ಪಂದ್ಯಾಟದಲ್ಲಿ ಸಿಕ್ಕಿದ ಬಹುಮಾನ ಮೊತ್ತವನ್ನು ಅನಾರೋಗ್ಯ ಪೀಡಿತರ ಚಿಕಿತ್ಸಾ ವೆಚ್ಚಕ್ಕೆ ನೀಡಿದ ಶಕ್ತಿ ಪಪೂ ಕಾಲೇಜು ಕಬಡ್ಡಿ ತಂಡ

Tuesday, December 28th, 2021
shakti-Kabbadi

ಮಂಗಳೂರು : ಶಕ್ತಿನಗರದ ಶಕ್ತಿ ಪಪೂ ಕಾಲೇಜು ಮಂಗಳೂರು ಡಿ.25 ಮತ್ತು 26 ರಂದು ನಡೆದ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ತೃತೀಯ ಸ್ಧಾನವನ್ನು ಪಡೆದಿರುತ್ತದೆ. 65 ಕೆ.ಜಿ ತೂಕದ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟವು ಡಿ.25 ರಂದು ಪಂಜದಲ್ಲಿ ಆಯೋಜನೆಯಾಗಿತ್ತು. ಪಂಚಶ್ರೀ ಪಂಜ ಸ್ಪೋರ್ಟ್ ಕ್ಲಬ್ ಪಂಜ ಆಯೋಜಿಸಿರುವ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ 24 ತಂಡಗಳು ಭಾಗವಹಿಸಿದವು. ಇದು ಹೊನಲು ಬೆಳಕಿನ ಮ್ಯಾಟ್ ಪಂದ್ಯಾಟವಾಗಿತ್ತು. ಇದರಲ್ಲಿ ತೃತೀಯ ಸ್ಧಾನವನ್ನು ಪಡೆಯುವುದರ ಮೂಲಕ ಪ್ರಥಮ ಭಾರಿಗೆ ಜಿಲ್ಲೆಯಲ್ಲಿ ಸಂಸ್ಥೆಯ ಕೀರ್ತಿಯನ್ನು […]

ಯುವವಾಹಿನಿ (ರಿ )ಶಕ್ತಿನಗರ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ, ಪ್ರಶಸ್ತಿ ಪ್ರಧಾನ ಹಾಗೂ ಸನ್ಮಾನ

Monday, December 20th, 2021
Yuvavahini Shakthinagara

ಮಂಗಳೂರು : ಯುವವಾಹಿನಿ (ರಿ )ಶಕ್ತಿನಗರ ಘಟಕದ 2021/22 ನೇ ಸಾಲಿನ ಪದಗ್ರಹಣ , ಪ್ರಶಸ್ತಿ , ಸನ್ಮಾನ , ಕಾರ್ಯಕ್ರಮವು ದಿನಾಂಕ 19.12.2021ನೇ ಆದಿತ್ಯವಾರ ನಾಲ್ಯಪದವು ಕುವೆಂಪು ಹಿರಿಯ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ಜರಗಿತು. ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಹಾಗೂ ಕೇಂದ್ರ ಸಮಿತಿಯ ಸಲಹೆಗಾರರು ಪದ್ಮರಾಜ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅಹಂಕಾರ ಅಹಂ ನಮ್ಮಲ್ಲಿ ಹೋದರೆ ನಾವು ಸಮಾಜಮುಖಿ ಕೆಲಸ ಮಾಡಲು ಅನುಕೂಲ ಸಾಧ್ಯವೆಂದು ತಿಳಿಸಿ ನೂತನ ಪದಾಧಿಕಾರಿಗಳಿಗೆ ಶುಭ […]

ಪ್ರತಿಭಾವಂತ ಕಬಡ್ಡಿ ಅಭ್ಯರ್ಥಿಗಳಿಗೆ ಶಕ್ತಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಉಚಿತ ಪ್ರವೇಶ

