ದೇವರ ಸೇವೆಯೊಂದಿಗೆ ಸಮಾಜ ಸೇವೆ ಮಾಡುವ ಸೌಭಾಗ್ಯ ನಮಗೊದಗಿದೆ – ಶ್ರೀನಿವಾಸ ಸಫಲ್ಯ

Sunday, December 27th, 2020
Shani Pooja

ಮುಂಬಯಿ : ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಮಾಡಲು ಭಾಗ್ಯ ಬೇಕು. ಈ ಒಂದು ಅವಕಾಶದಿಂದ ನಾವು ದೇವರ ಸೇವೆಯೊಂದಿಗೆ ಸಮಾಜ ಸೇವೆ ಮಾಡುವಂತಾಗಿದೆ. ಈ ಸೌಭಾಗ್ಯವು ಈ ಪೂಜಾ ಸಮಿತಿಯ ಮೂಲಕ ನಮಗೆ ದೊರಕಿದೆ. ನಾವು ಮಾಡುತ್ತಿರುವ ಎಲ್ಲಾ ಸೇವೆಗಳು ದೇವರಿಗೆ ಸಮರ್ಪಿತವಾಗಿರಬೇಕು. ಒಗ್ಗಟ್ಟಿನಿಂದ ಎಲ್ಲಾ ಕೆಲಸಗಳನ್ನು ಮಾಡಬೇಕಾಗಿದೆ. ಮುಂದಿನ ವರ್ಷ ಚಾರಿಟೇಬಲ್ ಟ್ರಷ್ಟಗೆ 25ನೇ ವರ್ಷ. ಜನವರಿ 4 ರಿಂದ 6 ರ ತನಕ ಶನಿದೇವರ ಪುನರ್ಪ್ರತಿಷ್ಥೆ ಹಾಗೂ ವಾರ್ಷಿಕ ಪೂಜೆ ನಡೆಯಲಿದೆ. ಮುಂದಿನ ವರ್ಷಗಳಲ್ಲಿ […]

ಸಮಾಜ ಸೇವೆಗೆಂದು ಲಭ್ಯವಿದ್ದ 30 ಮೃತದೇಹ ಮಣ್ಣುಪಾಲು !

Wednesday, May 27th, 2020
ಸಮಾಜ ಸೇವೆಗೆಂದು ಲಭ್ಯವಿದ್ದ 30 ಮೃತದೇಹ ಮಣ್ಣುಪಾಲು !

ಬೆಳಗಾವಿ: ತಮ್ಮ ಸಾವಿನ ನಂತರವೂ ನಮ್ಮ ದೇಹ ಸಮಾಜಕ್ಕೆ ಉಪಯೋಗವಾಗಲಿ ಎಂದು ಎಷ್ಟೋ ಜನರು ಆಸ್ಪತ್ರೆಗಳಿಗೆ ತಮ್ಮ ಸಾವಿನ ನಂತರ ವೈದ್ಯ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆಂದು ದೇಹದಾನ ಮಾಡುತ್ತಾರೆ. ಆದರೆ, ವಿಶ್ವಕ್ಕೆ ವಕ್ಕರಿಸಿದ ಕೊರೋನಾ ಬೆಳಗಾವಿ ಜಿಲ್ಲೆಯಲ್ಲಿ 30 ಕ್ಕೂ ಹೆಚ್ಚು ದಾನ ಮಾಡಿದ ದೇಹಗಳನ್ನು ಸ್ವೀಕರಿಸಲಾಗದೆ ಅಂತ್ಯಸಂಸ್ಕಾರ ಮಾಡಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಬೆಳಗಾವಿಯ ಡಾ.ರಾಮಣ್ಣವರ ಚಾರಿಟೇಬಲ್‌ ಟ್ರಸ್ಟ್‌ ನ ಡಾ. ಮಹಾಂತೇಶ ರಾಮಣ್ಣವರ, ಲಾಕ್ ಡೌನ ಸಂದರ್ಭದಲ್ಲಿ ಸರಕಾರವು ದೇಹದಾನದ ಕುರಿತು ಸರಿಯಾದ ಮಾಹಿತಿ ಮತ್ತು […]

ಕಣಚೂರು ಸಂಸ್ಥೆ ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವ ಪಡೆಯಲಿದೆ: ರಮಾನಾಥ ರೈ

