ಮಕ್ಕಳ ವ್ಯಕ್ತಿತ್ವ ವಿಕಸನ ಮಾಡುವ ಗುರುಗಳೇ ಶಿಕ್ಷಕರು: ಸಚಿವ ಡಾ.ಕೆ.ಸುಧಾಕರ್

Monday, September 6th, 2021
Teachers Day

  ಚಿಕ್ಕಬಳ್ಳಾಪುರ :  ಮಕ್ಕಳ ವ್ಯಕ್ತಿತ್ವ ವಿಕಸನ ಮಾಡುವ ಗುರುಗಳಾಗಿ ಶಿಕ್ಷಕರು ಕಾರ್ಯನಿರ್ವಹಿಸಬೇಕು. ಶಿಕ್ಷಕ ವೃತ್ತಿಯು ಕೇವಲ ವೇತನಕ್ಕೆ ಕೆಲಸ ಮಾಡುವ ಉದ್ಯೋಗವಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಜಿಲ್ಲಾಡಳಿತದಿಂದ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದ ಸಚಿವರು, ಪೊಲೀಸರು, ವೈದ್ಯರ ಕೆಲಸ ವೇತನಕ್ಕಾಗಿ ಮಾಡುವುದಲ್ಲ. ಅದೇ ರೀತಿ ಶಿಕ್ಷಕ ವೃತ್ತಿ ಕೂಡ ಒಂದು ಸೇವೆ. ಶಿಕ್ಷಕರು ಸುಮಾರು 30-35 ವರ್ಷಗಳ ವೃತ್ತಿ ಬದುಕಿನಲ್ಲಿ ಸಾವಿರಾರು ವಿದ್ಯಾರ್ಥಿಗಳನ್ನು ನೋಡುತ್ತಾರೆ. ಆ ವಿದ್ಯಾರ್ಥಿಗಳಲ್ಲಿ ಅನೇಕರು […]

ಹೊಸ ವೈರಾಣು ಪತ್ತೆಗೆ ಜೀನೋಮ್ ಸೀಕ್ವೆನ್ಸ್ : ಸಚಿವ ಡಾ.ಕೆ.ಸುಧಾಕರ್

Sunday, June 27th, 2021
K Sudhakar

  ಬೆಂಗಳೂರು/ಚಿಕ್ಕಬಳ್ಳಾಪುರ :  ಕೋವಿಡ್ ಹೊಸ ವೈರಾಣು ನಿಯಂತ್ರಣಕ್ಕೆ ಜೀನೋಮ್ ಸೀಕ್ವೆನ್ಸ್ ಮಾಡುತ್ತಿದ್ದು, 600 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಡೆಲ್ಟಾ ಪ್ಲಸ್ ವೈರಾಣು ಸೋಂಕಿನ ಇಬ್ಬರು ಸೋಂಕಿತರು ಪತ್ತೆಯಾಗಿದ್ದಾರೆ. ಇನ್ನೂ 600 ಮಾದರಿಗಳನ್ನು ಜಿನೋಮ್ ಸೀಕ್ವೆನ್ಸ್ ಗೆ ಕಳುಹಿಸಲಾಗಿದೆ. ಈ ವರದಿ ಇಂದು ಬರಲಿದೆ. ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯಗಳಲ್ಲಿ ಇರುವಂತಹ ಕೊರೊನಾ ಆತಂಕ ನಮ್ಮಲ್ಲಿ ಇನ್ನೂ ಬಂದಿಲ್ಲ. ಆದರೆ ಮಹಾರಾಷ್ಟ್ರ ಮತ್ತು […]

