕೊಡುಗೆ ನೀಡಿದ ಸಚಿವ ಸುನಿಲ್ ಕುಮಾರ್

Wednesday, October 6th, 2021
Ramayana Darshana

ಬೆಂಗಳೂರು : ಘನತೆವೆತ್ತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನಿಲ್ ಕುಮಾರ್ ಅವರು ಇಂದು ಬೆಂಗಳೂರಿನ ರಾಜಭವನದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಇದೊಂದು ಸೌಹಾರ್ದಯುತ ಭೇಟಿಯಾಗಿತ್ತು. ಈ ಸಂದರ್ಭದಲ್ಲಿ ಶ್ರೀ ಸುನಿಲ್ ಕುಮಾರ್ ಅವರು ಕುವೆಂಪು ಅವರ” ಶ್ರೀ ರಾಮಾಯಣ ದರ್ಶನಂ” ಕೃತಿಯ ಇಂಗ್ಲಿಷ್ ಅನುವಾದಿತ ಪುಸ್ತಕ ಹಾಗೂ ಡಾ.ಎಸ್ಎಲ್ ಭೈರಪ್ಪ ಅವರ ,”ಪರ್ವ” ಕಾದಂಬರಿಯ ಇಂಗ್ಲಿಷ್ ಅನುವಾದಿತ ಕೃತಿಯನ್ನು ರಾಷ್ಟ್ರಪತಿಯವರಿಗೆ ಕೊಡುಗೆಯಾಗಿ ನೀಡಿದರು.

ಕಾರ್ಕಳ ಮೆಸ್ಕಾಂ ಉಪವಿಭಾಗಗಳಿಗೆ ರೂ. 6 ಕೋಟಿ ವಿಶೇಷ ಅನುದಾನ : ವಿ ಸುನಿಲ್ ಕುಮಾರ್

Sunday, September 26th, 2021
Sunil Kumar V

ಕಾರ್ಕಳ : ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಲೊ ವೊಲ್ಟೇಜ್ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಹಾಗೂ ಸಮರ್ಪಕ ವಿದ್ಯುತ್ ಪೂರೈಕೆಗಾಗಿ ಕಾರ್ಕಳ ಕ್ಷೇತ್ರದ ಕಾರ್ಕಳ ಮತ್ತು ಹೆಬ್ರಿ ಮೆಸ್ಕಾಂ ಉಪ ವಿಭಾಗಗಳಿಗೆ ರೂ. 6.00 ಕೋಟಿ ವಿಶೇಷ ಅನುದಾನದಲ್ಲಿ ಹೆಚ್ಚುವರಿಯಾಗಿ ವಿದ್ಯುತ್ ಪರಿವರ್ತಕ (ಟಿಸಿ) ಗಳನ್ನು ಅಳವಡಿಸಲು ಕ್ರಮ ಕೈಗೊಂಡಿದ್ದು ಮುಂದಿನ ದಿನಗಳಲ್ಲಿ ಕಾರ್ಕಳ ಕ್ಷೇತ್ರದಲ್ಲಿ ಲೊ ವೊಲ್ಟೇಜ್ ಹಾಗೂ ವಿದ್ಯುತ್ ಪರಿವರ್ತಕಗಳ ಸಮಸ್ಯೆ ಬಗೆಹರಿಸಲಾಗುವುದು ಎಂದು ಕ್ಷೇತ್ರದ ಶಾಸಕರು, ಮಾನ್ಯ ಇಂಧನ […]

“ಅನಿಶ್ಚಿತತೆ” ಚಿತ್ರಕಲಾ ಪ್ರದರ್ಶನ ಕುರಿತಂತೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನಿಲ್ ಕುಮಾರ್ ಅವರ ಅನಿಸಿಕೆ

Thursday, September 23rd, 2021
Anishchitate

ಬೆಂಗಳೂರು  : ಚಿತ್ರಕಲಾ ಪರಿಷತ್ತಿನಲ್ಲಿ ನಡೆಯುತ್ತಿರುವ ನಡೆಯುತ್ತಿರುವ “ಅನಿಶ್ಚಿತತೆ” ಕಲಾಪ್ರದರ್ಶನವನ್ನು ಇಂದು ಮುಂಜಾನೆ ಉದ್ಘಾಟಿಸಿ ಕಲಾವಿದರೊಂದಿಗೆ ಅವರ ಕಲಾಕೃತಿಗಳನ್ನು ನೋಡಿದ್ದು, ಕೆಲಸಮಯ ಬೇರೆಯದೇ ಲೋಕದಲ್ಲಿ ಸಂಚರಿಸಿದ ಅನುಭವ ನೀಡಿತು. ಕೊರೋನಾ ಸಂದರ್ಭದಲ್ಲಿ ಸಮಾಜದ ಪ್ರತಿಯೊಬ್ಬರಲ್ಲೂ ಉಂಟಾದ ಅನಿಶ್ಚಿತತೆ ಭಾವವನ್ನು, ಗ್ರಾಫಿಕ್ ಮುದ್ರಣ ಕಲೆಯ ಮೂಲಕ ಕರ್ನಾಟಕದ ವಿವಿಧ ಭಾಗಗಳ 75 ಕಲಾವಿದರುಗಳು ಅತಿ ಸುಂದರ ಹಾಗೂ ಮನಸ್ಸಿನ ಆಳದಲ್ಲಿ ನಮ್ಮನ್ನು ಚಿಂತನೆಗೆ ಒಳಪಡಿಸುವಂತಹ ಕಲಾಕೃತಿಗಳನ್ನು ರಚಿಸಿದ್ದರು. ದೇಶದಲ್ಲೇ ದೊಡ್ಡಮಟ್ಟದ ಗ್ರಾಫಿಕ್ ಮುದ್ರಣ ಕಲಾ ಪ್ರದರ್ಶನ ನಮ್ಮ ಕರ್ನಾಟಕದ […]

