ಆತ್ಮಹತ್ಯೆ ಮಾಡಿಕೊಂಡ ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಮೊಮ್ಮಗಳು

Friday, January 28th, 2022
Soundarya

ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮೊಮ್ಮಗಳು ಡಾ.ಸೌಂದರ್ಯ ಆತ್ಮಹತ್ಯೆ ಮಾಡಿಕೊಂಡು ದುರಂತ ಅಂತ್ಯ ಕಂಡಿದ್ದಾರೆ. ಸೌಂದರ್ಯರನ್ನು ಉಳಿಸಿಕೊಳ್ಳಲು ಕೊನೇ ಕ್ಷಣದಲ್ಲಿ ಕುಟುಂಬಸ್ಥರು ಮತ್ತು ವೈದ್ಯರು ಯತ್ನಿಸಿದ್ದರಾದರೂ ಫಲಿಸಲಿಲ್ಲ ಎಂಬ ವಿಚಾರ ತಿಳಿದುಬಂದಿದೆ. ಬಿಎಸ್ವೈ ಪುತ್ರಿ ಪದ್ಮಾವತಿ ಅವರ ಮಗಳು ಸೌಂದರ್ಯ ವೈದ್ಯೆಯಾಗಿದ್ದರು. 3 ವರ್ಷದ ಹಿಂದಷ್ಟೇ ಅಂದ್ರೆ 2018ರಲ್ಲಿ ಅಬ್ಬಿಗೆರೆಯ ಪದ್ಮ ಮತ್ತು ಶಿವಕುಮಾರ್ ದಂಪತಿ ಪುತ್ರ ಡಾ.ನೀರಜ್ ಎಂಬುವರ ಜತೆ ಸೌಂದರ್ಯ ಮದ್ವೆ ಅದ್ದೂರಿಯಾಗಿ ನೆರವೇರಿತ್ತು. ಡಾ.ನೀರಜ್ 7 ವರ್ಷದಿಂದ ರೇಡಿಯಾಲಜಿಸ್ಟ್ ಆಗಿ ಕೆಲಸ […]

ಕೋವಿಡ್ ನಮಗೆ ಅತ್ಯುತ್ತಮ ಪಾಠ ಕಲಿಸಿದೆ:ಸಚಿವ ಆರ್ ಅಶೋಕ

Sunday, August 29th, 2021
R Ashoka

ಬೆಂಗಳೂರು  : ಕಂದಾಯ ಸಚಿವ ಆರ್ ಅಶೋಕ್ ಅವರು ನಗರದ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ 1೦೦ ಕ್ಕೂ ಅಧಿಕ ವೈದ್ಯರುಗಳಿಗೆ ಸನ್ಮಾನ ಮಾಡಿದರು. ಈ ವೇಳೆ ಮಾತನಾಡಿದ ಸಚಿವರು,”ನಾವು ಈ ರೀತಿಯ ಸಂಕಷ್ಟವೊಂದನ್ನ ಎದುರಿಸಬೇಕಾದಂತಹ ಸಂದರ್ಭ ಬರುತ್ತದೆ ಎಂದು ಕನಸಿನಲ್ಲಿಯೂ ಊಹಿಸಿರಲಿಲ್ಲ. ಕೋವಿಡ್ ಎಲ್ಲವನ್ನು ಬದಲಿಸಿ ಹಾಕಿದೆ. ಕೋವಿಡ್ ನ ಘೋರತೆ ನೆನೆಸಿಕೊಂಡರೆ ಆಂಬ್ಯೂಲೆನ್ಸ್ ಸೈರನ್ ಸದ್ದು ಮತ್ತು ಶವಗಳನ್ನ ಸುಡುವ ಚಿತ್ರಗಳೇ ಕಣ್ ಮುಂದೆ ಸುಳಿಯುತ್ತವೆ. ಕೋವಿಡ್ ನಿಂದಾಗಿ ಬದುಕು ಅಂತಂತ್ರವಾಗಿದೆ ಎಂದೆನಿಸಬಹುದು. ಆದರೆ ಕೆಲ […]