ಜನವರಿ 1 ರಿಂದ ಎಸ್‌ಎಸ್‌ಎಲ್ಸಿ, ಪಿಯು ಕಾಲೇಜುಗಳು ಹಾಗೂ ವಿದ್ಯಾಗಮ ತರಗತಿಗಳು ಆರಂಭ

Thursday, December 24th, 2020
Suresh Kumar

ಬೆಂಗಳೂರು: ಕೊರೋನಾ ಹಿನ್ನಲೆಯಲ್ಲಿ ಮುಚ್ಚುಗಡೆಯಾಗಿದ್ದ ಶಾಲೆಗಳು ಜನವರಿ 1 ರಿಂದ ಆರಂಭಗೊಳ್ಳಲಿದೆ.  ಶಾಲೆ ಆರಂಭದ ನಿರ್ಧಾರದಲ್ಲಿ ಬದಲಾವಣೆ ಇಲ್ಲ. ಮುಂದಿನ ದಿನಗಳಲ್ಲಿ ಅಗತ್ಯವಿದ್ದರೆ ಸಭೆ ನಡೆಸಿ ಪರಿಶೀಲನೆ ನಡೆಸಲಾಗುವುದು ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. ವಿದ್ಯಾರ್ಥಿಗಳಿಗೆ ಜನವರಿ 1 ರಿಂದಲೇ ಸಮವಸ್ತ್ರ ಮತ್ತು ಶೂ ವಿತರಣೆ ಮಾಡಲಾಗುವುದು ಹಾಗೂ ಈ ವರ್ಷ 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮಾಡಲಾಗುವುದಿಲ್ಲ. ಶಾಲೆ ಆರಂಭಕ್ಕೆ ಮೂರು ದಿನ ಮೊದಲು ಸಿಬ್ಬಂದಿ, ಶಿಕ್ಷಕರಿಗೆ ಕೋವಿಡ್ ಪರೀಕ್ಷೆ ನೆಗೆಟಿವ್ ಕಡ್ಡಾಯವಾಗಿರುತ್ತದೆ. […]

‘ಹೊಸ ವರ್ಷದಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ, ಯಾವುದೇ ಪರೀಕ್ಷೆಗೂ ಶುಲ್ಕವಿಲ್ಲ’

Thursday, November 12th, 2020
sudhakar

ಮೈಸೂರು: ಹೊಸ ವರ್ಷದ ಮೊದಲ ದಿನದಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು ಹಾಗೂ ಯಾವುದೇ ಪರೀಕ್ಷೆಗೂ ಶುಲ್ಕವಿಲ್ಲ ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾಲಯದ ಡೀನ್ ಕಚೇರಿಯಲ್ಲಿ ಮಾತನಾಡಿದ ಸಚಿವರು, ‘ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯವರೆಗೆ ಎಲ್ಲ ಕಡೆ ಪರೀಕ್ಷೆಗಳನ್ನು ಒಂದು ರೂ. ಶುಲ್ಕ ಪಡೆಯದೇ ಉಚಿತವಾಗಿ ಮಾಡಲಾಗುತ್ತದೆ. ಈ ವ್ಯವಸ್ಥೆಯನ್ನು ಜನವರಿ 1ರಂದು ಘೋಷಿಸಲಾಗುವುದು’ ಎಂದು ಮಹತ್ವದ ವಿಚಾರವನ್ನು […]

ಶಿಕ್ಷಕಿ ಕೊರೋನಾ ಚಿಕಿತ್ಸೆಗೆ ಸ್ಪಂದಿಸಿದ ಸಿಎಂ ಹಾಗೂ ಶಿಕ್ಷಣ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಅಭಯಚಂದ್ರ ಜೈನ್