ಇಂಧನ ಸಚಿವರಿಂದ ಪರಿಷ್ಕೃತ ಬೆಸ್ಕಾಂ ಸಹಾಯವಾಣಿ ಗೆ ಚಾಲನೆ

Tuesday, August 24th, 2021
Sunil Kumara

ಬೆಂಗಳೂರು  : ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ವಿ ಸುನಿಲ್ ಕುಮಾರ್ ಇಂದು ಬೆಂಗಳೂರಿನ ಕೆಪಿಸಿಎಲ್ ನ ಸಮ್ಮೇಳನ ಸಭಂಗಣದಲ್ಲಿ ಬೆಸ್ಕಾಂ ನ ಪರಿಷ್ಕೃತ ಸಹಾಯ ವಾಣಿ ಬೆಸ್ಕಾಂ ಮಿತ್ರ, 1912 ಗೆ ಇಂದು ಚಾಲನೆ ನೀಡಿದರು. ಅಪರ ಮುಖ್ಯಕಾರ್ಯದರ್ಶಿ ಕುಮಾರ ನಾಯಕ್ ಹಾಗೂ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಸೇರಿದಂತೆ ಇಲಾಖೆಯ ಉನ್ನತ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ಪುಷ್ಪ ಬೆಳೆಗಾರರ ಆದಾಯ ಕಿತ್ತುಕೊಂಡ ಹೂಗುಚ್ಚ, ಹಾರ, ತುರಾಯಿ, ಹಣ್ಣಿನ ಬುಟ್ಟಿ ನಿಷೇಧವನ್ನು ಕೂಡಲೇ ಹಿಂಪಡೆಯಿರಿ

Thursday, August 12th, 2021
Flower Marchant

ಬೆಂಗಳೂರು :  ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಸರಕಾರಿ ಕಾರ್ಯಕ್ರಮಗಳಲ್ಲಿ ಹೂಗುಚ್ಚ, ಹಾರ, ತುರಾಯಿ, ಹಣ್ಣಿನ ಬುಟ್ಟಿಯನ್ನು ಬಳಸಬಾರದು ಎಂದಿರುವುದು ಮೊದಲೇ ಲಾಕ್ ಡೌನ್ ಮತ್ತು ಯಾವುದೇ ಸಮಾರಂಭಗಳಿಲ್ಲದೆ ಆರ್ಥಿಕ ಸಂಕಷ್ಟಕ್ಕೊಳಗಾದ ರಾಜ್ಯದ ಪುಷ್ಪ ಬೆಳೆಗಾರ ರೈತರ ಮೇಲೆ ಮಾಡಿದ ಗಧಾಪ್ರಹಾರ ಎಂದು  ಪುಷ್ಪ ಬೆಳೆಗಾರರು ಹಾಗೂ ಮಾರಾಟಗಾರರ ಸಂಘಟನೆಗಳು ಪ್ರತಿಭಟನೆಗೆ ಇಳಿದಿದೆ. ಕೆಲ ದಿನಗಳ ಹಿಂದೆ ವಿ.ಸುನಿಲ್ ಕುಮಾರ್ ಇಂಧನ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯ ನೂತನ ಸಚಿವರು ಹೂಗುಚ್ಚ, ಹಾರ, ತುರಾಯಿ, ಹಣ್ಣಿನ ಬುಟ್ಟಿ ವೆಸ್ಟ್, ಅದರ ಬದಲು […]

ಸಂಘಟನಾತ್ಮಕ ಕರಾವಳಿ ಜಿಲ್ಲೆಗೆ ಪ್ರಮುಖ ಖಾತೆ ಬಿಜೆಪಿ ಹರ್ಷ : ಸುದರ್ಶನ ಎಂ.

