ಮಂಗಳೂರಿನಲ್ಲಿ ಖಾಸಗಿ ಶಾಲೆಗಳ ಫೀಸ್ ವಸೂಲಿ ಹಾವಳಿ : ಡಿಸಿ ಕಠಿಣ ಕ್ರಮದ ಎಚ್ಚರಿಕೆ

Thursday, June 10th, 2021
KV Rajendra

ಮಂಗಳೂರು : ನಗರದ ಶಾಲಾ, ಕಾಲೇಜು ಗಳು ವಿದ್ಯಾರ್ಥಿಗಳಿಂದ  ಬಲವಂತದ  ಫೀಸ್ ಕಲೆಕ್ಷನ್ ಆರಂಭಿಸಿದ್ದು, ಕೇವಲ ಆನ್ ಲೈನ್ ತರಗತಿ ನಡೆಸಿಯೇ ದುಬಾರಿ ಫೀಸ್ ಸಂಗ್ರಹಿಸಿರುವುದು, ಕಳೆದ ಶೈಕ್ಷಣಿಕ ವರ್ಷದ ಕೊರೋನಾ ಆರ್ಥಿಕ ಸಂಕಷ್ಟದ ನಡುವೆ ವರದಿಯಾಗಿದೆ. ಆರ್ಥಿಕ ಸಂಕಷ್ಟ ಮತ್ತು ಕೊರೋನಾ ಸಾಂಕ್ರಾಮಿಕದ ನಡುವೆ ವಿದ್ಯಾರ್ಥಿಗಳಿಂದ ಅಪಾರ ಫೀಸ್ ಹಣ ಪಡೆದಿರುವುದನ್ನು ಮತ್ತು ಕಳೆದ ವರ್ಷದ ಹಣ ವಸೂಲಾತಿ ಮಾಡಿರುವುದನ್ನು ತನಿಖೆ ಮಾಡಬೇಕು ಎಂದು ಪೋಷಕರು ಸರಕಾರವನ್ನು ಒತ್ತಾಯಿಸಿದ್ದಾರೆ. ಈ ರೀತಿ ಸಂಗ್ರಹ ಮಾಡಿದ  ಶಾಲಾ ಕಾಲೇಜುಗಳ ಆಡಳಿತ ಮಂಡಳಿಗೆ ದ.ಕ.ಜಿಲ್ಲಾಧಿಕಾರಿ […]

ರಸ್ತೆ ದುರಸ್ತಿಗೆ ಆಗ್ರಹ : ಕರಿಕೆ ಭಾಗಶಃ ಬಂದ್

Thursday, December 5th, 2019
Madikeri

ಮಡಿಕೇರಿ : ಕೊಡಗಿನ ಗಡಿಗ್ರಾಮ ಕರಿಕೆ ರಸ್ತೆ ಅಭಿವೃದ್ಧಿಗಾಗಿ ಒತ್ತಾಯಿಸಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಗ್ರಾ.ಪಂ ಅಧ್ಯಕ್ಷರು ಕರೆ ನೀಡಿದ್ದ ಕರಿಕೆ ಬಂದ್ ಭಾಗಶಃ ಯಶಸ್ವಿಯಾಗಿದೆ. ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು, ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಬೆಳಗ್ಗೆ ಬಲತ್ಕಾರದ ಬಂದ್‌ಗೆ ಕಾಂಗ್ರೆಸ್ ಕಾರ್ಯಕರ್ತರು ಮುಂದಾದಾಗ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದರು. ಶಾಲಾ, ಕಾಲೇಜು ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ವಾಹನ ಸಂಚಾರವಿಲ್ಲದೆ ಪರದಾಡುವಂತ್ತಾಯಿತು. ಗ್ರಾಮ ಪಂಚಾಯತಿ, ಸಹಕಾರ ಸಂಘಗಳನ್ನು ಬಲವಂತದಿಂದ ಮುಚ್ಚಿಸಿದಾಗ ಕೆಲವರು ಹಿರಿಯ ಅಧಿಕಾರಿಗಳಿಗೆ ಮಾಹಿತಿ […]

‘ಕ್ಯಾರ್’ ಚಂಡಮಾರುತ ಭೀತಿ : ಇಂದು ಕರಾವಳಿಯ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ

Friday, October 25th, 2019
cyar

ಮಂಗಳೂರು : ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾದ ‘ಕ್ಯಾರ್’ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆ ಗೋಚರಿಸಿದ್ದು, ಮುಂದಿನ 48 ಗಂಟೆ ಕಾಲ ಭಾರಿ ಮಳೆ ಕರಾವಳಿಯನ್ನು ಅಪ್ಪಳಿಸುವ ಮುನ್ಸೂಚನೆ ದೊರೆತಿದೆ. ಗುರುವಾರ 15.4 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 70.4 ಡಿಗ್ರಿ ಪೂರ್ವ ರೇಖಾಂಶದಲ್ಲಿ ವಾಯುಭಾರ ಕುಸಿತ ಪ್ರದೇಶವಿದ್ದು ಮಹಾರಾಷ್ಟ್ರದ ರತ್ನಗಿರಿಯಿಂದ 360 ಕಿ.ಮೀ. ಪಶ್ಚಿಮ-ನೈಋತ್ಯ ಮತ್ತು 490 ಕಿ.ಮೀ. ನೈಋತ್ಯ ಹಾಗೂ ಓಮನ್‌ನ ಸಲಾಹ್‌ನಿಂದ 1750 ಕಿ.ಮೀ. ಪೂರ್ವ-ಆಗ್ನೇಯ ದಿಕ್ಕಿನಲ್ಲಿ ಕೇಂದ್ರೀಕೃತವಾಗಿದೆ. ಚಂಡಮಾರುತ ಅ.25ರಂದು ಸಾಯಂಕಾಲದ ವರೆಗೆ ಪೂರ್ವ-ಈಶಾನ್ಯದತ್ತ […]