ಕಾರಿಂಜ ದೇವಸ್ಥಾನಕ್ಕೆ ಫೋಟೋ ತೆಗೆಯಲು ಬಂದ ಅನ್ಯಕೋಮಿನ ವಿದ್ಯಾರ್ಥಿಗಳ ಜೋಡಿ

Friday, August 27th, 2021
Karinja

ಮಂಗಳೂರು : ಕಾರಿಂಜ ದೇವಸ್ಥಾನಕ್ಕೆ ಫೋಟೋ ತೆಗೆಯಲು  ಬಂದ ವಿದ್ಯಾರ್ಥಿಗಳ ಜೋಡಿಯನ್ನು ತಡೆದು ಸಂಘ ಪರಿವಾರದ ಕಾರ್ಯಕರ್ತರು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ. ಮಂಗಳೂರಿನ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಅಂತಿಮ ವರ್ಷದ ಪ್ಯಾರಾ ಮೆಡಿಕಲ್ ವ್ಯಾಸಂಗ ಮಾಡುತ್ತಿರುವ ಮೂವರು ವಿದ್ಯಾರ್ಥಿನಿಯರು, ಮೂವರು ವಿದ್ಯಾರ್ಥಿಗಳು ಗುರುವಾರ ಸಂಜೆ ಕಾರಿಂಜ ದೇವಸ್ಥಾನಕ್ಕೆ ಬಂದಿದ್ದರು. ವಿದ್ಯಾರ್ಥಿಗಳು ದೇವಸ್ಥಾನದ ಪರಿಸದಲ್ಲಿ ಫೋಟೋ ತೆಗೆದು ಮನೆಗೆ ವಾಪಸ್ ತೆರಳುತ್ತಿದ್ದ ಸಂದರ್ಭದಲ್ಲಿ 5 ಮಂದಿ ಇದ್ದ ಸಂಘ ಪರಿವಾರದ ಕಾರ್ಯಕರ್ತರು ತಡೆದು ನಿಲ್ಲಿಸಿ ಪ್ರಶ್ನಿಸಿದ್ದರು. ಹಿಂದೂ ಮತ್ತು ಮುಸ್ಲಿಮ್ ಧರ್ಮಕ್ಕೆ […]

ಬಸವರಾಜ ಬೊಮ್ಮಾಯಿ ಜನತಾ ಪರಿವಾರದಿಂದ ಬಂದವರು, ಬಿಜೆಪಿಯ ಕೆಲವು ನಾಯಕರಿಗೆ ಒಳಗೊಳಗೇ ಅಸಮಾಧಾನ !

Sunday, August 1st, 2021
Basavaraja Bommai

ಬೆಂಗಳೂರು : ಜನತಾ ಪರಿವಾರದಿಂದ ಬಂದವರೇ ಹೆಚ್ಚು ಜನ ಮುಖ್ಯಮಂತ್ರಿಗಳಾಗಿರುವುದು ಎಂದು ಮಾಜಿ ಸಚಿವ ಹೆಚ್‌ಡಿ.ರೇವಣ್ಣ ಹೇಳಿದ ಬಳಿಕ ಸಂಘ ಪರಿವಾರದ ಹಿನ್ನೆಲೆ ಇರುವ ಕೆಲವು ಬಿಜೆಪಿ ಮುಖಂಡರಿಗೆ ಮುಜುಗರ ಉಂಟುಮಾಡಿದೆ. ಅಷ್ಟರವರೆಗೆ ಬಸವರಾಜ ಬೊಮ್ಮಾಯಿ ಹೊರಗಿನವರು ಎಂಬ ಭಾವನೆ ಇರಲಿಲ್ಲ. ಜೆಡಿಯಸ್ ನವರು ಈ ರೀತಿ ಹೇಳುತ್ತಿರುವುದರಿಂದ ಸಂಘ ಪರಿವಾರದವರಿಗೆ ‘ನಮ್ಮ ಕೈಗೆ ಬಂದ ಅಧಿಕಾರ ಜನತಾ ಪರಿವಾರದ ಮೂಲದವನ ಬಾಯಿಗೆ ಬಿತ್ತಲ್ಲಾ ಎಂಬ ಭಾವನೆ ಕಾಡತೊಡಗಿದೆ. ಬಸವರಾಜ ಬೊಮ್ಮಾಯಿ ಸಿಎಂ ಆದ ಮೇಲೆ ಮೊದಲ […]