Thursday, October 15th, 2020
Abhayachandra Jain

ಮಂಗಳೂರು : ದೇಶ ಕೊರೊನದಿಂದ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದರೂ  ಪ್ರಧಾನಿ ಮೋದಿಯವರು 8 ಸಾವಿರ ಕೋಟಿ ರೂ.ಯ ವಿಮಾನ ಖರೀದಿಸಿದ್ದಾರೆ. ಕೊರೊನಾ ಸಂಕಷ್ಟದ ಕಾಲದಲ್ಲಿಯೂ ಈ ರೀತಿಯ ಖರೀದಿ ಎಷ್ಟು ಸಮಂಜಸ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಪ್ರಶ್ನಿಸಿದ್ದಾರೆ. ನಗರದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊರೊನಾದಲ್ಲಿ ಬಳಲುತ್ತಿರುವ ಜನತೆಗೆ ಸಂತಾಪ ಹಾಗೂ ಅವರ ಆಸ್ಪತ್ರೆಗಳ ಖರ್ಚು-ವೆಚ್ಚಗಳನ್ನು‌ ಸರ್ಕಾರ ಭರಿಸಿ, ಸಾಂತ್ವನ ಹೇಳಬೇಕಾಗಿರುವ ಕಾರ್ಯ ಈಗ ಆಗಬೇಕಾಗಿದೆ ಎಂದು ಹೇಳಿದರು. ಸಾವಿರಾರು ಸಂಖ್ಯೆಯಲ್ಲಿ ಶಿಕ್ಷಕರು ತಮ್ಮ ಜೀವವನ್ನು […]

ಕರ್ನಾಟಕ ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟ, ಹುಡುಗಿಯ 77.74%. ಬಾಲಕರು 66.41%

Monday, August 10th, 2020
sslc Result

ಬೆಂಗಳೂರು: ಕರ್ನಾಟಕ ಎಸ್ಎಸ್ಎಲ್ ಸಿ ಫಲಿತಾಂಶಗಳು ಪ್ರಕಟವಾಗಿದ್ದು, ಈ ಬಾರಿ ಶೇ.71.80 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ರಾಜ್ಯಾದ್ಯಂತ 8, 48, 203 ವಿದ್ಯಾರ್ಥಿಗಳು ಪರೀಕ್ಷೆ ನೋಂದಾಯಿಸಿಕೊಂಡಿದ್ದು, ಈ ಪೈಕಿ 8,11,050 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 19, 086 ವಿದ್ಯಾರ್ಥಿಗಳ ಕೊರತೆಯುಂಟಾಗಿತ್ತು. ರಾಜ್ಯಾದ್ಯಂತ 34 ಶೈಕ್ಷಣಿಕ ಜಿಲ್ಲೆಗಳ 22 ಕೇಂದ್ರಗಳಲ್ಲಿ ಮೌಲ್ಯಮಾಪನ ಮಾಡಲಾಗಿತ್ತು ಎಂದು ಹೇಳಿದರು. ಕೊರೊನಾ ಸೋಂಕಿನ ಭೀತಿಯಿಂದ 18,067 ವಿದ್ಯಾರ್ಥಿಗಳು ಮೊದಲು ಪರೀಕ್ಷೆ […]

ಎಸ್ಎಸ್ಎಲ್ ಸಿ ಪರೀಕ್ಷೆ ಹಿನ್ನಲೆ ಪೊಳಲಿ ರಾಜರಾಜೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್

Friday, July 10th, 2020
education minister

ಬಂಟ್ವಾಳ: ಕೋವಿಡ್-19 ಸೋಂಕು ಭೀತಿಯ ನಡುವೆಯೂ ರಾಜ್ಯದ ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ಬಹುತೇಕ ಯಶಸ್ವಿಯಾಗಿ ಮುಗಿಸಿದ ಹಿನ್ನಲೆಯಲ್ಲಿ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೊಳಲಿ ರಾಜರಾಜೇಶ್ವರಿ ದೇವಸ್ಥಾನಕ್ಕೆ ಇಂದು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಕಾಲಿನಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆ ಬರೆದಿದ್ದ ಕೌಶಿಕ್ ನನ್ನು ದೇವಸ್ಥಾನದ ಪ್ರವೇಶ ದ್ವಾರದ ಬಳಿ ಭೇಟಿ ಆತನ ಜತೆ ಉಭಯ ಕುಶಲೋಪರಿ ವಿಚಾರಿಸಿದರು. ನೀನೇ ನಮಗೆ ಸ್ಪೂರ್ತಿ ಎಂದು […]

