ಅರಿಯಡ್ಕ ಗ್ರಾಮ ಪಂಚಾಯತ್ ಸದಸ್ಯ ಆತ್ಮಹತ್ಯೆ

Monday, December 4th, 2023
shankara

ಪುತ್ತೂರು : ಅರಿಯಡ್ಕ ಗ್ರಾಮ ಪಂಚಾಯತ್ ಸದಸ್ಯರೋರ್ವರು ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಮಾಡನ್ನೂರು ಗ್ರಾಮದ ಕಾವು ಬಂಗ್ಲೆ ಗುಡ್ಡೆ ನಿವಾಸಿ, ಅರಿಯಡ್ಕ ಗ್ರಾಮ ಪಂಚಾಯತಿನ ಕಾಂಗ್ರೆಸ್ ಬೆಂಬಲಿತ ಸದಸ್ಯ ಶಂಕರ ಮಾಡನ್ನೂರು ಆತ್ಮಹತ್ಯೆ ಗೆ ಶರಣಾದವರು. ಶಂಕರ್ 5 ವರ್ಷಗಳ ಹಿಂದೆ ಸಾಲ ಮಾಡಿ ಜಾಗ ಖರೀದಿ ಮಾಡಿದ್ದು, ಸಾಲ ಮರುಪಾವತಿ ಮಾಡಲು ಸಾಧ್ಯವಾಗದೆ ಜಿಗುಪ್ಸೆ ಹೊಂದಿದ್ದರು ಎನ್ನಲಾಗಿದೆ. ಡಿ.3ರಂದು ಮನೆಯವರು ಮಲಗಿದ್ದಾಗ ಮನೆಯ ಒಳಗಡೆಯೇ ಆತ್ಮಹತ್ಯೆ ಮಾಡಿಕೊಂಡಿದ್ದು, ಮರುದಿನ ಬೆಳಿಗ್ಗೆ ಆತ್ಮಹತ್ಯೆ […]

ದೈವಸ್ಥಾನದ ಮೈದಾನದಲ್ಲಿ ಹಿಂದೂ ಯುವಕರ ಜೊತೆ ಆಡುತ್ತಿದ್ದ ಅನ್ಯ ಧರ್ಮೀಯ ಯುವಕನನ್ನು ಹೊರದಬ್ಬಿದ ಆಡಳಿತ ಮಂಡಳಿ ಸದಸ್ಯ

Wednesday, July 14th, 2021
cricket

ಸುಳ್ಯ :  ಜಯನಗರದ ಶ್ರೀನಾಗ ಬ್ರಹ್ಮ ಆದಿ ಮೊಗೇರ್ಕಳ ಹಾಗೂ ಸ್ವಾಮಿ ಕೊರಗಜ್ಜ ದೈವಸ್ಥಾನದ ಮೈದಾನದಲ್ಲಿ ಹಿಂದೂ ಯುವಕರ ಜೊತೆ ಆಡುತ್ತಿದ್ದ ಅನ್ಯ ಧರ್ಮೀಯ ಯುವಕನನ್ನ ಆಡಳಿತ ಮಂಡಳಿ ಸದಸ್ಯ ಪ್ರವೀಣ್ ಹೊರದಬ್ಬಿದ್ದಾರೆ. ಪ್ರವೀಣ್ ಹಿಂದೂ ಯುವಕರೊಂದಿಗೆ ಕ್ರಿಕೆಟ್‌ ಆಟವಾಡುತ್ತಿದ್ದ ಕ್ರೈಸ್ತ ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ‌ಇಲ್ಲಿ ಅನ್ಯಧರ್ಮಿಯರಿಗೆ ಆಡಲು ಅವಕಾಶವಿಲ್ಲ ಎಂದು ಯುವಕನನ್ನು ಸ್ಥಳದಿಂದ ಹೊರಹೋಗುವಂತೆ ಒತ್ತಾಯಿಸಿದ್ದು, “ಹಿಂದೂಗಳು ಅನ್ಯಧರ್ಮಿಯರೊಡನೆ ಏಕೆ ಆಡುತ್ತಾರೆ?” ಎಂದು ಪ್ರವೀಣ್‌ ಕೇಳಿದ್ದಾರೆ. ಈ ಮೈದಾನದಲ್ಲಿ ಯಾವುದೇ ಅನ್ಯಜಾತಿಯವರು ಆಡಬಾರದು ಎಂದು […]