Saturday, July 31st, 2021
Shakthi-PU

ಮಂಗಳೂರು : ಶಕ್ತಿನಗರದ ಶಕ್ತಿ ಪಪೂ ಕಾಲೇಜಿನ ರೇಷ್ಮಾ ಮೆಮೋರಿಯಲ್ ಆಡಿಟೋರಿಯಂನಲ್ಲಿ ವಾಣಿಜ್ಯ ವಿಭಾಗಕ್ಕೆ ಉಚಿತ ಪ್ರವೇಶ ಪಡೆಯಲು ಕಬಡ್ಡಿಯ ಪ್ರತಿಭಾವಂತ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ದ.ಕ ಅಮೆಚೂರ್ ಕಬಡ್ಡಿ ಸಂಸ್ಥೆಯ ಕಾರ್ಯದರ್ಶಿ ಪುರುಷೋತ್ತಮ ಪೂಜಾರಿಯವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ನಾವು ಸ್ವಯಂ ಶಿಸ್ತನ್ನು ಹೊಂದಿದ್ದರೆ ನಾವು ನಮ್ಮ ಯಶಸ್ಸಿಗೆ ಕಾರಣವಾಗುತ್ತೇವೆ. ನಮ್ಮ ಆಲೋಚನೆಗಳು ಮತ್ತು ನಡವಳಿಕೆಗಳು ಹಾಗೂ ಪರಿಶ್ರಮವು ನಮಗೆ ಸರಿಯಾದ ಪ್ರತಿಫಲವನ್ನು ನೀಡುತ್ತದೆ. ಕಬಡ್ಡಿ ಆಟದಿಂದ ಶಕ್ತಿ ಮತ್ತು ಆಂತರಿಕ ಶಕ್ತಿ ಹೊಂದಲು […]

ಸಾವಿನ ದಾರಿಯಲ್ಲಿದ್ದ ಹಿಂದೂ ಕುಟುಂಬಕ್ಕೆ, ಬದುಕುವ ದಾರಿ ತೋರಿಸಿದ ಉಳ್ಳಾಲ ಮುಸ್ಲಿಂ ಕುಟುಂಬ !

Monday, July 12th, 2021
Ullal Marriage

ಮಂಗಳೂರು : ಶಕ್ತಿನಗರದಲ್ಲಿ ಸ್ವಂತ ಮನೆಯಲ್ಲಿ ವಾಸವಿದ್ದ ಕುಟುಂಬವದು. ಗೀತಾ ಅವರ ಪತಿ ಕೆಲವು ವರ್ಷಗಳ ಹಿಂದೆಯೇ ದುರಂತ ಸಾವು ಕಂಡಿದ್ದಾರೆ. ದಂಪತಿಗೆ ಇಬ್ಬರು ಹೆಣ್ಮಕ್ಕಳು. ವರ್ಷದ ಹಿಂದೆ ಹಿರಿಯ ಮಗಳಿಗೆ ಮದುವೆಯಾಗಿ ಸಾಲದಿಂದ ಹೊರಬರಲು ಎಲ್ಲವನ್ನೂ ಮಾರಿ, ಖಾಲಿ ಕೈಯೊಂದಿದೆ ನಾಲ್ಕು ತಿಂಗಳ ಹಿಂದೆ ಗೀತಾ ತಾಯಿ, ಮಗಳು ಕವನಾ, ಅತ್ತೆ ರೇಣುಕಾ ಮಂಚಿಲಕ್ಕೆ ಬಂದಿದ್ದಾರೆ. ರೇಣುಕಾ ಅವರೇ ಅಲ್ಲಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರೂ, ಕರೊನಾ ಎರಡನೇ ಅಲೆಯಿಂದ ಅದೂ ಇಲ್ಲದಂತಾಗಿ ಜೀವನವೇ ಕಷ್ಟವಾಗಿದೆ. […]

ಮಹಿಳೆಯ ಮನೆಗೆ ಅಕ್ರಮ ಪ್ರವೇಶಿಸಿ ಕೊಲೆ ಯತ್ನ, ಏಳು ಮಂದಿಯ ಬಂಧನ

Wednesday, June 2nd, 2021
Shaktinagara Attackers

ಮಂಗಳೂರು : ಮಹಿಳೆಯೊಬ್ಬರ ಮನೆಗೆ ಅಕ್ರಮ ಪ್ರವೇಶಿಸಿ ಮನೆಯಲ್ಲಿದ್ದ ವಸ್ತುಗಳನ್ನು ಧ್ವಂಸ ಗೊಳಿಸಿ, ಮಹಿಳೆಗೆ  ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ ಘಟನೆಗೆ ಸಂಬಂಧಿಸಿ 9 ಮಂದಿಗಳ ಪೈಕಿ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೋಡಿಕಲ್ ನಿವಾಸಿ ರಂಜಿತ್ ಯಾನೆ ರಂಜು ಯಾನೆ ತಮ್ಮು (28), ಉರ್ವಸ್ಟೋರ್‌ನ ಸುಂಕದಕಟ್ಟೆ ನಿವಾಸಿ ಅವಿನಾಶ್ ಯಾನೆ ಅವಿ (23), ಪ್ರಜ್ವಲ್ ಯಾನೆ ಪಚ್ಚು(24), ದೀಕ್ಷಿತ್ ಯಾನೆ ದೀಚು(21), ಹೇಮಂತ್ ಯಾನೆ ಹೋಮು(19), ಧನು(19) ಹಾಗೂ ಯತಿರಾಜ್ ಯಾನೆ ಯತಿ(23) ಬಂಧಿತರು. ಬಂಧಿತರಿಂದ ಮಾರಕಾಸ್ತ್ರ ಹಾಗೂ […]

