ಬಾಲಕನ ಶ್ವಾಸಕೋಶದಲ್ಲಿ ಗುಂಡುಸೂಜಿ, ವೈದ್ಯರು ಶಸ್ತ್ರಚಿಕಿತ್ಸೆ ಇಲ್ಲದೆ ಮಾಡಿದ್ದೇನು ಗೊತ್ತಾ !

Friday, March 19th, 2021
Mubshir

ಮಂಗಳೂರು :  ನೋಟಿಸ್ ಬೋರ್ಡಿಗೆ ಬಳಸಲಾಗುವ ಗುಂಡುಸೂಜಿ 12 ರ ಬಾಲಕನ ಹೊಟ್ಟೆಯೊಳಗೆ ಸೇರಿ ಕೆಮ್ಮು, ಉಸಿರಾಟ ತೊಂದರೆ, ಜ್ವರ ಬಾಧೆಯಿಂದ  ವೈದ್ಯರನ್ನು ಸಂಪರ್ಕಿಸಿ, ಎಕ್ಸ್‌ರೇ ತೆಗೆದಾಗ ಅದು ಶ್ವಾಸಕೋಶದಲ್ಲಿ ಸಿಕ್ಕಿಕೊಂಡಿರುವ ಪ್ರಕರಣವೊಂದು ನಗರದ ಹೊರ ವಲಯದ ಬಜಾಲ್‌ನಿಂದ ವರದಿಯಾಗಿದೆ. ಬಜಾಲ್ ಪಕ್ಕಲಡ್ಕ ನಿವಾಸಿ ಅಬ್ದುಲ್ ಖಾದರ್ ಎಂಬವರ ಪುತ್ರ ಮುಬಶ್ಶಿರ್ (12) ಎಂಬವರ ಶ್ವಾಸಕೋಶದಲ್ಲಿ ಗುಂಡುಸೂಜಿ ಪತ್ತೆಯಾಗಿದೆ. ಮನೆಯವರು ಕೆಮ್ಮು, ಜ್ವರ ಸಾಮಾನ್ಯ ರೋಗ ಲಕ್ಷಣವೆಂದು ಪರಿಗಣಿಸಿದ್ದ ಪೋಷಕರು ಚಿಕಿತ್ಸೆ ಕೊಡಿಸಿದ್ದರು. ಅಲ್ಪ ಪ್ರಮಾಣದಲ್ಲಿ ಚೇತರಿಕೆ ಕಂಡುಬಂದರೂ ಕೆಮ್ಮು ನಿಂತಿರಲಿಲ್ಲ. ಜ್ವರವೂ […]

‘ಝೀರೋ ಟ್ರಾಫಿಕ್’ ಮೂಲಕ ಪುತ್ತೂರಿನಿಂದ ಬೆಂಗಳೂರು ವೈದೇಹಿ ಆಸ್ಪತ್ರೆಗೆ ರೋಗಿಯನ್ನು ತಲುಪಿಸಿದ ಆಂಬುಲೆನ್ಸ್

Wednesday, December 2nd, 2020
suhana

ಪುತ್ತೂರು: ‘ಝೀರೋ ಟ್ರಾಫಿಕ್’  ಮೂಲಕ  ಪುತ್ತೂರಿನ ಆಸ್ಪತ್ರೆಯಿಂದ  ಶ್ವಾಸಕೋಶದ ಶಸ್ತ್ರಚಿಕಿತ್ಸೆಗಾಗಿ ಬೆಂಗಳೂರಿನ ಆಂಬುಲೆನ್ಸ್ ಮೂಲಕ 4. 20 ನಿಮಿಷದಲ್ಲಿ ಬೆಂಗಳೂರು ವೈದೇಹಿ ಆಸ್ಪತ್ರೆಗೆ ರೋಗಿಯನ್ನು ತಲುಪಿಸಲಾಗಿದೆ. ಬೆಳಗ್ಗೆ 11 ಗಂಟೆಗೆ ಪುತ್ತೂರು ಮಹಾವೀರ ಆಸ್ಪತ್ರೆಯಿಂದ ‘ಝೀರೋ ಟ್ರಾಫಿಕ್’ ಆಂಬುಲೆನ್ಸ್ ಪ್ರಯಾಣ ಆರಂಭಿಸಿತು. ವಿವಿಧ ಠಾಣಾ ಪೊಲೀಸರು, ಸಂಘ ಸಂಸ್ಥೆಗಳ ಕಾರ್ಯಕರ್ತರು ಸುಗಮ ಸಂಚಾರಕ್ಕೆ ಸಹಕರಿಸಿದರು ವಿಟ್ಲದ “ಡಿ ಗ್ರೂಪ್”ಆಂಬ್ಯುಲೆನ್ಸ್ ಬೆಂಗಾವಲಾಗಿ ಮುಂಭಾಗದಿಂದ ತೆರಳಿ ಸಹಕರಿಸಿತು. ಆಂಬುಲೆನ್ಸ್ ಬೆಂಗಳೂರು ವೈದೇಹಿ ಆಸ್ಪತ್ರೆ ತಲುಪಿದ ತಕ್ಷಣವೇ ಸುಹಾನಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆಯ […]

