ನಗ್ರಿ ಶ್ರೀ ಶಾರದ ಭಜನಾ ಮಂದಿರದ ಸಮುದಾಯದ ಭವನಕ್ಕೆ ಶಿಲಾನ್ಯಾಸ

Tuesday, July 13th, 2021
Nagri Sharadha Bajana Mandali

ಬಂಟ್ವಾಳ: ಬಂಟ್ವಾಳ ಶಾಸಕರ ರೂ .50 ಲಕ್ಷ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ನಗ್ರಿ ಶ್ರೀ ಶಾರದ ಭಜನಾ ಮಂದಿರದ ಸಮುದಾಯದ ಭವನಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಧಾರ್ಮಿಕ ವಿಧಿವಿಧಾನಗಳ ಮೂಲಕ ನೆರವೇರಿತು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಶಿಲಾನ್ಯಾಸ ನೆರವೇರಿಸಿ ಬಳಿಕ ಮಾತನಾಡಿ, ಸರಕಾರದ ಅನುದಾನಗಳ ಮೂಲಕ ಗ್ರಾಮದ ಎಲ್ಲಾ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿ ಗೆ ಮೊದಲ ಆಧ್ಯತೆ ನೀಡಲಾಗುತ್ತದೆ ‌ಎಂದರು. ಧಾರ್ಮಿಕ ಕೇಂದ್ರ ಗಳ ಅಭಿವೃದ್ಧಿಗೆ ಗ್ರಾಮಸ್ಥರ ಒಗ್ಗಟ್ಟಿನ ಸಹಕಾರ ಸದಾ ಇರಲಿ ಎಂದು ಹೇಳಿದರು. […]

ಜೈ ಶ್ರೀರಾಮ್‌ ಎಂದು ಬರೆದು ಅಯೋಧ್ಯೆಯಲ್ಲಿ ಶಿಲಾನ್ಯಾಸ ಆಗುತ್ತಿದ್ದಂತೆ ಸಂಭ್ರಮಿಸಿದ ಮುಸ್ಲಿಂ ಕಲಾವಿದ

Thursday, August 6th, 2020
munaf

ಗದಗ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ ನಡೆಯುತ್ತಿದ್ದಂತೆ ನಗರದ ಅಮರೇಶ್ವರ ಕಾಲೋನಿಯ ಮುನಾಫ್‌ ಹರ್ಲಾಪುರ ಎಂಬುವರು ಪುಟ್ಟ ಹಾಳೆಯಲ್ಲಿ ಮಂಡಲದ ಮಧ್ಯೆ ಶ್ರೀ ರಾಮನ ಪಾದಗಳ ಚಿತ್ರ ಬಿಡಿಸಿ, ಸುತ್ತಲು ಜೈ ಶ್ರೀರಾಮ್‌ ಎಂದು ಬರೆದಿದ್ದಾರೆ. ಜೊತೆಗೆ ರಾಮ ಭಕ್ತ ಹನುಮನನ್ನು ಬಿಡಿಸುವ ಮೂಲ ರಾಮಲಲ್ಲಾ ಜಪ ಮಾಡಿ, ಸಂಭ್ರಮಿಸಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರುತ್ತಿರುವುದರಿಂದ ದೇಶದೆಲ್ಲೆಡೆ ಸಂಭ್ರಮ ಮನೆ ಮಾಡಿದೆ. ಹೀಗಾಗಿ ಹಿಂದೂಗಳು ವಿವಿಧ ದೇವಸ್ಥಾಗಳಲ್ಲಿ ಹೋಮ, ಹವನ ಹಾಗೂ ಜಪತಪಗಳಲ್ಲಿ ಮುಳುಗಿದ್ದರೆ,  ಇವರು  […]

ನಾಳೆ ಮಂಗಳೂರು ವಿ.ವಿ. ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ ಕಟ್ಟಡದ ಶಿಲಾನ್ಯಾಸ ಸಮಾರಂಭ

Saturday, January 11th, 2020
VC

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಕಟ್ಟಡದ ಶಿಲಾನ್ಯಾಸ ಸಮಾರಂಭ ಜ. 12ರಂದು ಬೆಳಗ್ಗೆ 10.30ಕ್ಕೆ ಕೊಣಾಜೆಯ ವಿ.ವಿ. ಮುಖ್ಯ ದ್ವಾರದ ಮುಂಭಾಗದ ನಿವೇಶನದಲ್ಲಿ ನಡೆಯಲಿದೆ. ಸಚಿವ ಕೋಟ ಮತ್ತು ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್‌ ಶಂಕು ಸ್ಥಾಪನೆ ನೆರವೇ ರಿಸುತ್ತಾರೆ. ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀ ರ್ವಚನ ನೀಡಲಿದ್ದು, ವಿ.ವಿ. ಉಪಕುಲ ಪತಿ ಪ್ರೊ| ಪಿ.ಎಸ್‌. ಎಡಪಡಿತ್ತಾಯ ಅಧ್ಯಕ್ಷತೆ ವಹಿಸುವರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಶಾಸಕ ಯು.ಟಿ. ಖಾದರ್‌, ವಿ. […]

