ಕೊರೋನಾ ವೈರಸ್‌ನಿಂದಾಗಿ ಅಕ್ಷರದಾಸೋಹ ನೌಕರರರಿಗೆ ವೇತನವಿಲ್ಲ, ಪ್ರತಿಭಟನೆ

Friday, August 7th, 2020
citu

ಮಂಗಳೂರು : ಮುಂದೆ ಸಿಐಟಿಯು ನೇತೃತ್ವದ ಅಕ್ಷರದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ಮಿನಿ ವಿಧಾನಸೌಧದ ಎದುರು ಶುಕ್ರವಾರ ಪ್ರತಿಭಟನಾ ಪ್ರದರ್ಶನವನ್ನು ನಡೆಸಲಾಯಿತು. ಪ್ರತಿಭಟನಾ ಪ್ರದರ್ಶನವನ್ನು ಉದ್ದೇಶಿಸಿ ಸಂಘದ ಅಧ್ಯಕ್ಷರಾದ ಪದ್ಮಾವತಿ ಶೆಟ್ಟಿಯವರು ಮಾತನಾಡುತ್ತಾ, ಕೊರೋನಾ ವೈರಸ್‌ನಿಂದಾಗಿ ಸ್ಕೀಂ ಕಾರ್ಮಿಕರಲ್ಲಿ ಒಂದು ವಿಭಾಗವಾದ ಅಕ್ಷರ ದಾಸೋಹ ನೌಕರರಿಗೆ ಕೆಲಸ ಹಾಗೂ ವೇತನವಿಲ್ಲವಾಗಿದೆ. ಕೊರೋನಾ ವೈರಸ್ ಲಾಕ್‌ಡೌನ್ ಅವಧಿಯ ಹಾಗೂ ಬೇಸಿಗೆ ರಜೆಯ ಪರಿಹಾರವನ್ನು ನೀಡಬೇಕೆಂದು ವಿನಂತಿಸಿದರೂ ಲಕ್ಷಾಂತರ ಕಾರ್ಮಿಕರಿಗೆ ಪರಿಹಾರವನ್ನು ನೀಡಿಲ್ಲ. ಬಿಸಿಯೂಟ ನೌಕರರಿಗೆ ಮುಂದಿನ 6 ತಿಂಗಳ ತನಕ ಕನಿಷ್ಟ ರೂ.7.500/- […]

ಹುಬ್ಬಳ್ಳಿ : 24ರ ನಂತರ ಲಾಕ್ ಡೌನ್ ಗೆ ಪ್ಲಾನ್

Tuesday, July 21st, 2020
hubballi

ಹುಬ್ಬಳ್ಳಿ : ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಲಾಕ್ ಡೌನ್ ಮಾಡಿದ್ರು ಸಹ ದಾರಿಗೆ ಬರದ ಕೋವಿಡ್ ಗೆ ಜಿಲ್ಲಾಡಳಿತ ತಲೆ ಕೆಡಿಸಿಕೊಂಡಿದೆ. ಅಲ್ಲದೆ ಮತ್ತೊಂದು ಸುತ್ತಿನ ಲಾಕ್ ಡೌನ್ ಮಾಡಲು ಈಗಾಗಲೇ ಸದ್ದಿಲ್ಲದೆ ಪ್ಲಾನ್ ಮಾಡಿದೆ. ಹೌದು…ರಾಜ್ಯದಲ್ಲಿ ನಿತ್ಯ ಕೊರೊನಾ ಹಾವಳಿ ಹೆಚ್ಚಾಗಿದ್ದು, ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ..ಈ ಹಿನ್ನೆಲೆ ಈಗಾಗಲೇ ಲಾಕ್ ಡೌನ್ ಘೋಷಣೆ ಸಹ ಮಾಡಿದೆ.ಆದ್ರೆ ಇಷ್ಟೆಲ್ಲಾ ಮಾಡಿದ್ರು ಸಹ ಕೊರೋನಾ ರಣಕೇಕೆ ಮಾತ್ರ ನಿಂತಿಲ್ಲ. […]