ಕೊರೊನಾ ವೈರಸ್‌ನ ಬಗ್ಗೆ ಶಕ್ತಿನಗರದಲ್ಲಿ ಜನಜಾಗೃತಿ

Saturday, March 21st, 2020
shakti

ಮಂಗಳೂರು : ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆ ಮತ್ತು ಶಕ್ತಿ ಪ.ಪೂ. ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕರು ಹಾಗೂ ಉಪನ್ಯಾಸಕೇತರ ಸಿಬ್ಬಂದಿ ವರ್ಗದಿಂದ ಕೊರೊನಾ ವೈರಸ್‌ನ ಬಗ್ಗೆ ಶಕ್ತಿನಗರದ ಹಲವು ಪ್ರದೇಶದಲ್ಲಿ ಮನೆ ಮನೆಗೆ ತೆರಲಿ ಜನ ಜಾಗೃತಿಯನ್ನು ನಡೆಸಲಾಯಿತು. ಕೊರೊನಾ ವೈರಸ್ (ಕೋವಿದ್-19)ರ ಕುರಿತಂತೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಮನೆ ಮನೆಗೆ ತೆರಲಿ ಕನ್ನಡ ಹಾಗೂ ಆಂಗ್ಲಭಾಷಾ ಕರಪತ್ರವನ್ನು ವಿತರಿಸಿ ವಿವರಿಸಲಾಯಿತು. ಸರ್ಕಾರ, ಜಿಲ್ಲಾಡಳಿತ ತೆಗೆದುಕೊಳ್ಳುವ ನಿರ್ಣಯವನ್ನು ಸ್ವಾಗತಿಸುವಂತೆ ತಿಳಿಸಲಾಯಿತು. ನಾಳೆ ಪ್ರಧಾನಿಯವರು ಕರೆಕೊಟ್ಟಿರುವ ಜನತಾ ಕರ್ಪ್ಯೂವನ್ನು […]

ಶಕ್ತಿನಗರದಲ್ಲಿ ಮಾರ್ಚ್ 17 ರಂದು “ಅನುಭಾವ ಸಂಗಮ”

Friday, March 15th, 2019
Shakti school

ಮಂಗಳೂರು : ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ದ.ಕ. ಹಾಗೂ ಶಕ್ತಿನಗರದ ಶಕ್ತಿ ಪಿ.ಯು. ಕಾಲೇಜಿನ ಶಕ್ತಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ 17 ರ ಮಧ್ಯಾಹ್ನ 2.30 ಕ್ಕೆ ಶಕ್ತಿ ಪಿ.ಯು. ಕಾಲೇಜಿನಲ್ಲಿ “ಅನುಭಾವ ಸಂಗಮ” ಚಿಂತನಗೋಷ್ಠಿಗಳು ನಡೆಯಲಿವೆ. ’ವರ್ತಮಾನಕ್ಕೂ ವಚನ’ ಎಂಬ ಶೀರ್ಷಿಕೆಯಡಿಯಲ್ಲಿ ನಡೆಯುವ ಚಿಂತನಗೋಷ್ಠಿಗಳ ಉದ್ಘಾಟನೆಯನ್ನು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ನಡೆಸಲಿದ್ದಾರೆ. […]