ಮುಡಿಪು: ನೂತನ ಕಾಂಕ್ರೀಟ್‌ ರಸ್ತೆಗೆ ಶಿಲಾನ್ಯಾಸ

Wednesday, October 18th, 2017
mudipu

ಮಂಗಳೂರು: ಯು.ಟಿ.ಖಾದರ್, ಪಜೀರು ಗ್ರಾಮದ ವಜಲ ಗುಡ್ಡೆ ಪರಿಸರವು ಬಹಳಷ್ಟು ಹಿಂದುಳಿದ ಪ್ರದೇಶವಾಗಿದೆ. ಇಂದಿನ ಆಧುನಿ ಕತೆಯಲ್ಲೂ ಜನರು ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದೇ, ಬಹಳಷ್ಟು ದೂರ ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿ ಇಲ್ಲಿಯದ್ದು ಎಂದು ಹೇಳಿದರು. ಪಜೀರು ಗ್ರಾಮದ ವಜಲಗುಡ್ಡೆಯ ನೂತನ ಕಾಂಕ್ರೀಟ್‌ ರಸ್ತೆಗೆ ಆಹಾರ ಸಚಿವ ಯು.ಟಿ.ಖಾದರ್ ಶಿಲಾನ್ಯಾಸ ನೆರವೇರಿಸಿದರು. ಕಳೆದ ಬಾರಿ ಇಲ್ಲಿಯ ಜನರಿಗೆ ನೀಡಿದ ಭರವಸೆಯಂತೆ ಇದೀಗ ಈ ರಸ್ತೆಗೆ ಸುಮಾರು ರೂ.25 ಲಕ್ಷ ವೆಚ್ಚದಲ್ಲಿ ಉತ್ತಮ ಕಾಂಕ್ರೀಟ್‌ ರಸ್ತೆ ನಿರ್ಮಾಣವಾಗಲಿದೆ. ಈ ಭಾಗದ ತಾಲ್ಲೂಕು […]

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ

Monday, October 16th, 2017
kavitha sanil

ಮಂಗಳೂರು:ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕ ಜೆ.ಆರ್.ಲೋಬೋ ಹಾಗೂ ಮೇಯರ್ ಕವಿತಾ ಸನಿಲ್ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 5.14 ಕೋ.ರೂ. ವೆಚ್ಚದಲ್ಲಿ  ಶಿಲಾನ್ಯಾಸ ನಡೆಸಿದರು. ಲೇಡಿಹಿಲ್ ವೃತ್ತ ಅಭಿವೃದ್ದಿಗೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಜೆ.ಆರ್.ಲೋಬೊ ಅವರು, ಮಂಗಳೂರು ನಗರ ಅಭಿವೃದ್ಧಿ ದೃಷ್ಟಿಯಿಂದ ಮುಂದಿನ ಮೂರು ವರ್ಷಗಳಲ್ಲಿ ಸುಮಾರು 2,500 ಕೋ.ರೂ., ಅನುದಾನ ಬೇರೆ ಬೇರೆ ಮೂಲಗಳಿಂದ ಲಭ್ಯವಾಗಲಿದೆ ಹಾಗೂ ವಿವಿಧ ಮೂಲಗಳಿಂದ ವಿವಿಧ ಯೋಜನೆಗಳಿಗಾಗಿ ಅನುದಾನ ದೊರೆಯಲಿದೆ. ಹೀಗಾಗಿ ಮುಂದಿನ ಮೂರು ವರ್ಷದಲ್ಲಿ ಮಂಗಳೂರು ನಗರದ […]

ಸುರತ್ಕಲ್‌ ಕೇಂದ್ರ ಮೈದಾನಿನಲ್ಲಿ ವಿವಿಧ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳಿಂದ ಶಿಲಾನ್ಯಾಸ