ಶಿಷ್ಯನ ಜೀವನದಲ್ಲಿ ಗುರುಗಳ ಮಹತ್ವ

Saturday, July 10th, 2021
Guru Poornima

ಮಂಗಳೂರು  : ಮನುಷ್ಯ ತನ್ನ ದಿನನಿತ್ಯದ ಜೀವನದಲ್ಲಿ ಅತ್ಯಂತ ಚಿಕ್ಕ-ಚಿಕ್ಕ ವಿಷಯಗಳಿಗೂ ಸಂಬಂಧಪಟ್ಟ ಪರಿಣಿತರ ಅಂದರೆ ಶಿಕ್ಷಕರು, ವೈದ್ಯರು, ವಕೀಲರು ಇತ್ಯಾದಿ ಇತರ ಯಾರಿಂದಲಾದರೂ ಮಾರ್ಗದರ್ಶನವನ್ನು ಪಡೆಯುತ್ತಾನೆ, ಹಾಗಾದರೆ ಮನುಷ್ಯ ಜನ್ಮದ ಮೂಲ ಉದ್ದೇಶ ಅಂದರೆ ಮೋಕ್ಷ ಪ್ರಾಪ್ತಿಗಾಗಿ ಯಾರ ಮಾರ್ಗದರ್ಶನ ಪಡೆಯಬೇಕು? ಮನುಷ್ಯ ಜೀವನದ ಉದ್ದೇಶ ಸಫಲವಾಗಲು ನಾವು ಭಗವಂತನ ಸಗುಣ ರೂಪವಾದ ಗುರುಗಳ ಮರ‍್ಗರ‍್ಶನ ಪಡೆಯಬೇಕು. ಹಾಗಾದರೆ ‘ಜನ್ಮ-ಮರಣದ ಚಕ್ರದಿಂದ ಮುಕ್ತಿ ಕೊಡುವ ಗುರುಗಳ ಮಹತ್ವ ಎಷ್ಟಿರಬಹುದು’ ಎಂಬುದರ ಕಲ್ಪನೆಯನ್ನೂ ಸಹ ಮಾಡಲು ಆಗುವುದಿಲ್ಲ. […]

ಚರ್ಮ ವೈದ್ಯರ ಸಂಘದಿಂದ ರೂ.1 ಕೋಟಿ ಮೌಲ್ಯದ ಕೋವಿಡ್ ಪರಿಹಾರ ಸಾಮಗ್ರಿ

Monday, June 7th, 2021
Dermatologists

ಬೆಂಗಳೂರು : “ವೈದ್ಯರು ಕೋವಿಡ್ ವೇಳೆ ಸೋಂಕಿತರಿಗೆ ಚಿಕಿತ್ಸೆ ನೀಡುವ ಮೂಲಕ ಸಮಾಜಕ್ಕೆ ನೆರವಾಗುತ್ತಿದ್ದಾರೆ. ಆದರೆ ಅವರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ರೂ. 1 ಕೋಟಿಗೂ ಅಧಿಕ ಮೌಲ್ಯದ ಕೋವಿಡ್ ಪರಿಹಾರ ಕಾರ್ಯಕ್ಕಾಗಿ ಸಾಮಗ್ರಿಗಳನ್ನ ನೀಡಿದ್ದು, ಇದು ಕರ್ತವ್ಯ ಬದ್ಧತೆಯ ಜೊತೆಗೆ ಮಾನವೀಯ ಕಾಳಜಿಯ ಕಾರ್ಯವಾಗಿದೆ”, ಎಂದು ಕಂದಾಯ ಸಚಿವ ಆರ್ ಅಶೋಕ ಹೇಳಿದರು. ನಗರದ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚರ್ಮ ವೈದ್ಯರ ಸಂಘವು ಕರ್ನಾಟಕದಲ್ಲಿನ ಭಾರತೀಯ ಚರ್ಮ, ಲೈಂಗಿಕ ಮತ್ತು […]

