ಕರ್ಷಕ ಶ್ರೀ ಹಾಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾರುಕಟ್ಟೆಗೆ

Tuesday, August 31st, 2021
Karshaka

ಮಂಗಳೂರು : ಕೇರಳದ ಪ್ರಸಿದ್ಧ ‘ಕರ್ಷಕ ಶ್ರೀ ಹಾಲು’ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲೆಯ ಮಾರುಕಟ್ಟೆಗೆ ಇಂದು ಬಿಡುಗಡೆ ಗೊಂಡಿದೆ. ಶಾಸಕ ಯು.ಟಿ ಖಾದರ್ ಮಂಗಳೂರಿನಲ್ಲಿ ಕರ್ಷಕ ಶ್ರೀ ಹಾಲನ್ನು ಬಿಡುಗಡೆ ಗೊಳಿಸಿದರು. ಬಳಿಕ ಮಾತನಾಡಿದ ಅವರು ದಕ್ಷಿಣ ಕನ್ನಡ ದ ಜನರಿಗೆ ಆರೋಗ್ಯದಾಯಕವಾದ ಗುಣಮಟ್ಟದ ಹಾಲು ನೀಡಲು ಕೇರಳದ ಸಂಸ್ಥೆ ಮುಂದೆ ಬಂದಿರುವುದು ಸಂತೋಷದ ವಿಷಯ. ಗುಣಮಟ್ಟದಲ್ಲಿ ಜನರ ವಿಶ್ವಾಸಗಳಿಸಿಕೊಂಡು ಸಂಸ್ಥೆ ಇನ್ನಷ್ಟು ಬೆಳೆಯಲಿ ಎಂದು ಯು.ಟಿ ಖಾದರ್ ಹಾರೈಸಿದರು. ಸಂಸ್ಥೆಯ ನಿರ್ದೇಶಕ ಇ ಅಬ್ದುಲ್ […]

ಶಾಸಕ ಯು.ಟಿ.ಖಾದರ್ ಸಹೋದರ ಯು.ಟಿ. ಇಫ್ತಿಕಾರ್ ಮನೆಗೆ ಐಟಿ ದಾಳಿ

Thursday, February 18th, 2021
UT Ifthikar

ಮಂಗಳೂರು : ಆಸ್ಪತ್ರೆ ಮತ್ತು ಅದರ ಮಾಲಕರ ಮನೆಗೆ ದಾಳಿ ನಡೆಸಿದ ಮರುದಿನವೇ  ಶಾಸಕ ಯು.ಟಿ.ಖಾದರ್ ಅವರ ಸಹೋದರ ಯು.ಟಿ. ಇಫ್ತಿಕಾರ್ ಅಲಿ ಅವರ ಮನೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ. ನಗರದ ಲೈಟ್‌ಹೌಸ್‌ನ ಅಪಾರ್ಟ್‌ಮೆಂಟ್ನಲ್ಲಿ ಇರುವ ಇಫ್ತಿಕಾರ್ ಅಲಿ  ಫ್ಲ್ಯಾಟ್‌ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು, ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಬುಧವಾರದಿಂದ ಐಟಿ ಅಧಿಕಾರಿಗಳು ಮಂಗಳೂರಿನ‌ ಉದ್ಯಮಿಗಳಿಗೆ ಸೇರಿದ ಸಂಸ್ಥೆಗಳ ಮೇಲೆ ಐಟಿ ದಾಳಿ ಮುಂದುವರಿಸಿದ್ದು, ಅದರ […]

ಮುಡಿಪು ಭಾಗದಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದವರು ಶಾಸಕ ಯು.ಟಿ.ಖಾದರ್ ಸಂಬಂಧಿಗಳು !

Monday, October 19th, 2020
Rajesh Naik

ಮಂಗಳೂರು: ಮಾಜಿ ಸಚಿವರಾದ ಬಿ.ರಮಾನಾಥ ರೈ  ಆರೋಪಕ್ಕೆ ಉತ್ತರಿಸಿದ ಬಂಟ್ವಾಳ ಶಾಸಕ ಉಳಿಪಾಡಿಗುತ್ತು ರಾಜೇಶ್ ನಾಯ್ಕ್,  ನಾನು ಕೆಂಪು ಕಲ್ಲು ಗಣಿಗಾರಿಕೆ ಮಾಡುತ್ತಿಲ್ಲ. ನನ್ನ ಸಂಬಂಧಿಕರು ಕೂಡಾ ಅಂತಹ ವ್ಯವಹಾರದಲ್ಲಿ ತೊಡಗಿಸಿಕೊಂಡಿಲ್ಲಎಂದು ಹೇಳಿದ್ದಾರೆ. ಅವರು ಸೋಮವಾರ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮುಡಿಪು ಪ್ರದೇಶ ಬಂಟ್ವಾಳ ತಾಲೂಕು ಸರಹದ್ದಿನಲ್ಲಿದ್ದರೂ ಮಂಗಳೂರು ವಿಧಾನ ಸಭಾ ಕ್ಷೇತ್ರಕ್ಕೆ ಒಳಪಟ್ಟಿದೆ. ಅದು ನನ್ನ ಕ್ಷೇತ್ರದಲ್ಲಿ ಇಲ್ಲ,  ಬಿ.ರಮಾನಾಥ ರೈಯವರು ಸುದ್ದಿಗೋಷ್ಠಿಯಲ್ಲಿ ಆಡಳಿತ ಪಕ್ಷದ ಶಾಸಕರೊಬ್ಬರು ಅಕ್ರಮ ಕೆಂಪು ಕಲ್ಲು ಗಣಿಗಾರಿಕೆಯಲ್ಲಿ ತೊಡಗಿದ್ದಾರೆ. […]