Saturday, August 7th, 2021
Sudarshana-M

ಮಂಗಳೂರು  : ಬಿಜೆಪಿ ಕಾರ್ಯಕರ್ತರ ಪಾರ್ಟಿ. ಪ್ರಾಮಾಣಿಕತೆ, ನಿಷ್ಠೆಯಿಂದ ಕಾರ್ಯ ಮಾಡುವವರನ್ನು ಯಾವತ್ತೂ ಬಿಜೆಪಿ ಕೈ ಬಿಡುವುದಿಲ್ಲ. ರಾಜ್ಯ ಸರ್ಕಾರಕ್ಕೆ 29 ಶಾಸಕರುಗಳನ್ನು ನೀಡಿದ ಕರಾವಳಿ ಜಿಲ್ಲೆಗೆ ಸನ್ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸೂಕ್ತ ಸ್ಥಾನಮಾನ ನೀಡಿದ್ದು ದಕ್ಷಿಣ ಕನ್ನಡ ಬಿಜೆಪಿ ಕಾರ್ಯಕರ್ತರಿಗೆ ಹರ್ಷ ತಂದಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರು ಸುದರ್ಶನ ಎಂ. ತಿಳಿಸಿದರು. ಎಸ್. ಅಂಗಾರರವರಿಗೆ ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಖಾತೆ, ಕೋಟಾ ಶ್ರೀನಿವಾಸ ಪೂಜಾರಿಯವರಿಗೆ ಸಮಾಜಕಲ್ಯಾಣ ಮತ್ತು ಹಿಂದುಳಿದ ವರ್ಗ ಅಭಿವೃದ್ದಿ ಖಾತೆ, ವಿ.ಸುನಿಲ್ […]

ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಸರಿಪಡಿಸಿ : ವಿ ಸುನಿಲ್ ಕುಮಾರ್ ಸೂಚನೆ

Friday, July 23rd, 2021
Mobile Network

ಕಾರ್ಕಳ : ಮೊಬೈಲ್ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಕಾರ್ಕಳ ಕ್ಷೇತ್ರದ ಗ್ರಾಮೀಣ ಪ್ರದೇಶದ ಶಾಲಾ ಕಾಲೇಜು ಮಕ್ಕಳ ಆನ್ ಲೈನ್ ತರಗತಿಗಳಿಗೆ, ಮನೆಯಿಂದಲೇ ಕರ್ತವ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಮತ್ತು ಸಾರ್ವಜನಿಕರ ಸಂಪರ್ಕಕ್ಕೆ ತುಂಬಾ ತೊಂದರೆಯಾಗುತ್ತಿದ್ದು ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಸರಿಪಡಿಸುವ ನಿಟ್ಟಿನಲ್ಲಿ ಶಾಸಕರಾದ ವಿ ಸುನಿಲ್ ಕುಮಾರ್ ರವರು ವಿಕಾಸ ಕಛೇರಿಯಲ್ಲಿ ಮೊಬೈಲ್ ಸೇವಾ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು. ಮೊಬೈಲ್ ಟವರ್ ಗಳು ಇಲ್ಲದ ಪ್ರದೇಶಗಳಲ್ಲಿ ಹೊಸ ಮೊಬೈಲ್ ಟವರ್ ಸ್ಥಾಪಿಸುವ ಬಗ್ಗೆ ಮತ್ತು ನೆಟ್‌ವರ್ಕ್ ಸಿಗ್ನಲ್ […]

ದೇಶ ದ್ರೋಹಿಗಳ ಸಮರ್ಥನೆ – ಕಾಂಗ್ರೆಸ್‌ನ ನಿಜ ಬಣ್ಣ ಬಯಲು : ವಿ ಸುನಿಲ್ ಕುಮಾರ್

Friday, July 9th, 2021
Sunil Kumar

ಕಾರ್ಕಳ : ಈ ದೇಶವನ್ನು ಬಹಳಷ್ಟು ವರ್ಷ ಆಳಿದ ರಾಜಕೀಯ ಪಕ್ಷವಾದ ಕಾಂಗ್ರೆಸ್ ದೇಶದ ಭದ್ರತೆಯ ವಿಚಾರ ಬಂದಾಗ, ಸೈನಿಕರ ವಿಚಾರ ಬಂದಾಗ ಪಾಕಿಸ್ತಾನವನ್ನು ಪರೋಕ್ಷವಾಗಿ ಬೆಂಬಲಿಸುವ ಹೇಳಿಕೆಗಳನ್ನು ರಾಷ್ಟೀಯ ಮಟ್ಟದಿಂದ ಹಿಡಿದು ತಳಮಟ್ಟದ ನಾಯಕರುಗಳು ನೀಡುತ್ತಿರುವುದು ಅಂಧಃಪತನದ ಪ್ರತೀಕ ಎಂದು ಕಾರ್ಕಳ ಶಾಸಕರಾದ ವಿ ಸುನಿಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ನಿರಂತರವಾಗಿ ನಡೆಯುತ್ತಿರುವ ಅಭಿವೃದ್ದಿ ಚಟುವಟಿಕೆಗಳನ್ನು ಸಹಿಸದೆ ಅನೇಕ ಅಪಪ್ರಚಾರ, ಸುಳ್ಳಿನ ಅಂತೆ-ಕAತೆಗಳನ್ನು ಸೃಷ್ಠಿಸಿ ಪ್ರಚಾರ ಪಡೆಯುತ್ತಿರುವುದರ ಜೊತೆಗೆ ಇದೀಗ ತನ್ನ ಕಾರ್ಯಕರ್ತರ […]