ದೇಶಾದ್ಯಂತ 2ನೇ ಅಲೆಯಲ್ಲಿ ಕೊರೋನಾ ಸೋಂಕಿಗೆ 270 ಮಂದಿ ವೈದ್ಯರು ಸಾವು

Tuesday, May 18th, 2021
KK Agarwal

ನವದೆಹಲಿ : ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದ 2ನೇ ಅಲೆ ವೇಳೆ ದೇಶಾದ್ಯಂತ ಸುಮಾರು 270 ಮಂದಿ ವೈದ್ಯರು ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ವರದಿ ಮಾಡಿದೆ. ದೇಶಾದ್ಯಂತ 2ನೇ ಅಲೆಯಲ್ಲಿ ಕೊರೋನಾ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ ವೈದ್ಯರ ಕುರಿತ ಅಂಕಿ ಅಂಶಗಳನ್ನು  ಏಮ್ಸ್ ನೀಡಿದೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮತ್ತು ಖ್ಯಾತ ಹೃದ್ರೋಗತಜ್ಞರಾಗಿದ್ದ ಡಾ. ಕೆಕೆ ಅಗರ್‌ವಾಲ್ ಸೇರಿದಂತೆ ದೇಶದಲ್ಲಿ 2ನೇ ಅಲೆ ಸಂದರ್ಭದಲ್ಲಿ 270 ಮಂದಿ […]

ಪಿಎಂ ಫಂಡ್ ನಲ್ಲಿ ಸಂಗ್ರಹವಾದ ಹಣದ ಲೆಕ್ಕ ಕೊಡಿ : ಶಾಸಕ ಯು ಟಿ ಖಾದರ್

Saturday, May 30th, 2020
ut-khader

ಮಂಗಳೂರು: ಪಿಎಂ ಫಂಡ್ ನಲ್ಲಿ ಸಂಗ್ರಹವಾದ ಹಣದ ಲೆಕ್ಕ ಕೊಡಲಿ. ಯಾವುದಕ್ಕೆ ಖರ್ಚು ಮಾಡಿದ್ದಾರೆ ಎಂದು ಬಹಿರಂಗ ಮಾಡಲಿ ಎಂದು ಮಾಜಿ ಸಚಿವ ಯು ಟಿ ಖಾದರ್ ಹೇಳಿದ್ದಾರೆ. ಕೋವಿಡ್-19 ಸೋಂಕಿನ ವಿರುದ್ಧ ಹೋರಾಡುತ್ತಿರುವ ವೈದ್ಯರು, ದಾದಿಯರಿಗೆ ಸರಕಾರ ಸಂಬಳ ಬಿಡುಗಡೆ ಮಾಡಿಲ್ಲ. ಸರಕಾರ ಕೋವಿಡ್ ವಿಚಾರದಲ್ಲಿ ಪ್ರಚಾರ ತೆಗೆದುಕೊಳ್ಳುತ್ತಿದೆ ಎಂದು ಮಾಜಿ ಸಚಿವ ಯು ಟಿ ಖಾದರ್ ಆರೋಪಿಸಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ವೈದ್ಯರು ಅವರ ಜೀವ ಪಣಕಿಟ್ಟು ಹೆಚ್ಚುವರಿ ಕೆಲಸ ಮಾಡಿರುತ್ತಾರೆ. ಕೋವಿಡ್-19 ಸೋಂಕು ನಿರ್ಮೂಲನೆಗೆ […]

ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ಸಚಿವ ಬಿ. ಶ್ರೀರಾಮುಲು ವಾಸ್ತವ್ಯ