Wednesday, September 28th, 2016
kanachur-institution

ಉಳ್ಳಾಲ: ಕಣಚೂರು ಮೋನು ಅವರು ಶ್ರಮಜೀವಿಯಾಗಿ, ಯಶಸ್ವಿ ಉದ್ಯಮಿಯಾಗಿ ಶೈಕ್ಷಣಿಕ, ಆರೋಗ್ಯ ಕ್ಷೇತ್ರಕ್ಕೆ ಕಾಲಿರಿಸಿ ಇದೀಗ ವೈದ್ಯಕೀಯ ಕಾಲೇಜು ಸ್ಥಾಪಿಸಿರುವುದು ಅವರಲ್ಲಿರುವ ಕ್ರಿಯಾಶೀಲತೆ ಮತ್ತು ಕಾರ್ಯತತ್ಪರತೆಗೆ ಸಾಕ್ಷಿ ಎಂದು ಸಚಿವ ಬಿ. ರಮಾನಾಥ ರೈ ಅಭಿಪ್ರಾಯಿಸಿದರು. ದೇರಳಕಟ್ಟೆಯ ನಾಟೆಕಲ್‌ನ ಕಣಚೂರು ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ ಆ್ಯಂಡ್‌ ರಿಸರ್ಚ್‌ ಸೆಂಟರ್‌ನ ಕ್ಯಾಂಪಸ್‌ನಲ್ಲಿ ನೂತನವಾಗಿ ಪ್ರಾರಂಭಗೊಂಡ ಪ್ಯಾರಾ ಮೆಡಿಕಲ್‌ ಕೋರ್ಸ್‌, ನರ್ಸಿಂಗ್‌ ಹಾಗೂ ಫಿಸಿಯೋಥೆರಪಿ ಕಾಲೇಜು ಉದ್ಘಾಟಿಸಿ ಅವರು ಮಾತನಾಡಿದರು. ವ್ಯಕ್ತಿಯ ಬದುಕಿನಲ್ಲಿ ಶ್ರೀಮಂತಿಕೆ, ಆಸ್ತಿ, ಸಂಪತ್ತು ಕ್ಷಣಿಕ. […]

ಕಾಸರಗೋಡು ಹೋಟೆಲ್ ಗಳಲ್ಲಿ ಹಳಸಿದ ಆಹಾರ, ಆರೋಗ್ಯ ಅಧಿಕಾರಿಗಳ ದಾಳಿ

Sunday, January 17th, 2016
hotel raid

ಕಾಸರಗೋಡು: ಕಾಸರಗೋಡು ನಗರ ಸಭಾ ವ್ಯಾಪ್ತಿಯ ಹೋಟೆಲ್ ಗಳಿಗೆ ಮುನ್ಸಿಪಲ್ ಆರೋಗ್ಯ ವಿಭಾಗದ ಅಧಿಕೃತರು ಶುಕ್ರವಾರ ಮಿಂಚಿನ ಧಾಳಿ ನಡೆಸಿ ಹಲವೆಡೆಗಳಿಂದ ಹಳಸಿದ ಆಹಾರ ಹಾಗೂ ನೈರ್ಮಲ್ಯದ ತೀವ್ರ ಕೊರತೆಯನ್ನು ಕಂಡು ನೊಟೀಸ್ ಜಾರಿಗೊಳಿಸಿದರು. ಶುಕ್ರವಾರ ಬೆಳಿಗ್ಗೆ 7.30 ರಿಂದ 9ಗಂಟೆಯ ವರೆಗೆ ನಗರದ ಕರಂದಕ್ಕಾಡು,ಕೆಎಸ್‌ಆರ್‌ಟಿಸಿ ನಿಲ್ದಾಣ ಪ್ರದೇಶ,ಹಳೆ ಬಸ್ ನಿಲ್ದಾಣ ಪರಿಸರ,ವಿದ್ಯಾನಗರ ಮೊದಲಾದ ಪ್ರದೇಶಗಳ ಹೋಟೇಲ್ ಗಳಿಗೆ ಧಾಳಿ ನಡೆಸಿ ಪರಿಶೀಲನೆ ನಡೆಸಿದರು.10 ಹೋಟೆಲ್ ಗಳು ತೀವ್ರ ಕಳವಳಕಾರಿ ಕಳಪೆ ಗುಣಮಟ್ಟದ ನಿರ್ವಹಣೆಯನ್ನು ಗುರುತಿಸಿ ನೊಟೀಸ್ […]