ಪಿಎಂ ಫಂಡ್ ನಲ್ಲಿ ಸಂಗ್ರಹವಾದ ಹಣದ ಲೆಕ್ಕ ಕೊಡಿ : ಶಾಸಕ ಯು ಟಿ ಖಾದರ್

Saturday, May 30th, 2020
ut-khader

ಮಂಗಳೂರು: ಪಿಎಂ ಫಂಡ್ ನಲ್ಲಿ ಸಂಗ್ರಹವಾದ ಹಣದ ಲೆಕ್ಕ ಕೊಡಲಿ. ಯಾವುದಕ್ಕೆ ಖರ್ಚು ಮಾಡಿದ್ದಾರೆ ಎಂದು ಬಹಿರಂಗ ಮಾಡಲಿ ಎಂದು ಮಾಜಿ ಸಚಿವ ಯು ಟಿ ಖಾದರ್ ಹೇಳಿದ್ದಾರೆ. ಕೋವಿಡ್-19 ಸೋಂಕಿನ ವಿರುದ್ಧ ಹೋರಾಡುತ್ತಿರುವ ವೈದ್ಯರು, ದಾದಿಯರಿಗೆ ಸರಕಾರ ಸಂಬಳ ಬಿಡುಗಡೆ ಮಾಡಿಲ್ಲ. ಸರಕಾರ ಕೋವಿಡ್ ವಿಚಾರದಲ್ಲಿ ಪ್ರಚಾರ ತೆಗೆದುಕೊಳ್ಳುತ್ತಿದೆ ಎಂದು ಮಾಜಿ ಸಚಿವ ಯು ಟಿ ಖಾದರ್ ಆರೋಪಿಸಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ವೈದ್ಯರು ಅವರ ಜೀವ ಪಣಕಿಟ್ಟು ಹೆಚ್ಚುವರಿ ಕೆಲಸ ಮಾಡಿರುತ್ತಾರೆ. ಕೋವಿಡ್-19 ಸೋಂಕು ನಿರ್ಮೂಲನೆಗೆ […]

ಮನಪಾ ಹಾಗೂ ಜಿಲ್ಲಾಡಳಿತದ ನಿರ್ಧಾರ ಮಾನವೀಯತೆ ಇಲ್ಲದ್ದು : ಶಾಸಕ ಯು.ಟಿ ಖಾದರ್

Thursday, April 9th, 2020
apmc

ಮಂಗಳೂರು  : ಮ.ನ.ಪಾ ಹಾಗೂ ಜಿಲ್ಲಾಡಳಿತ ಯಾವುದೇ ಮುನ್ಸೂಚನೆ ಇಲ್ಲದೆ ಸೆಂಟ್ರಲ್ ಮಾರ್ಕೇಟ್ ನಲ್ಲಿದ್ದ ಹೊಲ್ಸೇಲ್ ಹಾಗೂ ರಿಟೇಲ್ ವ್ಯಾಪರಸ್ಥರಿಗೆ ರಾತ್ರೋರಾತ್ರಿ ಬೈಕಂಪಾಡಿ ಎ.ಪಿ.ಎಮ್.ಸಿ ಗೆ ಸ್ಥಳಾಂತರಗೊಳಿಸಿದೆ. ಇದರಿಂದ ಅನೇಕ ವ್ಯಾಪರಸ್ಥರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದು ಮನಪಾ ಹಾಗೂ ಜಿಲ್ಲಾಡಳಿತದ ಅವೈಜ್ಞಾನಿಕ ನಿರ್ಧಾರ ಕರುಣೆ ಹಾಗೂ ಮಾನವೀಯತೆ ಇಲ್ಲದ್ದು  ಎಂದು ಸಾಬೀತಾಗಿದೆ ಎಂದು ಮಂಗಳೂರು ಶಾಸಕ ಯು ಟಿ ಖಾದರ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಸ್ಥಳಾಂತರಗೊಳಿಸಿ ವರ್ತಕರಿಗೆ, ಕೂಲಿಕಾರ್ಮಿಕರಿಗೆ ಯಾವುದೇ ರೀತಿಯ ಮೂಲಭೂತ ಸೌಕರ್ಯ ಒದಗಿಸದಿದ್ದದ್ದು ಪರಿಶೀಲನೆಯಿಂದ ತಿಳಿದುಬಂದಿದೆ. […]