ಗ್ರಾಮ ವಿಕಾಸದಿಂದ ರಾಷ್ಟ್ರ ವಿಕಾಸವಾಗುತ್ತದೆ: ಡಾ. ವಸಂತಕುಮಾರು ಪೆರ್ಲ

Tuesday, October 2nd, 2018
shakti

ಮಂಗಳೂರು: ಶಕ್ತಿನಗರದ ಶಕ್ತಿ ವಸತಿ ಶಾಲೆ ಮತ್ತು ಶಕ್ತಿ ಪದವಿ ಪೂರ್ವ ಕಾಲೇಜಿನ ವತಿಯಿಂದ ಇಂದು ಗಾಂಧಿ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿಜೀಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಆಕಾಶವಾಣಿಯ ನಿವೃತ್ತ ನಿರ್ದೇಶಕರಾದ ಡಾ. ವಸಂತಕುಮಾರ್ ಪೆರ್ಲ ನಮನ ಸಲ್ಲಿಸಿದರು ನಂತರ ಮಾತನಾಡಿದ ಡಾ. ವಸಂತ ಕುಮಾರ್ ಪೆರ್ಲ ಗಾಂಧೀಜಿಯ ಕಲ್ಪನೆ ಗ್ರಾಮ ವಿಕಾಸವಾಗಿತ್ತು ಯಾವ ಗ್ರಾಮ ವಿಕಾಸವಾಗುತ್ತದೆಯೋ ಅಲ್ಲಿಂದ ರಾಷ್ಟ್ರ ವಿಕಾಸವಾಗುತ್ತದೆ. ಆದರೆ ಇಂದು ಗ್ರಾಮ ವಿಕಾಸವಾಗದೆ ನಗರ ವಿಕಾಸವಾಗಿರುವುದರಿಂದ ಗ್ರಾಮೀಣ ಯುವಕರು […]

ಸದ್ದಿಲ್ಲದೆ ಕೆಲಸ ಮಾಡಿ ಜನಮನ ಗೆದ್ದ ಜೆ.ಆರ್. ಲೋಬೊ

Friday, May 11th, 2018
j-r-lobo

ಮಂಗಳೂರು: ಸರಕಾರಿ ಅಧಿಕಾರಿಯಾಗಿದ್ದ ಜೆ.ಆರ್.ಲೋಬೊ ಅವರು ಸದ್ದಿಲ್ಲದೆ ಸಾಧಿಸಿದ ಶಾಸಕ. ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಎಲ್ಲ ಸ್ತರದ ಜನರಿಗೆ ಪ್ರಯೋಜನ ಆಗುವಂತೆ ಸಕಲ ಸೌಲಭ್ಯಗಳು ಮಂಗಳೂರಿನಲ್ಲಿ ಅನುಷ್ಠಾನ ಆಗುವಂತೆ ಶ್ರಮಿಸಿದ ಶಾಸಕ ಲೋಬೊ. ನಗರ ಪ್ರದೇಶದಲ್ಲಿ ಕೆಲಸ ಮಾಡಲು ಹೇಳಿ ಮಾಡಿಸಿದಂತ ಶಾಸಕ ಲೋಬೊ ಎಂದುಹೇಳಬೇಕಾಗುತ್ತದೆ. ಏಕೆಂದರೆ, ನಗರದಲ್ಲಿ ಅತೀ ಶ್ರೀಮಂತರು ಇರುತ್ತಾರೆ ಜೀವನೋಪಾಯಯಕ್ಕಾಗಿ ವಲಸೆ ಬಂದಿರುವ ಬಡ ಕಾರ್ಮಿಕರು ಇರುತ್ತಾರೆ. ಈ ಎಲ್ಲ ಸ್ತರದ ಜನರ ಆಶೋತ್ತಾರಗಳನ್ನು ಪೂರೈಸಲು ನಾಯಕನಾದವನಿಗೆ ಅಂತಹುದೇ ಆದ ಮನಸ್ಸು ಇರಬೇಕಾಗುತ್ತದೆ. […]

ಕಾಂಗ್ರೆಸ್ ಕಾರ್ಯಕರ್ತ ಲೀಲಾಧರ ದೇವಾಡಿಗ ನಿಧನ

Wednesday, October 11th, 2017
leladar devadiga

ಮಂಗಳೂರು: ಶಕ್ತಿನಗರ 21 ನೇ ವಾರ್ಡ್ ನ ಕಾಂಗ್ರೆಸ್ ಸಕ್ರಿಯ ಕಾರ್ಯಕರ್ತರಾದ ಲೀಲಾಧರ್ ದೇವಾಡಿಗ ಅವರು ಇಂದು ಬೆಳಿಗ್ಗೆ ಆಕ್ಮಸಿಕವಾಗಿ ನಿಧನ ಹೊಂದಿದರು. ಲೀಲಾಧರ್ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಅರ್ಹನಿಶಿ ದುಡಿಯುತ್ತಿದ್ದರು. ಅವರ ಅಕಾಲಿಕ ನಿಧನದಿಂದ ಕಾಂಗ್ರೆಸ್ ಪಕ್ಷಕ್ಕೇ ತುಂಬಲಾಗದ ನಷ್ಟವಾಗಿದೆ ಎಂದು ಶಾಸಕ ಜೆ.ಆರ್.ಲೋಬೊ ಅವರು ಸಂತಾಪ ಸೂಚಿಸಿದ್ದಾರೆ. ದೇವಾಡಿಗ ಅವರ ನಿಧನಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಲೀಂ ಹಾಗೂ ವಿಶ್ವಾಸ್ ದಾಸ್ ಅವರು ಸಂತಾಪ ಸೂಚಿಸಿದ್ದಾರೆ.