ಸಂಘ ಪರಿವಾರದ ಕಾರ್ಯಕರ್ತರು ಏನು ಮಾಡಿದರೂ ನಡೆಯುತ್ತದೆ – ಸಂತೋಷ್ ಬಜಾಲ್

Thursday, July 4th, 2019
Sunil-Kumar

ಉಳ್ಳಾಲ : ಸಂಘಪರಿವಾರದ ಕಾರ್ಯಕರ್ತರು ಜಿಲ್ಲೆಯಲ್ಲಿ ತಾವು ಏನು ಮಾಡಿದರೂ ನಡೆಯುತ್ತದೆ ಎಂಬ ದುರಹಂಕಾರದಿಂದ ವರ್ತಿಸುತ್ತಿದ್ದು ಇದರ ಪರಿಣಾಮವೇ ಪುತ್ತೂರಿನಲ್ಲಿ ದಲಿತ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಮಾಡುವ ಪ್ರಕ್ರಿಯೆ ನಡೆದಿದ್ದು ಇವರ ದುರಹಂಕಾರ ಮತ್ತು ಸೊಕ್ಕನ್ನು ಮುರಿಯಲು ಜಿಲ್ಕೆಯ ಜನತೆ ಮುಂದಾಗಬೇಕಿದೆ ಎಂದು ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಹೇಳಿದರು. ಪುತ್ತೂರಿನಲ್ಲಿ ನಡೆದ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಖಂಡಿಸಿ , ಜಿಲ್ಲೆಯಲ್ಲಿ ವ್ಯಾಪಕವಾಗಿರುವ ಮಾದಕ ದ್ರವ್ಯ ಮಾರಾಟ ಜಾಲವನ್ನು […]

ಸಂಘ ಪರಿವಾರದ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಲಾಗುತ್ತಿದೆ: ಶೋಭಾ ಕರಂದ್ಲಾಜೆ

Tuesday, June 5th, 2018
shobha-karandlaje-MP

ಮಂಗಳೂರು: ಉಡುಪಿ ಪೆರ್ಡೂರಿನ ದನದ ವ್ಯಾಪಾರಿ ಹುಸೇನಬ್ಬ ಸಾವು ಪ್ರಕರಣದಲ್ಲಿ ಸಂಘಪರಿವಾರದ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಶೋಭಾ, ಗೋಸಾಗಾಟ ಸಂದರ್ಭದಲ್ಲಿ ಸಂಘಪರಿವಾರ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ವಾಹನ ಅಡ್ಡಗಟ್ಟಿದ ಸಂದರ್ಭದಲ್ಲಿ ದನಸಾಗಾಟದ ವಾಹನ ರಿವರ್ಸ್ ಹೋಗಿ ಅಪಘಾತ ಸಂಭವಿಸಿದೆ. ಈ ಸಂದರ್ಭದಲ್ಲಿ ಸೆರೆಸಿಕ್ಕ ಹುಸೇನಬ್ಬ ಪೊಲೀಸ್ ಜೀಪಿನಲ್ಲಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಸಂಘಪರಿವಾರದ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಲಾಗುತ್ತಿದೆ. […]

ರಮಾನಾಥ ರೈ ವರ್ಚಸ್ಸನ್ನು ಕುಗ್ಗಿಸಲು ಬಿಜೆಪಿ ಮತ್ತು ಸಂಘ ಪರಿವಾರ ಪ್ರಯತ್ನ ಮಾಡುತ್ತಿವೆ : ಮಿಥುನ್ ರೈ