ನಟ ಸಂಜಯ್ ದತ್ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ?

Wednesday, August 12th, 2020
sanjaydatt

ಮುಂಬೈ: ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಬಾಲಿವುಡ್ ನಟ ಸಂಜಯ್ ದತ್  ಅವರು ಈಗ ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಸಂಜಯ್ ದತ್ ಅವರನ್ನು ಇಲ್ಲಿನ ಲೀಲಾವತಿ ಆಸ್ಪತ್ರೆಗೆ ಉಸಿರಾಟದ ತೊಂದರೆಯಿಂದ  ದಾಖಲಿಸಲಾಗಿತ್ತು. ಇಂದು ಟ್ವೀಟ್ ಮಾಡಿದ್ದ ಸಂಜಯ್ ದತ್, ವೃತ್ತಿಯಿಂದ ಸ್ವಲ್ಪ ಸಮಯ ವಿರಾಮ ಪಡೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದರು. ಇದೀಗ ಟ್ವೀಟ್ ಮಾಡಿರುವ ಫಿಲ್ಮ್ ಇನ್ಫಾರ್ಮೇಶನ್ ಮುಖ್ಯ ಸಂಪಾದಕ ಕೋಮಲ್ ನಹ್ತಾ “ಸಂಜಯ್ ದತ್ ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ” ಎಂದಿದ್ದಾರೆ. ಆದರೆ ಈ ಬಗ್ಗೆ ಸಂಜಯ್ ದತ್ ಕುಟುಂಬ ಅಧಿಕೃತ […]

ಖ್ಯಾತ ಇತಿಹಾಸ ತಜ್ಞ ಮತ್ತು ಸಾಹಿತಿ ಪ್ರೊ. ಷ. ಶೆಟ್ಟರ್​ ವಿಧಿವಶ

Friday, February 28th, 2020
sha-shetttar

ಬೆಂಗಳೂರು : ಕನ್ನಡಕ್ಕೆ ರಾಷ್ಟ್ರೀಯ ಸ್ಥಾನಮಾನವನ್ನು ದೊರಕಿಸಿಕೊಡಲು ಸಾಕಷ್ಟು ಪ್ರಯತ್ನಪಟ್ಟಿದ್ದ ಖ್ಯಾತ ಇತಿಹಾಸ ತಜ್ಞ ಮತ್ತು ಸಾಹಿತಿ ಪ್ರೊ. ಷ. ಶೆಟ್ಟರ್ ಇಂದು ಮುಂಜಾನೆ ನಿಧನರಾಗಿದ್ದಾರೆ. ಕಳೆದ 1 ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಷ. ಶೆಟ್ಟರ್ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಶ್ವಾಸಕೋಶದಲ್ಲಿ ನೀರು ತುಂಬಿದ್ದರಿಂದ ಷ. ಶೆಟ್ಟರ್ ಅವರ ಉಸಿರಾಟಕ್ಕೆ ತೊಂದರೆಯಾಗಿತ್ತು. ಬನ್ನೇರುಘಟ್ಟದ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶೆಟ್ಟರ್ ಇಂದು ಬೆಳಗ್ಗೆ 3 ಗಂಟೆಗೆ ನಿಧನರಾಗಿದ್ದಾರೆ. ಭೂಪಸಂದ್ರದಲ್ಲಿರುವ ಶೆಟ್ಟರ್ ನಿವಾಸದಲ್ಲಿ ಅಂತಿಮ […]