Friday, April 22nd, 2016
Surathkal

ಮಂಗಳೂರು: ಸುರತ್ಕಲ್‌ ಪ್ರದೇಶದ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ವಿವಿಧ ಕಾಮಗಾರಿಗಳಿಗೆ ಗುರುವಾರ ಸುರತ್ಕಲ್‌ ಕೇಂದ್ರ ಮೈದಾನಿನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಶಿಲಾನ್ಯಾಸ ನೆರವೇರಿಸಿದರು. ಎಸ್‌.ಎಫ್‌.ಸಿ. 3 ಕೋಟಿ ರೂ. ವಿಶೇಷ ಅನುದಾನದಡಿ 1.70 ಕೋಟಿ ರೂ. ವೆಚ್ಚದಲ್ಲಿ ಸುರತ್ಕಲ್‌ ಆಧುನಿಕ ಕೇಂದ್ರ ಮಾರುಕಟ್ಟೆ ನಿರ್ಮಾಣದ ಪೂರ್ವದಲ್ಲಿ ಹಾಲಿ ಮಾರುಕಟ್ಟೆಯ ಸ್ಥಳಾಂತರದ ಕಾಮಗಾರಿ, ಮುಖ್ಯಮಂತ್ರಿಗಳ ನಗರೋತ್ಥಾನ 3ನೇ ಹಂತದ 100 ಕೋಟಿ ರೂ. ಯೋಜನೆಯಡಿ 2.25 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಮೊದಲ ಹಂತದ ಸುರತ್ಕಲ್‌ ವಲಯ […]

ಲೇಡಿಗೋಶನ್ ಆಸ್ಪತ್ರೆಗೆ ಪೆಟ್ರೋಲಿಯಂ ಖಾತೆ ಸಚಿವ ಎಂ.ವೀರಪ್ಪ ಮೊಯ್ಲಿ ಭೇಟಿ

Monday, January 14th, 2013
Ladygoschen Hospital

ಮಂಗಳೂರು : ಸರಕಾರಿ ಲೇಡಿಗೋಶನ್ ಆಸ್ಪತ್ರೆಯ ಹೊಸ ಕಟ್ಟಡಕ್ಕೆ ಫೆಬ್ರವರಿ 9ರಂದು ಶಿಲಾನ್ಯಾಸ ನಡೆಸಲಾಗುವುದು ಎಂದು ಪೆಟ್ರೋಲಿಯಂ ಖಾತೆ ಸಚಿವ ಎಂ.ವೀರಪ್ಪ ಮೊಯ್ಲಿ ಹೇಳಿದರು. ಲೇಡಿಗೋಶನ್ ಆಸ್ಪತ್ರೆಯ ನಾನಾ ವಾರ್ಡ್‌ಗಳಿಗೆ ಮತ್ತು ಹೊಸ ಕಟ್ಟಡ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು ಒಎನ್‌ಜಿಸಿ- ಎಂಆರ್‌ಪಿಎಲ್ ನೀಡಿರುವ 21 ಕೋಟಿ ರೂಪಾಯಿ ನೆರವಿನಿಂದ ಹೊಸ ಕಟ್ಟಡವನ್ನು ನಿರ್ಮಿಸಲಾಗುವುದು ಒಂದು ವೇಳೆ ಹೆಚ್ಚಿನ ಹಣ ಅಗತ್ಯಬಿದ್ದರೆ, ಬೇರೆ ಕಂಪನಿಗಳಿಂದ ಹೊಂದಿಸಲಾಗುವುದು. ಜನವರಿ […]

ಉರ್ವಸ್ಟೋರ್‌ನಲ್ಲಿ ‘ತುಳು ಭವನ’ ನಿರ್ಮಾಣಕ್ಕೆ ಶಿಲಾನ್ಯಾಸ

Sunday, October 2nd, 2011
Foundation laying ceremony for the Tulu Bhavana

ಮಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಉರ್ವಸ್ಟೋರ್‌ನಲ್ಲಿ ಸುಮಾರು 5 ಕೋ. ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅಕಾಡೆಮಿ  ಕಟ್ಟಡ ‘ತುಳು ಭವನ’ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜೆ. ಕೃಷ್ಣ ಪಾಲೆಮಾರ್‌ ಜಿಲ್ಲಾ ಉಸ್ತುವಾರಿ ಅವರು ಶನಿವಾರ ಶಿಲಾನ್ಯಾಸ ನೆರವೇರಿಸಿದರು. ಮೂರು ಮಹಡಿಗಳನ್ನು ಒಳಗೊಂಡಿರುವ ‘ತುಳು ಭವನ’ ಮೊದಲ ಮಹಡಿಯಲ್ಲಿ ಕಾರು ಪಾರ್ಕಿಂಗ್‌ ಹಾಗೂ ಕಚೇರಿ. ಎರಡನೇ ಮಹಡಿಯಲ್ಲಿ ಸಭಾಂಗಣ. ಮೂರನೇ ಮಹಡಿಯಲ್ಲಿ ಮ್ಯೂಸಿಯಂ, ಅತಿಥಿಗೃಹ, ದಾಸ್ತಾನು ಕೊಠಡಿಯನ್ನು ಹೊಂದಿದೆ. ‘ತುಳು […]