Thursday, September 26th, 2019
sri-ramulu

ಉಡುಪಿ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರು ಸೆ. 27ರಂದು ಉಡುಪಿಯ ಅಜ್ಜರಕಾಡು ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಸಂಜೆ 6ಕ್ಕೆ ಜಿಲ್ಲಾಸ್ಪತ್ರೆಗೆ ಆಗಮಿಸಿ ಕುಂದುಕೊರತೆ ಪರಿಶೀಲಿಸಲಿದ್ದಾರೆ. ಬಳಿಕ ಆಸ್ಪತ್ರೆಯಲ್ಲಿ ವಾಸ್ತವ್ಯ ಇರಲಿದ್ದಾರೆ. 1962ರಲ್ಲಿ ಸಬ್‌ ಡಿವಿಷನ್‌ ಆಸ್ಪತ್ರೆಯಾಗಿ ಆರಂಭಗೊಂಡ ಅಜ್ಜರಕಾಡು ಆಸ್ಪತ್ರೆ ವಾಸ್ತವವಾಗಿ ಇಂದಿಗೂ ಜಿಲ್ಲಾಸ್ಪತ್ರೆ ದರ್ಜೆಯ ಸೌಲಭ್ಯ ಹೊಂದಿಲ್ಲ. 1997ರಲ್ಲಿ ಉಡುಪಿ ಜಿಲ್ಲೆ ರಚನೆಯಾದ ಬಳಿಕ ನಾಮಫಲಕದಲ್ಲಿ ಮಾತ್ರ ಜಿಲ್ಲಾಸ್ಪತ್ರೆ ಎಂದಿದೆ. ಸೌಲಭ್ಯಗಳು ತಾಲೂಕು ಮಟ್ಟದ್ದಾಗಿಯೇ ಇವೆ. ದಾನಿಗಳ […]

ವೈದ್ಯರು, ಇಂಜಿನಿಯರ್ ಮಾತ್ರ ದೇಶದ ಆಸ್ತಿಯಲ್ಲ : ಡಾ. ವಿನಯಕುಮಾರ್ ಹೆಗ್ಡೆ

Monday, September 18th, 2017
Bunts seminar

ಮಂಗಳೂರು : ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆಯನ್ನು ಎದುರಿಸುವ ತರಬೇತಿ ಕೇಂದ್ರ ಮಂಗಳೂರಿನಲ್ಲಿಯೂ ಆರಂಭಗೊಳ್ಳಲಿದೆ. ನವದೆಹಲಿಯ ಚಾಣಕ್ಯ ಅಕಾಡೆಮಿ ಹಾಗೂ ಬಂಟರ ಯಾನೆ ನಾಡವರ ಸಂಘದ ಸಹಯೋಗದಲ್ಲಿ ಯುವಜನತೆಗೆ ಸುವರ್ಣವಕಾಶ ಲಭ್ಯವಾಗಿದೆ. ಈ ನಿಟ್ಟಿನಲ್ಲಿ ಚಾಣಕ್ಯ ಸಂಸ್ಥೆಯ ಸ್ಥಾಪಕ ಎ.ಕೆ. ಮಿಶ್ರ ಅವರಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ‘ಯಶಸ್ಸಿನ ಕಲೆ’ ಕುರಿತ ವಿಚಾರಸಂಕಿರಣ ನಗರದ ಪುರಭವನದಲ್ಲಿ ನಡೆಯಿತು. ಅವಿಭಜಿತ ಜಿಲ್ಲೆಯ ಪದವೀಧರ ವಿದ್ಯಾರ್ಥಿಗಳಿಗೆ ಅ.8ರಂದು ಮಂಗಳೂರಿನಲ್ಲಿ ನಡೆಯುವ ಅರ್ಹತಾ ಪರೀಕ್ಷೆಯಲ್ಲಿ […]