ವಾಟ್ಸ್ ಆಪ್ ಸದಸ್ಯರ ಪೋಸ್ಟ್ ಗಳಿಗೆ ಗ್ರೂಪ್ ನ ನಿರ್ವಾಹಕರು ಹೊಣೆಯಲ್ಲ : ಹೈಕೋರ್ಟ್

Tuesday, April 27th, 2021
whatsApp

ಮುಂಬಯಿ : ಕ್ರಿಮಿನಲ್ ಪ್ರಕರಣವೊಂದನ್ನು ಪರಿಶೀಲಿಸಿದ  ನಂತರ  ವಾಟ್ಸ್ ಆಪ್ ಸದಸ್ಯರ ಪೋಸ್ಟ್ ಗಳಿಗೆ ಗ್ರೂಪ್ ನ ನಿರ್ವಾಹಕರು ಹೊಣೆಯಲ್ಲ ಎಂದು ಬಾಂಬೆ ಹೈಕೋರ್ಟ್ನ ಪೀಠ ಮಹತ್ವದ ಆದೇಶ ಪ್ರಕಟಿಸಿದೆ. ಮಹಿಳೆಗೆ ಸಂಬಂಧಿಸಿದಂತೆ ವಾಟ್ಸ್ ಆಪ್ ಗ್ರೂಪ್ ಒಂದರ ಸದಸ್ಯರೊಬ್ಬರು ಆಕ್ಷೇಪಾರ್ಹವಾಗಿ ಪೋಸ್ಟ್ ನ್ನು ಹಾಕಿದ್ದರು. ಇದರ ವಿರುದ್ಧ ವಾಟ್ಸ್ ಆಪ್ ಗ್ರೂಪ್ ನ ನಿರ್ವಾಹಕರಾದ ಕಿಶೋರ್ ಟ್ಯಾರೋನ್ (33) ಎಂಬಾತನ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ಮಹಿಳೆಯೊಬ್ಬರು ದಾಖಲಿಸಿದ್ದರು. ಮಹಿಳೆಯ ಕುರಿತಾದ ಆಕ್ಷೇಪಾರ್ಹ ಪೋಸ್ಟ್ ನ್ನು ನಿರ್ವಾಹಕರು ಡಿಲೀಟ್ […]

ಮೂಡುಬಿದಿರೆಯ ತಾಲೂಕು : ತಾಲೂಕು ಪಂಚಾಯತ್‌ ಸದಸ್ಯನ ಅಪಹರಣ, ದೂರು

Tuesday, August 4th, 2020
sukumar

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ತಾಲೂಕು ಪಂಚಾಯತ್‌ ಚುನಾವಣೆ ವೇಳೆ ತನ್ನನು ಅಪಹರಣ ಮಾಡಲಾಗಿದೆ ಎಂದು ಸದಸ್ಯರೋರ್ವರು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮೂಡುಬಿದಿರೆ ತಾಲೂಕಿನ ಕಲ್ಲಮುಂಡ್ಕೂರು ತಾಪಂ ಸದಸ್ಯ ಸುಕುಮಾರ್ ಸನಿಲ್ ಅಪಹರಣಕ್ಕೊಳಗಾದವರು. ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಸುಕುಮಾರ್ ಸನಿಲ್ ಸೋಮವಾರ ಮೂಡುಬಿದಿರೆ ತಾಲೂಕು ಕಚೇರಿಯಲ್ಲಿ ನಡೆಯಬೇಕಿದ್ದ ತಾಪಂ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಿತ್ತು. ಆದರೆ ಅದನ್ನು ತಡೆಯಲು ನನ್ನನ್ನು ಅಪಹರಣಗೈದು ಉಡುಪಿಗೆ ತಂದು ಬಿಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. […]

ದಕ್ಷಿಣ ಕನ್ನಡ ಹಾಲು ಒಕ್ಕೂಟದ ಸದಸ್ಯರಿಂದ ಮಾರ್ಚ್ 30 ರಿಂದ ಸಂಜೆ ಸರದಿಯಿಂದ ಹಾಲು ಖರೀದಿ ಆರಂಭ

Monday, March 30th, 2020
GVhegde

ಮಂಗಳುರು : ದಕ್ಷಿಣ ಕನ್ನಡ ಹಾಲು ಹಾಲು ಒಕ್ಕೂಟದ ಪ್ರಾಥಮಿಕ ಸಹಕಾರ ಸಂಘದ ಸದಸ್ಯರಿಂದ ಹಾಲನ್ನು ಮಾರ್ಚ್ 30 ಸೋಮವಾರ ಸಂಜೆ ಸರದಿಯಿಂದ  ಖರೀದಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಜಿ.ವಿ. ಹೆಗ್ಗಡೆಯವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.