ಲಾಕ್’ಡೌನ್ ಇಲ್ಲ, ಜನರು ವೈರಸ್ ಜೊತೆಗೆ ಬದುಕುವುದನ್ನು ಕಲಿಯಬೇಕು : ಸಿ ಎಂ ಯಡಿಯೂರಪ್ಪ

Tuesday, July 7th, 2020
yedyurappa

ಬೆಂಗಳೂರು:  ಜನರು ವೈರಸ್ ಜೊತೆಗೆ ಬದುಕುವುದನ್ನು ಕಲಿಯಬೇಕು, ಮತ್ತೊಮ್ಮೆ ಲಾಕ್’ಡೌನ್ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ. ಲಾಕ್’ಡೌನ್ ಭೀತಿಯಿಂದಾಗಿ ವಲಸೆ ಕಾರ್ಮಿಕರು ತವರುಗಳಿಗೆ ಮರಳುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಜನರು ಭೀತಿಗೊಳಗಾಗ ಬಾರದು. ಮುಂಜಾಗ್ರತಾ ಕ್ರಮಗಳೊಂದಿಗೆ ವೈರಸ್ ಜೊತೆಗೆ ಜೀವಿಸುವುದನ್ನು ಕಲಿಯಬೇಕಿದೆ. ವೈರಸ್ ಮಟ್ಟಹಾಕಲು ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಜನರು ಸಹಕಾರ ನೀಡಬೇಕು ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಈಗಾಗಲೇ 450 ಹೆಚ್ಚುವರಿ ಆ್ಯಂಬುಲೆನ್ಸ್ ಗಳನ್ನು ನಿಯೋಜಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರೊಂದಿಗೆ ಸರ್ಕಾರಕ್ಕೆ […]

ಕೊರೋನಾ ಮಹಾಮಾರಿ ಜಾಗತಿಕವಾಗಿ ಬಲಿ ಪಡೆದದ್ದು 39, 800 ಮಂದಿ ಅಮಾಯಕರನ್ನು

Tuesday, March 31st, 2020
corona world

ನವದೆಹಲಿ: ಚೀನಾ ದಿಂದ ಉಗಮವಾದ ಮಹಾಮಾರಿ ಕೊರೋನಾ ಇದೀಗ ಜಗತ್ತನ್ನೇ ತಲ್ಲಣಗೊಳಿಸಿದ್ದು ಸೋಂಕಿತರ ಸಂಖ್ಯೆ 8 ಲಕ್ಷ ದಾಟಿದ್ದು ಅದಾಗಲೇ 39, 800 ಮಂದಿ ಬಲಿಯಾಗಿದ್ದಾರೆ. ಅಮೆರಿಕಾ, ಇಟಲಿಯಲ್ಲಿ ಸೋಂಕಿತರ ಸಂಖ್ಯೆ ಲಕ್ಷ ದಾಟಿದ್ದರೆ ಸ್ಪೇನ್ ಸನಿಹದಲ್ಲಿದೆ. ಅಮೆರಿಕದಲ್ಲಿ 1,64,400 ಮಂದಿ ಸೋಂಕಿನಿಂದ ಬಳಲುತ್ತಿದ್ದು 3,173 ಮಂದಿ ಮೃತಪಟ್ಟಿದ್ದಾರೆ. ಇಟಲಿಯಲ್ಲಿ 1,02,000 ಸೋಂಕಿತರಿದ್ದು ಸಾವಿನ ಸಂಖ್ಯೆ ಮಾತ್ರ 11 ಸಾವಿರ ಗಡಿ ದಾಟಿದೆ. ಇನ್ನು ಸ್ಪೇನ್ ನಲ್ಲೂ ಸಾವಿನ ಸಂಖ್ಯೆ ಏರಿಕೆಯಾಗುತ್ತದೆ. ಇಂದು ಒಂದೇ ದಿನ 473 ಮಂದಿ […]