Wednesday, June 21st, 2017
mithun

ಮಂಗಳೂರು : ಪ್ರಚೋದನಾಕಾರಿ ಭಾಷಣ ಮಾಡುವವರನ್ನು ಬಂಧಿಸಲು ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ.  ಸಚಿವ ರಮಾನಾಥ ರೈ ವರ್ಚಸ್ಸನ್ನು ಕುಗ್ಗಿಸಲು ಬಿಜೆಪಿ ಮತ್ತು ಸಂಘ ಪರಿವಾರ ಪ್ರಯತ್ನ ಮಾಡುತ್ತಿವೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಹೇಳಿದ್ದಾರೆ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ  ಮಾತನಾಡಿದ ಮಿಥುನ್, ಕಾಂಗ್ರೆಸ್‌ಗೆ ಶಾಂತಿ ಮುಖ್ಯ,  ಜಿಲ್ಲೆಯ ಅಬಿವೃದ್ಧಿ ಕಾಪಾಡುವ ದೃಷ್ಟಿಯಿಂದ ರಮಾನಾಥ ರೈ ನೀಡಿರುವ ಸೂಚನೆಯನ್ನೇ ಅಪರಾಧ ಎಂಬಂತೆ ಬಿಂಬಿಸಿ ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು. ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ […]

ಬಕ್ರೀದ್‌ ವೇಳೆ ಅಹಿತಕರ ಘಟನೆ ನಡೆಯದಂತೆ ಮುಸ್ಲಿಂ ಸಮುದಾಯದ ಮನವಿ

Friday, September 9th, 2016
Bakrid

ಮಂಗಳೂರು: ಸೆಪ್ಟಂಬರ್ 12 ರಂದು ಬಕ್ರೀದ್ ಆಚರಣೆ ನಡೆಯುತ್ತಿದ್ದು, ಬಳಿಕ ಮೂರು ದಿನಗಳ ಖುರ್ಬಾನಿ ಕೊಡುವುದು ಇಸ್ಲಾಂ ಧರ್ಮದಲ್ಲಿ ನಡೆದುಕೊಂಡ ಬಂದ ವಿಧಿ. ಈ ಸಂದರ್ಭದಲ್ಲಿ ಸೂಕ್ಷ್ಮ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಂದೋಬಸ್ತ್ ಮಾಡುವಂತೆ ಮುಸ್ಲಿಂ ಸೆಂಟ್ರಲ್ ಕಮಿಟಿ ನಿಯೋಗವು ಐಜಿಪಿ, ಪೊಲೀಸ್ ಕಮಿಷನರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮನವಿ ಸಲ್ಲಿಸಿದೆ. ಜೊತೆಗೆ ಜಿಲ್ಲೆಯಲ್ಲಿ ಶಾಂತಿ ಕಾಪಾಡುವಂತೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಮುಸ್ಲಿಮರಿಗೆ ಮನವಿ ಮುಸ್ಲಿಂ ಸೆಂಟ್ರಲ್ ಕಮಿಟಿ […]

ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

Wednesday, August 10th, 2016
Motamma

ಮಂಗಳೂರು: ನರಭಕ್ಷಕರಾಗಿ, ಗೋಮುಖ ವ್ಯಾಘ್ರರಂತೆ ದಲಿತರ ಚರ್ಮ ಸುಲಿಯುತ್ತಿರುವ ಸಂಘ ಪರಿವಾರಕ್ಕೆ ದಲಿತರ ಮೇಲೆ ಹಲ್ಲೆ ಮಾಡಲು ಅಧಿಕಾರ ಕೊಟ್ಟವರು ಯಾರು ಎಂದು ಕಾಂಗ್ರೆಸ್ ಹಿರಿಯ ಮುಖಂಡೆ ಮೋಟಮ್ಮ ಪ್ರಶ್ನಿಸಿದ್ದಾರೆ. ದೇಶಾದ್ಯಂತ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ನಗರದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಪ್ರಶ್ನಿಸಿದ ಮೋಟಮ್ಮ, ಧರ್ಮ, ಜಾತಿ, ಭಾಷೆ ಎಲ್ಲವನ್ನೂ ಬದಿಗಿಟ್ಟು ಎಲ್ಲರನ್ನೂ ಸಮನಾಗಿ ರಕ್ಷಿಸುವ ಕಾರ್ಯವನ್ನು ಕೇಂದ್ರ ಸರ್ಕಾರ ಮರೆತಿದೆ. ದಲಿತರ ಮೇಲಿನ ದೌರ್ಜನ್ಯದ ಪ್ರಕರಣಗಳು ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಹೆಚ್ಚಿದೆ. […]