ಉಳ್ಳಾಲದಲ್ಲಿ ಮಸಣದಲ್ಲಿ ಸತ್ತ ಹಸುಗೂಸು ಅಳಲು ಆರಂಭಿಸಿದ ವಿಸ್ಮಯಕಾರಿ ಘಟನೆ

Saturday, August 23rd, 2014
infant

ಮಂಗಳೂರು: ತೊಕ್ಕೊಟ್ಟು ಚೆಂಬುಗುಡ್ಡೆಯಲ್ಲಿರುವ ಸ್ಮಶಾನದಲ್ಲಿ ಹಸುಗೂಸೊಂದರ ಅಂತ್ಯಸಂಸ್ಕಾರವನ್ನು ಮಾಡಲು ತಯಾರು ನಡೆಸಲಾಗುತ್ತಿತ್ತು. ಅಂತ್ಯಸಂಸ್ಕಾರ ವಿಧಿವಿಧಾನಗಳನ್ನು ನಡೆಸಿ ದಫನ ಮಾಡಲು ಮುಂದಾಗ ಮಗು ಆಳಲು ಆರಂಭಿಸಿದ ವಿಸ್ಮಯಕಾರಿ ಘಟನೆ ಉಳ್ಳಾಲದಲ್ಲಿ ಶನಿವಾರ ನಡೆದಿದೆ. ದೇರಳಕಟ್ಟೆಯಲ್ಲಿರುವ ಆಸ್ಪತ್ರೆಯೊಂದರಲ್ಲಿ ಹೆರಿಗೆಗೆಂದು ಕುಮುಟದ ಗೌರಿ ಎಂಬವರು ಕಳೆದ 15 ದಿನಗಳ ಹಿಂದೆ ದಾಖಲಾಗಿದ್ದರು. ಇವರಿಗೆ ಸೀಸೆರಿಯನ್ ಮಾಡಿದ ವೈದ್ಯರು ಮಗುವನ್ನು ಹೊರ ತೆಗೆದಿದ್ದರಲ್ಲದೆ ಹಸುಗೂಸಿನ ಚೇತರಿಕೆಗಾಗಿ ವಿಷೇಶ ಕೋಣೆಯಲ್ಲಿ ಇರಿಸಲಾಗಿತ್ತು. ಶನಿವಾರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಗೌರಿಯ ಗಂಡ ಪುಷ್ಪರಾಜ್‌ಗೆ ಕರೆ […]

ಸುಶಾಂತ್ ನ ಚಿಕಿತ್ಸೆಗೆ ನೆರವಾಗುವಿರಾ… ಕಾಲುಗಳಿಗೆ ಸ್ವಾಧೀನವಿಲ್ಲ…ಆತನಿಗೆ ಅಮ್ಮನೇ ಎಲ್ಲ

Monday, July 28th, 2014
sushanth

ಮಂಗಳೂರು: ಆ ಪುಟ್ಟ ಬಾಲಕನ ಪ್ರತಿಯೊಂದು ಕೆಲಸಕ್ಕೂ ಅಮ್ಮನ ನೆರವು ಬೇಕು. ಬಾಲ್ಯದ ಕ್ಷಣಗಳನ್ನು ಖುಷಿಯಿಂದ ಕಳೆಯಬೇಕಾದ ಆತನಿಗೆ ಭಗವಂತ ಆ ಭಾಗ್ಯ ಕರುಣಿಸಿಲ್ಲ. ತನ್ನೆರಡೂ ಕಾಲುಗಳ ಸ್ವಾಧೀನವನ್ನು ಕಳೆದುಕೊಂಡಿರುವ ಆ ಪುಟ್ಟ ಬಾಲಕನಿಗೆ ಈಗ ಅಮ್ಮನೇ ಎಲ್ಲ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪಳ್ಳಿ ಎಂಬಲ್ಲಿನ ಸುಧಾಕರ ಆಚಾರ್ಯ ಮತ್ತು ತನುಜ ದಂಪತಿಯ ಪುತ್ರ ಹತ್ತರ ಹರೆಯದ ಸುಶಾಂತನ ನೋವಿನ ಕಥೆಯಿದು. ಎಲ್ಲರಂತೆ ಖುಷಿಯಿಂದ ನಲಿದಾಡುತ್ತಾ ಶಾಲೆಗೆ ತೆರಳಬೇಕಿದ್ದ ಈತ ಕಳೆದ ನಾಲ್ಕು ವರ್ಷಗಳಿಂದ ನಡೆದಾಡುವ […]