ರಾಜ್ಯದಲ್ಲಿ ಕೊರೊನಾ ವೈರಸ್‌ ಪತ್ತೆಯಾಗಿಲ್ಲ; ಭಯ ಪಡುವುದು ಬೇಡ : ಶಿಕ್ಷಣ ಸಚಿವ ಡಾ.ಸುಧಾಕರ್

Saturday, March 7th, 2020
sudhakar

ಮೈಸೂರು : ರಾಜ್ಯದಲ್ಲಿ ಕೊರೊನಾ ವೈರಸ್‌ ಪ್ರಕರಣ ಪತ್ತೆಯಾಗಿಲ್ಲ. ಯಾರು ಕೂಡ ಭಯ ಪಡುವುದು ಬೇಡ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹೇಳಿದರು. ಮೈಸೂರಿನಲ್ಲಿ ಸಚಿವ ಡಾ. ಸುಧಾಕರ್‌ ಸುದ್ದಿಗಾರರೊಂದಿಗೆ ಮಾತನಾಡಿದರು. ಕೊರೊನಾ ವೈರಸ್‌ ಬಗ್ಗೆ ರಾಜ್ಯದಲ್ಲಿ ಪಂಚಾಯಿತಿ ವ್ಯಾಪ್ತಿಯಿಂದ ಹಿಡಿದು ನಗರ ವ್ಯಾಪ್ತಿಯವರೆಗೂ ಎಲ್ಲ ಸ್ಥಳಗಳಲ್ಲೂ ಮುನ್ನಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ವಿಶೇಷವಾಗಿ ನಮ್ಮ ರಾಜ್ಯ ಸರಕಾರದಿಂದ ಟಾಸ್ಕ್ ಫೋರ್ಸ್‌ ರಚಿಸಿ ಕೊರೊನಾ ಪ್ರಕರಣಗಳ ಮೇಲೆ ನಿಗಾ ವಹಿಸಲಾಗಿದೆ ಎಂದರು. ನಮ್ಮ ಸರಕಾರ ಅನುಸರಿಸುತ್ತಿರುವ […]

ಶಿಕ್ಷಣ ಸಚಿವರು ತಕ್ಷಣ ರಾಜೀನಾಮೆ ನೀಡಬೇಕು: ಸುಲೋಚನಾ ಜಿ.ಕೆ.ಭಟ್

Saturday, November 12th, 2016
bjp-mahila-morcha-

ಮಂಗಳೂರು: ನೈತಿಕ ಮೌಲ್ಯವನ್ನು ಎತ್ತಿ ಹಿಡಿಯಬೇಕಾದ ಶಿಕ್ಷಣ ಸಚಿವರು ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮದಲ್ಲಿ ಯುವತಿಯೋರ್ವಳ ಅರೆನಗ್ನ ಚಿತ್ರ ವೀಕ್ಷಿಸುವ ಮೂಲಕ ಸಮಾಜವೇ ತಲೆತಗ್ಗಿಸುವ ಕೆಲಸ ಮಾಡಿದ್ದಾರೆ. ಅವರು ತಕ್ಷಣ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ರಾಜೀನಾಮೆ ನೀಡದಿದ್ದರೆ ಮುಖ್ಯಮಂತ್ರಿಯವರೇ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಬಿಜೆಪಿ ರಾಜ್ಯ ಸಹವಕ್ತಾರೆ ಸುಲೋಚನಾ ಜಿ.ಕೆ.ಭಟ್ ಆಗ್ರಹಿಸಿದ್ದಾರೆ. ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರೆನಗ್ನ ಚಿತ್ರಗಳ ವೀಕ್ಷಣೆಯಲ್ಲಿ ಮಗ್ನವಾಗಿದ್ದ ಸೇಠ್ ಅವರು ಪರೋಕ್ಷವಾಗಿ ಟಿಪ್ಪು ಜಯಂತಿಗೆ […]